ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಜನರೊಂದಿಗೆ ಜನತಾದಳ ಸಮಾವೇಶಕ್ಕೆ ಸೇರಿದ್ದ ಜನಸ್ತೋಮ ಕಂಡು ದಿಗಿಲುಗೊಂಡಿರುವ ಕಾಂಗ್ರೆಸ್ ನಾಯಕರು, ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ ಅವರನ್ನು ವೈಯಕ್ತಿಕವಾಗಿ ನಿಂದಿಸುವುದನ್ನು ಬಿಡಬೇಕು. ಇಲ್ಲವೇ ಶಾಸಕರ ಕಾರ್ಯವೈಖರಿ ಕುರಿತು ಬಹಿರಂಗ ಚರ್ಚೆಗೆ ಬರಬೇಕು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ರಾಜೇಂದ್ರ ಸವಾಲು ಹಾಕಿದ್ದಾರೆ.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಿಕೆ ಕಾರ್ಯಕ್ರಮಕ್ಕೆ ಜಾಗ ಕೊಡುವಂತೆ ಅರ್ಜಿಯನ್ನೇ ಹಾಕಿರಲಿಲ್ಲ ಎಂಬ ಬಿ.ವಿ.ಬಸವರಾಜು ಆರೋಪ ಸತ್ಯಕ್ಕೆ ದೂರವಾದದ್ದು. ಅರ್ಜಿ ಹಾಕಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ಅರ್ಜಿ ತೋರಿಸಿದರು.
ಸತತ ಎರಡು ಬಾರಿ ಗೆದ್ದಿರುವ ಶಾಸಕ ಅನಿಲ್ ಚಿಕ್ಕಮಾದು ಹೆಚ್ ಡಿ ಕೋಟೆ ಕೋಟೆ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ. ಈಗಲೂ ಅವರ ಸಾಧನೆ ಶೂನ್ಯ, ಈ ಕುರಿತು ನಾನು ಚರ್ಚೆಗೆ ರೆಡಿ ಇದ್ದೇನೆ ಎಂದು ಗುಡುಗಿದರು.
ಶಾಸಕ ಅನಿಲ್ ಚಿಕ್ಕಮಾದು ಕೆಲವರ ಕೈಗೊಂಬೆ ಆಗಿದ್ದಾರೆ. ಬಿ.ವಿ ಬಸವರಾಜು
ಈಗ ಜಿಲ್ಲಾ ಪಂಚಾಯತ್ ಚುನಾವಣೆ ಟಿಕೆಟ್ ಗಾಗಿ ಶಾಸಕರಿಗೆ ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಗ್ರಾಮ ಪಂಚಾಯತ್ ಚುನಾವಣೆ ನಿಲ್ಲುವುದಕ್ಕೂ ಅರ್ಹತೆಯಿಲ್ಲ ಎಂದು ವ್ಯಂಗ್ಯವಾಡಿದರು.
ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ರಾಜೇಂದ್ರ, ಸರಗೂರು ತಾಲೂಕ ಅಧ್ಯಕ್ಷ ಗೋಪಾಲಸ್ವಾಮಿ, ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಇದ್ದರು.

