Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕನ್ನಡ-ಮರಾಠಿ ಭಾಷಾ ಬಾಂಧವ್ಯ ಬೆಳೆಸಿ, ಬಲಪಡಿಸಲೆಂದು ಈ ಪ್ರತಿಷ್ಟಿತ ಪ್ರಶಸ್ತಿ | “ಉದಯರಶ್ಮಿ” ಬಳಗದ ಅಭಿನಂದನೆ ಉದಯರಶ್ಮಿ ದಿನಪತ್ರಿಕೆ ಧಾರವಾಡ: ಕನ್ನಡ ಮರಾಠಿ ಭಾಷಾ ಬಾಂಧವ್ಯ ಬೆಳೆಸಲೆಂದು ಬಲಪಡಿಸಲೆಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಕೊಡ ಮಾಡಿದಡಾ ಪಂಡಿತ ಅವಳೀಕರ ಅವರ ದತ್ತಿ ಪ್ರಶಸ್ತಿ ಆನಂದ ಕಂದ ೨೦೨೬ ಈ ಭಾರಿ ಡಾ ಜಯಶ್ರೀ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಇವರಿಗೆ ದೊರೆತಿದೆ.ಕನ್ನಡ ಸಾಹಿತ್ಯದ ಕವಿ ಶ್ರೇಷ್ಠ ಸಾಹಿತಿ ಡಾ ಬೆಟಗೇರಿ ಕೃಷ್ಣ ಶರ್ಮಾ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ೨೦೦೦ ರಿಂದ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡದಿಂದ ಮರಾಠಿಗೆ ಮರಾಠಿಯಿಂದ ಕನ್ನಡಕ್ಕೆ ಭಾಷಾಂತರ ಅನುವಾದ ಮತ್ತು ಸಾಹಿತ್ಯ ರಚನೆ ಮಾಡುವ ಎರಡೂ ಭಾಷೆಯ ಮಧ್ಯೆ ಬಾಂಧವ್ಯ ಸಾಮರಸ್ಯ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಮಹಾರಾಷ್ಟ್ರದ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.ಡಾ ಗುರುಲಿಂಗ ಕಾಪಸೆ ಹಿಂದಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಮೊದಲ ಆನಂದ ಕಂದ ಪ್ರಶಸ್ತಿ ದೊರೆತಿತ್ತು. ತದನಂತರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಲೌಕಿಕ, ಅಲೌಕಿಕ, ಸತ್ಯ, ನಿಷ್ಠೆಯಿಂದ ನಡೆಯಲು ಸಂದೇಶ ನೀಡಿದ್ದಾರೆ. ಅದರಲ್ಲಿ ಕಾಯಕ, ದಾಸೋಹ ಪೂಜೆಯಾಗಬೇಕು ಎಂದು ಉಪನ್ಯಾಸಕಿ ಶಾರದಾ ಕೊಪ್ಪ ಐಹೊಳ್ಳಿ ಹೇಳಿದರು.ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದವರು ವೀರಶೈವ ಸಭಾ ಭವನದಲ್ಲಿ ಏರ್ಪಡಿಸಿದ ೭೫ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ‘ವಚನ ಬಂಡಾಯ ಶಾಂತರಸ ಅವರ ಬದುಕು ಮತ್ತು ಸಾಧನೆ’ ಕುರಿತು ಮಾತನಾಡಿದರು.ಅನುಭವ ಮಂಟಪದ ಅಂಗ ಸಂಸ್ಥೆ ಅದರ ಕಾರ್ಯ ಬಸವಾದಿ ಶರಣರು ರಚಿಸಿದ ವಚನಗಳನ್ನು ವ್ಯವಸ್ಥಿತವಾಗಿ ಜೋಡಿಸಿರುವ ಕಾರ್ಯ ಶಾಂತರಸರದು ಅದರಂತೆ ಶರಣರ ವಚನಗಳನ್ನು ಬರೆದು ಬರೆಸುವ ನಡೆದಂತೆ ನುಡಿಯುವ ಚಿಂತನ-ಮಂಥನ ನಡೆದು ಬಸವಣ್ಣನವರ ಮುದ್ರೆಯೊಂದಿಗೆ ಭಂಡಾರಕ್ಕೆ ಕಳುಹಿಸುವ ಕಾಯಕ ಮಾಡುತ್ತ ವಚನ ಕಟ್ಟುಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದರು. ಶಾಂತರಸರು ಶರಣರು ಗ್ರಂಥಾಲಯ ಭಂಡಾರದ ಮುಖ್ಯಸ್ಥರು. ಜನರಿಂದ ಜನರಿಗಾಗಿ ವಚನ ಭಂಡಾರ ಶಾಂತರಸರು ‘ಅಲೇಖನಾದ ಶೂನ್ಯ ಕಲ್ಲಿದೇವ’ ಎಂಬ ಅಂಕಿತನಾಮ…
ತ್ವರಿತ ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಡಿಸಿ ಡಾ.ಆನಂದ್ ಕೆ. ಎಚ್ಚರಿಕೆ | ಜಲಧಾರೆ ಯೋಜನೆ ಅನುಷ್ಠಾನಕ್ಕೆ ವಿಶೇಷ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಲಧಾರೆ ಯೋಜನೆ ಅನುಷ್ಠಾನದಲ್ಲಿ ವಿಳಂಬ ಸಲ್ಲದು. ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡುವ ಮೂಲಕ ಯೋಜನೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ. ಅವರು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಲಧಾರೆ ಯೋಜನೆ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.ಆಲಮಟ್ಟಿ ಹಾಗೂ ನಾರಾಯಣಪುರ ಹಿನ್ನೀರಿನ ಮೂಲಕ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಈ ಯೋಜನೆ ನಮ್ಮ ಜಿಲ್ಲೆಗೆ ವರದಾನವಾಗಿದೆ. ಯೋಜನೆ ಅನುಷ್ಠಾನದಲ್ಲಿ ವಿಳಂಬ ಸಲ್ಲದು ಎಂದರು.ಈ ಯೋಜನೆ ಅನುಷ್ಠಾನ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದು, ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂದರು.ಯೋಜನೆ ಅನುಷ್ಠಾನಕ್ಕೆ ಅನುದಾನದ ಕೊರತೆ ಇಲ್ಲ. ಸಮಸ್ಯೆ ಎಲ್ಲಿದೆ ಗುರುತಿಸಿ, ಜಾಗ ಗುರುತಿಸುವಿಕೆ ಪೈಪ್ ಲೈನ್ ಅಳವಡಿಸಲು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.೪೩ ಸೈಟ್ ನಲ್ಲಿ ಸಮಸ್ಯೆ ಇದೆ. ೩೫ಕಿ.ಮೀ ಪೈಪ್ ಲೈನ್ ಮಾಡಲು…
ವಿಜಯಪುರದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೇಸಿಗೆ ಇರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು, ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈವರೆಗೂ ಟ್ಯಾಂಕರ್ ಸರಬರಾಜು ಅವಶ್ಯಕತೆ ಕಂಡುಬಂದಿಲ್ಲ. ಆದಾಗ್ಯೂ ಸಮಸ್ಯೆ ಇರುವ ಭಾಗದಲ್ಲಿ ಕುಡಿಯುವ ನೀರಿಗೆ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದರು.ಪ್ರತಿ ಗ್ರಾಪಂಗಳು ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಭವಿಷ್ಯದ ದಿನಗಳಲ್ಲಿ ಎಲ್ಲಿ ಸಮಸ್ಯೆ ಉಲ್ಬಣಿಸಬಹುದೋ ಅಲ್ಲಿ ಪರ್ಯಾಯವಾಗಿ ಜಲಮೂಲಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಬೋರವೆಲ್ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.ಈ ಹಿಂದೆ ಕುಡಿಯುವ ನೀರಿಗೆ ಎಲ್ಲೆಲ್ಲಿ ಸಮಸ್ಯೆಯಾಗಿತ್ತು ಎಂಬ ಮಾಹಿತಿ ಇದೆ. ಅಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ತಾಲೂಕು ಮಟ್ಟದಲ್ಲಿ ಕಾಲ-ಕಾಲಕ್ಕೆ ಕಾರ್ಯಪಡೆ ಸಭೆ ನಡೆಸುವ ಮೂಲಕ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.ಇನ್ನೊಂದೆಡೆ ಲಭ್ಯವಿರುವ ಜಲಮೂಲಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು.…
ಯತ್ನಾಳಗೆ ಬಿಜೆಪಿ ಅನಿವಾರ್ಯ | ವಿಜಯಪುರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿಜೆಪಿ ಒಂದು ಶಿಸ್ತಿನ ಪಕ್ಚವಾಗಿದ್ದು, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಅನಿವಾರ್ಯ ಇದೆ. ಆದರೆ ಬಿಜೆಪಿಗೆ ಯತ್ನಾಳ ಅನಿವಾರ್ಯ ಇಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಒಂದು ಶಿಸ್ತಿನ ಪಕ್ಷವಾಗಿದೆ. ಬಿಜೆಪಿ ಪಕ್ಷಕ್ಕೆ ತನ್ನದೇ ಯಾದ ಸಿದ್ದಾಂತ ಹೊಂದಿದೆ. ಪಕ್ಷಕ್ಕೆ ಯಾರಿಂದ ಅನಿವಾರ್ಯ ಇಲ್ಲ. ಪಕ್ಷದ ಅನಿವಾರ್ಯ ಎಲ್ಲರಿಗೂ ಇದೆ. ಯತ್ನಾಳ ಅವರ ಅವಶ್ಯಕತೆ ಪಕ್ಷಕ್ಕೆ ಇಲ್ಲ, ಆದರೆ ಪಕ್ಷದ ಅನಿವಾರ್ಯ ಎಂದು ಹೇಳಿದರು.ಬಾಗಲಕೋಟೆ ಉಪಚುನಾವಣೆಯಲ್ಲಿ ಶಾಸಕ ಯತ್ನಾಳ ಅವರು ಬಿಜೆಪಿ ಪರ ಪ್ರಚಾರದ ಕುರಿತು ಹೇಳಿಕೆ ನೀಡಿದ ಅವರು, ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಆಪ್ತರಾಗಿದ್ದರಿಂದ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ. ಅವರಿಗೆ ಬಿಜೆಪಿಯಿಂದ ಯಾರೂ ಆವ್ಹಾನ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.ಯತ್ನಾಳವರು ತಮ್ಮ ವರ್ತನೆ ಬದಲಾವಣೆ ಮಾಡಿಕೊಂಡರೆ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಮನುಷ್ಯನ ಜೀವನದಲ್ಲಿ ಆರೋಗ್ಯ ಬಹಳಷ್ಟು ಪ್ರಮುಖವಾದದ್ದು ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕಾದರೆ ಜೀವನಶೈಲಿ, ಧನಾತ್ಮಕ ವಿಚಾರಿಸುವ ಶಕ್ತಿಯ ಬದಲಾವಣೆಯಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಲಾಗುವುದು. ನಮ್ಮ ದಿನನಿತ್ಯದ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ನಗರದ ಖ್ಯಾತ ವೈದ್ಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಚ್ ಜಿ ದಡ್ಡಿ ಹೇಳಿದರು.ಅವರು ಪ್ರತಿಷ್ಠಿತ ಬಿ ಎಲ್ ಡಿ ಇ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಜಮಖಂಡಿಯಲ್ಲಿ ಮಂಗಳವಾರ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕಾಲೇಜಿನ ಸಹಪಾಧ್ಯಾಪಕರಾದಪ್ರೊ.ಎಲ್.ಎಮ್ ಮಾರ್ಕಪನಳ್ಳಿ ಅಧ್ಯಕ್ಷೀಯ ಪರ ನುಡಿಗಳನ್ನು ಹೇಳಿದರು. ರೆಡ್ ಕ್ರಾಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಅಶ್ವಿನಿ ಅನಂತಪೂರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರೇಮಾನಂದ ಹಿರೇಮಠ ರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಮೇಘಾ ಶಿರಗುಪ್ಪಿ, ನವೀನಕುಮಾರ ಬೆಳ್ಳುಬ್ಬಿ ಅನಿಸಿಕೆ ವ್ಯಕ್ತಪಡಿಸಿದರು. ಪ್ರಶಿಕ್ಷಣಾರ್ಥಿಗಳಾದ ಶ್ರುತಿ ಗುಡದಿ ಪ್ರಾರ್ಥನೆ, ಸಂಜನಾ ಬಾಡಗಿ ಸ್ವಾಗತ ಮತ್ತು ಪುಷ್ಪಾಪಣೆ, ವಿನಯ ಕಟ್ಟಿಮನಿ ಮುಖ್ಯ ಅತಿಥಿಗಳ ಪರಿಚಯ, ರಮೇಶ ಗೊಡಚಿ,…
ಡಾ.ಬಾಬು ಜಗಜೀವನ ರಾಮ್ ಜಯಂತಿ ಆಚರಿಸದ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಮುಖಂಡರ ಮನವಿ ಉದಯ ರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ನಿರ್ಲಕ್ಷಿಸಿದ ಅಧಿಕಾರಿ ರವೀಂದ್ರ ಮುರಗಾಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಿವಾನಂದ ಸೌದಾಗರ್ ಹಾಗೂ ದಲಿತ ಸಮುದಾಯದ ಮುಖಂಡರು ತಹಸೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶಿವಾನಂದ ಸೌದಾಗರ್, “ತಾಲೂಕು ಆಡಳಿತದ ವತಿಯಿಂದ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಆದರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿಯಲ್ಲಿ ಒಬ್ಬ ರಾಷ್ಟ್ರೀಯ ನಾಯಕರ ಜಯಂತಿಯನ್ನು ಆಚರಿಸದೆ ಇರುವುದು ವಿಷಾದನೀಯ. ಈ ಬಗ್ಗೆ ಅಧಿಕಾರಿ ರವೀಂದ್ರ ಮುರಗಾಲಿ ಅವರನ್ನು ದೂರವಾಣಿ ಮೂಲಕ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬ ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿನ ಏಫ್.ಎ.ಕ್ಯೂ ಗುಣಮಟ್ಟದ ಕುಸುಬೆ ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್‌ಗೆ ೬೫೪೦.ರೂ. ಗಳಂತೆ ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆಯ ಸಮಿತಿ ಅಧ್ಯಕ್ಷರಾದ ಡಾ.ಆನಂದ.ಕೆ ಅವರು ತಿಳಿಸಿದ್ದಾರೆ.ಕುಸುಬೆ ಉತ್ಪನ್ನವನ್ನು ಪ್ರತಿ ಎಕರೆಗೆ ೫ ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ ೨೦ ಕ್ವಿಂಟಾಲ್ ಖರೀದಿಸಲಾಗುತ್ತದೆ. ನೋಂದಣಿ ಅವಧಿ ೮೦ ದಿನಗಳವರೆಗೆ ಇದೆ. ಖರೀದಿ ಅವಧಿ ೯೦ ದಿನ ಇರುತ್ತದೆ. ನೋಂದಣಿಯೊಂದಿಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ.ಕೃಷಿ ಇಲಾಖೆಯಿಂದ ನೀಡಿರುವ ಎಫ್.ಆಯ್.ಡಿ ಸಂಖ್ಯೆ.ಆಧಾರ್ ಕಾರ್ಡ ನೀಡಿ ರೈತರು ಹೆಸರು ನೋಂದಾಯಿಸಬಹುದು. ಪ್ರೊಟ್ಸ್ ತಂತ್ರಾಂಶದಲ್ಲಿ ಬೆಳೆ ಬೆಳೆಯುವುದು ಕಂಡು ಬರದಿದ್ದರೆ ಹತ್ತಿರದ ಕೃಷಿ ಇಲಾಖೆಗೆ ತೆರಳಿ ಅಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು.ತಾಲೂಕಿನ ಕುಸುಬೆ ಖರೀದಿ ಕೇಂದ್ರ: ಬಬಲೇಶ್ವರ ತಾಲೂಕು ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘ ಬಬಲೇಶ್ವರ, ಸವನಹಳ್ಳಿ, ಬೆಳ್ಳುಳ್ಳಿ, ತಾಜಪುರ, ವಿಜಯಪುರ ಟಿ.ಎ.ಪಿ.ಸಿ.ಎಂ.ಎಸ್ ವಿಜಯಪರ, ಮುದ್ದೇಬಿಹಾಳ ತಾಲೂಕಿನ ಎಣ್ಣೆಬೀಜ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಪ್ರಕಟಣೆಯಾಗಿರುವ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಲಭ್ಯವಿರುತ್ತವೆ. ಸಾಹಿತ್ಯಾಸಕ್ತರು ಪುಸ್ತಕಗಳನ್ನು ಕಚೇರಿ ವೇಳೆಯಲ್ಲಿ ಖರೀದಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ:೦೮೩೫೨-೨೫೧೨೬೧ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕ ಸಂತೋಷ ಭೋವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀ ಶಿವಯೋಗೀಶ್ವರ ಜಾತ್ರೆಯ ನಿಮಿತ್ತ ನೀರಾಟ ವಿಬೃಂಜಣೆಯಿಂದ ಜರುಗಿತು.ರಾತ್ರಿ ೧ ಗಂಟೆಗೆ ಪಾಲ್ಗೊಂಡ ಯುವಕರು ಮತ್ತು ಭಕ್ತರು ಬೆಳಗ್ಗೆ ೬ ಗಂಟೆಯ ವರೆಗೆ ನೀರಾಟದಲ್ಲಿ ಪಾಲ್ಗೊಂಡಿದ್ದರು.ಶ್ರೀ ಶಿವಯೋಗೀಶ್ವರ ಹೊರಗಿನ ದೇವಸ್ಥಾನದ ಹತ್ತಿರ ಇರುವ ಬಾವಿಯಿಂದ ನೀರನ್ನು ಕೊಡದಲ್ಲಿ ಬಿಂದಿಗೆಯಲ್ಲಿ ತಂದು ದೇವಸ್ಥಾನದಲ್ಲಿರುವ ಗಂಗಮ್ಮನ ಬಿಂದಿಗೆಯ ಮೇಲೆ ಸುರಿಯುವದೇ ನೀರಾಟ ವೈಶಿಷ್ಠ.ಹಿನ್ನೆಲೆ – ಶಿವಯೋಗೀಶ್ವರರು ಗಂಗಾಬಿಕೆಯೊಂದಿಗೆ ಮದುವೆ ಆಗುವಾಗ ಬ್ರಹ್ಮಚಾರಿಯಾದ ಶಿವಯೋಗೀಶ್ವರರು ಮದುವೆ ಮಂಟಪದಿಂದ ಹೊರಗೆ ಹೋಗುತ್ತಾರೆ. ಸುರಿಗೆಯ ನೀರು ಗಂಗಾಬಿಕೆ ಮೇಲೆ ಮಾತ್ರ ಬಿಳುತ್ತದೆ. ಈ ಘಟನೆಯು ಕಣಮನ ಸೆಳೆಯುವ ನೀರಾಟವು ಸಂಕೇತಿಸುತ್ತದೆ. ಗಂಗಾಬಿಕೆಯನ್ನು ಸಂಕೇತಿಸುವ ಗಂಗಮ್ಮನ ಬಿಂದಿಗೆಗೆ ಶ್ರೀಗಂಧ ಛಡಿಗಳಿಂದ ಭದ್ರಪಡಿಸಲಾಗಿರುತ್ತದೆ. ಮದುವೆ ಮಂಟಪದಂತಿರುವ ಕಲ್ಲು ಮಂಟಪಕ್ಕೆ ಸಮೀಪ ಗುಡಿಯ ಮುಂದೆ ಬಾವಿ ಇದೆ. ಇದನ್ನು ಗಂಗಮ್ಮನ ಬಾವಿ ಎಂದು ಕರೆಯುತ್ತಾರೆ. ಭಕ್ತರು ಮಧ್ಯರಾತ್ರಿಯಿಂದ ನಸುಕಿನ ವರೆಗೆ ಈ ಬಾವಿಯಿಂದ ನೀರು ತಂದು ಪಂಚರು ಹೊತ್ತ ಗಂಗಮ್ಮನ ಬಿಂದಿಗೆಯ ಮೇಲೆ ಶಿವಯೋಗೀಶ್ವರ…
