ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ನರಸಲಗಿ ಗ್ರಾಮದ ಶ್ರೀಶೈಲಗೌಡ ಹೊಸಳ್ಳಿ ಅವರ ತೋಟದ ಭಾವಿಯಲ್ಲಿ ಬುಧವಾರ ಆಕಸ್ಮಿಕವಾಗಿ ಬಿದ್ದ ಎಮ್ಮೆಯನ್ನು ಸ್ಥಳೀಯ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ತೆರಳಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಎಮ್ಮೆಯನ್ನು ರಕ್ಷಿಸಿದರು. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜಿ, ಸಿಬ್ಬಂದಿಗಳಾದ ಬಸಪ್ಪ ಜಾಲಗೇರಿ, ಉಮೇಶ ಹೂಗಾರ, ಚಂದ್ರಗುಪ್ತ ಅಂಬಳನೂರ ಶ್ರೀಕಾಂತ ಅಂಕಲಗಿ, ಯಮನಪ್ಪ ಹೊಲೇರ ಇದ್ದರು.
