ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಕಡಣಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಈರಮ್ಮ ಬಸವರಾಜ್ ಪಡಶೆಟ್ಟಿ ಹಾಗೂ ಬಸವರಾಜ ಪಡಶೆಟ್ಟಿ ಅವರ ಸುಪುತ್ರಿ ಕುಮಾರಿ ಐಶ್ವರ್ಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.90 ಪ್ರತಿಶತ ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.
ಕಡುಬಡತನದಲ್ಲಿ ಜನಿಸಿದ ಐಶ್ವರ್ಯ ಅವರ ತಂದೆ ಬಸವರಾಜ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಾರೆ. ಇವರಿಗೆ ಸ್ವಂತ ಜಮೀನು ಕೂಡ ಇರುವುದಿಲ್ಲ. ಇಂಥ ಕಷ್ಟದ ಕುಟುಂಬದಲ್ಲಿ ಜನಿಸಿರುವ ಐಶ್ವರ್ಯ ಕಷ್ಟಪಟ್ಟು ಸಾಧನೆ ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ
ಈ ವಿದ್ಯಾರ್ಥಿನಿಯು 1 ನೇ ತರಗತಿಯಿಂದ 7ನೇ ತರಗತಿವರೆಗೆ ಬಡ ರೇಖೆ ಗಳಿಗಿಂತ ಕಡಿಮೆ ಇರುವ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಆರ್ ಟಿ ಇ ಆಯ್ಕೆಯಾಗಿ ಆಲಮೇಲ ಆಯ್. ಕೆ .ರಾಯಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು 8 ತರಗತಿಯಿಂದ 10ನೇ ತರಗತಿಯವರೆಗೆ ಸಿಂದಗಿ ತಾಲೂಕಿನ ಗುಬ್ಬೆ ವಾಡ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು ಪಿ ಯು ಸಿ ಅಭ್ಯಾಸವನ್ನು ವಿಜಯಪುರದ ಚೇತನ ಪಿಯು ಸೈನ್ಸ್ ಅಂಡ್ ಕಾಮರ್ಸ್ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷ ಹಾಗೂ ದ್ವಿತೀಯ ವರ್ಷ ವಿದ್ಯಾಭ್ಯಾಸ ಮಾಡಿ 2025 -26 ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 600 ಕ್ಕೆ 538 ಅಂಕಗಳಿಸಿ ತೇರ್ಗಡೆ ಹೊಂದಿರುವುದು ವಿದ್ಯಾರ್ಥಿನಿಯ ಉತ್ತಮ ಸಾಧನೆಗೆ ಸಾಕ್ಷಿಯಾಗಿದೆ.
ಕುಮಾರಿ ಐಶ್ವರ್ಯ ಬಸವರಾಜ್ ಪಡಶೆಟ್ಟಿ ಸಾಧನೆಗೆ ಮಾಡಿ ಕಡಣಿ ಗ್ರಾಮದ ಹೆಮ್ಮೆಯ ಕುವರಿ ಯಾಗಿರುವಳು.
ಆ ವಿದ್ಯಾರ್ಥಿಯ ಸಾಧನೆಗೆ ಗ್ರಾಮಸ್ಥರು, ಶಾಲೆಯ ಮುಖ್ಯಸ್ಥರು, ಶಿಕ್ಷಕ ಬಳಗ,
ಬಂದು ಮಿತ್ರರು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.

