Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜನರ ನಿರೀಕ್ಷೆ ನನಸಾಗಿಸುವ ಬಜೆಟ್”ಸರ್ವರಿಗೂ ಅನ್ವಯಿಸುವ ಬಜೆಟ್. ಜನರ ನಿರೀಕ್ಷೆ ನನಸಾಗಿಸುವ ಬಜೆಟ್. ಜನಪರ ಯೋಜನೆಗೆ ಹೆಚ್ಚು ಒತ್ತುನೀಡಿದ್ದಾರೆ. ಮೂಲ ಸೌಕರ್ಯಕ್ಕೆ ಆಧ್ಯತೆ ನೀಡಿದ್ದು ಇದೊಂದು ಉತ್ತಮ ಬಜೆಟ್.”- ಯಶವಂತರಾಯಗೌಡ ಪಾಟೀಲಶಾಸಕರು, ಇಂಡಿ ಅಲ್ಪ ಸಂಖ್ಯಾತರ ಕಲ್ಯಾಣದ ಬಜೆಟ್”ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ೧೫೦ ಸಂಖ್ಯಾಬಲದ ೨೫ಹೊಸ ಮೇಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ಯೋಚಿಸಿರುವದು ಸ್ವಾಗತಾರ್ಹ, ವಿದ್ಯಾರ್ಥಿ ಸಂಖ್ಯೆ ೫೦ ರಷ್ಟು ಹೆಚ್ಚಿಸಿ ೧೦ ಕೋಟಿ ಅನುದಾನ ನೀಡಿರುವದು ಮತ್ತು ೧೦ ಹೊಸ ಸಿಬಿಎಸ್ ಇ ಶಾಲೆ ಪ್ರಾರಂಭಿಸುತ್ತಿರುವದು ಸ್ವಾಗತಾರ್ಹ.”- ಇಲಿಯಾಸ ಬೋರಾಮಣಿಜಿಲ್ಲಾ ಅಧ್ಯಕ್ಷರು, ಗ್ಯಾರಂಟಿ ಸಮಿತಿ, ಇಂಡಿ ಜೈನ ಬೌದ್ದ ಸಿಖ್ ಸಮುದಾಯಗಳಿಗೆ ಅನುದಾನ”ಜೈನ ಬೌದ್ದ ಸಿಖ್ ಸಮುದಾಯಗಳಿಗೆ ಸಮಗ್ರ ಅಬಿವೃದ್ದಿಗಾಗಿ ರೂ.೧೦೦ ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ.”- ಪ್ರಶಾಂತ ಕಾಳೆತಾಲೂಕಾ ಅಧ್ಯಕ್ಷರು, ಗ್ಯಾರಂಟಿ ಸಮಿತಿ, ಇಂಡಿ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಅನುಕೂಲ”೫೬ ಸಾವಿರ ಸರಕಾರಿ ಖಾಲಿ ಹುದ್ದೆಗಳನ್ನು ತುಂಬುತ್ತಿರುವುದು ಸಂತೋಷದ ವಿಚಾರ. ಇದರಿಂದ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.”-…
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಸಮಾಧಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಒಳ ಮೀಸಲಾತಿ ವಿಷಯವಾಗಿ ಯಾವ ಸೂಕ್ತ ನಿರ್ಧಾರವನ್ನು ಪ್ರಸಕ್ತ ಬಜೆಟ್ ವೇಳೆಯಲ್ಲಿ ಕೈಗೊಳ್ಳದ ಮುಖ್ಯಮಂತ್ರಿಗಳು ದಲಿತ ವರ್ಗಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ, ಇದು ಬಜೆಟ್ ಆಗಿರದೇ ಕೇವಲ ಘೋಷಣಾ ಪತ್ರವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಸಮಾಧಾನ ಹೊರಹಾಕಿದ್ದಾರೆ.ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಳ ಮೀಸಲಾತಿ ಜಾರಿಯ ಬಗ್ಗೆ ಯಾವ ನಿರ್ಧಾರವನ್ನು ಪ್ರಕಟಿಸದ ಮುಖ್ಯಮಂತ್ರಿಗಳು ದಲಿತ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ, ಹೀಗಾಗಿ ಅಹಿಂದ ನಾಯಕ ಎಂದು ಕರೆಯಿಸಿಕೊಳ್ಳುವ ಯಾವ ನೈತಿಕತೆಯನ್ನು ಅವರು ಉಳಿಸಿಕೊಂಡಿಲ್ಲ ಎಂದು ಕಾರಜೋಳ ಹೇಳಿದ್ದಾರೆ.ಇನ್ನೂ ಬಜೆಟ್ ವಿಶ್ಲೇಷಣೆ ಎನ್ನುವುದಕ್ಕಿಂತ ಬಜೆಟ್ ಎನ್ನದೇ ಇದೊಂದು ಘೋಷಣೆ ಎನ್ನಬಹುದಾಗಿದೆ, ಯಾವ ಯೋಜನೆಗೆ ಅನುಷ್ಠಾನಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳಿಲ್ಲ, ಕೇವಲ ರೈಲು ಬಿಟ್ಟಂತೆ ಘೋಷಣೆಗಳನ್ನು ಘೋಷಣೆ ಮಾಡುತ್ತಾ ಹೋಗಿದ್ದಾರೆ, ವಿಜಯಪುರ ಜಿಲ್ಲೆಯ ಸರ್ಕಾರಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಈ ಬಜೆಟ್ನಲ್ಲಿ ವಿಜಯಪುರ ಮಹಾನಗರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಕೇಶವ ಪ್ರಸಾದ್ ಎಸ್. ಆರೋಪಿಸಿದ್ದಾರೆ.ಶುಕ್ರವಾರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಹುನಿರೀಕ್ಷಿತ ವಿಮಾನ ನಿಲ್ದಾಣವನ್ನು ಯಾವಾಗ ಪ್ರಾರಂಭಮಾಡಲಾಗುತ್ತದೆ ಎಂಬುದರ ಬಗ್ಗೆ ಖಚಿತತೆ ಇಲ್ಲ. ವಿಶೇಷವಾಗಿ ಕೃಷ್ಣ ಮೇಲ್ದಂಡೆ ಯೋಜನೆಗಳಿಗೆ ನಿರ್ದಿಷ್ಟವಾದ ಅನುದಾನವನ್ನು ಒದಗಿಸಿಲ್ಲ. ಕಳೆದ ಬಜೆಟ್ನಲ್ಲಿ ಘೋಷಿಸಲಾದ ಫುಡ್ಪಾರ್ಕ್ ಹಾಗೂ ದ್ರಾಕ್ಷಿ ಬೆಳೆಗಾರರ ಕೋಲ್ಡ್ ಸ್ಟೋರೇಜ್ ಪ್ರಗತಿಯಾಗಿಲ್ಲ, ಈ ಬಜೆಟ್ನಲ್ಲಿ ಯಾವುದೇ ಪ್ರಸ್ಥಾಪವಿಲ್ಲ. ಉತ್ತರ ಕರ್ನಾಟಕ ಭಾಗದ ಕ್ರೀಡೆಯ ಪ್ರೋತ್ಸಾಹಕ್ಕೆ ವಿಜಯಪುರ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬಹುಉಪಯೋಗಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದೆಂದು ಆಶಿಸಲಾಗಿತ್ತು, ಅದರ ಬಗ್ಗೆ ಈ ಬಜೆಟ್ನಲ್ಲಿ ಚಕಾರವಿಲ್ಲ. ಶ್ರೀ ಲಿಂ. ಶ್ರೀ ಸಿದ್ದೇಶ್ವರ ಶ್ರೀಗಳ ಅಧ್ಯಯನ ಕೇಂದ್ರ ಸ್ಥಾಪಿಸುವ ಯಾವುದೇ ಪ್ರಸ್ಥಾಪವಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ವರ್ಷದಲ್ಲಿ ತರಗತಿ ಪ್ರಾರಂಭಿಸಲಾಗುವುದೆಂದು ಆಶಿಸಲಾಗಿತ್ತು. ವಿಜಯಪುರ ಮಹಾನಗರವು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನದ ಬಗ್ಗೆ…
ಲೇಖನ- ಅವಿನಾಶ ಸೆರೆಮನಿಉಪನ್ಯಾಸಕರುಬೈಲಹೊಂಗಲಜಿಲ್ಲೆ: ಬೆಳಗಾವಿ ಉದಯರಶ್ಮಿ ದಿನಪತ್ರಿಕೆ ಸ್ವಾರ್ಥ ಎಂದರೆ ತನ್ನ ಸ್ವಂತಿಕೆಗೆ ಪ್ರಾಮುಖ್ಯತೆ ನೀಡುವುದು, ಇತರರನ್ನು ತಿರಸ್ಕರಿಸುವುದು. ಸರಳ ಪದದಲ್ಲಿ ಸ್ವಾರ್ಥ ಎಂದರೆ ಸ್ವ ಹಿತಾಸಕ್ತಿ.ಇದು ಮನುಜನೊಳಗೆ ಅಹಂ ಭಾವನೆ ಹುಟ್ಟು ಹಾಕುವುದಲ್ಲದೆ ತಾನೇ ಶ್ರೇಷ್ಠ ಎಂಬ ಅಸಡ್ಡೆಗೆ ಕಾರಣವಾಗುತ್ತದೆ. ಸಂಬಂಧಗಳನ್ನು ಕಳಚಿ ಒಂಟಿತನಕ್ಕೆ ದೂಡುತ್ತದೆ. ತನ್ನ ಸ್ವ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತ ತನ್ನದೆಯಾದ ಲೋಕದಲ್ಲಿ ಮುಳುಗಿ ಸ್ವ ಪ್ರತಿಷ್ಠೆಗಾಗಿ ಹಂಬಲಿಸುತ್ತ ಇತರರನ್ನು ಕೀಳಾಗಿ ನೋಡಲು ಆರಂಭಿಸುತ್ತಾನೆ. ತನ್ನನ್ನೇ ತಾನು ಪ್ರೀತಿಸುತ್ತ, ಕಾಳಜಿ ವಹಿಸುತ್ತ, ಸ್ವ ಲಾಭದತ್ತ ಒಲವು ತೋರುವುದು. ಸ್ವಯಂ ಪ್ರೀತಿ ಮತ್ತು ಪರಾನುಭೂತಿಯನ್ನು ಬೆಳೆಸಿಕೊಳ್ಳಬೇಕು ಸ್ವಾರ್ಥ ಇರಲೇಬಾರದಂತಲ್ಲ ಕೆಲವು ಸಂದಿಗ್ನ ಮತ್ತು ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಸ್ವಾರ್ಥವು ಅತಿಮುಖ್ಯ ಪಾತ್ರವನ್ನು ವಹಿಸುತ್ತದೆ. ಆಯಾ ಸನ್ನಿವೇಶದಲ್ಲಿ ಸ್ವಾರ್ಥವನ್ನು ಅವಲಂಬಿಸಲೇಬೇಕಾಗುತ್ತದೆ. ಇಲ್ಲದಿರೆ ಜೀವಕ್ಕೆ ಕುತ್ತು ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉದಾಹರಣೆ ಅನಾರೋಗ್ಯದ ಸಂದರ್ಭದಲ್ಲಿ ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸಲೇಬೇಕು. ಇದು ಅನಿವಾರ್ಯ, ನಾವೇ ನಮ್ಮ ಆರೋಗ್ಯದ ರಕ್ಷಕರು ಹೊರತು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾರುಕಟ್ಟೆ ಸಂಪರ್ಕಗಳನ್ನು ಸಮರ್ಪಕವಾಗಿ ಬಲಪಡಿಸುವುದೂ ಸೇರಿ ರೂಪಿಸಲಾಗುವ ಸಮಗ್ರ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ, ಎಐ ತಂತ್ರಜ್ಞಾನದಿಂದ ರೈತ ಕರೆ ಕೇಂದ್ರ ಉನ್ನತಿ, ಎಪಿಎಂಸಿಗಳ ಸಂಪೂರ್ಣ ಡಿಜಿಟಲೀಕರಣ ಯೋಜನೆಗಳು ಕೃಷಿಕರ ಬದುಕಿನ ಬದಲಾವಣೆಗೆ ಪೂರಕವಾಗಲಿವೆ. ಕಳಪೆ ಬಿತ್ತನೆ ಬೀಜ, ಕೀಟನಾಶಕ ಪೂರೈಕೆ ತಡೆ ಅತ್ಯಗತ್ಯವಾಗಿದ್ದು, ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯಮಟ್ಟದ ಸಲಹಾ ಸಮಿತಿ ರಚನೆ ಘೋಷಣೆ ಸ್ವಾಗತಾರ್ಹವಾಗಿದೆ ಎಂದು ರಾಜ್ಯ ಬಜೆಟ್ ಕುರಿತು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಅಕ್ರಮ 35,060 ಕೆಜಿ ಅಕ್ಕಿ ಹಾಗೂ ಲಾರಿ ವಶಕ್ಕೆ ಪಡೆದ ಅಧಿಕಾರಿಗಳು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಆರ್ ಎನ್ಎಸ್ ಶೋ ರೂಮ್ ಹತ್ತಿರ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ವಶಕ್ಕೆ ಪಡೆದಿದ್ದಾರೆ.ಆರ್ ಎನ್ಎಸ್ ಶೋ ರೂಮ್ ಹತ್ತಿರ ಲಾರಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, 35,060 ಕೆಜಿ ಅಕ್ಕಿ ಹಾಗೂ ಲಾರಿ ವಶಕ್ಕೆ ಪಡೆದು ಟಿ.ರಾಜು ಎಂಬುವವರ ಮೇಲೆ ಜಲ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ದಾಳಿಯಲ್ಲಿ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರೇಶ ತಾಂಡೂರ, ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ,ಜಲನಗರ ಪಿ ಎಸ್ ಐ ಮಹೇಶ ಸಂಖ್ ,ಪೋಲಿಸ್ ಸಿಬ್ಬಂದಿಗಳಾದ ವೈ. ಎ ರಾಥೋಡ, ಎಚ್ ಎನ್ ಪೂಜಾರಿ ಹಾಗೂ ಎಂ.ಆರ್ ಶಿಂಧೆ ಇದ್ದರು ಎಂದುಆಹಾರ ಇಲಾಖೆಯಉಪ ನಿರ್ದೇಶಕವಿನಯಕುಮಾರ…
ಲೇಖನ:-ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು,ದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಜಗತ್ತಿನಲ್ಲಿ ಹಲವು ವಿಧದ, ಬಣ್ಣದ, ರೂಪದ, ಗಾತ್ರದ ಪಕ್ಷಿಗಳಿದ್ದು, ಅವೆಲ್ಲದರ ಪೈಕಿ ಅತ್ಯಂತ ಹೆಚ್ಚು ಅನಾದರಕ್ಕೆ ಒಳಗಾದ ಪಕ್ಷಿಯೆಂದರೆ ಕಾಗೆ.ಬಣ್ಣದಲ್ಲಿ ಕಪ್ಪು, ಕೂಗಿನಲ್ಲಿ ಕರ್ಕಶ ಇವೆಲ್ಲಾ ಕಾರಣಗಳಿಂದ ಮನುಷ್ಯನಿಗೆ ಕಾಗೆಗಳೆಂದರೆ ಅಷ್ಟಕ್ಕಷ್ಟೇ. ಜಗತ್ತಿನ ಜೀವವಿಜ್ಞಾನಿಗಳು ಮತ್ತು ಮಹಾನ್ ಆಡಳಿತಗಾರನಾದ ಚಾಣಕ್ಯ ಹೇಳುವಂತೆ ಮನುಷ್ಯನು ಕಾಗೆಯನ್ನು ನೋಡಿಕೊಂಡು ಅದರಿಂದ ಕಲಿಯಬೇಕಾಗಿರುವುದು ಬಹಳಷ್ಟು ವಿಚಾರಗಳಿವೆ. ಅದರಲ್ಲೂ ಮುಖ್ಯವಾಗಿ ಕಾಗೆಯಲ್ಲಿ ಇರುವ ಯಶಸ್ಸಿನ ಗುಣಗಳನ್ನು ಎಲ್ಲರೂ ಕಲಿಯಲೇಬೇಕು. ಕಾಗೆಯಿಂದ ಕಲಿಯಬೇಕಾದ ಮೊದಲನೆಯ ಗುಣವೆಂದರೆ ಎಲ್ಲೂ ಕಾಗೆಯು ಬಹಿರಂಗವಾಗಿ ಮಿಲನವನ್ನು ನಡೆಸುವುದಿಲ್ಲ ಮತ್ತು ಅದನ್ನು ತೀರಾ ಗುಪ್ತವಾಗಿರಿಸುತ್ತದೆ. ಮನುಷ್ಯ ಇದನ್ನು ಸರಿಯಾಗಿ ಅರಿತುಕೊಂಡರೆ ಮತ್ತು ಅದರ ಮೌಲ್ಯವನ್ನು ಅರಿತರೆ ಆತನಿಗೆ ಸಮಾಜದಲ್ಲಿ ಅಪಾರ ಗೌರವ ಪ್ರಾಪ್ತಿಯಾಗುತ್ತದೆ. ‘ಅನ್ನದ ಅಗುಳೊಂದ ಕಂಡರೆ ಕೂಗಿ ಕರೆಯದೇ ಕಾಗೆಯೊಂದು ತನ್ನ ಬಳಗವನ್ನು’ ಎಂಬ ಮಾತೇ ಇರುವಂತೆ ಕಾಗೆಯು ಒಂದು ತುತ್ತು ಆಹಾರ ಸಿಕ್ಕರೂ ಅದನ್ನು…
ಉದಯರಶ್ಮಿ ದಿನಪತ್ರಿಕೆ ಚಡಚಣ: ಇಂಡಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52ರ ಮೇಲಿನ ಅರ್ಜನಾಳ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದ್ದು, ದಿನವಿಡಿ ವಾಹನಗಳು ಅಡ್ಡಾಡುವದರಿಂದ ಶಾಲೆಯ ಮಕ್ಕಳು ಜೀವದ ಭಯದಲ್ಲಿ ತಿರುಗಾಡುವಂತಾಗಿದೆ ಎಂಬುದು ಶಾಲಾ ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.ಎಸ್. ಡಿ. ಎಂ ಸಿ. ಅಧ್ಯಕ್ಷ ಧರ್ಮರಾಜ ಬಿರಾದಾರ ಮಾತನಾಡಿ, ಅರ್ಜನಾಳ ಗ್ರಾಮ ರಾಷ್ಟ್ರೀಯ ಹೆದ್ದಾರಿ ಇಂದ ಸುಮಾರು 3 ಕಿಲೋಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಗ್ರಾಮದಲ್ಲಿ ರಸ್ತೆಯ ಬದಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇದ್ದು, ಇಲ್ಲಿಗೆ ದಿನಾಲು ಅರ್ಜನಾಳ, ಗೊಟ್ಯಾಳ ಗ್ರಾಮದ ವಿದ್ಯಾರ್ಥಿಗಳು ದಿನಾಲು ಜೀವದ ಹಂಗು ತೊರೆದು ಶಾಲೆಗೆ ಬರುವಂತಾಗಿದೆ ಎಂದರು.ಎಸ್. ಡಿ. ಎಂ. ಸಿ. ಕಾರ್ಯದರ್ಶಿ ರಾಜಕುಮಾರ ಪೂಜಾರಿ ಮಾತನಾಡಿ, ಸರ್ಕಾರ ರಸ್ತೆಗಳ ಸುಧಾರಣೆ ಮಾಡದೇ ಹೋದಲ್ಲಿ ಪ್ರಾಣಹಾನಿ ಸಂಭವಿಸುವದು ಗ್ಯಾರಂಟಿ ಅದಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ, ಇಲ್ಲಿಯವರೆಗೂ ಸಣ್ಣ ಪುಟ್ಟ ಗಾಯಗಳು ವಿದ್ಯಾರ್ಥಿಗಳು ಅನುಭವಿಸಿವೆ, ಹೀಗೆ ನಡೆದಲ್ಲಿ ಮುಂದಿನ ಅನಾಹುತಕ್ಕೆ ಯಾರು ಕಾರಣಿಭೂತರು, ಹೆದ್ದಾರಿಯಿಂದ ಗ್ರಾಮದ ವರೆಗೂ ಸಂಪೂರ್ಣ ರಸ್ತೆ…
ಷರತ್ತುಬದ್ಧ ಅನುಮತಿ ನೀಡಿದ ಯಡ್ರಾಮಿ ತಾಲೂಕು ಆಡಳಿತ ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ತಾಲೂಕಿನ ಕುಮ್ಮನಸಿರಸಗಿ ಗ್ರಾಮದಲ್ಲಿ ಆರ್.ಎಸ್. ಎಸ್. ಪಥಸಂಚಲ ನಡೆಸಲು ತಾಲೂಕ ಆಡಳಿತ ಷರತ್ತು ಬದ್ಧ ಅನುಮತಿ ನೀಡಿದೆ. ಇದರಿಂದ ಸಂಘದ ಕಾರ್ಯಕರ್ತರಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದ್ದು, ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಯುಗಾದಿ ಉತ್ಸವದ ಅಂಗವಾಗಿ ಮಾ. 7ರಂದು ಶನಿವಾರ ಕುಮ್ಮನಸಿರಸಗಿ ಗ್ರಾಮದಲ್ಲಿ ಪಥ ಸಂಚಲನ ನಡೆಸಲು ಅನುಮತಿ ಕೋರಿ ಆರ್.ಎಸ್.ಎಸ್. ಸಂಘ ಅರ್ಜಿ ಸಲ್ಲಿಸಲಾಗಿತ್ತು.ಅದನ್ನು ಪರಿಗಣಿಸಿದ ಪೊಲೀಸ್ ಇಲಾಖೆ ಮತ್ತು ಯಡ್ರಾಮಿ ತಾಲೂಕ ಆಡಳಿತ ಕೂಲಂಕುಶವಾಗಿ ಪರಿಶೀಲಿಸಿ ಅನುಮತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಗಣವೇಶಧಾರಿಗಳಿಂದ ಪಥಸಂಚಲನ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.ಪಥ ಸಂಚಲನಕ್ಕೆ 15 ಷರತ್ತುಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನಕ್ಕೆ ಷರತ್ತು ವಿಧಿಸಲಾಗಿದ್ದು, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು, ನಿಗದಿತ ಮಾರ್ಗವನ್ನಷ್ಟೇ ಬಳಸುವುದು, ರಸ್ತೆ ತಡೆದು ಸಂಚಾರಕ್ಕೆ ತೊಂದರೆ ಆಗದಂತೆ, ಜಾತಿ ಅಥವಾ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: 4 ವರ್ಷ ಮೇಲ್ಮಟ್ಟ ವಯೋಮಾನದ ನಗರದ ಮನಿಯಾರ ಕಾಲೋನಿಯಲ್ಲಿರುವ ಕುಮಾರಿ ಬಿಬಿ ಖತಿಜಾ ಅವರು ಕಳೆದ ಶುಕ್ರವಾರ ಒಂದು ದಿನ ಪವಿತ್ರ ರಂಜಾನ ತಿಂಗಳಿನ ಉಪವಾಸ ಕೈಗೊಂಡು ಈ ಚಿಕ್ಕ ವಯಸ್ಸಿನಲ್ಲಿ ತನ್ನ ಭಕ್ತಿ ಭಾವ ಮೆರೆದಿದ್ದಾಳೆ.ಕುಮಾರಿ ಬಿಬಿ ಖತಿಜಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿರಸ್ತೆದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಸಲೀಂ ಬಿಜಾಪೂರ ಇವರ ಮೊಮ್ಮಗಳಾಗಿದ್ದಾರೆ.
