ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೇನೆಯಲ್ಲಿ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ವಾಪಸಾದ ನಿವೃತ್ತ ಯೋಧ ವಿಜಯಪುರದ ನಗರದ ಜಾಡರ ಓಣಿಯ ಅನಿಲ್ ಗೊಳಸಂಗಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ, ಹೂ ಮಳೆ ಸುರಿಸುವ ಜತೆಗೆ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಈ ವೇಳೆ ಗ್ರಾಮ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ಸಂಭ್ರಮದ ಉತ್ಸವ ಹಾಗೂ ಎಲ್ಲೆಡೆ ಭಾರತಾಂಬೆಯ ಜೈಕಾರದ ದೇಶ ಪ್ರೇಮ ಮಾರ್ಧನಿಸಿತು.
ಇವರು 23 ವರ್ಷಗಳ ಕಾಲ ಭಾರತ ದೇಶದ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ಪ್ರಯುಕ್ತವಾಗಿ ಜಾಡರ ಓಣಿಯ ಗೆಳೆಯರ ಬಳಗ ಹಾಗೂ ಬಂಧು ಬಳಗ ಸೇರಿದಂತೆ ಎನ್.ಸಿ.ಸಿ ಕೆಡೆಟ್ ಗಳು ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಬರಮಾಡಿಕೊಂಡರು.

