ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ದೇವರ ದೇವತೆಗಳ ಜಾತ್ರೆ ಉತ್ಸವ ಮತ್ತು ಪ್ರತಿಷ್ಠಾಪನೆ ಕಾರ್ಯಕ್ರಮಗಳು ಸದೃಡ ಸಮಾಜದ ನಿರ್ಮಾಣ ಸಂಕೇತಗಳಾಗಿವೆ ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ತೆರಪಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಏರ್ಪಡಿಸಿದ್ದ ಹಾಲೋಕಳಿ ಸ್ಪರ್ಧೆಯನ್ನು ಉಧ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಗ್ರಾಮಗಳಲ್ಲಿ ನಡೆಯುವ ಜಾತ್ರೆಗಳಲ್ಲಿನ ವಿವಿಧ ಸ್ಪರ್ಧೆಗಳು ಮನರಂಜನಾ ಮತ್ತು ಧಾರ್ಮಿಕ ಕಾರ್ಯಕ್ರಮ ಸರ್ವಜನರನ್ನು ಒಂದೆಡೆ ಸೇರಿಸಿ ಸಂಭಂದಗಳನ್ನು ಬೆಸೆಯುವ ಶ್ರದ್ದಾಕೇಂದ್ರಗಳು ಆದ್ದರಿಂದ ಇಂತಹ ಉತ್ಸವಗಳಲ್ಲಿ ಜನತೆ ಪಾಲ್ಗೊಳ್ಳಬೇಕು ಎಂದರು.
ಹಿಂದಿನ ಹಿರಿಯರು ಮಾನವ ಶರೀರ ಗಟ್ಟಿಯಾಗಿರಬೇಕು ಎನ್ನುವ ಕಾರಣಕ್ಕಾಗಿ ವರ್ಷಕ್ಕೊಮ್ಮೆ ಕ್ರೀಯಾಶೀಲ ಚಟುವಟಿಕೆಗಳ ದೇಹ ದಂಡನೆಯ ಆಟೋಟ ಜ್ಞಾನವ್ರದ್ದಿಯ ಸ್ಪರ್ಧೆಗಳನ್ನು ಹಮ್ಮಿಕೊಂಡು ಮನುಷ್ಯರನ್ನು ಸದಾ ಚೈತನ್ಯವಂತರಾಗಲು ತಯಾರು ಮಾಡುತ್ತಿದ್ದರು ಆದರೆ ಅದು ಮರೆಯಾಗುತ್ತಿರುವದು ಅತ್ಯಂತ ಖೇದಕರ ವಿಷಯ ಎಂದರು.
ದೇವಿ ಪೂಜಾರಿ, ಸಂಗಪ್ಪ ಬಾಟಿ, ಯಮನೂರಿ ಮಾಕಾಳಿ, ಮಳೆಯಪ್ಪ ಬರಗಿ, ವಿರುಪಾಕ್ಷಿ ಕೊಲಕಾರ, ಬಸಪ್ಪ ಕೊಠಾರಿ, ಹನಮಂತ ಬೆಳ್ಳುಬ್ಬಿ, ಸಗರೆಪ್ಪ ಮುರನಾಳ ಸಂಗಪ್ಪ ಯ ಗಣಿ ಸೇರಿದಂತೆ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

