Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಜಾಪ್ರಭುತ್ವವನ್ನು ಬಲಪಡಿಸಲು ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯುತವಾಗಿ ಮತದಾನ ಮಾಡುವುದು ಅತ್ಯಗತ್ಯವಾಗಿದೆ ಎಂದು ಇ.ಎಲ್.ಸಿ ನೋಡಲ್ ಅಧಿಕಾರಿ ಚಿದಾನಂದ್ ಆನೂರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮಹಿಳಾ ವಿವಿ ಸ್ವೀಪ್ ಸಮಿತಿ ಸಹಯೋಗದೊಂದಿಗೆ ಇತ್ತೀಚಿಗೆ ಆಯೋಜಿಸಿದ್ದ “ಸ್ವಚ್ಛತಾ ಮತ್ತು ಮತದಾನದ” ಅರಿವು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದು ಯುವಜನತೆ ದೇಶದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ, ಆದ್ದರಿಂದ ಅವರಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ಅರ್ಥಮಾಡಿಸುವುದು ಅವಶ್ಯಕವಾಗಿದೆ. ಶಾಲಾ-ಕಾಲೇಜುಗಳಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮಗಳು, ಬೀದಿ ನಾಟಕಗಳು, ಸಾರ್ವಜನಿಕ ಭಾಷಣಗಳು ಮತ್ತು ಸಾಮಾಜಿಕ ಮಾಧ್ಯಮದ ಬಳಕೆಯ ಮೂಲಕ ಮತದಾನದ ಮಹತ್ವವನ್ನು ಬೋಧಿಸುವುದು ಪ್ರಭಾವಶಾಲಿಯಾಗಬಹುದು ಎಂದರು.ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಎಚ್.ಎಂ.ಚಂದ್ರಶೇಖರ ಮಾತನಾಡಿ, ಯುವಜನತೆ ದಾರಿ ತಪ್ಪುವ ಪ್ರಮುಖ ಕಾರಣಗಳು ತಾಂತ್ರಿಕ ಪ್ರಭಾವ, ನಿರುದ್ಯೋಗ, ಮತ್ತು ಜಾಗೃತಿಯ ಕೊರತೆ. ಇದನ್ನು ತಡೆಯಲು ಶಾಲಾ-ಕಾಲೇಜುಗಳಲ್ಲಿ ಮತದಾನದ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿವನು ಯಜ್ಞವನ್ನು ಮಾಡುತ್ತಿರುವಾಗ ಯಜ್ಞ ಕುಂಡದ ಅಗ್ನಿ ಶಿವನ ಮುಖಕ್ಕೆ ಸ್ಪರ್ಶಿಸಿ, ಶಿವನ ಮುಖವು ಅಶುಚಿಯಾಗಿ ಕಾಣಿಸುತ್ತದೆ, ಅದನ್ನು ಗಮನಿಸಿದ ಪಾರ್ವತಿ ಅಶುಚಿಯಾಗಿರುವುದನ್ನು ಸರಿಪಡಿಸಿಕೊಳ್ಳಲು ತಿಳಿಸುತ್ತಾಳೆ, ಆಗ ಶಿವನು ತನ್ನ ಬಲಗಣ್ಣಿನಿಂದ ವಿವಿಧ ಸಲಕರಣೆಗಳೊಂದಿಗೆ ಒಬ್ಬ ಮಹಾಪುರುಷನನ್ನು ಸೃಷ್ಟಿಸುತ್ತಾನೆ. ಆತ ಆಯುಷ್ಕರ್ಮದಿಂದ ಶಿವನ ಮುಖವನ್ನು ಸುಂದರಗೊಳಿಸುತ್ತಾನೆ. ಆತನೇ ಸವಿತಾ ಮಹರ್ಷಿ ಹುಣಸಗಿಯ ಮೊರಾರ್ಜಿ ದೇಸಾಯಿ ವಸತಿಶಾಲೆ ಶಿಕ್ಷಕ ಅಶೋಕ ರಾಜನಕೋಳೂರ ಹೇಳಿದರು.ಸಿಂದಗಿ ತಾಲೂಕು ಆಡಳಿತ ಸಭಾಂಗಣದಲ್ಲಿ ಹಮ್ಮಿಕೊಂಡ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಮಾತನಾಡಿದ ಅವರು, ಶಿವನು ಸಂತುಷ್ಟನಾಗಿ ಮೂರು ವರಗಳನ್ನು ಕೊಡುತ್ತಾನೆ. ಆಯುಷ್ಕರ್ಮ, ಸಂಗೀತ, ಆಯುರ್ವೇದ ವೈದ್ಯ ಪದ್ಧತಿ. ವೇದಗಳಲ್ಲಿ ಸವಿತೃ ಎಂಬ ಪದ ಉಲ್ಲೇಖಿಸಲಾಗಿದೆ. ಸೂರ್ಯನಿಗೆ ಇನ್ನೊಂದು ಹೆಸರೇ ಸವಿತೃ, ಸವಿತಾ ಮಹರ್ಷಿ ಸಾಕ್ಷಾತ್ ಸೂರ್ಯನಾರಾಯಣವೆಂದೆ ಹೇಳಲಾಗುತ್ತದೆ. ಸಾಮವೇದದ ಕರ್ತೃ ಸವಿತಾ ಮಹರ್ಷಿ ಹಾಗೂ ಸವಿತಾ ಮಹರ್ಷಿಯ ಮಗಳು ಗಾಯತ್ರಿದೇವಿ ಎಂದು ನಂಬಲಾಗಿದೆ. ಸೂರ್ಯನಾರಾಯಣನ ಉಪಾಸಕರಿಗೆ ಸವಿತಾ ಜನಾಂಗದವರು ಎನ್ನುತ್ತಾರೆ. ಮನುಷ್ಯರ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತ ದೇಶದ ಭವಿಷ್ಯ ರೂಪಿಸುವವರು ಯುವ ಜನತೆ, ಯುವ ಜನತೆಯ ಭವಿಷ್ಯ ರೂಪಿಸುವವರು ಶಾಲಾ ಕೊಠಡಿಯಲ್ಲಿ ಶಿಕ್ಷಕರು ಎಂದು ಎಚ್.ಜಿ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.ತಾಲೂಕಿನ ಕನ್ನೊಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ವಿದ್ಯಾವರ್ಧಕ ಸಂಸ್ಥೆಯ ಪ್ರೌಢ ಶಾಲೆ ಹಾಗೂ ಡಿ.ಎಸ್. ಪಾಟೀಲ್ ಪಪೂ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭ ಕೋರುವ ಸಮಾರಂಭದಲ್ಲಿ ಎಚ್.ಜಿ ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿದರು.ವಿದ್ಯಾರ್ಥಿಗಳು ಸ್ವ-ಹಿತಾಸಕ್ತಿಯಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ತಂದೆ-ತಾಯಿಯ ಕನಸು, ಶಿಕ್ಷಕರ ಮಾರ್ಗದರ್ಶನ ಮೈಗೂಡಿಸಿಕೊಂಡು ಮುನ್ನುಗ್ಗಿ ಬೆಟ್ಟದಂತ ಕಷ್ಟ ಮೇಣದ ಬತ್ತಿಯಂತೆ ಕರಗಿ ಹೋಗುತ್ತದೆ. ನಿಮ್ಮ ಜೀವನದ ಯಶಸ್ಸು ತಾನಾಗಿಯೇ ಒದಗಿಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಕುರಿ ಕಾಯುವ ಕುರಿಗಾಹಿ ತೇನಸಿಂಗ್ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿ ಸಾಧನೆಗೈದದ್ದು ಇಲ್ಲಿ ಸ್ಮರಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಈ ವೇಳೆ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕನ್ನಡ ಚಿತ್ರರಂಗದ ಹೆಸರಾಂತ ಸಿನಿಮಾ ಪತ್ರಿಕೆ “ಚಿತ್ರ ಸಂತೆ” ಪತ್ರಿಕೆ ಆಯೋಜಿಸಿರುವ ಚಿತ್ರ ಸಂತೆ ಚಲನಚಿತ್ರೋತ್ಸವದಲ್ಲಿ ವಿಜಯಪುರದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ನಟಿಸಿ ನಿರ್ದೇಶಿಸಿರುವ ತುಷಾರ್ ಟೆಲಿ ಫಿಲಂ ಗೆ “ಬೆಸ್ಟ್ ಕನ್ನಡ ಟೆಲಿ ಫೀಲಂ ಅವಾರ್ಡ” ದೊರೆತಿದೆ.ಗುರುವಾರ ಬೆಂಗಳೂರಿನ ಹೈದೆಹಿ ಪಾರ್ಕ್ ಹೊಟೆಲ್ ನಲ್ಲಿ ಜರುಗಿದ ಚಲನಚಿತ್ರೋತ್ಸವದಲ್ಲಿ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಪಡ್ಡೆಹುಲಿ ಸಿನಿಮಾ ಖ್ಯಾತಿಯ ನಟ ಶ್ರೇಯಸ್ ಕೆ ಮಂಜು ಹಾಗೂ ಚಿತ್ರ ಸಂತೆ ಸಂಪಾದಕ ಗಿರೀಶ ವಿ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಚಲನಚಿತ್ರೋತ್ಸವದಲ್ಲಿ ನಿರ್ಮಾಪಕ ಗಂಡುಗಲಿ ಕೆ ಮಂಜು, ನಟಿ ಅಂಬಾಲಿ ಭಾರತಿ, ಪ್ರಜ್ಞಾ ಫೌಂಡೇಶನ್ ಅಧ್ಯಕ್ಷ ಡಾ.ಮಹೇಶ ಅರವಿಂದ, ನಟಿ ನಂದಿನಿ ರಾಮಯ್ಯ ವೇದಿಕೆ ಮೇಲಿದ್ದರು.ಭೂಮಿಕಾ ಅವರು ನಿರೂಪಿಸಿ, ವಂದಿಸಿದರು.

Read More

ವಿಜಯಪುರ ಮತ್ತು ಇಂಡಿ ಕೃಷಿ ವಿಜ್ಞಾನ ಕೇಂದ್ರಗಳ ೨೬ ನೇಯ ಮತ್ತು ೬ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಕೃಷಿಯಲ್ಲಿರುವ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಸೂಕ್ತವಾಗಿ ಹಾಗೂ ಸ್ಥಳೀಯವಾಗಿ ನಿರ್ದರಿಸಲು, ಕೃಷಿ ವಿಜ್ಞಾನ ಕೇಂದ್ರಗಳು, ಪ್ರಗತಿಪರ ರೈತರು, ಇತರೆ ಇಲಾಖೆಗಳ ಸಹಯೋಗದಲ್ಲಿ ಸೂಕ್ತವಾಗಿ ನಿರ್ಣಯ ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಲ್. ಪಾಟೀಲ ತಿಳಿಸಿದರು.ನಗರದ ಹೊರವಲಯದ ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಮತ್ತು ಇಂಡಿ ಕೃಷಿ ವಿಜ್ಞಾನ ಕೇಂದ್ರಗಳ ೨೬ ನೇಯ ಮತ್ತು ೬ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ರೈತರು ಸುಸ್ಥಿರ ಬದುಕು ಮತ್ತು ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಮಾರ್ಗಗಳ ಜೊತೆ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಶ್ರಮಿಸಬೇಕು ಎಂದು ತಿಳಿಸಿದರು.ಈಗೀನ ಕಾಲದಲ್ಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದು, ಅದನ್ನು ತಡೆಯಲು ಯುವಕರ ನಡಿಗೆ ಕೃಷಿಯ ಕಡೆಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ನಗರದ ಕೇಂದ್ರ ಗ್ರಂಥಾಲಯಕ್ಕೆ ಶುಕ್ರವಾರ ಭೇಟಿ ನೀಡಿದ್ದರು.ನಗರ ಕೇಂದ್ರ ಗ್ರಂಥಾಲಯ ವಿಜಯಪುರದ ೨೦೨೪-೨೫ನೇ ಸಾಲಿನ ಅನುಮೋದನೆಯಾದ ಅಯ-ವ್ಯಯವನ್ನು ಸರ್ಕಾರದ ಆದೇಶದ ಪ್ರಕಾರ ಖರ್ಚು ಮಾಡುವಂತೆ ಸಂಬಂದಿಸಿದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಗ್ರಂಥಾಲಯ ಪರಂಪರೆ ಕಟ್ಟಡವನ್ನು ಪುನರ್ಚೆತನಗೊಳಿಸಿ, ಗ್ರಂಥಾಲಯದ ಆವರಣದಲ್ಲಿ ತಡೆಗೋಡೆ ನಿರ್ಮಿಸಲು ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ೦೩ ದಿನಗಳಲ್ಲಿ ತಯಾರಿಸಿ ಸಲ್ಲಿಸಲು ಸ್ಥಳದಲ್ಲಿ ಇದ್ದ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.ಗ್ರಂಥಾಲಯಕ್ಕೆ ಬರುವ ಓದುಗರು ಸದಸ್ಯತ್ವವನ್ನು ಪಡೆದಲ್ಲಿ ಮಾತ್ರ ಪುಸ್ತಕ ವಿಭಾಗದಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಸಿಕೊಡುವಂತೆ ಹಾಗೂ ಸಾರ್ವಜನಿಕ ಓದುಗರಿಗೆ ಕುಡಿಯುವ ನೀರಿನ ಸಂಗ್ರಹಣೆಗಾಗಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಿಗೆ ಸೂಚಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ ವತಿಯಿಂದ ಫೆ.೧೫ರಂದು ಸಂತ ಶ್ರೀ ಸೇವಾಲಾಲ ಜಯಂತಿ, ಫೆ.೧೯ ರಂದು ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಹಾಗೂ ಫೆ.೨೦ ರಂದು ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮಗಳನ್ನು ಅತ್ಯಂತ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ನಿರ್ಧರಿಸಲಾಯಿತು.ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ, ಫೆ.೧೫ರಂದು ಸಂತ ಶ್ರೀ ಸೇವಾಲಾಲ ಜಯಂತಿ, ಫೆ.೧೯ ರಂದು ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಹಾಗೂ ಫೆ.೨೦ ರಂದು ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮಗಳನ್ನು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು ನಗರದ ರಂಗಮಂದಿರ ದಲ್ಲಿ ಆಯೋಜಿಸಲಾಗಿದೆ.ಬೆಳಿಗ್ಗೆ ೯.೩೦ ಘಂಟೆಗೆ ಸಿದ್ದೇಶ್ವರ ದೇವಸ್ಥಾನದಿಂದ ರಂಗಮಂದಿರದವರೆಗೆ ಮೆರವಣಿಗೆ ಆಯೋಜನೆ ಮಾಡಲಾಗಿದೆ. ನಂತರ ವೇದಿಕೆ ಕಾರ್ಯಕ್ರಮ ಮಾಡುವ ಮೂಲಕ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಉಪನ್ಯಾಸ ಸಂಗೀತ ಹಾಗೂ ರೂಪಕ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು.ಜಿಲ್ಲಾಡಳಿತದಿಂದ ಆಚರಿಸಲಾಗುವ ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆ.೧೦ ರಂದು ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕಾಯಕ ಶರಣರ ಜಯಂತಿ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ ೯.೩೦ಕ್ಕೆ ಘಂಟೆಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ರಂಗಮಂದಿರದವರೆಗೆ ಮೆರವಣಿಗೆ ನೆರವೆರಿಸಲಾಗುವುದು. ನಂತರ ೧೦.೩೦ಕ್ಕೆ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರು ನೆರವೆರಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನಸಭೆಯ ಶಾಸಕ ಬಸನಗೌಡ ಆರ್.ಪಾಟೀಲ (ಯತ್ನಾಳ) ಅವರು ವಹಿಸಲಿದ್ದಾರೆ.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಪ್ರೊ. ಲಕ್ಷೀದೇವಿ ವಾಯ್ ಅವರು ಕಾಯಕ ಶರಣರ ಜಯಂತಿ ಕುರಿತು ಉಪನ್ಯಾಸ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತ ಬೆಂಗಳೂರು ಅಧ್ಯಕ್ಷರಾದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಶುಕ್ರವಾರ ಬೆಳಗ್ಗೆ ಭೇಟಿ ನೀಡಿ, ಈ ಹಿಂದೆ ನೀಡಿರುವ ನಿರ್ದೇಶನದಂತೆ ಸ್ವಚ್ಛತಾ ಕಾರ್ಯದ ಕುರಿತು ಪರಿಶೀಲಿಸಿ, ರಂಗಮಂದಿರದ ಒಳಗೆ ನಡೆಯುತ್ತಿರುವ ರ‍್ಯಾಂಪ್ ದುರಸ್ತಿ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.ರಂಗಮಂದಿರದ ಗೊಡೆಗಳ ಮೇಲೆ ಕಲೆ-ಸಂಸ್ಕೃತಿಯನ್ನು ಬಿಂಬಿಸುವ ವರ್ಣರಂಚಿತ ರೇಖಾ ಚಿತ್ರ/ ವಿವಿಧ ಚಿತ್ರಕಲೆಗಳನ್ನು ಚಿತ್ರಕಲಾ ಶಿಕ್ಷಕರಿಂದ ಬಿಡಿಸಲು ಅಗತ್ಯ ಕ್ರಮವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

Read More

ಕರ್ನಾಟಕ ಸರ್ಕಾರದ ಅಂದಾಜು ಸಮಿತಿ ಸಭೆಯಲ್ಲಿ ಅಧ್ಯಕ್ಷ ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬರುವ ಟೋಲ್ ನಾಕಾ ಸಿಬ್ಬಂದಿಗಳು ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ನೀಡುತ್ತಿರುವುದಾಗಿ ಕಂಡುಬಂದಿದೆ. ಈ ಕುರಿತು ಕ್ರಮ ವಹಿಸುವಂತೆ ಕರ್ನಾಟಕ ಸರ್ಕಾರದ ಅಂದಾಜು ಸಮಿತಿ ಸಭೆಯ ಅಧ್ಯಕ್ಷ ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಅಂದಾಜು ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.ಎಲ್ಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಇನ್ನೀತರ ಇಲಾಖೆಯ ಅಧಿಕಾರಿಗಳು ಟೋಲ್ ನಾಕಾದಲ್ಲಿ ಆಗುತ್ತಿರುವ ವಾಹನಗಳ ಸಂಚಾರ ಅಡಚಣೆಯ ಕುರಿತು ಸೂಕ್ತ ಕ್ರಮ ವಹಿಸಲು ಸೂಚಿಸಿದರು. ಹಾಗೂ ಕೈಗೊಂಡ ಕ್ರಮಗಳ ಕುರಿತು ಮುಂದಿನ ಸಭೆಯಲ್ಲಿ ವಿವರವಾದ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿಗಳ ವ್ಯಾಪ್ತಿಯಲ್ಲಿ ಬರುವ ಟೋಲ್…

Read More