ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀ ಶಿವಯೋಗೀಶ್ವರ ಜಾತ್ರೆಯ ನಿಮಿತ್ತ ನೀರಾಟ ವಿಬೃಂಜಣೆಯಿಂದ ಜರುಗಿತು.
ರಾತ್ರಿ ೧ ಗಂಟೆಗೆ ಪಾಲ್ಗೊಂಡ ಯುವಕರು ಮತ್ತು ಭಕ್ತರು ಬೆಳಗ್ಗೆ ೬ ಗಂಟೆಯ ವರೆಗೆ ನೀರಾಟದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಶಿವಯೋಗೀಶ್ವರ ಹೊರಗಿನ ದೇವಸ್ಥಾನದ ಹತ್ತಿರ ಇರುವ ಬಾವಿಯಿಂದ ನೀರನ್ನು ಕೊಡದಲ್ಲಿ ಬಿಂದಿಗೆಯಲ್ಲಿ ತಂದು ದೇವಸ್ಥಾನದಲ್ಲಿರುವ ಗಂಗಮ್ಮನ ಬಿಂದಿಗೆಯ ಮೇಲೆ ಸುರಿಯುವದೇ ನೀರಾಟ ವೈಶಿಷ್ಠ.
ಹಿನ್ನೆಲೆ – ಶಿವಯೋಗೀಶ್ವರರು ಗಂಗಾಬಿಕೆಯೊಂದಿಗೆ ಮದುವೆ ಆಗುವಾಗ ಬ್ರಹ್ಮಚಾರಿಯಾದ ಶಿವಯೋಗೀಶ್ವರರು ಮದುವೆ ಮಂಟಪದಿಂದ ಹೊರಗೆ ಹೋಗುತ್ತಾರೆ. ಸುರಿಗೆಯ ನೀರು ಗಂಗಾಬಿಕೆ ಮೇಲೆ ಮಾತ್ರ ಬಿಳುತ್ತದೆ. ಈ ಘಟನೆಯು ಕಣಮನ ಸೆಳೆಯುವ ನೀರಾಟವು ಸಂಕೇತಿಸುತ್ತದೆ. ಗಂಗಾಬಿಕೆಯನ್ನು ಸಂಕೇತಿಸುವ ಗಂಗಮ್ಮನ ಬಿಂದಿಗೆಗೆ ಶ್ರೀಗಂಧ ಛಡಿಗಳಿಂದ ಭದ್ರಪಡಿಸಲಾಗಿರುತ್ತದೆ. ಮದುವೆ ಮಂಟಪದಂತಿರುವ ಕಲ್ಲು ಮಂಟಪಕ್ಕೆ ಸಮೀಪ ಗುಡಿಯ ಮುಂದೆ ಬಾವಿ ಇದೆ. ಇದನ್ನು ಗಂಗಮ್ಮನ ಬಾವಿ ಎಂದು ಕರೆಯುತ್ತಾರೆ. ಭಕ್ತರು ಮಧ್ಯರಾತ್ರಿಯಿಂದ ನಸುಕಿನ ವರೆಗೆ ಈ ಬಾವಿಯಿಂದ ನೀರು ತಂದು ಪಂಚರು ಹೊತ್ತ ಗಂಗಮ್ಮನ ಬಿಂದಿಗೆಯ ಮೇಲೆ ಶಿವಯೋಗೀಶ್ವರ ಹೋಗಿರ ಎಂದು ಜಪ ಮಾಡುತ್ತ ಕಲ್ಲು ಮಂಟಪದ ಸುತ್ತ ಐದು ಸುತ್ತುಗಳಾಗುವವರೆಗೆ ನೀರು ಸುರಿಯುತ್ತಾರೆ. ಕರಡು ಮಜಲು ಆರತಿ ಹಿಡಿದು ಹೆಣ್ಣುಮಕ್ಕಳು ನೀರು ನೀಡುವ ಭಕ್ತರು ನೋಡಲು ಮೇಳೈಸಿದ ಭಕ್ತ ಸಮೂಹ ಈ ಒಟ್ಟು ದೃಶ್ಯವು ಕೈಲಾಸವನ್ನು ಹೋಲುತ್ತದೆ. ನಂತರ ಬಿಂದಿಗೆಯನ್ನು ಗರ್ಭ ಗುಡಿಯಲ್ಲಿಯ ಶಿವಯೋಗೀಶ್ವರರ ಎಡಕ್ಕೆ ಇಡಲಾಗುತ್ತದೆ. ಬಿಂದಿಗೆಯಲ್ಲಿ ಸಂಗ್ರಹವಾದ ನೀರಿನ ಪ್ರಮಾಣದ ಮೇಲೆ ಆ ವರ್ಷದ ಮಳೆಯ ಬೆಳೆಯ ಭವಿಷ್ಯ ನುಡಿಯಲಾಗುತ್ತದೆ. ನೀರಾಟ ವಾದ ಒಂಬತ್ತು ದಿನಗಳ ವರೆಗೆ ನಸುಕಿನಲ್ಲಿ ಮತ್ತು ಸಂಜೆ ಶಿವಪೂಜೆ ನಡೆಯುತ್ತದೆ. ತದನಂತರ ಗಂಗಾಬಿಕೆಯ ಉಡಿ ತುಂಬಿ ಮೆರವಣೆಗೆಯಲ್ಲಿ ಊರೊಳಗಿನ ಗುಡಿಗೆ ತರಲಾಗುತ್ತದೆ. ಅಂದು ಜಾತ್ರೆ ಸಂಪನ್ನವಾಗುತ್ತದೆ.
ಶ್ರೀ ಶಿವಯೋಗೀಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಸೋಮಯ್ಯ ಚಿಕ್ಕಪಟ, ಮಲ್ಲನಗೌಡ ಪಾಟೀಲ, ಭೀಮರಾಯಗೌಡ ಪಾಟೀಲ, ರಾಜು ಗೌಡ ಪಾಟೀಲ, ಸಾಹಿತಿ ಗೀತಯೋಗಿ, ಶಿವಯೋಗಪ್ಪ ಜೊತಗೊಂಡ, ಜೀತಪ್ಪ ಕಲ್ಯಾಣಿ, ಶಿವಯೋಗಪ್ಪ ಚನಗೊಂಡ,ವಿನೋದ ಗಾಣಿಗೇರ, ಮಲ್ಲಿಕಾರ್ಜುನ ಕುವಡೆ, ಡಾ|| ಅನೀಲ ವಾಲಿ ಮತ್ತಿತರಿದ್ದರು.

