Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಖಡಕ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಕಡ್ಡಾಯವಾಗಿ ರಸ್ತೆ ನಿಯಮಗಳ ಪಾಲನೆ ಮಾಡುವಂತೆ ಸೂಕ್ತ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಪಘಾತ ತಡೆಯುವ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಜಾಗೃತಿ ಮೂಡಿಸಬೇಕು.ಅನಗತ್ಯವಾದ ರೋಡ್ ಬ್ರೆಕ್ ಗಳನ್ನು ತೆಗೆಯಬೇಕು. ರಸ್ತೆ ತಿರುವುಗಳಲ್ಲಿ ಅಗತ್ಯ ಮಾಹಿತಿ ಹಾಗೂ ಸೂಚನಾ ಫಲಕ ಅಳವಡಿಸಬೇಕು. ಪದೇ-ಪದೇ ಅಪಘಾತಗಳು ಸಂಭವಿಸುವ ಪ್ರದೇಶ-ಸ್ಥಳಗಳಲ್ಲಿ ಎಚ್ಚರಿಕೆ ಮಾಹಿತಿ ವಿವರದ ಫಲಕ ಹಾಕಬೇಕು. ಮತ್ತು ಅಲ್ಲಿ ಅಪಘಾತಗಳು ಸಂಭವಿಸದಂತ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.ನಗರದಲ್ಲಿ ಇಟಗಿ ಪೆಟ್ರೋಲ್ ಪಂಪ್‌ದಿಂದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದವರಗೆ ಸುಗಮ ಸಂಚಾರಕ್ಕಾಗಿ ಅಗತ್ಯ ಕಾರ್ಯ…
ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಜಿಲ್ಲಾ ಮಟ್ಟದ ಸಭೆಯಲ್ಲಿ ಡಿಸಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಿಲ್ಲೆಯ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ನಿರ್ಮೂಲನೆಗಾಗಿ ಸಂಬಂಧಿಸಿದ ಇಲಾಖೆಗಳು ಸಮನ್ವಯತೆ ಸಾಧಿಸಿಕೊಂಡು ಅಗತ್ಯ ಜಾಗೃತಿ- ತಿಳುವಳಿಕೆ ಮೂಡಿಸುವಂತೆ ಅವರು ಸೂಚನೆ ನೀಡಿದರು.ಉಪ ಅರಣ್ಯ ಸಂರಕ್ಷಣಾ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೊಳಪಡುವ ಅರಣ್ಯ ಪ್ರದೇಶದಲ್ಲಿ ಮಾದಕ ದ್ರವ್ಯ ಗಾಂಜಾ ಸಸಿ, ಗಿಡಗಳು ಬೆಳೆಯದಂತೆ ನಿಗಾ ವಹಿಸಬೇಕು. ಮಾದಕ ದ್ರವ್ಯಗಳ ಸಸಿಗಳು ಕಂಡು ಬಂದಲ್ಲಿ ಕೂಡಲೇ ಸಂಬಂಧಿಸಿದ ಪೊಲೀಸ್ ಠಾಣೆ ಮಾಹಿತಿ ಒದಗಿಸುವಂತೆ ಅವರು ಸೂಚನೆ ನೀಡಿದರು.ಔಷಧ ನಿಯಂತ್ರಕ ಇಲಾಖೆ ಮಾದಕ ಅಂಶಗಳನ್ನುಳ ಔಷಧಿ ಮಳಿಗೆಗಳಲ್ಲಿ…
ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾನವ ಹಕ್ಕುಗಳ ಅನುಸರಣೆ ಹಾಗೂ ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇದು ನಮ್ಮ ಹೊಣೆಯೂ ಆಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಬಹು ದೊಡ್ಡ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಸಂವಿಧಾನ ಕಲ್ಪಿಸಿರುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಬೇಕು. ಸರ್ವರ ಮಾನವ ಹಕ್ಕುಗಳ ರಕ್ಷಣೆ ನಮ್ಮೆ ಹೊಣೆಯಾಗಿದೆ. ಮಾನವ ಹಕ್ಕುಗಳ ಕುರಿತು ಶಾಲಾ-ಕಾಲೇಜ್‌ನಲ್ಲಿ ಜಾಗೃತಿ ಅರಿವು ಮೂಡಿಸಬೇಕು. ಮಾನವ ಹಕ್ಕುಗಳ ವ್ಯಾಪಕ ತಿಳುವಳಿಕೆ-ಅರಿವು ಮೂಡಿಸಲು ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪದ್ದಾಗಿದೆ. ಆರೋಗ್ಯಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವುದಾಗಿದೆ. ಬಡವ-ಬಲ್ಲಿದ ಎನ್ನದೇ ಎಲ್ಲರ ಹಕ್ಕುಗಳು ರಕ್ಷಣೆಯಾಗಬೇಕು. ಮೂಲಭೂತ ಹಕ್ಕುಗಳಿಗೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ನಾವೆಲ್ಲರೂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೀತಿ ಪಾಠಗಳು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಮಕ್ಕಳಲ್ಲಿ ಬಾಲ್ಯಾವಸ್ಥೆಯಿಂದಲೇ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿವೆ ಎಂದು ಅಂಜುಮನ್ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂತೋಷ ಎಸ್. ನಾಗಠಾಣ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ಇಂದು ಮಂಗಳವಾರ ನಡೆದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಾನವ ಹಕ್ಕುಗಳ ಉಗಮ, ಆಡಳಿತದಲ್ಲಿ ಅವುಗಳ ಅಳವಡಿಕೆಯ ಕುರಿತು ಮಾತನಾಡಿದ ಅವರು, ಭಾರತ ಪ್ರಾಚೀನ ಕಾಲದಿಂದಲೂ ಮಾನವ ಹಕ್ಕುಗಳ ಮಹತ್ವವನ್ನು ಸಾರುತ್ತಿದೆ. ಈ ನಿಟ್ಟಿನಲ್ಲಿ ಭಾರತದ ನೀತಿ ಪಾಠಗಳು ಮಾನವ ಹಕ್ಕುಗಳ ಪ್ರತಿಪಾದನೆಯಲ್ಲಿ ವಿಶ್ವಕ್ಕೆ ಸದಾ ಮಾರ್ಗದರ್ಶಿಯಾಗಿವೆ ಎಂದು ಅವರು ಹೇಳಿದರು.ಬಿ.ಎಲ್.ಡಿ.ಇ ಡೀಮ್ಡ್ ವಿವಿ ಪ್ರಾಚಾರ್ಯ ಡಾ. ರಘುವೀರ ಜಿ. ಕುಲಕರ್ಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಗತ್ತಿನ ನಾನಾ ದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಮನುಸಂಕುಲದ ಒಳಿತಿಗಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾನೂನು ಮಹಾವಿದ್ಯಾಲಯದ…
ವಿಜಯಪುರ ಅಥ್ಲೇಟಿಕ್ಸ್ ಸ್ಪೋಟ್ಸ್ ಕ್ಲಬ್ ವಿಜಯಪುರ ಜಿಲ್ಲಾ ಮಟ್ಟದ ಮುಕ್ತ ೧೪, ೧೭ ವಯೋಮಿತಿ ಬಾಲಕ ಬಾಲಕಿಯರ ಅಥ್ಲೇಟಿಕ್ಸ್ ಸ್ಪರ್ಧೆಗಳ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾ ಪಟುಗಳಿಗೆ ಬೆಳಕಿಗೆ ಬರುವಂತಹ ಕೆಲಸ ಇಂದು ನಾವೆಲ್ಲರೂ ಮಾಡಬೇಕಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಗಿರೀಶ ಬಿರಾದಾರ ಹೇಳಿದರು.ಅವರು ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯಪುರ ಅಥ್ಲೇಟಿಕ್ಸ್ ಸ್ಪೋಟ್ಸ್ ಕ್ಲಬ್ ವಿಜಯಪುರ ಜಿಲ್ಲಾ ಮಟ್ಟದ ಮುಕ್ತ ೧೪, ೧೭ ವಯೋಮಿತಿ ಬಾಲಕ ಬಾಲಕಿಯರ ಅಥ್ಲೇಟಿಕ್ಸ್ ಸ್ಪರ್ಧೆಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ರೀಡೆ ವಿದ್ಯಾರ್ಥಿಗಳ ಬೆಳವಣಿಗೆ ಮೂಲ ಕಾರಣೀಭೂತವಾಗಿದೆ. ಕ್ರೀಡೆಯಿಂದ ದೈಹಿಕವಾಗಿ ಆರೋಗ್ಯಕರವಾಗಿ ಮಾನಸಿಕವಾಗಿ ನೆಮ್ಮದಿ ನೀಡುತ್ತದೆ. ವಿಜಯಪುರ ಜಿಲ್ಲೆಯಿಂದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಹಾಗೂ ಅಂತರ್‌ರಾಜ್ಯಮಟ್ಟದಲ್ಲಿ ತಮ್ಮದೇಯಾದ ಛಾಪು ಮೂಡಿಸುವಲ್ಲಿ ಶ್ರಮಿಸಬೇಕು. ಹಾಗೂ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ ಇಂತಹ ಕ್ರೀಡಾ ಆಯೋಜನೆ ಕಾರ್ಯಕ್ರಮಗಳ ಮೂಲಕ ಬಡ ಕ್ರೀಡಾಪಟುಗಳಿಗೆ ಅವಕಾಶ ಸಿಗುತ್ತಿರುವುದು…
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲಾ ಮಕ್ಕಳಿಗೆ ಸೋಮವಾರ ಜಂತುಹುಳ ಮಾತ್ರೆ ವಿತರಿಸಲಾಯಿತು.ಚಿಕ್ಕಲಕ್ಕಿ ಕ್ರಾಸ್ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಶಾಲಾ ಮಕ್ಕಳಿಗೆ ಜಂತುಹುಳ ಮಾತ್ರೆ ವಿತರಿಸಿ ನುಂಗಿಸಲಾಯಿತು. ಮಾತ್ರೆಯ ಅರಿವು ಮೂಡಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು.ವೈದ್ಯಾಧಿಕಾರಿ ಡಾ,ಮುಕುಂದ ಕಾಂಬಳೆ, ಜಂತುಹುಳುಗಳನ್ನು ಹೊಂದಿರುವ ಮಕ್ಕಳು ಕಡ್ಡಾಯವಾಗಿ ಮಾತ್ರೆ ತಗೆದುಕೊಳ್ಳಬೇಕು. ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳು ಮಾನಸಿಕ , ದೈಹಿಕ ಬೆಳವಣಿಗೆಗೆ ತುತ್ತಾಗುತ್ತಾರೆ. ಅವರ ದೈಹಿಕ ಸಮತೋಲನ ಕುಂಠಿತವಾಗುತ್ತದೆ. ಕಾರಣ ಜಂತುಹಳುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನಸ್ಸು ತೋರಬೇಕು. ಶುದ್ಧ ನೀರು, ಆಹಾರ ತಗೆದುಕೊಳ್ಳಬೇಕು. ಸುತ್ತಲಿನ ಪರಿಸರ ಶುಚಿಯಾಗಿರಿಸಿಕೊಳ್ಳಬೇಕು ಎಂದರು.ಚಿಕ್ಕಪಡಸಲಗಿ ಸಮುದಾಯ ಆರೋಗ್ಯಾಧಿಕಾರಿ ಆನಂದ ತೇಲಸಂಗ, ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಗಳನ್ನು ಉಚಿತವಾಗಿ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಶಾಲೆಗಳಲ್ಲಿ ದಾಖಲಾದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಮಾತ್ರೆ ನೀಡಿ ಅವರ ಆರೋಗ್ಯ ಕಾಪಾಡಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ಅಲ್ಬೆಂಡಝೊಲ್ ಮಾತ್ರೆ ಮಕ್ಕಳಿಗೆ…
ಸಾವಿಲ್ಲದ ಶರಣರು ಲೇಖನ- ಡಾ.ಶಶಿಕಾಂತ.ಪಟ್ಟಣರಾಮದುರ್ಗ, ಮೊ: 9552002338 ಉದಯರಶ್ಮಿ ದಿನಪತ್ರಿಕೆ ಮಡಿವಾಳ ಮಾಚಿದೇವರ ಆಪ್ತ ನಿಕಟವರ್ತಿಯಾದ ಸಮಯಾಚಾರದ ಮಲ್ಲಿಕಾರ್ಜುನ ಒಬ್ಬ ದಿಟ್ಟ ಗಣಾಚಾರಿಯಾಗಿದ್ದಾನೆ . ಅಂದಿನ ಕಾಲದ ಸ್ಥಾವರ ವ್ಯವಸ್ಥೆ ಮೂರ್ತಿ ಪೂಜೆಯನ್ನು ಕಟುವಾಗಿ ವಿರೋಧಿಸಿ ಟೀಕಿಸಿ ವಚನ ಬರೆದ ಅನುಭಾವಿಯು. ಈತನ ಜೀವನ ವೃತ್ತಾಂತ ಚರಿತ್ರೆಯ ಬಗ್ಗೆ ಹೆಚ್ಚಿಗೆ ತಿಳಿದು ಬರದಿದ್ದರೂ ಸಹಿತ ಈತನು ಮಡಿವಾಳ ಮಾಚಿದೇವನ ಹುಟ್ಟು ಊರಾದ ದೇವರ ಹಿಪ್ಪರಗಿ ಅಥವಾ ಈಗಿನ ಬಾಗಲಕೋಟೆ ಜಿಲ್ಲೆಯ ಪ್ರದೇಶದವನಾಗಿರಬಹುದೆಂದು ತಿಳಿಯಬಹುದು.ಸಮಯಾಚಾರದ ಮಲ್ಲಿಕಾರ್ಜುನ ಇವನೊಬ್ಬ ಮಡಿವಾಳ ಮಾಚಿದೇವ ಅಂಗ ರಕ್ಷಕ ಆಪ್ತ ಸಹಾಯಕ ಮತ್ತು ಸಂದರ್ಭಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವ ನಿಷ್ಠಾವಂತ ದಲಿತ ವರ್ಗದಿಂದ ಬಂದ ಶರಣನು. ಸಮಯಾಚಾರವೆಂದರೆ ಶರಣರ ಕಾಯಕದಲ್ಲಿ ಅಗತ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸುವ ಕಾರ್ಯ. ಮಡಿವಾಳ ಮಾಚಿದೇವರ ಬಟ್ಟೆ ಮಾಡಿ ಮಾಡುವಲ್ಲಿ ಸಹಾಯಕನಾಗಿ ಪರಿಚಾರಕನಾಗಿ ಸೇವಕನಾಗಿ ನಿಲ್ಲುವ ವಿನಮ್ರ ಭಾವದ ಸಮಯಾಚಾರದ ಮಲ್ಲಿಕಾರ್ಜುನ ಶರಣನು.ಸಮಯಾಚಾರದ ಮಲ್ಲಿಕಾರ್ಜುನನು ಪರಮ ಪಂಚಾಕ್ಷರಮೂರ್ತಿ ಶಾಂತ ಮಲ್ಲಿಕಾರ್ಜುನ ಅಂಕಿತದಲ್ಲಿ ವಚನ ಬರೆದಿದ್ದಾನೆ.…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪ್ರಕೃತಿಯ ಜೀವಂತ ಪ್ರಯೋಗಾಲಯದಲ್ಲಿ ಮಾನವನನ್ನು ಸೃಷ್ಟಿಸಿದೆ. ಚಿಂತಿಸುವ ಮತ್ತು ಯೋಚಿಸುವ ಶಕ್ತಿಯನ್ನು ಹೊಂದಿರುವ ಮಾನವನೆಂಬ ಪ್ರಯೋಗಾಲಯವುಅತಿ ಮಾನವರನ್ನು ಮತ್ತು ದೇವತೆಗಳನ್ನು ಸೃಷ್ಟಿಸಿದೆ ಎಂದು ಅತಿ ಮಾನಸ ಶಕ್ತಿಯು ಮನುಷ್ಯ ಸೃಷ್ಟಿ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದವರು ಮಹರ್ಷಿ ಅರವಿಂದರು.ಸ್ವಾತಂತ್ರ್ಯ ಹೋರಾಟಗಾರನಾಗಿ, ಲೇಖಕನಾಗಿ, ಕವಿಯಾಗಿ, ಪತ್ರಕರ್ತನಾಗಿ, ತತ್ವಜ್ಞಾನಿಯಾಗಿ, ಯೋಗ ಗುರುವಾಗಿ, ಆಧ್ಯಾತ್ಮದ ಗುರುವಾಗಿ ಜಗತ್ತಿಗೆ ಪರಿಚಯಸಲ್ಪಟ್ಟ ಮಹರ್ಷಿ ಅರವಿಂದರ ಜೀವನ ಸಾಧನೆ ಭಾರತೀಯ ಇತಿಹಾಸದಲ್ಲಿ ಮಹತ್ವಪೂರ್ಣಸ್ಥಾನವನ್ನು ಪಡೆದಿದೆ ಎಂದರೆ ತಪ್ಪಿಲ್ಲ. ಜಗತ್ತಿನ ಮಹಾನ್ ಸಾಧಕರೆಲ್ಲರ ಜೀವನವನ್ನು ವಿಮರ್ಶಿಸಿರುವ ಮಹರ್ಷಿ ಅರವಿಂದರು ಯೋಗ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು. ಯೋಗ ಸಾಧನೆ ಎಂಬುದು ಕೇವಲ ಆತ್ಮ ಸಾಕ್ಷಾತ್ಕಾರಕ್ಕಲ್ಲ… ಬದಲಾಗಿ ಮನುಕುಲದ ಉದ್ಧಾರಕ್ಕಾಗಿ ಎಂಬುದನ್ನು ಸ್ಪಷ್ಟಪಡಿಸಿದರು.ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 15 ಆಗಸ್ಟ್ 1872ರಲ್ಲಿ ಜನಿಸಿದ ಅರವಿಂದ ಅವರ ತಂದೆ ಕೃಷ್ಣ ಧನ ಘೋಷ ಮತ್ತು ತಾಯಿ ಸ್ವರ್ಣಲತಾ ದೇವಿ ಅವರ ನಾಲ್ಕು ಮಕ್ಕಳಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೇನೆಯಲ್ಲಿ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ವಾಪಸಾದ ನಿವೃತ್ತ ಯೋಧ ವಿಜಯಪುರದ ನಗರದ ಜಾಡರ ಓಣಿಯ ಅನಿಲ್ ಗೊಳಸಂಗಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ, ಹೂ ಮಳೆ ಸುರಿಸುವ ಜತೆಗೆ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.ಈ ವೇಳೆ ಗ್ರಾಮ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ಸಂಭ್ರಮದ ಉತ್ಸವ ಹಾಗೂ ಎಲ್ಲೆಡೆ ಭಾರತಾಂಬೆಯ ಜೈಕಾರದ ದೇಶ ಪ್ರೇಮ ಮಾರ್ಧನಿಸಿತು.ಇವರು 23 ವರ್ಷಗಳ ಕಾಲ ಭಾರತ ದೇಶದ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ಪ್ರಯುಕ್ತವಾಗಿ ಜಾಡರ ಓಣಿಯ ಗೆಳೆಯರ ಬಳಗ ಹಾಗೂ ಬಂಧು ಬಳಗ ಸೇರಿದಂತೆ ಎನ್.ಸಿ.ಸಿ ಕೆಡೆಟ್ ಗಳು ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಬರಮಾಡಿಕೊಂಡರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಸಾಲಗಾರರ ಸಾಮಾನ್ಯ, ಸಾಲಗಾರ ಹಿಂದುಳಿದ ಅ ವರ್ಗ ಹಾಗೂ ಸಾಲಗಾರರಲ್ಲದ(ಬಿನ್ ಸಾಲಗಾರ) ಕ್ಷೇತಗಳಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಮಲ್ಲೇಶಿ ಬಸಪ್ಪ ಕಡಕೋಳ (ಪಡೆದ ಮತ 1113), ಸಂಗನಗೌಡ ಕಲ್ಲನಗೌಡ ಚಿಕ್ಕೊಂಡ (ಪಡೆದ ಮತ 1111), ಸಂತೋಷ ಬಸಪ್ಪ ಹಾರಿವಾಳ (ಪಡೆದ ಮತ 1082) , ಸಂಗನಬಸಪ್ಪ ಚನ್ನಪ್ಪ ನಾಯಕೋಡಿ (ಪಡೆದ ಮತ 1080), ಮುತ್ತಪ್ಪ ಶಿದ್ರಾಮಪ್ಪ ಉಕ್ಕಲಿ(ಪಡೆದ ಮತ 1028), ಸಾಲಗಾರ ಹಿಂದುಳಿದ ವರ್ಗ ಅ ಕ್ಷೇತ್ರದಿಂದ ಶ್ರೀಶೈಲ ಸಿದ್ದಪ್ಪ ಪರಮಗೊಂಡ(ಪಡೆದ ಮತ 999) , ಸಾಲಗಾರರಲ್ಲದ (ಬಿನ್ ಸಾಲಗಾರ) ಸಾಮಾನ್ಯ ಕ್ಷೇತ್ರದಿಂದ ಈರಣ್ಣ ಭೀಮಪ್ಪ ವಂದಾಲ(ಪಡೆದ ಮತ 23) ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.ಪಟ್ಟಣದ ಬಸವ ತತ್ವ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಜರುಗಿದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ…
