ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ಶಾಲೆಯಿಂದ ಮರಳಿ ಮನೆಗೆ ಹೋಗುವಾಗ ತನಗೆ ಸಿಕ್ಕ ರೂ. 3100 ರೂಪಾಯಿಗಳನ್ನು ಬಬಲೇಶ್ವರ ತಾಲ್ಲೂಕಿನ ಹೊನಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಕೊರಮ್ಮದೇವಿ ತೋಟದ ವಸ್ತಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ್ ಮಾದರ ಶಾಲೆಯ ಮುಖ್ಯ ಗುರುಮಾತೆ ಎಸ್.ಆರ್. ಮೇಡೇಗಾರ್ ಅವರ ಕೈಯಲ್ಲಿ ತಂದುಕೊಟ್ಟು ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ.
ಹಣ ತಂದು ಕೊಟ್ಟ ನಂತರ ಮುಖ್ಯಗುರುಮಾತೆ ವಿಧ್ಯಾರ್ಥಿಗೆ ಪ್ರೋತ್ಸಾಹಿಸಿ ಹಣ ಕಳೆದುಕೊಂಡ ರಾಜಪ್ಪ ಕವಟಗಿ ಅವರನ್ನು ಶಾಲೆಗೆ ಕರೆಸಿ ಆ ಮಗುವಿನ ಕೈಯಿಂದ ಅವರಿಗೆ ಹಣ ಮರಳಿ ಕೊಡಿಸಿ ಮಗುವಿನ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಪ್ರಾಮಾಣಿಕತೆ ಇತರೆ ಮಕ್ಕಳಿಗೂ ಮಾದರಿಯಾಗಿದೆ.

