Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಸಹಕಾರಿಯಾಗುವಂತೆ ನೂತನ ವಾಹನವನ್ನು ನೀಡಲಾಗುತ್ತಿದೆ ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಇತ್ತೀಚಿಗೆ ಜರುಗಿದ ಸರಳ ಕಾರ್ಯಕ್ರಮದಲ್ಲಿ ಪಿಎಸ್‌ಐ ಬಸವರಾಜ ತಿಪ್ಪಾರೆಡ್ಡಿ ಅವರಿಗೆ ನೂತನ ವಾಹನದ ಕೀ ಹಸ್ತಾಂತರಿಸಿ ಮಾತನಾಡಿದರು.ಪಟ್ಟಣದ ಪೊಲೀಸ್ ಇಲಾಖೆಯ ವಾಹನ ಹಳೆಯದಾಗಿದ್ದು, ಚುರುಕಿನ ಓಡಾಟಕ್ಕೆ ಸಹಕಾರ ನೀಡುತ್ತಿರಲ್ಲಿಲ್ಲ. ಆದ್ದರಿಂದ ಶಾಸಕರ ಅನುದಾನದಡಿಯಲ್ಲಿ ನೂತನ ವಾಹನ ಪೂರೈಸಿ ಅವರ ಸೇವಾ ಕಾರ್ಯಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ನೂತನ ವಾಹನಕ್ಕೆ ಮಡಿವಾಳಯ್ಯ ಹಿರೇಮಠ(ಗುಬ್ಬೇವಾಡ) ಹಾಗೂ ಪಿಎಸ್‌ಐ ಪೂಜೆ ಸಲ್ಲಿಸಿ, ಸಿಹಿ ಹಂಚಿದರು.ತಹಶೀಲ್ದಾರ ಪ್ರಕಾಶ ಸಿಂದಗಿ, ಜೆಡಿಎಸ್ ಧುರೀಣ ಮುನೀರ್ ಅಹ್ಮದ್ ಮಳಖೇಡ ಸೇರಿದಂತೆ ಇಲಾಖೆಯ ಸಿಬ್ಬಂದಿ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪತ್ತಿನ ಸಹಕಾರಿ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಆಡಳಿತ ಮಂಡಳಿ ಸಹಕಾರ ಸಿಬ್ಬಂದಿ ವರ್ಗದವರ ಕರ್ತವ್ಯ ನಿಷ್ಠೆಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಉಸ್ಮಾನಸಾಬ ಪಟೇಲ ಹೇಳಿದರು.ಪಟ್ಟಣದಲ್ಲಿ ನೂತನವಾಗಿ ಪ್ರಾರಂಭವಾದ ಎಪಿಜೆ ಅಬ್ದುಲ್ ಕಲಾಂ ಸಹಕಾರಿ ಸಂಘದ ಪದಾಧಿಕಾರಿಗಳ ಹಾಗೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಂತರ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಹಣಕಾಸು ವಹಿವಾಟು ಸಂಸ್ಥೆಯ ಆಡಳಿತ ವರ್ಗ ಜನರೊಂದಿಗೆ ಸೌಹರ್ಧಯುತವಾಗಿ ನಡೆದುಕೊಳ್ಳಬೇಕು ಸಾಲ ಕೊಡುವಾಗ ಮರಳಿ ವಸೂಲಿ ಮಾಡುವಾಗ ಜವಾಬ್ದಾರಿಯುತದಿಂದ ವರ್ತಿಸಿದರೆ ಸಂಘವು ಪ್ರಗತಿ ಪಥದತ್ತ ಸಾಗುತ್ತದೆ ಎಂದರು.ಅಧ್ಯಕ್ಷರಾಗಿ ಉಸ್ಮಾನಸಾಬ ಪಟೇಲ ಉಪಾಧ್ಯಕ್ಷರಾಗಿ ವಿನಿತಕುಮಾರ ದೇಸಾಯಿ ಆಯ್ಕೆಯಾದರೆ ಹನ್ನೇರಡು ಸದ್ಯಸ್ಯರನ್ನು ನಿರ್ದೇಶಕರನ್ನಾಗಿ ಘೋಷಿಸಲಾಯಿತು ಚುನಾವಣಾಧಿಕಾರಿಗಳಾಗಿ ಶ್ರೀಮತಿ ಕೆ ಬಿ ಗುಡದಿನ್ನಿ ಆಗಮಿಸಿದ್ದರು.ಅತಿಥಿಗಳಾಗಿ ಪಡಿಯಪ್ಪಮಾಸ್ತರ ನಾಗರಾಳ ಗಂಗಾಧರ ದೇಸಾಯಿ ಹಸನಸಾಬ ಚೌಧರಿ ಬಾಬುಸಾಬ ಕೂಡಗಿ ಕೊಲ್ಹಾರ ಪಟ್ಟಣದಲ್ಲಿರುವ ಜಿಲ್ಹಾ ಮಧ್ಯವರ್ತಿ ಸಹಕಾರಿ ಬ್ಯಾಂಕ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ ಬಾಪೂಜಿ ಬ್ಯಾಂಕನ ವ್ಯವಸ್ಥಾಪಕ ಮಂಡಳಿಯವರು ಆಗಮಿಸಿದ್ದರು. ನಿರ್ದೇಶಕರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ದೇವರ ದೇವತೆಗಳ ಜಾತ್ರೆ ಉತ್ಸವ ಮತ್ತು ಪ್ರತಿಷ್ಠಾಪನೆ ಕಾರ್ಯಕ್ರಮಗಳು ಸದೃಡ ಸಮಾಜದ ನಿರ್ಮಾಣ ಸಂಕೇತಗಳಾಗಿವೆ ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.ಪಟ್ಟಣದ ತೆರಪಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಏರ್ಪಡಿಸಿದ್ದ ಹಾಲೋಕಳಿ ಸ್ಪರ್ಧೆಯನ್ನು ಉಧ್ಘಾಟಿಸಿ ಮಾತನಾಡಿದರು.ಪ್ರತಿಯೊಂದು ಗ್ರಾಮಗಳಲ್ಲಿ ನಡೆಯುವ ಜಾತ್ರೆಗಳಲ್ಲಿನ ವಿವಿಧ ಸ್ಪರ್ಧೆಗಳು ಮನರಂಜನಾ ಮತ್ತು ಧಾರ್ಮಿಕ ಕಾರ್ಯಕ್ರಮ ಸರ್ವಜನರನ್ನು ಒಂದೆಡೆ ಸೇರಿಸಿ ಸಂಭಂದಗಳನ್ನು ಬೆಸೆಯುವ ಶ್ರದ್ದಾಕೇಂದ್ರಗಳು ಆದ್ದರಿಂದ ಇಂತಹ ಉತ್ಸವಗಳಲ್ಲಿ ಜನತೆ ಪಾಲ್ಗೊಳ್ಳಬೇಕು ಎಂದರು.ಹಿಂದಿನ ಹಿರಿಯರು ಮಾನವ ಶರೀರ ಗಟ್ಟಿಯಾಗಿರಬೇಕು ಎನ್ನುವ ಕಾರಣಕ್ಕಾಗಿ ವರ್ಷಕ್ಕೊಮ್ಮೆ ಕ್ರೀಯಾಶೀಲ ಚಟುವಟಿಕೆಗಳ ದೇಹ ದಂಡನೆಯ ಆಟೋಟ ಜ್ಞಾನವ್ರದ್ದಿಯ ಸ್ಪರ್ಧೆಗಳನ್ನು ಹಮ್ಮಿಕೊಂಡು ಮನುಷ್ಯರನ್ನು ಸದಾ ಚೈತನ್ಯವಂತರಾಗಲು ತಯಾರು ಮಾಡುತ್ತಿದ್ದರು ಆದರೆ ಅದು ಮರೆಯಾಗುತ್ತಿರುವದು ಅತ್ಯಂತ ಖೇದಕರ ವಿಷಯ ಎಂದರು.ದೇವಿ ಪೂಜಾರಿ, ಸಂಗಪ್ಪ ಬಾಟಿ, ಯಮನೂರಿ ಮಾಕಾಳಿ, ಮಳೆಯಪ್ಪ ಬರಗಿ, ವಿರುಪಾಕ್ಷಿ ಕೊಲಕಾರ, ಬಸಪ್ಪ ಕೊಠಾರಿ, ಹನಮಂತ ಬೆಳ್ಳುಬ್ಬಿ, ಸಗರೆಪ್ಪ ಮುರನಾಳ ಸಂಗಪ್ಪ ಯ ಗಣಿ ಸೇರಿದಂತೆ ಜಾತ್ರಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಫೆ.15 ರಂದು ನಗರದ ಸಮನ್ವಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ( ಸಿದ್ದೇಶ್ವರ ಕಲಾ ಮಂದಿರದ ಕಟ್ಟಡ) ಬಿ ಎಲ್ ಡಿ ಇ ರೋಡ್ ಶ್ರೀ ಸಿದ್ದೇಶ್ವರ ದೇವಸ್ಥಾನ ಸಮೀಪ ವಿಜಯಪುರ. ಇಲ್ಲಿ ಮಧ್ಯಾಹ್ನ 1.30 ಗಂಟೆಗೆ ರಾಜ್ಯಮಟ್ಟದ ಚಿತ್ರಕಲಾ ಶಿಕ್ಷಣ ಶಿಕ್ಷಕರ ಸಭೆಯನ್ನು ಕರೆಯಲಾಗಿದೆ.ಕಾರಣ ಆಸಕ್ತಿಯುಳ್ಳ ಚಿತ್ರಕಲಾ ಶಿಕ್ಷಣ ಶಿಕ್ಷಕರು ಸಭೆಗೆ ಬರುವಾಗ ಸನ್ 2004–05 ರ ಹಾಗೂ ಸನ್ 2007–08 ರ ನೇಮಕಾತಿ ಅಧಿಸೂಚನೆಗೆ ಅರ್ಜಿ ಸಲ್ಲಿಸಿದ ದಾಖಲೆಗಳು ಮತ್ತು ನೇಮಕಾತಿ ಆದೇಶದ ಪತ್ರ ದೊಂದಿಗೆ ಹಾಜರಿರಲು ಕರ್ನಾಟಕ ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟದ ಅಧ್ಯಕ್ಷರು ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಜಿ ಎಸ್. ಪಾಟೀಲ್ ಅಧ್ಯಕ್ಷರು,ಮೊ:9663156228.ಸಂಜೀವ ಆರ್. ಪಂಚಾಲ್. ಪ್ರಧಾನ ಕಾರ್ಯದರ್ಶಿಗಳು, ಮೊ:9740613629.ಹಾಗೂ ಕೆ ಎ. ಮುಲ್ಲಾ ಸಹಕಾರ್ಯದರ್ಶಿ. ಮೊ: 9900836213.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆನೆಕಾಲು ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ ಎಂದು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಪ್ಲಾಸ್ಟಿಕ್ ಸರ್ಜನ್ ಡಾ. ಅನಿಕೇತನ ವಲ್ಲಭ ಹೇಳಿದ್ದಾರೆ.ಮಂಗಳವಾರ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸೆ ವಿಭಾಗದ ವತಿಯಿಂದ, ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್.ಎಸ್.ಎಸ್ ಸಹಯೋಗದೊಂದಿಗೆ ದುಗ್ಧರಸ ಆನೆಕಾಲು ರೋಗ (ಫೈಲೇರಿಯಾಸಿಸ್) ಕುರಿತು ಆಯೋಜಿಸಲಾಗಿದ್ದ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಆನೆಕಾಲು ರೋಗವು ವುಚೆರೇರಿಯಾ ಬ್ಯಾಂಕ್ರಾಫ್ಟಿ ಎಂಬ ಪರಾವಲಂಬಿ ಜೀವಿಯಿಂದ, ಕ್ಯೂಲೆಕ್ಸ ಎಂಬ ಸೊಳ್ಳೆ ಕಡಿತದಿಂದ, ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹರಡುವ ಕಾಯಿಲೆಯಾಗಿದೆ. ಸ್ವಚ್ಛ ಭಾರತ, ಸ್ವಸ್ಥ ಭಾರತ ಎಂಬ ಧ್ಯೇಯದೊಂದಿಗೆ, ಪರಿಸರದ ಸ್ವಚ್ಛತೆಯನ್ನು ಕಾಪಾಡಿದರೆ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ. ಈ ರೋಗವು ಶರೀರವನ್ನು ವಿಕಾರಗೊಳಿಸಿ, ದೈನಂದಿನ ಚಟುವಟಿಕೆಗಳಿಗೆ ತೊಂದರೆಯನ್ನುಂಟು ಮಾಡುತ್ತದೆ ಎಂದು ಹೇಳಿದ ಅವರು,…

Read More

ಬೀಮಾತೀರದ ಹಂತಕ ಬಾಗಪ್ಪ ಹರಿಜನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು | ನಾಲ್ವರು ಆರೋಪಿಗಳು ವಶಕ್ಕೆ | ಪೊಲೀಸರ ಸಾಹಸಕ್ಕೆ ವ್ಯಾಪಕ ಪ್ರಶಂಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭೀಮಾತೀರದ ಹಂತಕನೆಂದು ಕುಖ್ಯಾತಿ ಪಡೆದಿದ್ದ ಶಾರ್ಪಶೂಟರ್ ಬಾಗಪ್ಪ ಹರಿಜನ ನನ್ನು ಫೆ.೧೧ರಂದು ರಾತ್ರಿ ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಗಳನ್ನು ವಿಜಯಪುರ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ವಿಜಯಪುರ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು, ಕಳೆದ ಫೆ.11ರಂದು ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ಮದೀನಾ ನಗರದಲ್ಲಿ ರಾತ್ರಿ 09.30 ಗಂಟೆಯ ಸುಮಾರಿಗೆ ಪಿಂಟು ಹಾಗೂ ಇನ್ನೂ 4-5 ಜನ ದುಷ್ಕರ್ಮಿಗಳು ಸೇರಿಕೊಂಡು ಭಾಗಪ್ಪ ಹುಚ್ಚಪ್ಪ ಹರಿಜನ ಈತನಿಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಡಲಿ ಹಾಗೂ ಮಚ್ಚಿನಿಂದ ಕುತ್ತಿಗೆಗೆ, ಎದೆಗೆ ಮತ್ತು ಕೈಗಳಿಗೆ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದರು. ಭಾಗಪ್ಪ ಹರಿಜನ ಅಂದು ಸ್ಥಳದಲ್ಲಿಯೇ ಮೃತಪಟ್ಟಿದ್ದ. ಈ ಬಗ್ಗೆ ಮೃತನ ಮಗಳಾದ ಗಂಗೂಬಾಯಿ ಭಾಗಪ್ಪ…

Read More

ಲೇಖನ- ವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ ಇಡೀ ದೇಶದಲ್ಲಿ ಅಥವಾ ವಿಶ್ವದಲ್ಲಿ ಮನುಷ್ಯರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದು ಈ ಆಧುನಿಕ ಕಾಲದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಯುಗದಲ್ಲಿ ಟೆಲಿಫೋನ್, ಮೊಬೈಲ್, ಸಾಮಾಜಿಕ ಜಾಲತಾಣಗಳು ಮುಂತಾದ ಕೆಲವನ್ನು ಹೆಸರಿಸಲಾಗುತ್ತದೆ. ಆದರೆ ಅದರಷ್ಟೇ ಪ್ರಾಮುಖ್ಯತೆ ಪಡೆದು ಅದಕ್ಕಿಂತ ಪ್ರಮುಖವಾಗಿ ಇಡೀ ಜನ ಸಮೂಹವನ್ನು ಫಿಸಿಕಲಿ ಅಂದ್ರೆ ಭೌತಿಕವಾಗಿ ಒಗ್ಗೂಡಿಸುವುದು ಬೃಹತ್ ಸಂಪರ್ಕ ಜಾಲ ವ್ಯವಸ್ಥೆ ಹೊಂದಿರುವ ಚಾಲಕರು ಎಂಬ ಚಲಿಸುವ ಜೀವಂತ ವಾಹನಗಳು. ಹೌದು, ಖಂಡಿತವಾಗಲೂ ಚಾಲಕರಿಗೆ ಜೀವಂತ ವಾಹನಗಳು ಎಂದು ಆತ್ಮಸಾಕ್ಷಿಯಾಗಿ ಕರೆಯಲೇಬೇಕಾಗುತ್ತದೆ.ಭಾರತದಂತಹ ಅತ್ಯಂತ ಸಂಕೀರ್ಣ ಭೌಗೋಳಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಚಾಲಕರು ಬಹು ಮುಖ್ಯಪಾತ್ರ ವಹಿಸುತ್ತಾರೆ. ಹೇಗೆ ಶಿಕ್ಷಕರು, ವೈದ್ಯರು, ಸೈನಿಕರು ಮುಂತಾದ ಅತ್ಯಂತ ಅವಶ್ಯಕ ವೃತ್ತಿಗಳಂತೆ ಚಾಲನಾ ವೃತ್ತಿಯು ಒಂದು ಮತ್ತು ಚಾಲಕರು ಅತ್ಯಂತ ಮಹತ್ವ ಪಡೆದಿದ್ದಾರೆ.ಚಾಲಕರಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಹಾಗೆಯೇ ಚಾಲಕರಿಲ್ಲದೆ ದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಅಷ್ಟೊಂದು ಮಹತ್ವದ ಪಾತ್ರ ನಿರ್ವಹಿಸುವುದು ಚಾಲಕರು.ಹಾಗಾದರೆ…

Read More

ಲೇಖನ- ವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ ಇಡೀ ದೇಶದಲ್ಲಿ ಅಥವಾ ವಿಶ್ವದಲ್ಲಿ ಮನುಷ್ಯರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದು ಈ ಆಧುನಿಕ ಕಾಲದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಯುಗದಲ್ಲಿ ಟೆಲಿಫೋನ್, ಮೊಬೈಲ್, ಸಾಮಾಜಿಕ ಜಾಲತಾಣಗಳು ಮುಂತಾದ ಕೆಲವನ್ನು ಹೆಸರಿಸಲಾಗುತ್ತದೆ. ಆದರೆ ಅದರಷ್ಟೇ ಪ್ರಾಮುಖ್ಯತೆ ಪಡೆದು ಅದಕ್ಕಿಂತ ಪ್ರಮುಖವಾಗಿ ಇಡೀ ಜನ ಸಮೂಹವನ್ನು ಫಿಸಿಕಲಿ ಅಂದ್ರೆ ಭೌತಿಕವಾಗಿ ಒಗ್ಗೂಡಿಸುವುದು ಬೃಹತ್ ಸಂಪರ್ಕ ಜಾಲ ವ್ಯವಸ್ಥೆ ಹೊಂದಿರುವ ಚಾಲಕರು ಎಂಬ ಚಲಿಸುವ ಜೀವಂತ ವಾಹನಗಳು. ಹೌದು, ಖಂಡಿತವಾಗಲೂ ಚಾಲಕರಿಗೆ ಜೀವಂತ ವಾಹನಗಳು ಎಂದು ಆತ್ಮಸಾಕ್ಷಿಯಾಗಿ ಕರೆಯಲೇಬೇಕಾಗುತ್ತದೆ.ಭಾರತದಂತಹ ಅತ್ಯಂತ ಸಂಕೀರ್ಣ ಭೌಗೋಳಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಚಾಲಕರು ಬಹು ಮುಖ್ಯಪಾತ್ರ ವಹಿಸುತ್ತಾರೆ. ಹೇಗೆ ಶಿಕ್ಷಕರು, ವೈದ್ಯರು, ಸೈನಿಕರು ಮುಂತಾದ ಅತ್ಯಂತ ಅವಶ್ಯಕ ವೃತ್ತಿಗಳಂತೆ ಚಾಲನಾ ವೃತ್ತಿಯು ಒಂದು ಮತ್ತು ಚಾಲಕರು ಅತ್ಯಂತ ಮಹತ್ವ ಪಡೆದಿದ್ದಾರೆ.ಚಾಲಕರಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಹಾಗೆಯೇ ಚಾಲಕರಿಲ್ಲದೆ ದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಅಷ್ಟೊಂದು ಮಹತ್ವದ ಪಾತ್ರ ನಿರ್ವಹಿಸುವುದು ಚಾಲಕರು.ಹಾಗಾದರೆ…

Read More

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ‘ವಾಸ್ತವ ಪ್ರಪಂಚಕ್ಕೆ ಮಿತಿಗಳಿವೆ. ’ಕಲ್ಪನೆಯ ಪ್ರಪಂಚವು ಅಪಾರ’ ಎಂದಿದ್ದಾನೆ ತತ್ವಜ್ಞಾನಿ ಜೀನ್ ಜಾಕ್ಚೆಸ್ ರೂಸೋ. ನಾವು ಬೆಳೆಯುವುದಕ್ಕೆ ಅತ್ಯಗತ್ಯವಾಗಿ ಬೇಕಾದ ಎರಡು ಮುಖ್ಯ ಕೌಶಲ್ಯಗಳೆಂದರೆ: ಸೃಜನಶೀಲತೆ ಮತ್ತು ನಾವೀನ್ಯತೆ. ಅವು ಹೊಸ ಆಲೋಚನೆಗಳನ್ನು ಸೃಷ್ಟಿಸಲು, ಸಮಸ್ಯೆಗಳನ್ನು ಪರಿಹರಿಸಲು ಮತ್ತು ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತವೆ. ಕಲ್ಪನೆ ಮತ್ತು ಸೃಜನಶೀಲತೆ ಎಂಬ ಎರಡು ಪದಗಳನ್ನು ನಾವು ಹೆಚ್ಚಾಗಿ ಸಮಾನಾರ್ಥಕ ಪದಗಳಾಗಿ ಬಳಸುತ್ತೇವೆ. ಹೌದು ಅವು ನಿಕಟ ಸಂಬಂಧ ಹೊಂದಿವೆ. ಆದರೆ ಅವುಗಳ ನಡುವೆ ಒಂದು ಪ್ರಮುಖ ವ್ಯತ್ಯಾಸವಿದೆ.ಹೆಬ್ಬಾಗಿಲು‘ಕಲ್ಪನೆಯೇ ಸೃಜನಶೀಲತೆಗೆ ಹೆಬ್ಬಾಗಿಲು.’ ನಮ್ಮ ಕಲ್ಪನೆಯನ್ನು ತೊಡಗಿಸಿಕೊಳ್ಳದೇ ನಾವು ಯಾವುದೇ ಸೃಜನಶೀಲತೆಯನ್ನು ಮಾಡಲು ಸಾಧ್ಯವಿಲ್ಲ. ಹೊಸ ಯೋಜನೆ ಅಥವಾ ತಂತ್ರವನ್ನು ಅಭಿವೃದ್ಧಿಪಡಿಸುವಂತಹ ಸೃಜನಶೀಲ ಕೆಲಸದಲ್ಲಿ ತೊಡಗಿದಾಗ ನಮಗೆಲ್ಲ ಇದು ಸಂಭವಿಸುತ್ತದೆ. ಇದರಿಂದ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ಇದು ಕಲ್ಪನಾಶೀಲರಾಗುವುದನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ. ಬುದ್ಧಿಮತ್ತೆ ಮತ್ತು ವಿನ್ಯಾಸ ಚಿಂತನೆಯಂತಹ ವಿವಿಧ ತಂತ್ರಗಳು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಫೆ೧೫ ರಂದು ಜರುಗಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ಅಂದು ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಎಲ್ಲ ಸರಕಾರಿ, ಅನುದಾನ ರಹಿತ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಆದೇಶಿಸಿದ್ದಾರೆ.

Read More