Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಕಬ್ಬಿಣದ ಕಡಲೆ ಎನ್ನುವ ಗಣಿತ ವಿಷಯವನ್ನು ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳಬಹುದು ಎಂಬುದನ್ನು ತೋರಿಸಿದ ಭಾರತದ ಶ್ರೇಷ್ಠ ಗಣಿತಜ್ಞ ರಾಮಾನುಜನ್ ಎಂದು ಅಭಿಯಂತರ ಕಿರಣ್ ದೇಸಾಯಿ ಹೇಳಿದರು.ಅವರು ಇತ್ತೀಚೆಗೆ ಪಟ್ಟಣದ ದೇಸಾಯಿ ಅಂತರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿವಸ ಹಾಗೂ ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ರಾಮಾನುಜನ್ ಅವರು ತಮಿಳುನಾಡಿನ ಈರೋಡ್ನಲ್ಲಿ ಡಿಸೆಂಬರ್ ೨೨, ೧೮೮೭ ರಲ್ಲಿ ಜನಿಸಿದರು. ಶ್ರೀನಿವಾಸ ರಾಮಾನುಜನ್ ರವರಿಗೆ ಗಣಿತ ವಿಷಯದೊಂದಿಗೆ ಇದ್ದ ಒಲವು, ಅಪಾರ ಜ್ಞಾನದಿಂದಾಗಿ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ ೨೨ ರಂದು’ ರಾಷ್ಟ್ರೀಯ ಗಣಿತ ದಿನ’ವನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೀರ್ತಿ ದೇಸಾಯಿ ಹಾಗೂ ಸೀಮಾ ದೇಸಾಯಿ ಅವರು ಗಣಿತ ವಸ್ತು ಪ್ರದರ್ಶನ ವೀಕ್ಷಿಸಿದರು.ವಿದ್ಯಾರ್ಥಿಗಳಿಂದ ಒಂದರಿAದ ಹತ್ತರವರೆಗಿನ ಸಂಖ್ಯೆಗಳನ್ನು ನೃತ್ಯದ ಮೂಲಕ ನಿರ್ಮಿಸಿ ತೋರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಮಾನುಜನ್, ಶಕುಂತಲಾ ದೇವಿ,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕಲ್ಲು ಸಹ ಶಿಲ್ಪಿಯಿಂದ ಕೆತ್ತಲ್ಪಟ್ಟು ಗುರುವಿನ ಹಸ್ತ ಸ್ಪರ್ಶ ಹಾಗೂ ಮಂತ್ರಗಳಿಂದ ದೇವರ ಸ್ಥಾನವನ್ನು ಪಡೆದುಕೊಳ್ಳುತ್ತದೆ, ಅದಕ್ಕೆ ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.ಅವರು ಬುಧವಾರ ಇಂಡಿ ತಾಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ, ಶ್ರೀಶೈಲ ಮಲ್ಲಿಕಾರ್ಜುನ ಲಿಂಗ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ, ಹಾಗೂ ತಪೋನಿಧಿ ಅನುಷ್ಠಾನ ಮೂರ್ತಿ ಜೆಡೆಯ ಶಾಂತಲಿಂಗ ಶಿವಾಚಾರ್ಯರಿಂದ ಶ್ರೀ ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮಲಘಾಣದ ಜಡೆಯ ಶಾಂತಲಿಂಗ ಶಿವಾಚಾರ್ಯರು ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ಧೀಕ್ಷೆ ನೀಡಿದ್ದು, ಆನಂದ ಮಹಾರಾಜರು ಸಹ ಸ್ವಾಮೀ ವಿವೇಕಾನಂದರಂತೆ ಹೆಚ್ಚೆಚ್ಚು ಬೆಳೆಯಲಿ ಎಂದು ಶುಭ ಹಾರೈಸಿದರು.ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಹಿರೂರದ ಜಯಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಉಗಾದಿ ಹಾಗೂ ದೀಪಾವಳಿಯ ಹಬ್ಬಗಳಂದು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮೀಜಿಯ ದರ್ಶನ ಮಾಡಲು ಹೆಚ್ಚಿನ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕಿನ ಘೋಣಸಗಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆಯಾಗಿ ಅಂಜನಾ ಸುರೇಶ ಪವಾರ ಆಯ್ಕೆಯಾಗಿದ್ದಾರೆ.ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ, ಪಿಡಿಓ ಸದಾಶಿವ ಬೋವಿನ, ರಾಜಶ್ರೀ ಚಂಡಕಿ, ಬಸನಿಂಗ ನಿಡೋಣಿ, ಶ್ರೀಕಾಂತ ರಾಠೋಡ, ಅಶ್ವೀನಿ ಮುಂಜೆ, ಸುರೇಖಾ ರಾಠೋಡ, ಮೈಬುಬ ಜತ್ತಿ, ಶಿಲ್ಪಾ ಮುಚ್ಚಂಡಿ, ಸಿದ್ದಪ್ಪ ಸೊರಡಿ, ಕಸ್ತೂರಿ ಮಾಳಿ, ಅಂಜನಾ ಬೋಸಲೆ, ನಾಮದೇವ ಬಂಢಗರ, ಚಂದ್ರಕಾಂತ ಕದಂ, ಯಾಕುಬ ಜತ್ತಿ, ಶ್ರೀಮಂತ ಬಂಢಗರ, ಕೃಷ್ಣಾ ಮಾನವರ ಹಾಗೂ ಗ್ರಾಮದ ಗುರು ಹಿರಿಯರು ಇದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಿಶು ಅಭವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ, ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು ೩೮ ಅಂಗನವಾಡಿ ಕಾರ್ಯಕರ್ತೆ ಹಾಗೂ ೭೦ ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದೆ. ೪ ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ: ೨೬-೧೨-೨೦೨೪ ರಿಂದ ದಿನಾಂಕ: ೦೫-೦೧-೨೦೨೫ ರಂದು ಸಂಜೆ ೫.೩೦ ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್‌ಸೈಟ್‌ನಲ್ಲಿ ಇಲಾಖಾ ವತಿಯಿಂದ ಅವಕಾಶ ನೀಡಿ ಆದೇಶಿಸಲಾಗಿದೆ. ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸುವಾಗ ಅಧಿಸೂಚನೆಯ ಕೊನೆಯ ದಿನಾಂಕದ ಒಳಗಿನ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ(ಮುದ್ದೇಬಿಹಾಳ) ಇಲ್ಲಿಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ, ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು ೫೨ ಅಂಗನವಾಡಿ ಕಾರ್ಯಕರ್ತೆ ಹಾಗೂ ೧೨೯ ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದೆ. ೪ ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ: ೨೬-೧೨-೨೦೨೪ ರಿಂದ ದಿನಾಂಕ: ೦೫-೦೧-೨೦೨೫ ರಂದು ಸಂಜೆ ೫.೩೦ ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್‌ಸೈಟ್‌ನಲ್ಲಿ ಇಲಾಖಾ ವತಿಯಿಂದ ಅವಕಾಶ ನೀಡಿ ಆದೇಶಿಸಲಾಗಿದೆ. ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸುವಾಗ ಅಧಿಸೂಚನೆಯ ಕೊನೆಯ ದಿನಾಂಕದ ಒಳಗಿನ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ(ಸಿಂದಗಿ) ಇಲ್ಲಿಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ, ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು ೩೬ ಅಂಗನವಾಡಿ ಕಾರ್ಯಕರ್ತೆ ಹಾಗೂ ೯೬ ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದೆ. ೪ ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ: ೨೬-೧೨-೨೦೨೪ ರಿಂದ ದಿನಾಂಕ: ೦೫-೦೧-೨೦೨೫ ರಂದು ಸಂಜೆ ೫.೩೦ ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್‌ಸೈಟ್‌ನಲ್ಲಿ ಇಲಾಖಾ ವತಿಯಿಂದ ಅವಕಾಶ ನೀಡಿ ಆದೇಶಿಸಲಾಗಿದೆ. ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸುವಾಗ ಅಧಿಸೂಚನೆಯ ಕೊನೆಯ ದಿನಾಂಕದ ಒಳಗಿನ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ(ಚಡಚಣ) ಇಲ್ಲಿಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಇಲ್ಲೆಯ ಬಸವನ ಬಾಗೇವಾಡಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ, ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು ೪೫ ಅಂಗನವಾಡಿ ಕಾರ್ಯಕರ್ತೆ ಹಾಗೂ ೧೦೭ ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದೆ. ೪ ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ: ೨೬-೧೨-೨೦೨೪ ರಿಂದ ದಿನಾಂಕ: ೦೫-೦೧-೨೦೨೫ ರಂದು ಸಂಜೆ ೫.೩೦ ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್‌ಸೈಟ್‌ನಲ್ಲಿ ಇಲಾಖಾ ವತಿಯಿಂದ ಅವಕಾಶ ನೀಡಿ ಆದೇಶಿಸಲಾಗಿದೆ. ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸುವಾಗ ಅಧಿಸೂಚನೆಯ ಕೊನೆಯ ದಿನಾಂಕದ ಒಳಗಿನ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ (ಬಸವನ ಬಾಗೇವಾಡಿ) ಇಲ್ಲಿಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ(ಗ್ರಾಮೀಣ) ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು ೪೨ ಅಂಗನವಾಡಿ ಕಾರ್ಯಕರ್ತೆ ಹಾಗೂ ೧೦೫ ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದೆ. ಅರ್ಜಿ ಸಲ್ಲಿಸುವ ೪ ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ: ೨೬-೧೨-೨೦೨೪ ರಿಂದ ದಿನಾಂಕ: ೦೫-೦೧-೨೦೨೫ ರಂದು ಸಂಜೆ ೫.೩೦ ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್‌ಸೈಟ್‌ನಲ್ಲಿ ಇಲಾಖಾ ವತಿಯಿಂದ ಅವಕಾಶ ನೀಡಿ ಆದೇಶಿಸಲಾಗಿದೆ. ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸುವಾಗ ಅಧಿಸೂಚನೆಯ ಕೊನೆಯ ದಿನಾಂಕದ ಒಳಗಿನ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ವಿಜಯಪುರ(ಗ್ರಾಮೀಣ) ಇಲ್ಲಿಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ನಗರ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ೩೯೪ ಅಂಗನವಾಡಿ ಸಹಾಯಕಿಯ ಗೌರವ ಸೇವೆ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದೆ. ಅರ್ಜಿ ಸಲ್ಲಿಸುವ ೪ ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ: ೨೬-೧೨-೨೦೨೪ ರಿಂದ ದಿನಾಂಕ: ೦೫-೦೧-೨೦೨೫ ರಂದು ಸಂಜೆ ೫.೩೦ ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್‌ಸೈಟ್‌ನಲ್ಲಿ ಇಲಾಖಾ ವತಿಯಿಂದ ಅವಕಾಶ ನೀಡಿ ಆದೇಶಿಸಲಾಗಿದೆ. ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸುವಾಗ ಅಧಿಸೂಚನೆಯ ಕೊನೆಯ ದಿನಾಂಕದ ಒಳಗಿನ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ವಿಜಯಪುರ(ನಗರ) ಇಲ್ಲಿಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತೊರವಿ ವಿ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ೧೧೦/೧೧ ಕೆವ್ಹಿ ವಿ.ವಿ ಕೇಂದ್ರ ತಿಕೋಟ, ಟಕ್ಕಳಕಿ, ಕನಮಡಿ, ಹಾಗೂ ಹೊನವಾಡದಲ್ಲಿ ಮೂರನೇ ತೈಮಾಸಿಕ ವಿದ್ಯುತ್ ವಿರ್ವಾಹಣಾ ಕಾರ್ಯ ಕೈಗೊಳ್ಳುತ್ತಿರುವದರಿಂದ ಹೊರಹೊಗುವ ಎಲ್ಲಾ ೧೧ ಕೆವ್ಹಿ ಹಾಗೂ ೩೩ ಕೆವ್ಹಿ ವಿದ್ಯುತ್ ಮಾರ್ಗಗಳ ಮೇಲೆ ೨೭ ರಂದು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨:೩೦ ರವರೆಗೆ ವಿದ್ಯುತ್ ವ್ಯತ್ಯಾಯವಾಗಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿಜಯಪುರದ ಹೆಸ್ಕಾಂ ನ ಕಾರ್ಯನಿರ್ವಾಹಕ ಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
