Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬೆಂಗಳೂರಿನಲ್ಲಿ ಡಿಜಿಪಿ ಭೇಟಿ ಮಾಡಿದ ಕೆಯುಡಬ್ಲೂಜೆ ನಿಯೋಗ | ಆರ್‌ಟಿಐ ಪತ್ರಕರ್ತರ ಮೆಲೆ ನಿಗಾಕ್ಕೆ ಮನವಿ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ನೈಜ ಪತ್ರಕರ್ತರ ಮೇಲೆ ವಿನಾ ಕಾರಣ ತೇಜೋವಧೆ ಮಾಡುವ ನಕಲಿ ಮತ್ತು ಆರ್‌ಟಿಐ ಪತ್ರಕರ್ತರ ಮೇಲೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಪೊಲೀಸ್ ಮಹಾ ನಿರ್ದೇಶಕರನ್ನು ಒತ್ತಾಯಿಸಿದೆ.ಬೆಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರನ್ನು ಭೇಟಿ ಮಾಡಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ಪದಾಧಿಕಾರಿಗಳ ನಿಯೋಗ ಈ ಬಗ್ಗೆ ಮನವಿ ಸಲ್ಲಿಸಿತು.ಪತ್ರಿಕೆಗಳನ್ನೆ ತರದವರು, ಸುದ್ದಿಯನ್ನು ಬರೆಯಲು ಬಾರದವರು ಮತ್ತು ಸುದ್ದಿ ಮನೆಗೆ ಯಾವ ರೀತಿಯ ಸಂಬಂಧವೂ ಇಲ್ಲದವರು ತಾವೇ ಪತ್ರಕರ್ತರು ಎಂದು ಬಿಂಬಿಸಿಕೊಳ್ಳುವ ವಿಸಿಟಿಂಗ್ ಕಾರ್ಡ್ ಪತ್ರಕರ್ತರು, ನೆಪ ಮಾತ್ರಕ್ಕೆ ಸಂಘಟನೆ ಮಾಡಿಕೊಂಡು, ಬ್ಲಾಕ್ ಮೇಲ್ ಮಾಡುವ ಆರ್‌ಟಿಐ ಪತ್ರಕರ್ತರ ವಸೂಲಿ ದಂಧೆಯೂ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಈ ಬೆಳವಣಿಗೆಗೆ ಕಡಿವಾಣ…
ಯುವ ಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ತೀವ್ರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕಳೆದ ಐದಾರು ತಿಂಗಳಿಂದ ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆಯನ್ನೇ ನಡೆಸದೆ ಆಡಳಿತ ಮಂಡಳಿ ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಮರೆತಿದೆ ಎಂದು ಯುವ ಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ಸ್ವಚ್ಛತೆ, ಬೀದಿದೀಪ ಸೇರಿದಂತೆ ಜನರನ್ನು ಕಾಡುತ್ತಿರುವ ನೂರಾರು ಸಮಸ್ಯೆಗಳಿದ್ದರೂ, ಅವುಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾದ ಸಾಮಾನ್ಯ ಸಭೆಯನ್ನೇ ತಿಂಗಳುಗಟ್ಟಲೆ ನಡೆಸದಿರುವುದು ಆಡಳಿತದ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.ಜನರು ಅಭಿವೃದ್ಧಿಗಾಗಿ ಮತ ಹಾಕಿದ್ದಾರೆ ಹೊರತು ಮೌನ ಆಡಳಿತಕ್ಕಾಗಿ ಅಲ್ಲ. ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ನಡೆಸುವುದೇ ಜನಪ್ರತಿನಿಧಿಗಳ ಮೊದಲ ಕರ್ತವ್ಯ. ಆದರೆ ಐದಾರು ತಿಂಗಳಿಂದ ಸಭೆಯೇ ನಡೆಸದಿರುವುದು ಜನರ ವಿಶ್ವಾಸಕ್ಕೆ ಮಾಡಿದ ದ್ರೋಹವಾಗಿದೆ ಎಂದು ಕಿಡಿಕಾರಿದರು.ಪಟ್ಟಣದ ಹಲವು ವಾರ್ಡ್ಗಳಲ್ಲಿ ರಸ್ತೆ ಹದಗೆಟ್ಟಿವೆ, ಚರಂಡಿಗಳು ಕೊಳಚೆಯಿಂದ ತುಂಬಿವೆ, ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ, ಸ್ವಚ್ಛತಾ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕಳೆದ ನಾಲ್ಕು ವರ್ಷಗಳಿಂದ ಕುಟುಂಬ ಕಲಹದಿಂದ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದ ಎರಡು ಕುಟುಂಬಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ನ್ಯಾಯಾಧೀಶರ, ಉಭಯ ಪಕ್ಷಗಳ ನ್ಯಾಯವಾದಿಗಳ ಮತ್ತು ಸಮನ್ಸ್ ಮುಟ್ಟಿಸುವ ಪೊಲೀಸ್ ಪೇದೆಯ ಮನವೊಲಿಕೆ ಮತ್ತು ರಾಜಿ ಸಂಧಾನದ ಫಲವಾಗಿ ಮತ್ತೆ ಒಂದಾದ ಮನಕಲಕುವ ಘಟನೆ ಇಲ್ಲಿನ ನ್ಯಾಯಾಲಯದಲ್ಲಿ ನಡೆದಿದೆ.ದಂಪತಿಗಳ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದವು. ಹಲವು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದವು. ಒಂದು ಕುಟುಂಬದ ದಂಪತಿಗೆ ಮೂರು ಮಕ್ಕಳಿದ್ದು, ತಂದೆ-ತಾಯಿ ದೂರಾಗಿದ್ದರಿಂದ ಮಕ್ಕಳು ತೀವ್ರ ಮಾನಸಿಕ ನೋವು ಅನುಭವಿಸುತ್ತಿದ್ದರು.ಇನ್ನೊಂದು ಪ್ರಕರಣದಲ್ಲಿ ಅಂಗವಿಕಲ ಮಹಿಳೆಗೆ ಜೀವನ ಸಂಗಾತಿಯಾಗಿ ಬಾಳು ನೀಡಿದ್ದ ಪತಿ, ಕುಟುಂಬ ಕಲಹದಿಂದ ದೂರಾಗಿದ್ದರು. ಈ ವೇಳೆ ಉಭಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಅವರು, ಅಂಗವಿಕಲ ಮಹಿಳೆಯ ಕೈಹಿಡಿದು ಬದುಕು ಕಟ್ಟಿಕೊಟ್ಟಿರುವುದು ನಿಮ್ಮ ದೊಡ್ಡ ಮನಸ್ಸಿನ ಪ್ರತೀಕ. ಆ ಮಹತ್ವವನ್ನು ಜೀವನದ ಕೊನೆಯವರೆಗೂ ಉಳಿಸಿಕೊಂಡಾಗಲೇ ಆ ತ್ಯಾಗಕ್ಕೂ, ಈ ದಾಂಪತ್ಯಕ್ಕೂ ನಿಜವಾದ…
ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಸತತ ೨೧ ವರ್ಷಗಳಿಂದ ಪಾದಯಾತ್ರೆಯ ಮೂಲಕ ಯಾತ್ರೆ ಕೈಗೊಂಡಿರುವ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಏಳಬೆಂಚಿ ಗ್ರಾಮದ ಭಕ್ತಾಧಿಗಳು ಪಟ್ಟಣದ ಭಕ್ತರ ಊಟೋಪಚಾರದ ಸೇವೆಯ ನಂತರ ಪಂಢರಾಪುರಕ್ಕೆ ಪಾದಯಾತ್ರೆ ಬೆಳೆಸಿದರು.ಸೋಮವಾರ ಪಟ್ಟಣಕ್ಕೆ ಆಗಮಿಸಿದ ಅರವತ್ತಕ್ಕೂ ಹೆಚ್ಚು ಯಾತ್ರಾರ್ಥಿಗಳು ಆದಿಗುರು ಜಿ.ಪಾಂಡುರಂಗಸ್ವಾಮಿ, ಪಂಪಣ್ಣಸ್ವಾಮಿ ನೇತೃತ್ವದಲ್ಲಿ ಕೀರ್ತನೆ, ಭಜನೆಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಪಟ್ಟಣದ ಮಡಿವಾಳಪ್ಪ ಕುಂಬಾರ ಯಾತ್ರಾರ್ಥಿಗಳಿಗೆ ಮಧ್ಯಾನ್ಹದ ಊಟದ ವ್ಯವಸ್ಥೆ ಕಲ್ಪಿಸಿದರು.ಪ್ರತಿ ವರ್ಷದ ಪಾದಯಾತ್ರೆ ಸಮಯಕ್ಕೆ ಪಟ್ಟಣದ ಜನತೆ ನೀಡುತ್ತಿರುವ ಸಹಕಾರ ಕುರಿತು ಪಾದಯಾತ್ರೆ ಸಮಿತಿಯ ಮುಖ್ಯಸ್ಥ ಕೆ.ಬ್ಯಾಳಿಪಂಪಣ್ಣ ಮಾತನಾಡಿ, ಇದೇ ಜುಲೈ ೫ ಭಾನುವಾರದಿಂದ ಬಳ್ಳಾರಿ ಜಿಲ್ಲೆಯ ಏಳಬೆಂಚಿ ಆರಂಭಗೊಂಡ ಈ ಯಾತ್ರೆಯಲ್ಲಿ ಮಹಿಳೆಯರು ಸೇರಿ ಅರವತ್ತಕ್ಕೂ ಹೆಚ್ಚು ಜನರಿದ್ದು, ಸತತವಾಗಿ ೧೩ ದಿನಗಳ ಕಾಲುನಡಿಗೆಯಲ್ಲಿ ಸಾಗಿ ದಿ:೧೮ ಶನಿವಾರದಂದು ಆಷಾಢ ಏಕಾದಶಿಯಂದು ಪಂಢರಾಪುರ ತಲುಪುತ್ತದೆ. ನಂತರ ಎಲ್ಲ ಪಾದಯಾತ್ರಿಗಳು ತಮ್ಮ ತಮ್ಮ ಗ್ರಾಮಕ್ಕೆ ತೆರಳಲಿದ್ದಾರೆ ಎಂದರು.ಯಾತ್ರೆಯ ನೇತೃತ್ವವನ್ನು ಷಡಕ್ಷರಿ, ಕೆ.ಪಂಪಣ್ಣ, ಎ.ತುಕಾರಾಮಪ್ಪ, ರ‍್ರಿಸ್ವಾಮಿ, ಸಣ್ಣಜಂಬುನಾಥ,…
ರಾಷ್ಟ್ರೀಯ ರೈತರ ಸಂಘದ ಪದಾಧಿಕಾರಿಗಳಿಂದ ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಕೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನಲ್ಲಿ ಸಮರ್ಪಕ ಮಳೆಯಾಗದೇ ಇದ್ದು ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದೂ ಘೋಷಿಸಿ, ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರಾಷ್ಟ್ರೀಯ ರೈತರ ಸಂಘದ ಪದಾಧಿಕಾರಿಗಳು ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಸೋಮವಾರ ಆಗಮಿಸಿದ ರಾಷ್ಟ್ರೀಯ ರೈತರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಭಿತ್ತಿದ ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಮಳೆಯಿಲ್ಲದೆ ಹಾನಿಗೊಳಗಾದ ಬಗ್ಗೆ ಶಿರಸ್ತೇದಾರರ ಗಮನ ಸೆಳೆದರು.ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದು ಹಿಂದೆ ಭಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೆ ನಿಂತಿವೆ. ಇದರಿಂದ ಭಿತ್ತಿದ ಕೃಷಿ ವೆಚ್ಚವನ್ನು ಸಹ ಮರಳಿ ಪಡೆಯಲು ಸಾಧ್ಯವಾಗದಂತಾಗಿದೆ ಆದ್ದರಿಂದ ತಹಶೀಲ್ದಾರ ಸರ್ಕಾರಕ್ಕೆ ವರದಿ ಸಲ್ಲಿಸಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಸಾಲ ವಸೂಲಾತಿ…
ಲೋಕ್‌ಅದಾಲತ್ ೮೭೯ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ | ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನ್ಯಾಯಾಂಗ ವ್ಯವಸ್ಥೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಹಾಗೂ ಶೀಘ್ರವಾಗಿ ಇತ್ಯರ್ಥಪಡಿಸುವಲ್ಲಿ ಲೋಕ್ ಅದಾಲತ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಹೇಳಿದರು.ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಮಾತನಾಡಿದ ಅವರು ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದರಿಂದ ಪಕ್ಷಗಾರರ ಸಮಯ, ಹಣ ಮತ್ತು ಶ್ರಮ ಉಳಿತಾಯವಾಗುತ್ತದೆ. ಅಲ್ಲದೆ, ದೀರ್ಘಕಾಲದ ನ್ಯಾಯಾಂಗ ಪ್ರಕ್ರಿಯೆಯಿಂದ ಉಂಟಾಗುವ ಮಾನಸಿಕ ಒತ್ತಡವೂ ನಿವಾರಣೆಯಾಗುತ್ತದೆ. ಹಾಗಾಗಿ ತಮ್ಮ ಪ್ರಕರಣಗಳನ್ನು ಲೋಕ್‌ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪಕ್ಷಗಾರರು ಮುಂದೆ ಬರಬೇಕು ಎಂದು ಕರೆ ನೀಡಿದರು.ಲೋಕ ಅದಾಲತ್ ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬAಧಿಸಿದAತೆ ಒಟ್ಟು…
ಎಚ್ ಡಿ ಕೋಟೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ರಾಜೇಗೌಡ ಕರೆ ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಅವಳಿ ತಾಲೂಕಿನಲ್ಲಿ ಮಹಿಳಾ ಘಟಕಗಳನ್ನು ಸ್ಥಾಪಿಸಿ ಜೆಡಿಎಸ್ ಪಕ್ಷದ ಬಲವರ್ಧನೆಗೆ ಕೆಲಸ ಮಾಡಬೇಕು ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಎಂ ಕೃಷ್ಣನಾಯಕ ಅವರನ್ನು ಮುಂದಿನ 2028 ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಶಾಸಕರನ್ನಾಗಿ ಮಾಡುವ ಮೂಲಕ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ಜೆಡಿಎಸ್ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ರಾಜೇಗೌಡ ಕರೆ ನೀಡಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹೆಚ್.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಮಹಿಳಾ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.೨೦೨೮ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲ ಶ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ಇದಕ್ಕೆ ಕಾರ್ಯಕರ್ತರ ಸಹಕಾರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.ಜೆಡಿಎಸ್ ಜಿಲ್ಲಾಧ್ಯಕ್ಷರಾದ ದ್ರಾಕ್ಷಾಯಿಣಿ ಎಂ.ಡಿ ಮಾತನಾಡಿ, ಹೆಚ್. ಡಿ.ಕೋಟೆಯಲ್ಲಿ ಮಹಿಳಾ ಘಟಕಗಳನ್ನ ಬಲವರ್ಧನೆ ಮಾಡುವ…
ತಿಕೋಟಾ ತಾಲೂಕನ್ನು ಬರಗಾಲವೆಂದು ಘೋಷಣೆ ಮಾಡಿ | ರೈತರ ಸಾಲ ಮನ್ನಾ ಮಾಡಬೇಕು | ರೈತ ಸಂಘ ತಾಲೂಕಾದ್ಯಕ್ಷ ಸಾತಲಿಂಗಯ್ಯಾ ಸಾಲಿಮಠ ಆಗ್ರಹ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಮುಂಗಾರು ಹಂಗಾಮು ಮಳೆ ಕೈಕೋಟ್ಟಿದ್ದರಿಂದ ಹಿಂಗಾರಿ ಮಳೆಯ ಲಕ್ಷಣ ಕೂಡ ಇರದೆ ಇರುವದರಿಂದ ಅನ್ನದಾತರು ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾದ್ಯಕ್ಷ ಸಾತಲಿಂಗಯ್ಯಾ ಶಂ ಸಾಲಿಮಠ ಅವರು ಗ್ರೇಡ೨ ತಹಸೀಲ್ದಾರ ಎಚ್ ಎನ್ ಬಡಿಗೇರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಅವರು, ತಾಲೂಕನ್ನು ೨೦೨೬ ಮತ್ತು ೨೦೨೭ಸಾಲಿನ ಮಳೆಯ ಅಭಾವದಿಂದ ರೈತರು ಕಣ್ಣಿರು ಹಾಕುವ ಪರಿಸ್ತಿತಿ ಎದುರಾಗಿದ್ದು ಸರಕಾರ ಕೂಡಲೆ ಬರಗಾಲವೆಂದು ಘೋಷಣೆಯೊಂದಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರು ಪಡೆದಿರುವ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಅಗ್ರಹಿಸಿದರು.ನಂತರ ಜಿಲ್ಲಾದ್ಯಕ್ಷ ಸಂಗಮೆಶ ಸಗರ ಮಾತನಾಡಿ, ತಾಲೂಕಾದ್ಯಂತ ಕೆರೆ, ಹಳ್ಳಕೋಳ್ಳಗಳಲ್ಲಿ ಒಂದೆ ಒಂದು ಹನಿ ನೀರಿಲ್ಲ ಇನ್ನು ಎಂಟು…
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ರಾಷ್ಟ್ರೀಯ ಡೇಂಗೀ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಅನಸುಯಾ ತೇರದಾಳ ಮಾತನಾಡಿ, ಜನಸಂಖ್ಯಾ ದಿನಾಚರಣೆ ಉದ್ದೇಶ ಹಾಗೂ ಘೋಷವಾಕ್ಯ ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಹಾಗೂ ಮಕ್ಕಳ ನಡುವಿನ ಆರೋಗ್ಯಕರ ಅಂತರ ಕಾಪಾಡುವುದರ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ದಿಸುವದೊಂದಿಗೆ ಅನಗತ್ಯ ಗರ್ಭದಾರಣೆ ತಡೆಗಟ್ಟಬಹುದು ಎಂಬುದರ ಕುರಿತು ಪ್ರತಿ ವರ್ಷ ಜುಲೈ ೧೧ ರಂದು ವಿಶ್ವ ಜನಸಂಖ್ಯೆ ದಿನಾಚರಣೆ ಯನ್ನು ಆಚರಿಸಲಾಗುವುದು ಎಂದು ತಿಳಿಸಿದ ಅವರು ಜನಸಂಖ್ಯೆ ಬೆಳವಣಿಗೆಯಿಂದ ಆಗುವ ದುಷ್ಪರಿಣಾಮ ಹಾಗೂ ಜನಸಂಖ್ಯೆ ದಿನಾಚರಣೆ ಉದ್ದೇಶಗಳ ಕುರಿತು ಹಾಗೂ ಕುಟುಂಬ ಕಲ್ಯಾಣ ಯೋಜನೆಯ ಶಾಶ್ವತ ಮತ್ತು ತಾತ್ಕಾಲಿಕ ವಿಧಾನಗಳ…
ಕಾಲುವೆಗೆ ನೀರು ಹರಿಸಲು ರೈತರ ಆಗ್ರಹ | ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರಿಂದ ಮೂರು ದಿನದ ಗಡುವು ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಸೋಮವಾರ ಕೃಷ್ಣಾ ನದಿಯ ಹಿನ್ನೀರಿಗೆ ಇಳಿದು ೨ ಗಂಟೆಗಳ ಕಾಲ ನೀರಿನಲ್ಲೇ ಪ್ರತಿಭಟಿಸಿದರು.ಚಂದ್ರಮ್ಮಾ ದೇವಸ್ಥಾನದ ಬಳಿ ಆರಂಭವಾದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಹಲಗೆ ವಾದನದೊಂದಿಗೆ ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಕಚೇರಿವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.”ಮುಂಗಾರು ಮಳೆ ಕೈಕೊಟ್ಟಿದೆ. ನೀರು ಬರುತ್ತದೆ ಎಂಬ ನಂಬಿಕೆಯಲ್ಲಿ ರೈತರು ಬೆಳೆ ಬೆಳೆದಿದ್ದಾರೆ. Iಅಅ ರಚನೆಯಾಗಿಲ್ಲ ಎಂಬ ಸಬೂಬು ಹೇಳಿ ನೀರು ಬಿಡದಿರುವುದು ಸರಿಯಲ್ಲ. ತಕ್ಷಣ ಕಾಲುವೆಗೆ ನೀರು ಹರಿಸಬೇಕು, ಕೆರೆಗಳನ್ನು ಭರ್ತಿ ಮಾಡಬೇಕು” ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.”ತುಬಚಿ-ಬಬಲೇಶ್ವರ ಏತಕ್ಕೆ ನೀರು ಬಿಡಲಾಗಿದೆ. ಆದರೆ ಆಲಮಟ್ಟಿ ಕಾಲುವೆಗೆ ಮಾತ್ರ ನೀರಿಲ್ಲ. ೩ ದಿನಗಳಲ್ಲಿ…
