ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪತ್ತಿನ ಸಹಕಾರಿ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಆಡಳಿತ ಮಂಡಳಿ ಸಹಕಾರ ಸಿಬ್ಬಂದಿ ವರ್ಗದವರ ಕರ್ತವ್ಯ ನಿಷ್ಠೆಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಉಸ್ಮಾನಸಾಬ ಪಟೇಲ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಪ್ರಾರಂಭವಾದ ಎಪಿಜೆ ಅಬ್ದುಲ್ ಕಲಾಂ ಸಹಕಾರಿ ಸಂಘದ ಪದಾಧಿಕಾರಿಗಳ ಹಾಗೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಂತರ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಹಣಕಾಸು ವಹಿವಾಟು ಸಂಸ್ಥೆಯ ಆಡಳಿತ ವರ್ಗ ಜನರೊಂದಿಗೆ ಸೌಹರ್ಧಯುತವಾಗಿ ನಡೆದುಕೊಳ್ಳಬೇಕು ಸಾಲ ಕೊಡುವಾಗ ಮರಳಿ ವಸೂಲಿ ಮಾಡುವಾಗ ಜವಾಬ್ದಾರಿಯುತದಿಂದ ವರ್ತಿಸಿದರೆ ಸಂಘವು ಪ್ರಗತಿ ಪಥದತ್ತ ಸಾಗುತ್ತದೆ ಎಂದರು.
ಅಧ್ಯಕ್ಷರಾಗಿ ಉಸ್ಮಾನಸಾಬ ಪಟೇಲ ಉಪಾಧ್ಯಕ್ಷರಾಗಿ ವಿನಿತಕುಮಾರ ದೇಸಾಯಿ ಆಯ್ಕೆಯಾದರೆ ಹನ್ನೇರಡು ಸದ್ಯಸ್ಯರನ್ನು ನಿರ್ದೇಶಕರನ್ನಾಗಿ ಘೋಷಿಸಲಾಯಿತು ಚುನಾವಣಾಧಿಕಾರಿಗಳಾಗಿ ಶ್ರೀಮತಿ ಕೆ ಬಿ ಗುಡದಿನ್ನಿ ಆಗಮಿಸಿದ್ದರು.
ಅತಿಥಿಗಳಾಗಿ ಪಡಿಯಪ್ಪಮಾಸ್ತರ ನಾಗರಾಳ ಗಂಗಾಧರ ದೇಸಾಯಿ ಹಸನಸಾಬ ಚೌಧರಿ ಬಾಬುಸಾಬ ಕೂಡಗಿ ಕೊಲ್ಹಾರ ಪಟ್ಟಣದಲ್ಲಿರುವ ಜಿಲ್ಹಾ ಮಧ್ಯವರ್ತಿ ಸಹಕಾರಿ ಬ್ಯಾಂಕ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ ಬಾಪೂಜಿ ಬ್ಯಾಂಕನ ವ್ಯವಸ್ಥಾಪಕ ಮಂಡಳಿಯವರು ಆಗಮಿಸಿದ್ದರು. ನಿರ್ದೇಶಕರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗೌರವಿಸಲಾಯಿತು.
ಪರಶುರಾಮ ಬ ಗಣಿ ಸ್ವಾಗತಿಸಿ, ನಿರೂಪಿಸಿದರು.

