Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ಸೈಕ್ಲಿಂಗ್ ಗ್ರೂಪ್ ನಿಂದ ಪಂಡರಪುರಕ್ಕೆ ಸೈಕಲ್ ಯಾತ್ರೆ ಇಂದು

ರೈತರ ಸಾಲ ಸಂಪೂರ್ಣ ಮನ್ನಾ ಮಾಡಲು ಹಸಿರು ಸೇನೆ ಆಗ್ರಹ

ಕನ್ನಡಪ್ರಭ ಸಂಪಾದಕ ಜೋಗಿಗೆ ಕೆಯುಡಬ್ಲ್ಯೂಜೆ ಅಭಿನಂದನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮೌಢ್ಯಾಚಾರಣೆ ವಿರುದ್ಧ ಧ್ವನಿ ಎತ್ತಿದ ಕ್ರಾಂತಿ ವಚನಕಾರ ಚೌಡಯ್ಯ
(ರಾಜ್ಯ ) ಜಿಲ್ಲೆ

ಮೌಢ್ಯಾಚಾರಣೆ ವಿರುದ್ಧ ಧ್ವನಿ ಎತ್ತಿದ ಕ್ರಾಂತಿ ವಚನಕಾರ ಚೌಡಯ್ಯ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಿಜ ಶರಣ ಅಂಬಿಗರ ಚೌಡಯ್ಯ ಆಲ್ಬಂ ಗೀತೆ ಬಿಡುಗಡೆ ಮಾಡಿದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ. ಸಂಗಮೇಶ ಉಪಾಸೆ ಅಭಿಮತ

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ನಿಜ ಶರಣ ಅಂಬಿಗರ ಚೌಡಯ್ಯನವರು ೧೨ನೆಯಶತಮಾನದ ಶರಣರಲ್ಲಿ ಅಗ್ರಗಣ್ಯರಾಗಿ ಸಮಾಜದ ಉದ್ದಗಲಕ್ಕೂ ಆಳವಾಗಿ ಬೇರೂರಿದ್ದ ಮೌಢ್ಯಾಚಾರಣೆಯ ವಿರುದ್ಧ ಧ್ವನಿ ಎತ್ತಿದ ಕ್ರಾಂತಿ ವಚನಕಾರ ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ. ಸಂಗಮೇಶ ಉಪಾಸೆ ಹೇಳಿದರು.
ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಇವರ ಸಾಹಿತ್ಯ, ರಾಜು ಎಮ್ಮಿಗನೂರ ಇವರ ಸಂಯೋಜನೆ ಹಾಗೂ ಕನ್ನಡ ಕೋಗಿಲೆ ವಿಜೇತ ಖಾಸೀಂ ಅಲಿ ಇವರ ಗಾಯನದಲ್ಲಿ ಮೂಡಿ ಬಂದ ನಿಜ ಶರ ಅಂಬಿಗರ ಚೌಡಯ್ಯ ಆಲ್ಬಂ ಗೀತೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೌಡ್ಯತೆಯಲ್ಲಿ ದೇವರನ್ನು ಕಾಣದೆ, ಕಪಟತೆಯ ಜೀವನ ನಡೆಸದೇ ಅಂತರಂಗ ಮತ್ತು ಬಹಿರಂಗ ಶುದ್ಧೀಕರಣವಾಗಿರಿಸಿ, ಯಾರನ್ನು ಕಡೆಗಣಿಸದೆ ಸಾಮಾನ್ಯ ಜನರ ನಡುವೆ ಅಸಾಮಾನ್ಯರಂತೆ ಬದುಕಿ ಸನ್ಮಾರ್ಗದ ದಾರಿಯಲ್ಲಿ ಸಾಗಿದವನು ಮಾತ್ರ ಯೋಗಿಯಾಗಲು ಸಾಧ್ಯ ಎಂದು ಹೇಳಿದಲ್ಲದೆ ವಚನಗಳ ಉದ್ದಕ್ಕೂ ಸಾಮರಸ್ಯ ಸಹೋದರತೆ ಸಾರಿ, ಸಮಾನತೆ ಮತ್ತು ಕಾಯಕಕ್ಕೆ ಪ್ರಾಮುಖ್ಯತೆ ನೀಡಿ, ಇದ್ದದ್ದನ್ನು ಇದ್ದ ಹಾಗೇಯೆ ಕೆಚ್ಚೆದೆ ಮತ್ತು ದಿಟ್ಟತನದಿಂದ ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ, ನೇರ ನುಡಿಯ ನಿಷ್ಠುರವಾದಿ ವಚನಕಾರ ಅಂಬಿಗರ ಚೌಡಯ್ಯ ಎಂದರು.
ಈ ವೇಳೆ ಡಾ.ಜ್ಯೋತಿರ್ಲಿಂಗ ಹೊನಕಟ್ಟಿ ಹಾಗೂ ಆರಕ್ಷಕ ಮೌಲಾಲಿ ಆಲಗೂರ ಮಾತನಾಡಿ ಅಂಬಿಗರ ಚೌಡಯ್ಯ ನವರು ಜನರಲ್ಲಿ ಸಮಾನತೆಯ ಬೀಜ ಬಿತ್ತಿ. ಅಸ್ಪೃಶ್ಯತೆ, ಅಸಮಾನತೆ, ಜಾತೀಯತೆ, ಲಿಂಗ ಭೇದ, ಮೇಲು ಕೀಳು, ದಬ್ಬಾಳಿಕೆ, ದೌರ್ಜನ್ಯಗಳಂತ ಹಿಂಸಾತ್ಮಕ ಕೃತ್ಯಗಳನ್ನು ತಮ್ಮ ಹರಿತವಾದ ವಚನ ಸಾಹಿತ್ಯದ ಮೂಲಕ ಕಟುವಾಗಿ ಖಂಡಿಸಿ, ಜನರಲ್ಲಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಆಚಾರ ವಿಚಾರಗಳ ಕುರಿತು ಅರಿವು ಮೂಡಿಸಿದಲ್ಲದೆ, ದೇವನೊಬ್ಬ ನಾಮ ಹಲವು ಎಂಬ ಸಂದೇಶವನ್ನು ಜಗಕ್ಕೆ ಸಾರಿದ್ದಾರೆ ಎಂದು ಹೇಳಿದರು.
ಆಲ್ಬಂ ಗೀತೆ ಬಿಡುಗಡೆಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ.ಸಂಗಮೇಶ ಉಪಾಸೆ, ಆರಕ್ಷಕ ಮೌಲಾಲಿ ಆಲಗೂರ ಬೋರಗಿ, ರಾಜು ಎಮ್ಮಿಗನೂರ ಖಾಸೀಂ ಅಲಿ ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ಸೈಕ್ಲಿಂಗ್ ಗ್ರೂಪ್ ನಿಂದ ಪಂಡರಪುರಕ್ಕೆ ಸೈಕಲ್ ಯಾತ್ರೆ ಇಂದು

ರೈತರ ಸಾಲ ಸಂಪೂರ್ಣ ಮನ್ನಾ ಮಾಡಲು ಹಸಿರು ಸೇನೆ ಆಗ್ರಹ

ಕನ್ನಡಪ್ರಭ ಸಂಪಾದಕ ಜೋಗಿಗೆ ಕೆಯುಡಬ್ಲ್ಯೂಜೆ ಅಭಿನಂದನೆ

ನಾಗಠಾಣ ಉಪಕಾಲುವೆಗೆ ನೀರು ಹರಿಸಲು ರೈತರ ಆಗ್ರಹ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ಸೈಕ್ಲಿಂಗ್ ಗ್ರೂಪ್ ನಿಂದ ಪಂಡರಪುರಕ್ಕೆ ಸೈಕಲ್ ಯಾತ್ರೆ ಇಂದು
    In (ರಾಜ್ಯ ) ಜಿಲ್ಲೆ
  • ರೈತರ ಸಾಲ ಸಂಪೂರ್ಣ ಮನ್ನಾ ಮಾಡಲು ಹಸಿರು ಸೇನೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಕನ್ನಡಪ್ರಭ ಸಂಪಾದಕ ಜೋಗಿಗೆ ಕೆಯುಡಬ್ಲ್ಯೂಜೆ ಅಭಿನಂದನೆ
    In (ರಾಜ್ಯ ) ಜಿಲ್ಲೆ
  • ನಾಗಠಾಣ ಉಪಕಾಲುವೆಗೆ ನೀರು ಹರಿಸಲು ರೈತರ ಆಗ್ರಹ
    In (ರಾಜ್ಯ ) ಜಿಲ್ಲೆ
  • ಜವಾಹರ ನವೋದಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಎಸ್ಐಆರ್; ಬಿಎಲ್ಓಗಳಿಗೆ ಒತ್ತಡ ಹಾಕದಂತೆ ಶಿಕ್ಷಕರ ಸಂಘ ಮನವಿ
    In (ರಾಜ್ಯ ) ಜಿಲ್ಲೆ
  • ಎಸ್ಐಆರ್‌ಗೆ ಸಹಾಯವಾಣಿ ಕೇಂದ್ರ
    In (ರಾಜ್ಯ ) ಜಿಲ್ಲೆ
  • ಜು.೧೨ರಂದು ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಣೆ
    In (ರಾಜ್ಯ ) ಜಿಲ್ಲೆ
  • ​ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಡಿಜಿಟಲೀಕರಣಕ್ಕೆ ವೇಗ ನೀಡಿ
    In (ರಾಜ್ಯ ) ಜಿಲ್ಲೆ
  • ಗವಿಸಿದ್ದೇಶ್ವರ ಸೌಹಾರ್ದ ಸಂಘಕ್ಕೆ ಗವಿಸಿದ್ದೇಶ್ವರ ಶ್ರೀ ಭೇಟಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.