Author: editor.udayarashmi@gmail.com

ವಿಜಯಪುರ: ನಗರದ ಶಹಾಪೇಟಿಯಲ್ಲಿ ಗಜಾನನ ಉತ್ಸಾಹಿ ತರಣ ಮಂಡಳಿ ಪ್ರತಿಷ್ಟಾಪಿಸಿದ ೭೭ ಕೆಜಿ ಹಳೆಯ ನಾಣ್ಯಗಳಿಂದ ನಿರ್ಮಿಸಲಾದ ಗಣಪತಿಯು ಜಿಲ್ಲೆಯ ಭಕ್ತರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.ನಿತ್ಯ ಈ ನಾಣ್ಯ ಗಣಪತಿಯ ದರ್ಶನಕ್ಕಾಗಿ ಸಾರ್ವಜನಿಕರುಅಧಿಕ ಸಂಖ್ಯೆಯಲ್ಲಿ ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ದರ್ಶನಕ್ಕೆ ನೂಕು ನುಗ್ಗಲಾಗದಂತೆ ತಡೆಯಲು ಮಂಡಳಿಯ ಪದಾಧಿಕಾರಿಗಳು ಸಕಲ ವ್ಯವಸ್ತೆ ಕೈಗೊಂಡಿದ್ದಾರೆ. ದರ್ಶನ ಬಳಿಕ ಸಕಲ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ.ಈ ಮಂಡಳಿಯ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀಕಾಂತ ಕುಬಸದ ಅವರೊಂದಿಗೆ ಮಂಡಳಿಯ ಸಂಚಾಲಕ ಮಿಲಿಂದ ಚಂಚಲಕರ್, ಉಪಾಧ್ಯಕ್ಷ ಹಣಮಂತ ನಂದವಾಡಗಿ, ಖಜಾಂಚಿ ವಿರೇಶ ಗೊಬ್ಬೂರ ಸೇರಿದಂತೆ ಪದಾಧಿಕಾರಿಗಳು ಒಂದಾಗಿ ಕಾರ್ಯನಿರ್ವಹಿಸುವುದರಿಂದಾಗಿ ಇಂತಹ ವಿಶೇಷತೆಗಳನ್ನು ಮಾಡಲು ಸಾಧ್ಯವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಇವರ ಪ್ರಯತ್ನಕ್ಕೆ ಸುಧೀರ ಪಾಟೀಲ, ಮಹಾದೇವ ಕೊಪ್ಪದ, ರಾಜು ಗುಜರಿ, ರಾಹುಲ ಅಂಬಾಸೆ, ಮಣಿಕಂಠ ನಂದವಾಡಗಿ, ಚಿನ್ನು ಲಳಗಿ, ಶ್ರೀಶೈಲ ಗೊಬ್ಬೂರ ಸೇರಿದಂತೆ ಮೊದಲಾದವರು ಬಲ ತುಂಬಿದ್ದಾರೆ.ಕಳೆದ ವರ್ಷ ಈ ಶಹಾಪೇಟಿ ತರುಣ ಮಂಡಳಿಯು ಖ್ಯಾತ…

Read More

ಮುದ್ದೇಬಿಹಾಳ: ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ವಿನಾಯಕ ನಗರದ ಶ್ರೀ ವಿನಾಯಕ ಹಾಗೂ ಭದ್ರಕಾಳಿ ಸಮೇತ ಸಮೇತ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಜರುಗಿತು.ಜಾತ್ರಾ ಮಹೋತ್ಸವದ ೫ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ ೫ಗಂಟೆಗೆ ಮೂಲಮೂರ್ತಿಗಳಿಗೆ ಅಭಿಷೇಕ ಮಾಡಲಾಯಿತು. ಭದ್ರಕಾಳಿ ಅಮ್ಮನವರಿಗೆ ಗೌರಿ ಹಬ್ಬದ ನಿಮಿತ್ತ ಉಡಿ ತುಂಬಲಾಯಿತು. ಸಕಲ ವಾದ್ಯ-ವೈಭವಗಳೊಂದಿಗೆ ಶ್ರೀ ಗಜಾನನ ಮೂರ್ತಿಯ ಅದ್ಧೂರಿ ಮೆರವಣಿಗೆಯ ಸಮೇತ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು.ರವಿವಾರ ಕಿಲ್ಲಾ ಗಲ್ಲಿಯಲ್ಲಿರುವ ಶ್ರೀ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ಹಾಗೂ ಪುರವಂತರ ಸೇವೆಯೊಂದಿಗೆ ನಗರದ ಗುರು ಹಿರಿಯರು ಹಾಗೂ ಸುಮಂಗಲೆಯರ ಕಳಸ-ಕನ್ನಡಿ ಸೇವೆಯೊಂದಿಗೆ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರರ ಪಲ್ಲಕ್ಕಿ ಮಹಾ ಉತ್ಸವವು ಪ್ರಮುಖ ಬೀದಿಗಳ ಮೂಲಕ ವಿನಾಯಕ ನಗರದಲ್ಲಿರುವ ದೇವಸ್ಥಾನದ ಆವರಣದ ಅಗ್ನಿ ಕುಂಡದಲ್ಲಿ ಪ್ರವೇಶಿಸಿತು.ಸೋಮುವಾರ ಶ್ರೀ ವೀರಭದ್ರೇಶ್ವರರ ಜಯಂತಿ ನಿಮಿತ್ಯ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಲಾಯಿತು. ಬುಧವಾರ ಭದ್ರಕಾಳಿ…

Read More

ಮುದ್ದೇಬಿಹಾಳ: ಪಟ್ಟಣದ ಪುರಸಭೆ ಉಪಾಧ್ಯಕ್ಷರ ಆಯ್ಕೆಯಲ್ಲಿ ಚುನಾವಣೆ ನಡೆಸದ ಆರೋಪವನ್ನು ಕೆಲ ಪುರಸಭೆಯ ಬಿಜೆಪಿ ಸದಸ್ಯರು ಮಾಡಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮ ಪಕ್ಷದ ಮುಖಂಡರೊಂದಿಗೆ ಪತ್ರಿಕಾಗೋಷ್ಟಿ ನಡೆಸಿ ಆರೋಪಿಸಿದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಸದಾಶಿವ ಮಾಗಿ ಇವರು ನಾವೆಲ್ಲರೂ ಈ ಮೊದಲೇ ರಿಯಾಜ ಅವರಿಗೆ ಬೆಂಬಲಿಸಲು ನಿರ್ಧರಿಸಿದ್ದೆವು. ಆದರೆ ಕಾಂಗ್ರೇಸ್ ನ ಮುಖಂಡರು ರಿಯಾಜ ಅವರಿಗೆ ದಾರಿ ತಪ್ಪಿಸಿ ತಮ್ಮ ಬಳಿ ಸೆಳೆದುಕೊಂಡರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಿಲ್ಲ. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಧ್ಯ ಪ್ರವೇಶಿಸಿ ಚುನಾವಣೆ ನಡೆಸಲು ಬಿಟ್ಟಿಲ್ಲ. ಈ ಚುನಾವಣೆಯನ್ನು ನಾವು ಒಪ್ಪುವದಿಲ್ಲ, ಖಂಡಿಸುತ್ತೇವೆ ಎಂದರು.ಈ ವೇಳೆ ಭಾಜಪಾ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಮಾತನಾಡಿ, ನಮ್ಮಲ್ಲಿ ಎಲ್ಲ ಬೆಂಬಲ ಇದ್ದರೂ ಸ್ಥಳೀಯ ಶಾಸಕ ಹಾಗೂ ಸರಕಾರದ ಹಸ್ತಕ್ಷೇಪದಿಂದ ಅವಕಾಶ ತಪ್ಪಿದೆ ಎಂದರು.ಮುಖಂಡ ಹರೀಶ ನಾಟೇಕಾರ ಮಾತನಾಡಿ, ಉಪಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಸದೇ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ದಿಸಿದವರು ನಾಮಪತ್ರವನ್ನು ಹಿಂಪಡೆದುಕೊಳ್ಳದಿದ್ದಾಗ…

Read More

ಲೇಖಕರು- ಜಯಶ್ರೀ ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ: ೯೪೪೯೨೩೪೧೪೨ ಇನ್ನು ಮುಂದೆ ಒಂದು ಹೆಜ್ಜೆ ಇಡಲು ಆಗುವುದಿಲ್ಲ. ಸೋತು ಸುಣ್ಣವಾಗಿದಿನಿ. ಸೋಲುಗಳ ಸಾಲು ನನ್ನನ್ನು ಅಕ್ಷರಶಃ ಹಿಂಡಿ ಹಿಪ್ಪಿ ಮಾಡಿದೆ. ಸೋಲಿನ ಕಹಿ ಅನುಭವಗಳ ಮೂಟೆಯನ್ನು ಹೊತ್ತು ನಡೆಯುವುದು ಅಷ್ಟು ಸುಲಭದ ಕೆಲಸವೇನಲ್ಲ. ಯಾವುದನ್ನು ಗೆಲುವು ಅಂತ ಕರಿತಾರೋ ಅದನ್ನು ಪಡೆಯಲು ಇಷ್ಟೊಂದು ಒದ್ದಾಡಬೇಕಾ? ಅಂತ ಮನಸ್ಸು ಚೀರಿ ಚೀರಿ ಹೇಳುತ್ತದೆ. ಬಿಟ್ಟು ಬಿಡು ಗೆಲುವಿನ ಕನಸು. ಕಣ್ಣುಗಳಿರುವುದೇ ಕನಸು ಕಾಣೋದಕ್ಕೆ. ಲೆಕ್ಕವಿಲ್ಲದಷ್ಟು ಕನಸುಗಳನ್ನು ಉತ್ಪಾದಿಸುವ ಮನಸ್ಸು ದಡ ಸೇರುವವರೆಗೂ ನನ್ನೊಂದಿಗೆ ಇರುವುದೇ ಇಲ್ಲ. ಇಂಥ ಮಂಗನಂಥ ಮನಸ್ಸನ್ನು ತಿದ್ದುವುದು ಯಾವನಿಗೆ ಬೇಕಾಗಿದೆ? ಮಾಡಿದ ತಪ್ಪುಗಳನ್ನು ಗುರುತಿಸಿ ಮುಂದೆ ಸಾಗಬೇಕು ಎನ್ನುವಷ್ಟರಲ್ಲಿ ಚಂಚಲ ಮನಸ್ಸು ಮತ್ತೆ ನಾಯಿ ಬಾಲ ಆಗಿರುತ್ತದೆ. ಮತ್ತೆ ಅ ಆ ಇ ಈ ಮೊದಲಿನಿಂದ ಶುರು. ಇದು ಗೆಲ್ಲಲು ಹಂಬಲಿಸುವವರ ಮನದಳಲು.ಒತ್ತಡವನ್ನು ಹದಗೊಳಿಸಿವಾಸ್ತವದಲ್ಲಿ ಒತ್ತಡ ಗೆಲುವಿಗೆ ಬೇಕಿರುವ ಮೂಲ ಅಂಶ ಎನ್ನುವುದು ಸ್ಪಷ್ಟ. ಒತ್ತಡವಿಲ್ಲದದಿದ್ದರೆ ಗೆಲುವಿಲ್ಲ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಪ್ರತಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿ, ಅನಾರೋಗ್ಯದಿಂದ ನಿಧನರಾದ ಹಿರಿಯ ಪತ್ರಕರ್ತ ವಸಂತ ನಾಡಿಗೇರ ಅವರಿಗೆ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.ಸಭೆ ಆರಂಭಕ್ಕೆ ಮುನ್ನ ಅಗಲಿದ ಪತ್ರಕರ್ತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.ಬಳಿಕ ಪತ್ರಕರ್ತ ಅಶೋಕ ಯಡಳ್ಳಿ ಮಾತನಾಡಿ, ಕನ್ನಡ ಪ್ರತಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ವಸಂತ್ ನಾಡಿಗೇರ್ ಅವರ ಅಗಲಿಕೆ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರು. ವಸಂತ ನಾಡಿಗೇರ ಅವರ ಬರವಣಿಗೆ, ಸರಳತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ತಂತ್ರಗಾರಿಕೆ ನಿಜಕ್ಕೂ ಮಾದರಿಯಾಗಿದ್ದು, ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಎಂದರು.ಪತ್ರಕರ್ತ ನವೀದ್‌ಅಂಜುಮ ಮಮದಾಪೂರ ಮಾತನಾಡಿ, ವಸಂತ ನಾಡಿಗೇರ್ ಅವರು ಸಂಯುಕ್ತ ಕರ್ನಾಟಕಕ್ಕೆ ಆಗಮಿಸಿದಾಗ ಸಂಸ್ಥೆಗೆ ಮತ್ತೆ ವಸಂತ ಕಾಲ ಎಂದು ಸಂಭ್ರಮಿಸಿದ್ದೆವು. ಅವರ ಮಾರ್ಗದರ್ಶನದಲ್ಲಿ ಸಂ.ಕ ಇನ್ನಷ್ಟು ಬೆಳವಣಿಗೆಯಾಗುವ ನಿರೀಕ್ಷೆ ಇತ್ತು. ಅವರ ಅಕಾಲಿಕ ಅಗಲಿಕೆ ನೋವುಂಟು ಮಾಡಿದೆ.…

Read More

ಕಲಕೇರಿ: ೨೦೨೪-೨೫ ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯ ಪೂರ್ವಭಾವಿ ಸಭೆಯನ್ನು ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಎ ಕೆ ಸಿರಸಗಿ ಪದವಿಪೂರ್ವ ಕಾಲೇಜಿನಲ್ಲಿ ಸೆ.೧೪ ರಂದು ಶನಿವಾರ ಬೆಳಿಗ್ಗೆ ೧೧.೩೦ ಗಂಟೆಗೆ ಕರೆಯಲಾಗಿದ್ದು, ಸದರಿ ಸಭೆಗೆ ವಿಜಯಪುರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ತಮ್ಮ ಕಾಲೇಜಿನ ಕುಸ್ತಿಪಟುಗಳ ಯಾದಿ ಸಮೇತ ತಮ್ಮ ಕಾಲೇಜಿನ ಧೈಹಿಕ ಉಪನ್ಯಾಸಕರ ಜೊತೆಗೂಡಿ ಪೂರ್ವಭಾವಿ ಸಭೆಗೆ ಹಾಜರಾಗಬೆಕೆಂದು ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಗಳ ಸಂಚಾಲಕ ಶಾಂತು ದುರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಕ್ರೀಡೆ ಬದುಕಿನ ಅವಿಭಾಜ್ಯ ಅಂಗ. ಕ್ರೀಡೆಯಿಂದ ಸದೃಡ ಆರೋಗ್ಯ, ಸದೃಡ ಬದುಕು, ಸದೃಡ ದೇಶ ಹಾಗೂ ದೇಶದ ಕೀರ್ತಿ ಪ್ರಪಂಚದಲ್ಲಿ ಹೆಚ್ಚಿಸಬಹುದು ಎಂದು ಗ್ರಾಮೀಣ ಠಾಣಾ ಸಿಪಿಐ ಎಮ್ ಎಮ್ ಡಪ್ಪಿನ ಹೇಳಿದರು.ಬುಧವಾರ ಪಟ್ಟಣದ ಎಕ್ಸಲೆಂಟ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಇಂಡಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶಿಕ್ಷಕರು ಹಾಗೂ ಪಾಲಕರು ‘ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ’ ಎಂದು ಶುಭ ಹಾರೈಸಿದರು.ಇಂದಿನ ಯುವಜನಾಂಗ ಕ್ರೀಡೆಗೆ ಹೆಚ್ಚಿನ ಒತ್ತು ನೀಡದೆ ಕೈಯಲ್ಲಿ ಮೋಬಾಯಿಲ್ ಹಿಡಿದುಕೊಂಡು ಅದನ್ನು ನೋಡುತ್ತ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಹಿಂದಿನಂತೆ ಎಲ್ಲರೂ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಅಂದಾಗ ಮಾತ್ರ ನಿಮ್ಮ ಶಾರೀರಿಕ ಮಾನಸಿಕ ಜೀವನ ಉತ್ತಮವಾಗಿರಲು ಸಾಧ್ಯ ಎಂದರು.ಸಂಸ್ಥೆಯ ಅಧ್ಯಕ್ಷ ಎಸ್.ಬಿ.…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಲ್ಲಿ ಸರಕಾರಿ ಶಾಲೆಗಳಿಗೆ ಸಂಬಂಧಿಸಿದ ಆಸ್ತಿಗಳಿಗೆ ಕಾನೂನು ಭದ್ರತೆ ಕಲ್ಪಿಸುವ ಕಾರ್ಯಕ್ಕೆ ತಾಲೂಕಾ ಆಡಳಿತ ಮುಂದಾಗಿದ್ದು ಈ ವರ್ಷದಿಂದ ಶಾಲೆಗಳ ಆಸ್ತಿಗಳಿಗೆ ಇ ಸ್ವತ್ತು ಮಾಡುವ ಕುರಿತು ಕಂದಾಯ ಉಪ ವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿಯ ಎಸಿ ಸಬಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.ಗ್ರಾಮದ ಹೊರಗೆ ಇರುವ ಶಾಲಾ ಆಸ್ತಿಗೆ ಆರ್.ಟಿ.ಸಿ ಮಾಡಬೇಕು ಮತ್ತು ಗ್ರಾಮದ ಒಳಗೆ ಇರುವ ಸರಕಾರಿ ಶಾಲೆಯ ಆಸ್ತಿಗೆ ಇ ಸ್ವತ್ತು ಮಾಡಬೇಕು ಎಂದರು.ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ ಮಾತನಾಡಿ, ಸರಕಾರಿ ಶಾಲೆಗಳ ನಿರ್ಮಾಣಕ್ಕಾಗಿ ಹಿಂದೆ ಸಾಕಷ್ಟು ದಾನಿಗಳು ಜಮೀನನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಖಾತೆ ಮಾಡಿಸಿಕೊಳ್ಳಲು ಮುಂದಾಗಿರಲಿಲ್ಲ. ಇದರಿಂದ ದಾನಿಗಳ ವಂಶಸ್ಥರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಶಾಲೆಯ ಜಾಗವನ್ನು ಮರಳಿ ಪಡೆಯುವಂತಾಗಿತ್ತು.ಕೊನೆಗೂ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ತಾಲೂಕಿನಲ್ಲಿರುವ ಶಾಲೆ ಆಸ್ತಿಗಳ ಇ ಸ್ವತ್ತು ಅಂದೋಲನ ಆರಂಭಿಸಿದೆ. ಅದರಂತೆ ಕೇವಲ ಒಂದು ವರ್ಷದ ಅವಧಿಯಲ್ಲಿ ಶಾಲೆಗಳ ಆಸ್ತಿಗಳನ್ನು ಖಾತೆ ಮಾಡುವ ಮೂಲಕ ಕಾನೂನು ಭದ್ರತೆ…

Read More

ಅಧ್ಯಕ್ಷರಾಗಿ ಮೆಹಬೂಬ ಗೊಳಸಂಗಿ, ಉಪಾಧ್ಯಕ್ಷರಾಗಿ ಪ್ರೀತಿ ದೇಗಿನಾಳ ಆಯ್ಕೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಭಾರೀ ಕುತೂಹಲ ಕೆರಳಿಸಿದ್ದ ಪಟ್ಟಣದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷರಾಗಿ ಪ್ರೀತಿ ದೇಗಿನಾಳ ಆಯ್ಕೆಯಾಗಿದ್ದಾರೆ.ಒಟ್ಟು ೨೩ ಸದಸ್ಯರ ಪೈಕಿ ಬಿಜೆಪಿಯ ೮, ಕಾಂಗ್ರೆಸ್ ನ ೮, ಜೆಡಿಎಸ್ ನ ೨, ಪಕ್ಷೇತರ ೫ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹೆಬೂಬ ಗೊಳಸಂಗಿ, ಬಸವರಾಜ ಮುರಾಳ, ರಿಯಾಜ ಢವಳಗಿ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಸಹನಾ ಬಡಿಗೇರ ಕ್ರಮವಾಗಿ ನಾಮಪತ್ರ ಸಲ್ಲಿಸಿದ್ದರು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜ ಮುರಾಳ, ತಮ್ಮ ನಾಮಪತ್ರವನ್ನು ಹಿಂಪಡೆದರು. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಚುನಾವಣಾ ಕಣದಲ್ಲಿ ಉಳಿದಿದ್ದರು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಮಹೆಬೂಬ ಗೊಳಸಂಗಿ ಹಾಗೂ ರಿಯಾಜ ಢವಳಗಿ ಇವರಿಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪಕ್ಷೇತರ ಸದಸ್ಯ ರಿಯಾಜ ಢವಳಗಿ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಮುಖಂಡರು ನಾಮ ಪತ್ರ…

Read More