ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಲ್ಲು ಸಹ ಶಿಲ್ಪಿಯಿಂದ ಕೆತ್ತಲ್ಪಟ್ಟು ಗುರುವಿನ ಹಸ್ತ ಸ್ಪರ್ಶ ಹಾಗೂ ಮಂತ್ರಗಳಿಂದ ದೇವರ ಸ್ಥಾನವನ್ನು ಪಡೆದುಕೊಳ್ಳುತ್ತದೆ, ಅದಕ್ಕೆ ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ಅವರು ಬುಧವಾರ ಇಂಡಿ ತಾಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ, ಶ್ರೀಶೈಲ ಮಲ್ಲಿಕಾರ್ಜುನ ಲಿಂಗ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ, ಹಾಗೂ ತಪೋನಿಧಿ ಅನುಷ್ಠಾನ ಮೂರ್ತಿ ಜೆಡೆಯ ಶಾಂತಲಿಂಗ ಶಿವಾಚಾರ್ಯರಿಂದ ಶ್ರೀ ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಲಘಾಣದ ಜಡೆಯ ಶಾಂತಲಿಂಗ ಶಿವಾಚಾರ್ಯರು ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ಧೀಕ್ಷೆ ನೀಡಿದ್ದು, ಆನಂದ ಮಹಾರಾಜರು ಸಹ ಸ್ವಾಮೀ ವಿವೇಕಾನಂದರಂತೆ ಹೆಚ್ಚೆಚ್ಚು ಬೆಳೆಯಲಿ ಎಂದು ಶುಭ ಹಾರೈಸಿದರು.
ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಹಿರೂರದ ಜಯಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಉಗಾದಿ ಹಾಗೂ ದೀಪಾವಳಿಯ ಹಬ್ಬಗಳಂದು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮೀಜಿಯ ದರ್ಶನ ಮಾಡಲು ಹೆಚ್ಚಿನ ಜನ ಇರುವುದರಿಂದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮೀಯೇ ನಿಮ್ಮ ಗ್ರಾಮದಲ್ಲಿಯೇ ಸ್ಥಾಪಿತವಾಗಿ ನಿಮಗೆ ದರ್ಶನ ನೀಡುತ್ತಿದ್ದಾನೆ. ಇದು ಮಾರ್ಸನಳ್ಳಿ ಗ್ರಾಮಸ್ಥರ ಸುದೈವವೇ ಸರಿ ಎಂದರು.
ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿ ಮದುವೆಯಾದ ನವ ಜೋಡಿಗಳು ಉತ್ತಮವಾಗಿ ಸಂಸಾರ ನಡೆಸಿಕೊಂಡು ಹೋಗಿ, ದೇಶಕ್ಕೆ, ಈ ನಾಡಿಗೆ ಸೇವೆಗೈಯುವ ಮಕ್ಕಳನ್ನು ಹೆತ್ತು ಸಮಾಜಕ್ಕೆ ಕೊಡಿ ಎಂದು ಶುಭ ಹಾರೈಸಿದರು.
ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ನಾದ ಗ್ರಾಮದ ಶಿವಾನಂದ ಶಿವಾಚಾರ್ಯರು, ಕೆರೂಟಗಿಯ ಶಿವಬಸವ ಶಿವಾಚಾರ್ಯರು, ಆಲಮೇಲದ ಗುರಲಿಂಗ ಶಿವಾಚಾರ್ಯರು, ಸಂಗನಬಸವ ಶಿವಾಚಾರ್ಯರು, ಸಿಂದಗಿಯ ಸಂಗನಬಸವ ಮಹಾಸ್ವಾಮೀಜಿಗಳು ಸೇರಿದಂತೆ ಹಲವರು ಸಾನಿಧ್ಯವಹಿಸಿದ್ದರು.
ಆಲಮೇಲದ ವೈದ್ಯ ಡಾ. ಸಂದೀಪ ಪಾಟೀಲ್ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.
ಭೂದಾನ ಮಾಡಿದ ಶ್ರೀಮತಿ ಸುವರ್ಣ ಹಾಗೂ ಶ್ರೀ ರಾವುತಪ್ಪ ಮಹಾದೇವಪ್ಪ ವಾಲೀಕಾರ ಅವರಿಗೆ ಶ್ರೀಶೈಲ ಶ್ರೀಗಳು ಸತ್ಕರಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಡಾ. ಸಂದೀಪ ಪಾಟೀಲ, ಮಲ್ಲು ಮೇತ್ರಿ, ಹಣಮಂತ ಜಮಾದಾರ, ಶ್ಯಾಮ ಮಸಳಿ, ಮಾಳಪ್ಪ ಪೂಜಾರಿ, ಅಲಿಸಾಬ ಗೌರ, ಹೊನ್ನಪ್ಪ ಸೋಂಪೂರ, ಅರವಿಂದ ಬಗಲಿ, ರುಕುಮ್‌ಪಟೇಲ್ ಪಾಸೋಡಿ, ರಮೇಶ ಕಲ್ಯಾಣಿ, ಪ್ರಭು ವಾಲೀಕಾರ, ವಿಠ್ಠಲಗೌಡ ಪಾಟೀಲ, ಸತೀಶ ಜಮಾದಾರ, ಸತೀಶ ಮಸಳಿ, ಪ್ರಭುಗೌಡ ಬಿರಾದಾರ, ದೌಲಮಲಿಕ್ ದೇವರಮನಿ, ವಿಠ್ಠಲ ಏಳಗಿ, ಬತ್ತುಸಾಹುಕಾರ ಬಸಗೊಂಡ, ಶ್ರೀಶೈಲ ಜಮಾದಾರ, ಮಾಳಪ್ಪ ಇಂಡಿ, ರಾಚಪ್ಪ ಬಗಲಿ, ಬಾಪುಗೌಡ ಪಾಟೀಲ, ವಿಠ್ಠಲ ವಾಲೀಕಾರ, ಸೋಮು ಜಮಾದಾರ, ಸುಭಾಸ ಮೇತ್ರಿ, ಸೇರಿದಂತೆ ಇನ್ನಿತರರು ಇದ್ದರು.
ಸಿದ್ದರಾಮ ಜಮಾದಾರ, ಎಸ್.ಎಸ್. ಕೋಳಿ, ಈರಣ್ಣ ಜಮಾದಾರ, ದ್ಯಾಮಗೊಂಡ ಜಮಾದಾರ, ಯಲ್ಲಾಲಿಂಗ ಜಮಾದಾರ, ಸಂಕು ಜಮಾದಾರ, ಮಹೇಶ ಚಾಂದಕವಟೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
“ಮಾರ್ಸನಳ್ಳಿ ಗ್ರಾಮದ ಮಲ್ಲಿಕಾರ್ಜುನ ಆಶ್ರಮಕ್ಕೆ ರಾವುತಪ್ಪ ಮಹಾದೇವಪ್ಪ ವಾಲೀಕಾರ ದಂಪತಿಗಳು ಎರಡು ಎಕರೆ ಜಮೀನು ದಾನ ನೀಡಿದ್ದು ಶ್ಲಾಘನೀಯ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಧರ್ಮದ ಏಳ್ಗೆಗಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ದಾನ ನೀಡಿದ್ದಾರೆ. ಇಂತಹವರು ಇರುವುದರಿಂದಲೇ ಇನ್ನೂ ಧರ್ಮ ಪ್ರಸಾರ ಕಾರ್ಯ ನಡೆಯುತ್ತಿದೆ.”
– ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು
ಶ್ರೀಶೈಲ ಜಗದ್ಗುರುಗಳು