ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ದಿ.8 ಬುಧವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆ.12.30ಗಂ. ವಿಜಯಪುರ ಜಿಲ್ಲಾ ಪಂಚಾಯತ ಕಾರ್ಯಾಲಯ ಆವರಣದಲ್ಲಿ ಪವರ ಗ್ರೀಡ್ ಸಿ.ಎಸ್.ಆರ್ ಅನುದಾನಡಿ ಆರೋಗ್ಯ ಇಲಾಖೆ ಸಲಕರಣೆಗಳು, ಶಿಕ್ಷಣ ಇಲಾಖೆಗೆ 2500 ಮೇಜುಗಳ ವಿತರಿಸಲಿದ್ದಾರೆ. ನಂತರ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ ಲೈಟಿಂಗ್ ವ್ಯವಸ್ಥೆ ಅಳವಡಿಕೆ, ಪ್ರವಾಸೋದ್ಯಮ ಇಲಾಖೆ ಎಸ್.ಸಿ.ಪಿ/ಟಿ..ಎಸ್.ಪಿ ಯೋಜನೆಯಡಿ ಆರು ಫಲಾನುಭವಿಗಳಿಗೆ ಮೊಬೈಲ್ ಕ್ಯಾಂಟಿನ್, ಜಿಲ್ಲಾ ಪಂಚಾಯಿತಿಯ ನಿರ್ಬಂಧಿತ ಅನುದಾನದಡಿ ಮೀಸಲಿಟ್ಟ 33ಲಕ್ಷ ರೂ. ಅನುದಾನದಲ್ಲಿ ವಿಕಲಚೇತನರಿಗಾಗಿ ಸಾಧನ ಸಲಕರಣೆ ಹಾಗೂ ಶಿಕ್ಷಣ ಇಲಾಖೆಯ ಅಗತ್ಯ ಸಾಮಗ್ರಿ ಖರೀದಿ ಅನುದಾನದಡಿ ರೂಪಾಯಿ 40 ಲಕ್ಷ ರೂ. ಅನುದಾನದಲ್ಲಿ 20 ಹೈಸ್ಕೂಲ್ ಗಳಿಗೆ ಸ್ಮಾರ್ಟ್ ಕ್ಲಾಸ್ ಉಪಕರಣಗಳನ್ನು ವಿತರಿಸಲಿದ್ದಾರೆ.
ನಂತರ ಮ. 1.30ಗಂ. ಧನರ್ಗಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಸಮುದಾಯದ ಶಾದಿಮಹಲ್ ಕಟ್ಟಡ ಉದ್ಥಾಟಿಸಲಿದ್ದಾರೆ ಎಂದು ಸಚಿವ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

