Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕದ ಹೆಸರಾಂತ ಲೇಖಕ, ಸಾಹಿತಿ, ರಂಗಕರ್ಮಿ, ಹಿರಿಯ ಪತ್ರಕರ್ತ ಗಣೇಶ ಅಮೀನಗಡ ಅವರನ್ನು ವಿಜಯಪುರದ ನಟ, ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಇತ್ತಿಚೆಗೆ ಆತ್ಮೀಯವಾಗಿ ಭೇಟಿಯಾದರು.ಈ ವೇಳೆ ಗಣೇಶ ಅಮೀನಗಡ ತಮ್ಮ ಕೃತಿಗಳಾದ ರಂಗ ಬಾನಾಡಿ, ಆಲ್ ರೈಟ್ ಮಂತ್ರ ಮಾಂಗಲ್ಯ, ತುಸುವೆ ಕುಡಿವ ಗಂಡನ್ನ ಕೊಡು ತಾಯಿ, ಹಾಗೂ ಸಚಿವ ಎಮ್ ಬಿ ಪಾಟೀಲ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಅವರ “ಮುಖ ಪುಸ್ತಕದ ಮರೆಯದ ಮುಖಗಳು” ಲೇಖನಗಳ ಸಂಕಲನ ಪುಸ್ತಕಗಳು ವಿಶ್ವಪ್ರಕಾಶ ಅವರಿಗೆ ಕೊಡುಗೆಯಾಗಿ ನೀಡಿದರು.ಈ ವೇಳೆ ಸಿಂದಗಿ ಶರಣ ಸಾಹಿತ್ಯ ಪರಿಷತ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ, ವರದಿಗಾರ ಮಹಾಂತೇಶ ನೂಲಾನವರ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಗುಮ್ಮಟ ನಗರಿ ವರದಿಗಾರ ಇಸ್ಮಾಯಿಲ್ ಶೇಖ ಇದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹೊರವಲಯ ಮಹಾತ್ಮ ಗಾಂಧಿನಗರ, ಸ್ಟಾರ್‌ಚೌಕ್ ಹತ್ತಿರ ಇಟ್ಟಗೆಬಟ್ಟಿಯಲ್ಲಿ ಹೊಟ್ಟೆಪಾಡಿಗಾಗಿ ಕೆಲಸಕೆ ಬಂದ ಕಾರ್ಮಿಕರಾದ ಜಮಖಂಡಿ ತಾಲೂಕಿ ಚಿಕ್ಕಲಕಿ ಕ್ರಾಸ್‌ನ ಸದಾಶಿವ ಮಾದರ, ಉಮೇಶ ಮಾದರ, ಸದಾಶಿವ ಬಬಲಾದಿ ಇವರನ್ನು ಮರ‍್ನಾಲ್ಕು ದಿನ ಕೂಡಿ ಹಾಕಿ ಅಮಾನವೀಯವಾಗಿ ಥಳಿಸಿರುವುದು ಅತ್ಯಂತ ಹೀನ ಕೃತ್ಯವಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಅಸಂಘಟಿತ ಕಾರ್ಮಿಕ ಪ್ರಕೋಸ್ಠಿಯ ರಾಜ್ಯ ಸದಸ್ಯರಾದ ಸಚೀನ ಶಿ. ಬೊಂಬಲೆ ಹೇಳಿದರು.ಅವರು ನಗರದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೋಂದ ಕಾರ್ಮಿಕರಿಗೆ ಹಣ್ಣು ಹಂಪಲು ವಿತರಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇಟ್ಟಿಗೆ ಬಟ್ಟೆ ಮಾಲೀಕ ಹಾಗೂ ಗುಂಡಾ ವರ್ತನೆ ತೋರಿದ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕೆಂದು ಸಾಂತ್ವಾನ ಹೇಳಿದರು. ಪೆಟ್ಟು ತಿಂದವರಿಗೆ ಸಾಂತ್ವಾನ ವ್ಯಕ್ತಪಡಿಸಿ ಕಾರ್ಮಿಕ ಇಲಾಖೆಯಿಂದ ಹಾಗೂ ಸರ್ಕಾರದಿಂದ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಒದಗಿಸುವುದಲ್ಲದೇ ದುಸ್ಕೃತ್ಯ ಎಸಗಿದವರನ್ನು ಕಠೀಣ ಶಿಕ್ಷೆ ನೀಡಬೇಕು.ಜಿಲ್ಲಾ ಅಸಂಘಟಿತ ಕಾರ್ಮಿಕ ಸಹ ಸಂಚಾಲಕರಾದ ಸಂಗಮೇಶ ಮ.…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್ ವೃತ್ತದ ಕಾಮಗಾರಿಯ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳ ವತಿಯಿಂದ ವೃತ್ತದಲ್ಲಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದರು.ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಿಲ್ ಪಾವತಿ ಮಾಡಲು ಅಧಿಕಾರಿಗಳಿಗೆ ಸೂಚಿಸಿ ಧರಣಿ ನಿರತರಿಗೆ ಧರಣಿ ಹಿಂಪಡೆಯುವಂತೆ ಮನವೊಲಿಸಿದರು. ಶಾಸಕರ ಮಾತಿಗೆ ಬೆಲೆ ನೀಡಿದ ಧರಣಿ ನಿರತರು ತಮ್ಮ ಹೋರಾಟವನ್ನು ಹಿಂಪಡೆದರು.ಈ ವೇಳೆ ಧರಣಿ ನಿರತರಾದ ಹರೀಶ ನಾಟೆಕಾರ, ಬಸವರಾಜ ಸಿದ್ದಾಪೂರ, ಪರಶುರಾಮ ಮುರಾಳ, ತಹಸೀಲ್ದಾರ ಬಲರಾಮ ಕಟ್ಟಿಮನಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಸೇರಿದಂತೆ ಹಲವರು ಇದ್ದರು.
ಮಾತಾಲಕ್ಷ್ಮಿ ಪಬ್ಲಿಕ್ ಶಾಲೆಯ ೮ನೆಯ ವರ್ಷದ ನಾಟ್ಯಕಲಾ ಉತ್ಸವದಲ್ಲಿ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣವು ಶಿಕ್ಷಣ ಕಾಶಿ ಎಂದೇ ಹೆಸರಾಗಿದೆ. ಅದನ್ನು ನಾವು ನೀವೆಲ್ಲರೂ ಕಾಪಾಡಿಕೊಂಡು ಹೋಗಬೇಕು ಎಂದು ಸಿಎಂ ಮನಗೂಳಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಗೋಲಗೇರಿ ರಸ್ತೆಯಲ್ಲಿರುವ ಮಾತಾಲಕ್ಷಿö್ಮ ಪಬ್ಲಿಕ್ ಶಾಲೆಯ ೮ನೆಯ ವರ್ಷದ ನಾಟ್ಯಕಲಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ನೀಡುವುದು ಎಂದರೆ ಪಠ್ಯಪುಸ್ತಕದಲ್ಲಿನ ಅಂಶಗಳನ್ನು ಮಾತ್ರ ಮಕ್ಕಳಿಗೆ ಕಲಿಸುವುದಲ್ಲ. ಅದರ ಜೊತೆಗೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಅವಕಾಶ ನೀಡುವುದು ಮತ್ತು ಉತ್ತಮ ಚಾರಿತ್ರ್ಯವಂತರಾಗಲು ಬೇಕಾದ ಪರಿಸರ ನಿರ್ಮಾಣ ಮಾಡಬೇಕು ಎಂದರು.ಈ ವೇಳೆ ಅಮೇರಿಕಾದ ಟೆಕ್ಸರ್ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಭೀಮನಗೌಡ ಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಜಗೊಳ್ಳಬೇಕಾದರೆ ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಷಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂಜೀವ ದೇಶಪಾಂಡೆ ವಹಿಸಿದ್ದರು. ಕಾರ್ಯಕ್ರಮವನ್ನು ಪುರಸಭೆ…
ನಿಜ ಶರಣ ಅಂಬಿಗರ ಚೌಡಯ್ಯ ಆಲ್ಬಂ ಗೀತೆ ಬಿಡುಗಡೆ ಮಾಡಿದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ. ಸಂಗಮೇಶ ಉಪಾಸೆ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಿಜ ಶರಣ ಅಂಬಿಗರ ಚೌಡಯ್ಯನವರು ೧೨ನೆಯಶತಮಾನದ ಶರಣರಲ್ಲಿ ಅಗ್ರಗಣ್ಯರಾಗಿ ಸಮಾಜದ ಉದ್ದಗಲಕ್ಕೂ ಆಳವಾಗಿ ಬೇರೂರಿದ್ದ ಮೌಢ್ಯಾಚಾರಣೆಯ ವಿರುದ್ಧ ಧ್ವನಿ ಎತ್ತಿದ ಕ್ರಾಂತಿ ವಚನಕಾರ ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ. ಸಂಗಮೇಶ ಉಪಾಸೆ ಹೇಳಿದರು.ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಇವರ ಸಾಹಿತ್ಯ, ರಾಜು ಎಮ್ಮಿಗನೂರ ಇವರ ಸಂಯೋಜನೆ ಹಾಗೂ ಕನ್ನಡ ಕೋಗಿಲೆ ವಿಜೇತ ಖಾಸೀಂ ಅಲಿ ಇವರ ಗಾಯನದಲ್ಲಿ ಮೂಡಿ ಬಂದ ನಿಜ ಶರ ಅಂಬಿಗರ ಚೌಡಯ್ಯ ಆಲ್ಬಂ ಗೀತೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೌಡ್ಯತೆಯಲ್ಲಿ ದೇವರನ್ನು ಕಾಣದೆ, ಕಪಟತೆಯ ಜೀವನ ನಡೆಸದೇ ಅಂತರಂಗ ಮತ್ತು ಬಹಿರಂಗ ಶುದ್ಧೀಕರಣವಾಗಿರಿಸಿ, ಯಾರನ್ನು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರಕಾರ ಸಾರ್ವಜನಿಕರಿಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು ಸಹ ಈ ಲಾಯಿನ್ ಸಂಸ್ಥೆಯು ಆರೋಗ್ಯ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಜಾಗತಿಕ ಶಾಂತಿಗಾಗಿ ಪ್ರಯತ್ನಿಸುವ ಕಾರ್ಯ ಶ್ಲಾಘನೀಯ ಎಂದು ಲಾಯಿನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ೩೧೭ಬಿಯ ಜಿಲ್ಲಾ ಗವರ್ನರ್ ಲಾಯಿನ್ ಮನೋಜ ಮಾಣಿಕ ಹೇಳಿದರು.ಸಿಂದಗಿ ಪಟ್ಟಣದ ಆಲಮೇಲ ರಸ್ತೆಯಲ್ಲಿರುವ ಪಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಸಿಂದಗಿ ಲಾಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಪದಗ್ರಹಣ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ನೂತನ ಸದಸ್ಯರಿಗೆ ಲಾಯನ್ಸ್ ಕ್ಲಬ್‌ನ ಕಿಟ ವಿತರಿಸಿ ಮಾತನಾಡಿದ ಅವರು, ಲಾಯಿನ್ಸ್ ಸದಸ್ಯರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಭೂಕಂಪ, ನೆರೆಹಾವಳಿ ಮತ್ತು ಜನಸಾಮಾನ್ಯರ ಆರೋಗ್ಯ ಕಾಪಾಡುವಲ್ಲಿ ಅಂತರಾಷ್ಟ್ರೀಯ ಲಾಯಿನ್ಸ್ ಕ್ಲಬ್ ಕಳೆದ ೧೦೭ ವರ್ಷಗಳಿಂದ ನಿರಂತರವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ ಎಂದರು.ಈ ವೇಳೆ ಸಮಾರಂಭದ ಅಧ್ಯಕ್ಷತೆಯನ್ನು ಸಿಂದಗಿ ಲಾಯಿನ್ಸ್ ಸಂಸ್ಥೆಯ ಅಧ್ಯಕ್ಷ ಮಹಾದೇವ ಲೋಣಿ ವಹಿಸಿದ್ದರು.ಲಾಯನ್ ಕೆ.ಎಚ್.ಸೋಮಾಪೂರ ಖಜಾಂಚಿ ಬಿ.ಪಿ.ಕರ್ಜಗಿ, ಲಾಯಿನ್ ಸದಸ್ಯರಾದ ಎಸ್.ಬಿ.ಚಾಗಶೆಟ್ಟಿ ಆಯ್.ಬಿ.ಬಿರಾದಾರ, ಪಿ.ಎಂ.…
ತಂದೆಯ ಸ್ಮರಣಾರ್ಥವಾಗಿ ಶಾಲೆಗೆ ಭೂದಾನ ನೀಡಲು ಮುಂದಾದ ಮಗ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ತೋಟದ (ಹೆಬ್ಬಾಳ) ವಸ್ತಿಯ ಸುಮಾರು ೧೨೦ ಮಕ್ಕಳು ಸಮೀಪದಲ್ಲಿ ಶಾಲೆ ಇಲ್ಲದೇ ಪ್ರತಿನಿತ್ಯ ೬-೮ ಕಿ.ಮೀ ನಡೆದುಕೊಂಡು ಹೋಗಿ ಶಾಲೆ ಕಲಿಯಬೇಕಾದ ಅನಿವಾರ್ಯತೆ ಇದೆ, ಅನೇಕ ಮಕ್ಕಳು ಸೌಕರ್ಯಗಳಿಲ್ಲದೇ ಶಾಲೆಯಿಂದ ಹೋರಗುಳಿಯುವಂತಾಗಿದೆ ಕೂಡಲೇ ಇಲ್ಲಿಗೊಂದು ಸರ್ಕಾರಿ ಪ್ರಾಥಮಿಕ ಶಾಲೆ ತೆರೆಯುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರುಗ್ರಾಮಸ್ಥರಾದ ಗೇನೆಪ್ಪ ಬಿರಾದಾರ ಅವರು ಅವರ ತಂದೆಯ ಸ್ಮರಣಾರ್ಥವಾಗಿ ಅರ್ಧ ಎಕರೆ ಜಾಗೆಯನ್ನು ಕೊಡುವುದಾಗಿ ಕಳೆದ ೩-೪ ವರ್ಷಗಳಿಂದ ಸಂಭಂಧಿಸಿದ ಶಿಕ್ಷಣ ಇಲಾಖೆಗೆ ಹಲವಾರು ಭಾರಿ ಮನವಿ ಸಲ್ಲಿಸಿದ್ದಾಗ್ಯೂ ಕೂಡಾ ಇಲ್ಲಿಯವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ಇದರಿಂದ ದಯಾಳುಗಳಾದ ತಾವೂಗಳು ಕೂಡಲೇ ಈ ಊರಿನ ೧೨೦ ಮಕ್ಕಳ ಭವಿಷ್ಯ ನಿರ್ಮಿಸಲು ಅಲ್ಲಿಗೊಂದು ಶಾಲೆ ತೆರೆಯಲು ಹಾಗೂ ಮೂಲಭೂತ ಸೌಕರ್ಯ ವದಗಿಸಿ ಶಿಕ್ಷಕರನ್ನು ನೇಮಿಸಬೇಕೆಂಧು ಈ ಮೂಲಕ ತಮ್ಮಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಠ್ಯದ ಜೊತೆಗೆ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ವ್ಯಕ್ತಿಯ ಸಮಗ್ರ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ವತಿಯಿಂದ ಸೋಮವಾರ ಆಯೋಜಿಸಿದ್ದ ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರುವ ‘ಪುತ್ರಿಯರ ದಿನ-ಸ್ಪಂದನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ವಿಶ್ವವಿದ್ಯಾಲಯವು ಪಠ್ಯ ಚಟುವಟಿಕೆಗಳ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ವ್ಯಕ್ತಿತ್ವದ ಅಭಿವೃದ್ಧಿಗೆ ಸಹಾಯ ಮಾಡುತ್ತದೆೆ. ಮಹಿಳೆ ಮಾತ್ರ ಒಂದು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಆಕೆಯ ಶಕ್ತಿಯು ದೇಶದ ಪ್ರಗತಿಗೆ ದೊಡ್ಡ ಕೊಡುಗೆಯನ್ನು ನೀಡುತ್ತದೆ. ಜೀವನದಲ್ಲಿ ಸರ್ವಧರ್ಮ ಸಮನ್ವಯವನ್ನು ಅಳವಡಿಸಿಕೊಳ್ಳುವುದರಿಂದ ಸಮಾನತೆ ಮತ್ತು ಶಾಂತಿಯ ದಾರಿಯನ್ನು ಅನುಸರಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಎರಡು ವರ್ಷಗಳ ಕಾಲ ಕೇವಲ ತರಗತಿಯಲ್ಲಿ ಕಲಿಯುವುದಷ್ಟೇ ಸಾಕಾಗುವುದಿಲ್ಲ, ಈ ಅವಧಿಯಲ್ಲಿ ನೀವು ಕೆಲವು ಕೌಶಲ್ಯಗಳು ಮತ್ತು…
ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ “ವುಮೆನ್ ಮೀಡಿಯಾ ಕ್ಲಬ್” ಉದ್ಘಾಟಿಸಿದ ಸಂವಹನ ತಜ್ಞೆ ಗೀತಾ ನಾಗರಾಜು ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವುಮನ್ ಮೀಡಿಯಾ ಕ್ಲಬ್ ಕೇವಲ ವಿಭಾಗ ಮತ್ತು ವಿಶ್ವವಿದ್ಯಾನಿಲಯಕ್ಕೆ ಸೀಮಿತವಾಗಿರದೇ ಇದು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಕೆನಡಾದ ಟೊರೊಂಟೊನ ಸಂವಹನ ತಜ್ಞೆ ಗೀತಾ ನಾಗರಾಜು ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ “ವುಮೆನ್ ಮೀಡಿಯಾ ಕ್ಲಬ್” ಉದ್ಘಾಟಿಸಿ ಅವರು ಮಾತನಾಡಿದರು.ವುಮನ್ ಮೀಡಿಯಾ ಕ್ಲಬ್ ಮಹಿಳೆಯರಿಗೆ ತಮ್ಮ ಸಾಮರ್ಥ್ಯವನ್ನು ಅರಿತು, ಸಮಾಜದಲ್ಲಿ ಸ್ವತಂತ್ರವಾಗಿ ಮತ್ತು ಯಶಸ್ವಿಯಾಗಿ ಬದುಕಲು ಸಹಾಯ ಮಾಡಬೇಕು. ತರಬೇತಿಗಳು, ಕಾರ್ಯಾಗಾರಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಅವರು ಸ್ವಚ್ಛತೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ತಮ್ಮ ಕುಟುಂಬ ಹಾಗೂ ಸಮುದಾಯದಲ್ಲಿ ದಾರಿದೀಪವಾಗಿ ಕೆಲಸ ಮಾಡಲು ಪ್ರೇರಣೆ ನೀಡಬೇಕು ಎಂದರು.ಇದೇ ಸಂದರ್ಭದಲ್ಲಿ ಕೆನಡಾದ ಟೊರೊಂಟೊನ ಬಿ.ವಿ ನಾಗ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿ ಫೆಬ್ರುವರಿ ೨ನೇ ತಾರೀಖದಂದು ನಗರದ ಚೇತನಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುವ ಕಪ್ಪತ್ತಗಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯ ವಿಜಯಪುರ ಜಿಲ್ಲಾ ಘಟಕದ ೨ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಪ್ಪ ಸಾಹಿತ್ಯ ವೇದಿಕೆ ಉದ್ಘಾಟನೆಯಾಗುತ್ತಿದೆ.ಅಪ್ಪ ಕಾವ್ಯೋತ್ಸವ ಕರುನಾಡು ಕಿರೀಟ ಪ್ರಶಸ್ತಿ ಪ್ರದಾನ ಹಾಗೂ ಎದ್ಯಾಗಿನ ಬ್ಯಾನಿ ಕೃತಿ ಲೋಕಾರ್ಪಣೆ ಸಮಾರಂಭದ ಅಮಂತ್ರಣ ಪತ್ರಿಕೆಯನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಬಿಡುಗಡೆಗೊಳಿಸಿದರು.ಜಿಲ್ಲಾಧಿಕಾರಿಯ ಕಾರ್ಯಾಲಯದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಅವರು ವಿಜಯಪುರ ಜಿಲ್ಲೆ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ತವರೂರು ಮೇಲಿಂದ ಮೇಲೆ ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮಗಳು ನಡೆಯಬೇಕೆಂದು ಹೇಳಿದರು.ಸಾಹಿತಿ ಪ್ರೊ. ಎ.ಎಚ್. ಕೊಳಮಲಿ, ಅಪ್ಪ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀಮತಿ ಸುಜ್ಞಾನಿ ಪಾಟೀಲ, ಕಾರ್ಯದರ್ಶಿ ನಿಂಗನಗೌಡ ಪಾಟೀಲ, ಹೇಮಾ ಪಾಟೀಲ, ಈರಮ್ಮ ಬೋನೂರಮಠ ಹಾಗೂ ಕಪ್ಪತ್ತಗಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
