ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ದೀಪಗಳ ದುರಸ್ತಿ, ರಸ್ತೆ ಮೇಲೆ ಕಸ ಗುಡಿಸುವಿಕೆ, ಸ್ವಚ್ಛತೆ, ಒಳಚರಂಡಿ ದುರಸ್ತಿ, ಚರಂಡಿಯಲ್ಲಿನ ಹೂಳು ತೆಗೆಯುವುದು, ಸತ್ತ ಪ್ರಾಣಿಗಳ ಸ್ಥಳಾಂತರ ಸೇರಿದಂತೆ ಪಾಲಿಕೆಗೆ ಸಂಬಂಧಿಸಿದ ದೂರು-ಸಮಸ್ಯೆಗಳಿಗೆ ಸಾರ್ವಜನಿಕರು ಪಾಲಿಕೆ ಕಚೇರಿಗೆ ಬಂದು ದೂರು ಕೊಡುವ ಬದಲಿಗೆ ಸಹಾಯವಾಣಿ ಸಂಖ್ಯೆ : ೦೮೩೫೨-೨೨೨೪೭೪೭ಗೆ ಕರೆ ಮಾಡಿ ದೂರನ್ನು ನಮೂದಿಸಿದ್ದಲ್ಲಿ ಪರಿಶೀಲಿಸಿ ತುರ್ತಾಗಿ ಕ್ರಮ ವಹಿಸಲಾಗುವುದು. ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಯ ಸದುಪಯೋಗ ಪಡೆದುಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
