Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಕ್ಷೇತ್ರದಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯಾಗಾರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸ್ತುತ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಕ್ಷೇತ್ರದಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಅಧ್ಯಾಪಕರ ‘ಸಾಮರ್ಥ್ಯ ವೃದ್ಧಿ’ ಕಾರ್ಯಾಗಾರಗಳು ಮಹತ್ವಪೂರ್ಣವಾಗಿದ್ದು, ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮಾರ್ಗಗಳನ್ನು ಕಲಿಯಲು ಈ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಮ್.ಪಾಟೀಲ್ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಮತ್ತು ವ್ಯವಹಾರ ನಿರ್ವಹಣೆ ಅಧ್ಯಯನ ವಿಭಾಗಗಳು ಹಾಗೂ ನವದೆಹಲಿಯ ಐಸಿಎಸ್‌ಎಸ್‌ಆರ್ ಪ್ರಾಯೋಜಕತ್ವದಲ್ಲಿ ಜಂಟಿಯಾಗಿ ಆಯೋಜಿಸಿದ್ದ ‘ಶೈಕ್ಷಣಿಕ ಸಂಶೋಧನಾ ಬರವಣಿಗೆ’ ಎಂಬ ವಿಷಯದ ಕುರಿತು ಎರಡು ವಾರಗಳ ‘ಸಾಮರ್ಥ್ಯ ವೃದ್ಧಿ’ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಈ ಕಾರ್ಯಾಗಾರ ದೈಹಿಕ ಶಿಕ್ಷಣ, ಸಮಾಜ ವಿಜ್ಞಾನ, ವಾಣಿಜ್ಯ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಎದುರಿಸಬೇಕಾದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮುಖ್ಯ ವೇದಿಕೆಯಾದಂತಾಗಿದೆ ಎಂದರು.ಇದೇ ಸಂದರ್ಭದಲ್ಲಿ ಕುಪ್ಪಂ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಅನ್ನದಾತರ ಪಹಣಿಯಲ್ಲಿ ವಕ್ಸ್ ಆಸ್ತಿ ಎಂದು ಅಧಿಕಾರಿಗಳು ಮತ್ತು ಸರಕಾರ ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವುದನ್ನು ಕೂಡಲೆ ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರಹೋರಾಟ ಮಾಡಲಾಗುವದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಕೋಡಹಳ್ಳಿ ಚಂದ್ರಶೇಖರ ಬಣದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಸ್.ಬಿ. ಕೆಂಬೋಗಿ ತಿಳಿಸಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ತಲೆತಲಾಂತರದಿಂದ ಉಳುಮೆ ಮಾಡುತ್ತ ಬಂದಿರುವ ಕೃಷಿ ಭೂಮಿ ಮೇಲೆ ‘ವಕ್ಸ್ ಆಸ್ತಿ ಅನ್ನದಾತರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕೆಲವು ಹಳ್ಳಿಯಲ್ಲಿ ಕೃಷಿ ಭೂಮಿ ರೈತರ ಜಮೀನುಗಳಿಗೆ ವಕ್ಸ್ ಮಂಡಳಿ ನೋಟಿಸ್ ಮತ್ತು ಪಹಣಿಯಲ್ಲಿ ನಮೂದಿಸಿದ್ದು ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ವಿವಾದದ ವ್ಯಾಪಕತೆ, ಗಂಭೀರತೆಯನ್ನು ಅರಿಯಲು ರಾಜ್ಯ ರೈತ ಸಂಘ ಅಧ್ಯಯನ ಸಮಿತಿ ರಚನೆಗೆ ಮುಂದಾಗಿದೆ.ತಲೆಮಾರುಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದ ಜಮೀನಿನ ಪಹಣಿಯಲ್ಲಿ ವಕ್ಸ್ ದಾಖಲಾಗಿ ಮಂಡಳಿ ನೋಟಿಸ್ ನೀಡಿರುವುದು ರೈತರಿಗೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭೂ ದಾಖಲೆಗಳನ್ನು…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪ್ರಕೃತಿ ನಮ್ಮ ಬದುಕಿಗೆ ಬೇಕಾದ ಎಲ್ಲವನ್ನು ನೀಡಿದೆ. ಅದಕ್ಕಾಗಿಯೇ ನಾವು ದೇವರನ್ನು ವಿವಿಧ ರೂಪದಲ್ಲಿ ಆರಾಧಿಸುತ್ತಿದ್ದೇವೆ. ದೇವರು ಸರ್ವವ್ಯಾಪಿಯಾಗಿದ್ದಾನೆ. ಪ್ರತಿಯೊಬ್ಬರೂ ಏಕಾಗ್ರತೆಯಿಂದ ಧ್ಯಾನದಲ್ಲಿ ತೊಡಗುವ ಮೂಲಕ ಬದುಕಿನಲ್ಲಿ ಸಾಧನೆ ಮಾಡಬೇಕೆಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ಮಹಾರಾಜ ಮಠದ ಸಿದ್ದರಾಮೇಶ್ವರ ಮಹಾರಾಜರ ಪುಣ್ಯಸ್ಮರಣೋತ್ಸವದಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು, ನಮ್ಮ ಹಿಂದು ಧರ್ಮದ ಸಂಸ್ಕ್ರತಿಯ ಜಗತ್ತಿನಲ್ಲಿಯೇ ವೈಶಿಷ್ಟ್ಯಪೂರ್ಣವಾಗಿದೆ. ನಮ್ಮ ಧರ್ಮದಲ್ಲಿ ಅವರ ಭಾವಕ್ಕೆ ತಕ್ಕಂತೆ ದೇವರನ್ನು ಪೂಜಿಸುವ ಸ್ವಾತಂತ್ರ್ಯ ಕೊಟ್ಟಿದೆ. ದೇವರನ್ನು ಮೂರ್ತಿ, ಪ್ರಾಣಿ, ವೃಕ್ಷ,ಜಲ, ಮಣ್ಣು ಸೇರಿದಂತೆ ವಿವಿಧ ರೂಪದಲ್ಲಿ ಪೂಜಿಸಲಾಗುತ್ತಿದೆ ಎಂದರು.ಸಮಾಜವನ್ನು ಸನ್ಮಾರ್ಗದಲ್ಲಿ ತರುವ ನಿಟ್ಟಿನಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಭಕ್ತಿ ಆಂದೋಲನ ನಡೆದಿವೆ. ೧೨ ನೇ ಶತಮಾನದಲ್ಲಿ ಬಸವೇಶ್ವರರು ಸಮಾನತೆ ಸಂದೇಶ ಸಾರುವ ಮೂಲಕ ಇಷ್ಟಲಿಂಗ ಪೂಜೆ ಮಹತ್ವ ಸಾರುವ ಮೂಲಕ ಭಕ್ತಿ ಆಂದೋಲನ ಮಾಡಿದ್ದಾರೆ. ಏಕನಾಥ ಮಹಾರಾಜರು ಭಕ್ತಿ ಆಂದೋಲನದ…
ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಶಾಲೆಯಿಂದ ಮರಳಿ ಮನೆಗೆ ಹೋಗುವಾಗ ತನಗೆ ಸಿಕ್ಕ ರೂ. 3100 ರೂಪಾಯಿಗಳನ್ನು ಬಬಲೇಶ್ವರ ತಾಲ್ಲೂಕಿನ ಹೊನಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಕೊರಮ್ಮದೇವಿ ತೋಟದ ವಸ್ತಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ್ ಮಾದರ ಶಾಲೆಯ ಮುಖ್ಯ ಗುರುಮಾತೆ ಎಸ್.ಆರ್. ಮೇಡೇಗಾರ್ ಅವರ ಕೈಯಲ್ಲಿ ತಂದುಕೊಟ್ಟು ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ.ಹಣ ತಂದು ಕೊಟ್ಟ ನಂತರ ಮುಖ್ಯಗುರುಮಾತೆ ವಿಧ್ಯಾರ್ಥಿಗೆ ಪ್ರೋತ್ಸಾಹಿಸಿ ಹಣ ಕಳೆದುಕೊಂಡ ರಾಜಪ್ಪ ಕವಟಗಿ ಅವರನ್ನು ಶಾಲೆಗೆ ಕರೆಸಿ ಆ ಮಗುವಿನ ಕೈಯಿಂದ ಅವರಿಗೆ ಹಣ ಮರಳಿ ಕೊಡಿಸಿ ಮಗುವಿನ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಪ್ರಾಮಾಣಿಕತೆ ಇತರೆ ಮಕ್ಕಳಿಗೂ ಮಾದರಿಯಾಗಿದೆ.
ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಜನತೆಯ ಸಹಕಾರದಿಂದ ಅಭಿವೃದ್ಧಿ ವಂಚಿತವಾಗಿದ್ದ ವಿಜಯಪುರ ನಗರವನ್ನು ಪ್ರಸ್ತುತ ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಯಿತು ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.ನಗರಾಭಿವೃದ್ದಿ ಪ್ರಾಧಿಕಾರದಿಂದ ಸನ್ 2023ನೇ ಸಾಲಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಹಿಂದೇಯೇ ಮಂಜೂರಿಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ನಗರದ ವಿವಿಧೆಡೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಂದರಲ್ಲಿಯೂ ಕೊನೆಯ ಸ್ಥಾನದಲ್ಲಿರುತ್ತಿದ್ದ ವಿಜಯಪುರ ನಗರ ಸದ್ಯ, ಅಭಿವೃದ್ಧಿ ಮತ್ತು ಸಾಧನೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಾಗಿದೆ ಎಂದರು.ಮೊದಲಿಗೆ ಲಿಂಗೇಶ್ವರ ಕಾಲನಿ ಉದ್ಯಾನವನದಲ್ಲಿ, ನಮರ್ಥ ನಗರದ ರಿಂಗ್ ಮನಗೂಳಿ ರಸ್ತೆ ಉದ್ಯಾನವನದಲ್ಲಿ, ಯೋಗಾಪುರ ಕಾಲೊನಿಯ ಡಾ.ಅಂಬೇಡ್ಕರ್ ವೃತ್ತದ ಹತ್ತಿರ, ರಿಂಗ್ ರಸ್ತೆಯ ಚಿದಂಬರ ಗುಡಿ ಹತ್ತಿರ ಹಾಗೂ ವಾ.ನಂ.22 ರಲ್ಲಿ ಬರುವ ಓನಕೆ ಓಬವ್ವ ಉದ್ಯಾನವನದಲ್ಲಿ, ರೂ.22.70 ಲಕ್ಷ ಮೊತ್ತದಲ್ಲಿ 12.00/12.50 ಮೀ ಎತ್ತರದ ಹೈಮಾಸ್ಟ್ ಗಳ ಅಳವಡಿಕೆ ಕಾಮಗಾರಿಗಳಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ನಾವಿನ್ಯತೆಯೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ಅ.೨೯ರಂದು ನಗರದ ಆರ್.ಕೆ.ಎಂ. ಆಯುರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ ೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೯ ಗಂಟೆಗೆ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಉದ್ಘಾಟಿಸಲಿದ್ದಾರೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-೨ ನವದೆಹಲಿ ಪ್ರಕಾಶ ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತ ಅಧ್ಯಕ್ಷರಾದ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಜಿಲ್ಲೆಯ ವಿವಿಧ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ೨೦೨೪-೨೫ನೇ ಸಾಲಿನ ಇಲಾಖೆ ಯೋಜನೆಗಳಾದ ಶುಲ್ಕ ಮರುಪಾವತಿ, ವಿವಾಹ ಪ್ರೋತ್ಸಾಹ ಧನ, ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿಂದ ಆಫಲೈನ್ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ದಿನಾಂಕ : ೨೮-೧೧-೨೦೨೪ ಕೊನೆಯ ದಿನವಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಪಂಚಾಯತ್ ಕಾರ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ವಿಜಯಪುರ ರವಿ ರಾಠೋಡ ಮೊ: ೯೦೦೩೫೫೫೩೩೭, ಇಂಡಿ ಪರಶುರಾಮ ಭೋಸಲೆ ಮೊ: ೯೯೭೨೪೪೧೪೬೪, ಸಿಂದಗಿ ಮುತ್ತುರಾಜ ಸಾತಿಹಾಳ ಮೊ: ೯೯೮೦೦೧೯೬೩೫, ಬಸವನಬಾಗೇವಾಡಿ ಎಸ್.ಡಿ.ಬಿರಾದಾರ ಮೊ: ೮೭೨೨೧೩೫೬೬೦ ಹಾಗೂ ಮುದ್ದೇಬಿಹಾಳ ಎಸ್.ಕೆ.ಘಾಟಿ ಮೊ: ೯೭೪೦೬೮೨೯೭೯ ಇವರನ್ನು ಹಾಗೂ ಕಚೇರಿ ದೂರವಾಣಿ : ೦೮೩೫೨-೭೯೬೦೬೦ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳಾದ ಶ್ರೀಮತಿ ಸವಿತಾ ಕಾಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಗ್ರಾಮ ಪಂಚಾಯತಿಗಳಿಗೆ ಉಪ ಚುನಾವಣೆ ಘೋಷಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಚುನಾವಣಾ ಆಯೋಗ ವಿಜಯಪುರ ಜಿಲ್ಲೆಯ ವಿವಿಧ ಕಾರಣಗಳಿಂದ ಖಾಲಿ-ತೆರವಾಗಿರುವ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ಘೋಷಿಸಿ ಆದೇಶ ಹೊರಡಿಸಿದ್ದು, ಉಪಚುನಾವಣೆಗೆ ಸಂಬಂಧಿಸಿದಂತೆ ಉಪ ಚುನಾವಣೆ ನಡೆಯುವ ವಿವಿಧ ಗ್ರಾಮ ಪಂಚಾಯತಿಯ ಮತದಾರರನ್ನು ಅಳವಡಿಸಿಕೊಂಡು ಕರಡು ಮತದಾರರ ಪಟ್ಟಿಯನ್ನು ಅ.೨೫ರಂದು ನಿಡಗುಂದಿ, ಇಂಡಿ, ಬಸವನಬಾಗೇವಾಡಿ, ಬಬಲೇಶ್ವರ, ವಿಜಯಪುರ, ಮುದ್ದೇಬಿಹಾಳ, ತಾಳಿಕೋಟೆ ಹಾಗೂ ಚಡಚಣ ತಾಲೂಕಾ ಕಚೇರಿಗಳಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.ದಿನಾಂಕ: ೨೨-೦೧-೨೦೨೪ರಂದು ಪ್ರಕಟವಾಗಿರುವ ವಿಧಾನಸಭಾ ಅಂತಿಮ ಮತದಾರರ ಪಟ್ಟಿ ಹಾಗೂ ಅರ್ಹತಾ ದಿನಾಂಕ : ೦೧-೦೪-೨೦೨೪ರಂತೆ ದಿನಾಂಕ : ೦೪-೦೪-೨೦೨೪ರಂದು ಪ್ರಕಟಗೊಂಡಿರುವ ಪೂರಕ ಪಟ್ಟಿಯ ಮುದ್ರಿತ ಪ್ರತಿಯನ್ನು ಅಳವಡಿಸಿಕೊಂಡು ಹಾಗೂ ಉಪ ಚುನಾವಣೆ ನಡೆಯುವ ನಿಡಗುಂದಿ ತಾಲೂಕಿನ ಆಲಮಟ್ಟಿ ಹಾಗೂ ಚಿಮ್ಮಲಗಿ, ಇಂಡಿ ತಾಲೂಕಿನ ಸಾಲೋಟಗಿ ಹಾಗೂ ಖೇಡಗಿ, ಬಸವನಬಾಗೇವಾಡಿ ತಾಲೂಕಿನ ವಡವಡಗಿ, ಮತ್ತಗಿ ಹಾಗೂ ಬ್ಯಾಕೋಡ, ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ, ವಿಜಯಪುರ ತಾಲೂಕಿನ ಕನ್ನೂರ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯ ವಿಶೇಷ ಸಾಮಾನ್ಯ ಸಭೆಯನ್ನು ದಿನಾಂಕ : ೩೦-೧೦-೨೦೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಜಲನಗರದ ಮಹಾನಗರ ಪಾಲಿಕೆಯ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವಿಜಯಪುರ ವಾರ್ಡ ನಂ.೨೯ಕ್ಕೆ ಉಪ ಚುನಾವಣೆ ಘೋಷಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಚುನಾವಣಾ ಆಯೋಗ ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ-೨೯ಕ್ಕೆ ಉಪ ಚುನಾವಣೆಯನ್ನು ಘೋಷಿಸಿ ಆದೇಶ ಹೊರಡಿಸಿದ್ದು, ಉಪಚುನಾವಣೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ವಾರ್ಡ ನಂ.೨೯ ಒಳಗೊಂಡಿರುವ ಮತದಾರರನ್ನು ಅಳವಡಿಸಿಕೊಂಡು ಕರಡು ಮತದಾರರ ಪಟ್ಟಿಯನ್ನು ಅ.೨೫ರಂದು ವಿಜಯಪುರ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.ದಿನಾಂಕ : ೨೨-೦೧-೨೦೨೪ರಂದು ಪ್ರಕಟವಾಗಿರುವ ವಿಧಾನಸಭಾ ಅಂತಿಮ ಮತದಾರರ ಪಟ್ಟಿ ಹಾಗೂ ಅರ್ಹತಾ ದಿನಾಂಕ : ೦೧-೦೪-೨೦೨೪ರಂತೆ ದಿನಾಂಕ : ೦೪-೦೪-೨೦೨೪ರಂದು ಪ್ರಕಟಗೊಂಡಿರುವ ಪೂರಕ ಪಟ್ಟಿಯ ಮುದ್ರಿತ ಪ್ರತಿಯನ್ನು ಅಳವಡಿಸಿಕೊಂಡು ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರು ಹಾಗೂ ಮತದಾರರ ವೀಕ್ಷಣೆಗೆ ಪ್ರಕಟಿಸಲಾಗಿದ್ದು, ಪ್ರಕಟಿತ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ : ೨೯-೧೦-೨೦೨೪ರೊಳಗಾಗಿ ವಾಸವಿರುವ ವಾರ್ಡನ ವ್ಯಾಪ್ತಿಯಲ್ಲಿ ಇರದ ಬೇರೆ ವಾರ್ಡಗಳ ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಅಥವಾ ವಿಧಾನಸಭಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹೆಸರುಗಳನ್ನು ವಿಜಯಪುರ ವಾರ್ಡ ನಂ.೨೯ರಲ್ಲಿ ತಯಾರಿಸಲಾದ ಮತದಾರರ ಪಟ್ಟಿಯಲ್ಲಿ…
