Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬುಧವಾರ ನಡೆಯಿತು.ಮಹಾವಿದ್ಯಾಲಯದ ವತಿಯಿಂದ ಸಂಘಟಿಸಲಾಗಿರುವ ಈ ಪಂದ್ಯಾವಳಿಯನ್ನು ಬಿ.ಎಲ್.ಡಿ.ಇ ಸಂಸ್ಥೆಯ ಹಿರಿಯ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೀಕ್ಷಕ ಮತ್ತು ದಾವಣಗೆರೆ ಅರ್ಜುನ ಜೆ. ಜೆ. ಎಂ ನರ್ಸಿಂಗ ಕಾಲೇಜಿನ ಡಾ. ಸುರೇಶ. ಎಸ್. ಎಂ., ವಿಜಯಪುರ ಬಿ.ಎನ್.ಎx ಆಯುರ್ವೇದ ಕಾಲೇಜಿನ ನಜೀರ ಮಮದಾಪುರ, ಎವಿಎಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಈ ಸಂದರ್ಭದಲ್ಲಿ ಡಾ. ಗಂಗಾಧರ ತಿಮ್ಮಾಪುರ, ಡಾ. ಜೋಸ್ನಾ ಬರಗಿ, ಹನುಮಂತ ಪವಾರ ಉಪಸ್ಥಿತರಿದ್ದರು.ಈ ಪಂದ್ಯಾವಳಿಯಲ್ಲಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ವೈದ್ಯಕೀಯ, ದಂತ ಆಯುರ್ವೇದ, ಹೊಮಿಯೋಪತಿ, ಯುನಾನಿ, ಫಾರ್ಮಸಿ, ನರ್ಸಿಂಗ್ ಮುಂತಾದ ಆರೋಗ್ಯ ವಿಜ್ಞಾನ ವಿದ್ಯಾಲಯಗಳ ರಾಜ್ಯಾದ್ಯಂತ ಪುರುಷರ ಎಂಟು ಮತ್ತು ಮಹಿಳೆಯರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮೀಣ ಭಾಗದಲ್ಲಿ ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗಿದ್ದು, ಗುಣಮಟ್ಟದ ಕೆಲಸಕ್ಕೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಬಬಲೇಶ್ವರ ತಾಲೂಕಿನ ಸಾರವಾಡ ಮತ್ತು ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮಗಳಲ್ಲಿ ತಲಾ ರೂ. 100 ಲಕ್ಷ ವೆಚ್ಚದಲ್ಲಿ ಪಿ.ಆರ್.ಇ.ಡಿ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ಸಾರವಾಡ- ದದಾಮಟ್ಟಿವರೆಗಿನ 6 ಕಿ. ಮೀ. ಮತ್ತು ಹೊನಗನಗಳ್ಳಿ- ದದಾಮಟ್ಟಿ ವರೆಗೆ 4 ಕಿ. ಮೀ. ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ದಿ. ಬಿ. ಎಂ. ಪಾಟೀಲ ಅವರ ಕಾಲದಿಂದಲೂ ನಾವು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಶಾಲೆಗಳಲ್ಲಿ ಡಿಜಿಟಲ್ ಬೋರ್ಡ್, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಒತ್ತು ನೀಡುತ್ತಿದ್ದೇವೆ. ಇದರ ಮುಂದುವರೆದ ಭಾಗವಾಗಿ ಸಚಿವ ಎಂ. ಬಿ. ಪಾಟೀಲ ಅವರು ಈ ಬಾರಿ ಶಿಕ್ಷಣ ಕ್ರಾಂತಿಯ ಕನಸು ಹೊಂದಿದ್ದಾರೆ. ಹೀಗಾಗಿ ಮತಕ್ಷೇತ್ರದಲ್ಲಿನ ಎಲ್ಲ ಸರಕಾರಿ ಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಮೂಲಭೂತ ಸೌಕರ್ಯಗಳ ಕುರಿತು…
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಹಾಸನ ಜಿಲ್ಲೆಯ ಉದಯೋನ್ಮುಖ ಪ್ರತಿಭೆ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ದೇವು ಅವರು ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ ಕೊಡುಮಾಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.ಬೆಂಗಳೂರಿನ ಕಲಾಗ್ರಾಮ ಸಂಸ್ಕೃತಿಕ ಭವನದಲ್ಲಿ ನವಂಬರ್ 29ರಂದು ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ) ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿ, ಮೊ:೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ “ಸಮಯ ನೋಡಲು ಸಮಯವಿಲ್ಲ. ಯಾವುದಕ್ಕೂ ಪುರುಸೊತ್ತಿಲ್ಲ. ದಿನದ ೨೪ ಗಂಟೆ ಸಾಲುತ್ತಿಲ್ಲ. ಕುಟುಂಬ, ಮನರಂಜನೆ,ವಿಶ್ರಾಂತಿ, ನೆಮ್ಮದಿಯಂತೂ ಕನಸಿನ ಮಾತಾಗಿದೆ” ಅನ್ನೋ ಮಾತುಗಳು ದಿನಾಲು ಕಿವಿಗೆ ಬೀಳುತ್ತಲೇ ಇರುತ್ತವೆ. ಸಮಯ ಮತ್ತು ಸಮುದ್ರದ ಅಲೆ ಯಾರಿಗಾಗಿಯೂ ಕಾಯುವುದಿಲ್ಲ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ. ಹಾಗೆ ನೋಡಿದರೆ ಸಮಯ ನಿರ್ವಹಣೆಯೇ ಜೀವನ ಅನ್ನುವಷ್ಟು ಸಮಯ ಮಹತ್ವದ್ದಾಗಿದೆ. ಒಮ್ಮೆ ಕಳೆದು ಹೋದರೆ ಮರಳಿ ಪಡೆಯಲಾಗದಂತಹ ಸಂಪತ್ತು. ಅದಕ್ಕೆ ಸಮನಾದುದು ಯಾವುದು ಇಲ್ಲ. ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಏನೆಲ್ಲವನ್ನೂ ಕೊಳ್ಳಬಹುದು ಆದರೆ ಸಮಯವನ್ನು ಕೊಳ್ಳಲಾರ. ಯಾರ ಕೈಗೂ ಸಿಗದೇ ಓಡುವ ವಸ್ತು ಎಂದರೆ ಸಮಯ. ಅದರ ನಿರ್ವಹಣೆ ಗೊತ್ತಿರುವವನು ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಬಲ್ಲ. ಜೀವನದ ಎಲ್ಲ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಮಯದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕು.ಸಮಯ ನಿರ್ವಹಣೆ ಎಂದರೆ..?ಸರಿಯಾದ ಚಟುವಟಿಕೆಗಳಿಗೆ ಸರಿಯಾದ ಸಮಯವನ್ನು ನಿಗದಿಪಡಿಸುವುದು. ಸೀಮಿತ ಸಮಯದಲ್ಲಿ…
ಹಗಲು ೭ ಘಂಟೆ ತ್ರಿಫೆಸ್, ರಾತ್ರಿ ಸಿಂಗಲ್ ಫೆಸ್ ಕರೆಂಟ್ ಕೊಡಲು ರೈತ ಸಂಘ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನಲ್ಲಿ ಹಗಲು ೭ ಘಂಟೆ ತ್ರೀ ಫೆಸ್ ಹಾಗೂ ರಾತ್ರಿ ಹೊತ್ತು ಸಿಂಗಲ್ ಫೆಸ್ ಕರೆಂಟ್ ಕೊಡಬೇಕು ಜೊತೆಗೆ ಹಲವಾರು ಕಡೆಗಳಲ್ಲಿ ಹಳೆಯ ಕಂಬ ಹಾಗೂ ವಾಯರ್‌ಗಳನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೊನ್ನುಟಗಿ ಹೆಸ್ಕಾಂ ಉಪ ವಿಭಾಗಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತುಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡುತ್ತಾ, ಹುಬ್ಬಳ್ಳಿ ಹೆಸ್ಕಾಂ ವಿದ್ಯುತ್ ಇಲಾಖೆಯಿಂದ ಸರಿಯಾಗಿ ಕರೆಂಟ್ ಹಾಕದಿರುವ ಕಾರಣ ಆಕ್ಟೋಬರ್ ೧೦ ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹುಬ್ಬಳ್ಳಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಿರುವ ಪ್ರತಿಫಲವಾಗಿ ಹೆಸ್ಕಾಂ ಎಂ.ಡಿ ಅವರು ಇನ್ನುಮುಂದೆ ವಿದ್ಯುತ್ ಸಮಸ್ಯೆಯಾಗದಂತೆ ಅಧಿಕೃತ ಆದೇಶ ಹೊರಡಿಸಿರುತ್ತಾರೆ.ಆದರೆ ಪ್ರಸ್ತುತ ದಿನಮಾನಗಳಲ್ಲಿ…
ಮೋರಟಗಿಯಿಂದ ಅರಕೇರಿವರೆಗೆ ದೀಡ್ ನಮಸ್ಕಾರ | ಯುವ ಮುಖಂಡನ ೧೨೦ ಕಿ.ಮೀ. ಕಠಿಣ ಯಾತ್ರೆ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ದು ಕೆರಿಗೊಂಡಮೋರಟಗಿ: ಮುಸ್ಲಿಂ ಯುವ ಮುಖಂಡರೊಬ್ಬರು ಹಿಂದೂ ದೇವರಿಗೆ ಹೊತ್ತ ಹರಕೆಯನ್ನು ತೀರಿಸುವ ಮೂಲಕ ಸಮಾಜಕ್ಕೊಂದು ಸೌಹಾರ್ದ ಸಂದೇಶ ಸಾರುತ್ತಿದ್ದಾರೆ.ಇದು ಸಣ್ಣ ಹರಕೆಯಲ್ಲ, ಐದು ದಿನಗಳ ಕಠಿಣ ದೇಹದಂಡನೆ. ಈ ಹರಕೆಗೆ ಎಲ್ಲ ಸಮಾಜದ ೬೦ಕ್ಕೂ ಹೆಚ್ಚು ಜನ ಸಾಥ್ ನೀಡಿದ್ದಾರೆ.ಪಟ್ಟಣದ ಕಾಂಗ್ರೆಸ್ ಯುವ ಮುಖಂಡ ಯುಸೂಫ್ ಯಾಕೂಬ್ ಸಾಬ್ ಮುಲ್ಲಾ ಹರಕೆ ಹೊತ್ತವರು.ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದರೆ ಪಟ್ಟಣದಿಂದ ಅರಕೇರಿ ಗುಡ್ಡದಲ್ಲಿರುವ ಭಂಡಾರದ ಒಡೆಯ ಅಮೋಘಸಿದ್ಧೇಶ್ವರ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸುವುದಾಗಿ ಯುಸೂಫ್ ಹರಕೆ ಹೊತ್ತಿದ್ದರು. ಪಟ್ಟಣದಿಂದ ಈ ದೇವಸ್ಥಾನ ೧೨೦ ಕಿ.ಮೀ.ದೂರದಲ್ಲಿದ್ದು, ಬುಧವಾರ ಬೆಳಗ್ಗೆ ಪಟ್ಟಣದ ಕನ್ನಯ್ಯ ಮುತ್ಯಾ ದೇವಸ್ಥಾನದಿಂದ ಹರಕೆ ಯಾತ್ರೆ ಆರಂಭಿಸಿದ್ದಾರೆ. ಪ್ರತಿ ದಿನ ಅಂದಾಜು ೨೫ ಕಿ.ಮೀ. ದೂರ…
ಉದಯರಶ್ಮಿ ದಿನಪತ್ರಿಕೆ ಇಂಡಿ: ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಜಗತ್ತಿಗೆ ಸಾರಿರುವ ದೇಶ, ನಮ್ಮ ಸಂವಿಧಾನ ರಚನೆಯ ಸಂದರ್ಭದಲ್ಲಿ ರಚನಾ ಸಮಿತಿಯವರು ಜಗತ್ತಿನಾದ್ಯಂತ ಸುತ್ತಾಡಿ ಅಲ್ಲಿನ ಸಂವಿಧಾನಗಳನ್ನು ಅದ್ಯಯನ ಮಾಡಿ ಅವುಗಳಲ್ಲಿರುವ ಉತ್ತಮ ಅಂಶಗಳನ್ನು ಕ್ರೂಡಿಕರಿಸಿ ನಮ್ಮ ದೇಶದ ಘನತೆ ಗೌರವ ಎತ್ತಿಹಿಡಿಯುವ ಜಗತ್ತಿನ ಅತಿದೊಡ್ಡ ಸಂವಿಧಾನ ರಚಿಸಿದ್ದಾರೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ಹೇಳಿದರು.ಮಂಗಳವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಮತ್ತು ಸಿ.ವ್ಹಿ.ರಾಮನ್ ವಿಜ್ಞಾನ ಪದವಿ ಪೂರ್ವ ಕಾಲೇಜು, ಇಂಡಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ “ಸಂವಿಧಾನ ದಿನ” ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಈ ಸಂವಿಧಾನದ ಕುರಿತು ಸದನದಲ್ಲಿ ಚರ್ಚಿಸುವ ಸಮಯದಲ್ಲಿ ಕ್ಲಿಷ್ಟಕರವಾದ ಸಂದರ್ಭದಲ್ಲಿ, ಕ್ಲಿಷ್ಟಕರವಾದ ಸಮಸ್ಯೆಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತ್ರ ಉತ್ತರ ನೀಡುತ್ತಿದ್ದರು. ಸಂವಿಧಾನ ಹೇಗೆ ಅನ್ವಯಿಸುತ್ತೆ ಅಂದರೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಥಿಮ್ ಸಾಂಗ್ ನಲ್ಲಿರುವಂತೆ ನೀರಿನಂತೆ ನ್ಯಾಯ ಎಲ್ಲರಿಗೂ,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಭಾರತ ಭಾವೈಕ್ಯತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿರುವುದರ ಜೊತೆಗೆ ಧಾರ್ಮಿಕತೆ, ಸಂಪ್ರದಾಯ, ಸಂಸ್ಕೃತಿ, ಆಚರಣೆಗಳಿಗೂ ಇಲ್ಲಿ ತನ್ನದೇ ಆದ ಮಹತ್ವಗಳಿವೆ. ಪ್ರತಿಯೊಂದು ಧರ್ಮದವರು ಶ್ರದ್ಧೆ ಸಂಪ್ರದಾಯಗಳಿಂದ ತಮ್ಮ ತಮ್ಮ ಹಬ್ಬಗಳ ಆಚರಣೆಯನ್ನು ನಡೆಸುತ್ತಾರೆ ಎಂದು ಉಜೈನಿ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.ಅವರು ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಕಾರ್ತಿಕ ಮಾಸದ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ದೇವರ ಜಾತ್ರೆಯ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.ನವರಾತ್ರಿಯ ನಂತರ ಬರುವ ದೀಪಾವಳಿ ದೀಪಗಳ ಹಬ್ಬವಾಗಿದ್ದು, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಉದ್ದೇಶವನ್ನು ತಿಳಿಸುತ್ತದೆ. ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವ ಪ್ರಯಾಣವನ್ನು ಸೂಚಿಸುತ್ತದೆ. ದೀಪಾವಳಿಯ ಹಬ್ಬದಂದು ಬರುವ ಕಾರ್ತಿಕ ಮಾಸ ಕೂಡ ತನ್ನದೇ ಆದ ಮಹತ್ವ ಹಾಗೂ ಐತಿಹಾಸಿಕ ಅಂಶಗಳಿಂದ ಉಲ್ಲೇಖಿತಗೊಂಡಿದೆ. ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವವರು ತಮ್ಮ ಪೂರ್ವಜರ ಆಶೀರ್ವಾದ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಕಾರ್ತಿಕ ಮಾಸದಲ್ಲಿ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿರುವ ಮೆಗಾ ಮಾರುಕಟ್ಟೆ ಕಟ್ಟಡದ ಮುಂಭಾಗ ಹಾಗೂ ಅದರ ಕಂಬಗಳಿಗೆ ಯಾವುದೇ ಬ್ಯಾನರ್ಗಳನ್ನು ಕಟ್ಟಬಾರದು ಎಂದು ಜಿಲ್ಲಾಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಚೆಗೆ ಜಿಲ್ಲಾಧಿಕಾರಿಗಳು ಪಟ್ಟಣಕ್ಕೆ ಬಂದಾಗ ಮೆಗಾಮಾರುಕಟ್ಟೆ ಕಟ್ಟಡದ ಮುಂಭಾಗ ಇಲ್ಲವೇ ಅದರ ಕಂಬಗಳಿಗೆ ಯಾರೂ ಬ್ಯಾನರ್ ಅಳವಡಿಸದಂತೆ ಪುರಸಭೆ ಅಧಿಕಾರಿಗಳು ಗಮನಹರಿಸಬೇಕು. ಈ ಕುರಿತು ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವದನ್ನು ಕರವೇ ಖಂಡಿಸುತ್ತದೆ. ಮುಂಬರುವ ದಿನಗಳಲ್ಲಿ ಯಾರಾದರೂ ಮೆಗಾಮಾರುಕಟ್ಟೆ ಮುಂಭಾಗ, ಕಂಬಗಳಿಗೆ ಬ್ಯಾನರ್ ಅಳವಡಿಸಿದರೆ ಪುರಸಭೆ ಅಧಿಕಾರಿಗಳ ವಿರುದ್ದ ಕರವೇ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಲ್ಲಲ್ಲಿ ಜಿಆರ್ಜಿ೧೫೨ ತಳಿ ತೊಗರಿ ಬೆಳೆದ ರೈತರ ಜಮೀನುಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹೂ ಮತ್ತು ಕಾಯಿ ಉದುರುತ್ತಿರುವುದು ಕಂಡುಬಂದಲ್ಲಿ ರೈತ ಬಾಂಧವರು ಬೆಳೆ ವಿಮೆ ನೋಂದಣಿ ಮಾಡಿದ ರಶೀದಿ, ಜಿಪಿಎಸ್ ಪೋಟೋದೊಂದಿಗೆ ಅರ್ಜಿಯನ್ನು ಆಯಾ ರೈತ ಸಂಪರ್ಕ ಕೇಂದ್ರ ಇಲ್ಲವೇ ವಿಮಾ ಸಂಸ್ಥೆಯ ಪ್ರತಿನಿಧಿ ಮೊ.ಸಂಖ್ಯೆ ೯೬೩೨೧೦೫೪೭೬ ಸಂಖ್ಯೆ ಸಂಪರ್ಕಿಸಿ ಸಲ್ಲಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್. ಯರಝರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
