Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸಪ್ತಗ್ರಾಮಗಳಿಗೆ ಅಧಿಪತಿಯಾಗಿರುವ ಸಮೀಪದ ಯಲಗೂರ ಕ್ಷೇತ್ರದ ಶ್ರೀ ಯಲಗೂರೇಶನ ಕಾರ್ತಿಕೋತ್ಸವವು ಫೆ.೧೫ ರಿಂದ ಮೂರು ದಿನಗಳ ಕಾಲ ಜರುಗಲಿದೆ.ಫೆ.೧೫ ಬೆಳಿಗ್ಗೆ ಪಂಚಾಮೃತ ಅಭಿಷೇಕ ಪವಮಾನ ಹೊಮ, ಮಹಾಪೂಜೆ, ಬೆಳಿಗ್ಗೆ ೧೦ ಕ್ಕೆ ದಿಂಡಿನ ಸ್ಪರ್ಧೆ, ತೀರ್ಥ ಪರಿದಾಸರ ಕೀರ್ತನೆ ಹಾಗ್ಗೆ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ ೯ ಕ್ಕೆ ಅವಳಿ ಜಿಲ್ಲೆಯ ನಾನಾ ಭಜನಾ ಮಂಡಳಿಗಳ ನೇತೃತ್ವದಲ್ಲಿ ಭಜನೆಯೊಂದಿಗೆ ಭವ್ಯ ಶೋಭಾಯಾತ್ರೆ ಜರುಗಲಿದೆ.ಶನಿವಾರ ಬೆಳಿಗ್ಗೆ ೧೧ ಗಂಟೆಯಿಂದ ಭಾನುವಾರ ಸಂಜೆಯವರೆಗೂ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಜರುಗಲಿದೆ.ಶನಿವಾರ, ಗಾಯಕರಾದ ಸಂಗೀತಾ ಕಾಖಂಡಕಿ, ವಸುದೇಂದ್ರ ವೈದ್ಯ, ಪುಟ್ಟರಾಜು ಭಜಂತ್ರಿ, ಶುಭದಾ ದೇಶಪಾಡೆ, ವಿಭಾ ಹೆಗಡೆ, ರವೀಂದ್ರ ಸೈದ್ಯ, ಬಾಲಚಂದ್ರ ನಾಕೋಡ, ರಾಧಾ ದೇಸಾಯಿ, ರಜತ ಕುಲಕರ್ಣಿ, ಬಿ.ಬಿ.ಕುಲಕರ್ಣಿ, ವೀಣಾ ಸವದತ್ತಿ, ನಾರಾಯಣ ತಾಸಗಾಂವ, ಕುಮಾರ ಬಡಿಗೇರ, ವಿನಾಯಕ ಮುತಾಲಿಕದೇಸಾಯಿ, ಪ್ರವೀಣ ಕಾರಡಗಿ ಸೇರಿದಂತೆ ೫೦ ಕ್ಕೂ ಅಧಿಕ ಗಾಯಕರು ಸಂಗೀತ ರಸದೌತಣ ಉಣಬಡಿಸಲಿದ್ದಾರೆ.ಅಭಿನವ ಹೊಸೂರ ಅವರು ಯೋಗ ಪ್ರದರ್ಶನ,…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಕೂಡಗಿ ಕೆಪಿಎಸ್ ಶಾಲೆಯ ಶಿಥಿಲಾವಸ್ಥೆಯಲ್ಲಿ ಇರುವ ಎಲ್ಲ ಕಟ್ಟಡಗಳನ್ನು ಬರುವ ದಿನಗಳಲ್ಲಿ ಸುಂದರವಾದ ಕಟ್ಟಡಗಳನ್ನಾಗಿ ನಿರ್ಮಿಸಲಾಗುವುದು. ಮೂಲಭೂತ ಸೌಲಭ್ಯಗಳಿಗಾಗಿ ಇರುವ ಅನುದಾನವನ್ನು ಸದುಪಯೋಗ ಮಾಡಿ, ಕಡಿಮೆ ಬಿದ್ದರೆ ಅದನ್ನು ಬೇರೆ ಮೂಲಗಳಿಂದ ಅನುದಾನ ಒದಗಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಜಿಲ್ಲಾ ಪಂಚಾಯತ ವಿಜಯಪುರ, ಪಂಚಾಯತರಾಜ್ ಇಂಜನೀಯರಿಂಗ್ ಉಪವಿಭಾಗ ಬಸವನ ಬಾಗೇವಾಡಿ, 2022-23 ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ಕೂಡಗಿ ಕೆ ಪಿ ಎಸ್ ಶಾಲೆ ನಿರ್ಮಾಣ ಹಾಗೂ ರಿಪೇರಿ ಅಂದಾಜು ಮೊತ್ತ 174 ಲಕ್ಷ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಹೊಸ ಕಟ್ಟಡವನ್ನು 9 ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು. ಮುಂದಿನ ಭಾಗ ಶಾಲಾ ಕಟ್ಟಡ ಮಾಡಿಕೊಂಡು ಹಿಂದಿನ ಭಾಗವನ್ನು ಆಟದ ಮೈದಾನ ಮಾಡಿ ಒಂದು ಸುಸಜ್ಜಿತ ಶಾಲೆ ಮಾಡಿಕೊಡುವ ಭರವಸೆ ನೀಡಿದರು.ಈ ವೇಳೆ ಕಾರ್ಯಕ್ರಮದ ಸಾನಿಧ್ಯವನ್ನು ಮೈರಾಜಪೀರಾ ವಹಿಸಿದ್ದರು. ಅತಿಥಿಗಳಾಗಿ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದ ಉದ್ಘಾಟನೆಯನ್ನು ಫೆ.೧೬ ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಕಾರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಚ್.ಪಿ.ಸಂದೇಶ್ ಅವರ ಉಪಸ್ಥಿತಿಯಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಂ.ಐ.ಅರುಣ್ ಅವರು ಉದ್ಘಾಟಿಸಲಿದ್ದು, ಕಾನೂನು ಸಚಿವರಾದ ಎಚ್.ಕೆ.ಪಾಟೀಲರು ಅಧ್ಯಕ್ಷತೆ ವಹಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚೀವರಾದ ಎಂ.ಬಿ.ಪಾಟೀಲರು, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲರು ಮತ್ತು ಸಾಬೂಬು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವದಾಗಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಿವಾಜಿ ನಲವಡೆ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ಲೊಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಸಿ.ಎಸ್.ಪೊಲೀಸಪಾಟೀಲರು ತಿಳಿಸಿದ್ದಾರೆ.

Read More

ಆಲಮಟ್ಟಿಯಲ್ಲಿ ಉರ್ದು ಭಾಷಾ ಕಲಿಕಾ ಹಬ್ಬಕ್ಕೆ ಚಾಲನೆ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಶೈಕ್ಷಣಿಕ ಬಲವರ್ಧನೆಗೆ ಕಲಿಕಾ ಹಬ್ಬ ಸಹಕಾರಿಯಾಗಿದೆ, ಸರ್ಕಾರಿ ಶಾಲೆಗಳಲ್ಲಿ ಬರುವ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಕರು ತನು ಮನದಿಂದ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.ಆಲಮಟ್ಟಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ನಿಡಗುಂದಿ ಉರ್ದು ಕ್ಲಸ್ಟರ್ ನ ಕಲಿಕಾ ಹಬ್ಬವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ಬದಲಾವಣೆ ಸಹಜ ನಿಯಮ, ಬದಲಾವಣೆಗೆ ತಕ್ಕಂತೆ ನಾವು ಕೂಡಾ ಸ್ಮಾರ್ಟ್ ಆಗಿ, ಜತೆಗೆ ಮಕ್ಕಳನ್ನು ಸ್ಮಾರ್ಟ್ ಮಾಡಬೇಕಿದೆ. ಈ ಕಲಿಕಾ ಹಬ್ಬಗಳಿಂದ ಸುತ್ತಮುತ್ತಲಿನ ಶಾಲೆಗಳ ಮಕ್ಕಳೊಂದಿಗೆ ಸ್ಪರ್ಧಿಸುವ ಮನೋಭಾವನೆ ಬೆಳೆಯುತ್ತದೆ, ಪೋಷಕರು ಕೂಡಾ ಮಕ್ಕಳ ಕಲಿಕೆಯ ಪ್ರಗತಿಯ ಮೇಲೆ ನಿರಂತರ ನಿಗಾ ಇಡಬೇಕು ಎಂದರು.ಚಿಮ್ಮಲಗಿ ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷ ಎಂ.ಆರ್. ಕಮತಗಿ ಮಾತನಾಡಿ, ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ, ಅದನ್ನು ಪೋಷಕರು ನಿಯಂತ್ರಣದಲ್ಲಿಡಬೇಕು, ಮಕ್ಕಳ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಶುಕ್ರವಾರ ಬಬಲೇಶ್ವರ ತಾಲೂಕಿನ ಸಾರವಾಡ, ಹಲಗಣಿ ಮತ್ತು ಕಂಬಾಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಸಾರವಾಡ, ಹಲಗಣಿ ಹಾಗೂ ಕಂಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗಳ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಸಿಬ್ಬಂದಿ-ಮಕ್ಕಳ ಹಾಜರಾತಿ, ಮಕ್ಕಳ ಆರೋಗ್ಯ ತಪಾಸಣಾ ವರದಿಗಳನ್ನು ಪರಿಶೀಲಿಸಿ, ಅಂಗನವಾಡಿ ಕೇಂದ್ರಕ್ಕೆ ಪೇಂಟಿಂಗ್ ಮತ್ತು ಗೋಡೆ ಮೇಲೆ ಮಕ್ಕಳಿಗೆ ಆಕರ್ಷಣೀಯವಾಗುವಂತೆ ಕಾರ್ಟೂನ್ ಚಿತ್ರಗಳನ್ನು ಬರೆಯಿಸಬೇಕು, ವಿದ್ಯುತ್ ವ್ಯವಸ್ಥೆ, ೧೫ ನೇ ಹಣಕಾಸಿನ ಯೋಜನೆಯ ಅನುದಾನವನ್ನು ಬಳಸಿ ಕೇಂದ್ರದ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ಹಾಗೂ ಅಡುಗೆ ದಾಸ್ತಾನು ಸಂಗ್ರಹಿಸಲು ಕಂಟೇನರ್ ಖರೀದಿಸುವಂತೆ ಅವರು ಸೂಚನೆ ನೀಡಿದರು.ಮದಗುಣಕಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಂಗನವಾಡಿ ಕೇಂದ್ರದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳು ಹಾಡಿದ ವಿವಿಧ ಬಗೆಯ ಹಾಡುಗಳನ್ನು ಆಲಿಸಿದ ಸಿಇಓರವರು ಮಕ್ಕಳ ಪ್ರತಿಭೆಗೆ ಹರ್ಷ ವ್ಯಕ್ತಪಡಿಸಿದರು.ಸಾರವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಾತ್ಮ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ಜಿ. ಅವರು ಫೆ.೧೬ ರಿಂದ ೧೮ರವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಫೆ.೧೬ ರಂದು ಸಂಜೆ ೪ಗಂಟೆಗೆ ಜಿಲ್ಲೆಯ ನಿಡಗುಂದಿಗೆ ಆಗಮಿಸಿ, ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಕುಟುಂಬಗಳು ವಾಸಿಸುತ್ತಿರುವ ಸ್ಥಳ ವೀಕ್ಷಣೆ ಹಾಗೂ ಕುಂದು ಕೊರತೆಗಳನ್ನು ಆಲಿಸಿ, ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಫೆ.೧೭ರಂದು ಬೆಳಿಗ್ಗೆ ೧೦ ಗಂಟೆಗೆ ಇಂಡಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಕುಟುಂಬಗಳು ವಾಸಿಸುತ್ತಿರುವ ಸ್ಥಳ ವೀಕ್ಷಣೆ ಹಾಗೂ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ವಿಜಯಪುರ ನಗರದ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಹಂದಿಜೋಗಿ ಜನಾಂಗದ ಕುಟುಂಬಗಳು ವಾಸಿಸುತ್ತಿರುವ ಸ್ಥಳ ವೀಕ್ಷಣೆ ಹಾಗೂ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ. ಸಂಜೆ ೫ ಗಂಟೆಗೆ ವಿಜಯಪುರ ನಗರದ ಕುಂಚಿ ಕೊರವ ಕಾಲನಿಗೆ ಭೇಟಿ ನೀಡಿ ಕುಂಚಿ ಕೊರವ ಜನಾಂಗದ ಕುಟುಂಬಗಳು ವಾಸಿಸುತ್ತಿರುವ ಸ್ಥಳ ವೀಕ್ಷಣೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯ ೧೩ ತಾಲೂಕುಗಳಲ್ಲಿ ಫೆ.೧೫ರಂದು ನಡೆಯಲಿರುವ ಕ್ರೆöÊಸ್ತ ಸಂಸ್ಥೆಗಳ ವಸತಿ ಶಾಲೆಗಳ ೬ನೇ ತರಗತಿಯ ಪ್ರವೇಶಾತಿಗೆ ಪ್ರವೇಶ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನೋಡಿಕೊಳ್ಳಲು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಸೂಚಿಸಿದರು.ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶುಕ್ರವಾರ ವಸತಿ ಶಾಲೆಗಳ ೬ನೇ ತರಗತಿಯ ಪ್ರವೇಶಾತಿಗೆ ನಡೆಯುವ ಪ್ರವೇಶ ಪರೀಕ್ಷೆಗಳ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ ಅವರು ಜಿಲ್ಲೆಯ ಆಲಮೇಲ, ಬಬಲೇಶ್ವರ, ಬಸವನ ಬಾಗೇವಾಡಿ, ವಿಜಯಪುರ, ಚಡಚಣ, ದೇವರಹಿಪ್ಪರಗಿ, ಇಂಡಿ, ಕೋಲ್ಹಾರ, ಮುದ್ದೇಬಿಹಾಳ, ನಿಡಗುಂದಿ, ಸಿಂದಗಿ, ತಾಳಿಕೋಟಿ ಹಾಗೂ ತಿಕೋಟಾ ತಾಲೂಕಿನಲ್ಲಿ ಒಟ್ಟು ೪೩ ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ೧೫,೧೩೪ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಪರೀಕ್ಷೆಯಲ್ಲಿ ಯಾವುದೇ ಲೋಪವಾಗದೆ ವ್ಯವಸ್ಥಿತವಾಗಿ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.ಪರೀಕ್ಷೆ ಕೇಂದ್ರ ಹಾಗೂ ಕೊಠಡಿಗಳಲ್ಲಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾರ್ಥಿಗಳು ಇಲೆಕ್ಟಾçನಿಕ್ ವಸ್ತುಗಳು, ಕ್ಯಾಲ್ಕುಲೇಟರ್, ಮೊಬೈಲ್ ಸೇರಿದಂತೆ ಇನ್ನಿತರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವಿಜಯಪುರ ತಾಲೂಕಿನ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗಕ್ಕೆ ಸಂಬಂಧಿಸಿದಂತೆ ಫೆ.೧೫ರಂದು ಮಧ್ಯಾಹ್ನ ೪ಗಂಟೆಗೆ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗದ ಕಛೇರಿಯಲ್ಲಿ ರೈತರು ಹಾಗೂ ಗ್ರಾಹಕರೊಂದಿಗೆ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಗ್ರಾಹಕರ ಸಂವಾದ ಸಭೆ ಆಯೋಜಿಸಲಾಗಿದೆ.ಹೆಸ್ಕಾಂ ಗ್ರಾಮೀಣ ಉಪ ವಿಭಾಗದ ಕಛೇರಿಗೆ ಒಳಪಡುವ ಗ್ರಾಮಗಳ ಗ್ರಾಹಕರು ಹಾಗೂ ಸಾರ್ವಜನಿಕರು ಸಂವಾದ ಸಭೆಯಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಾರ್ಚ್ ೩೧ರವರೆಗೆ ನೋಂದಣಿಗೆ ಅವಕಾಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಮಾಲ್ದಂಡಿ ಬಿಳಿಜೋಳ ಪ್ರತಿ ಕ್ವಿಂಟಲ್‌ಗೆ ರೂ.೩,೪೨೧ ಹಾಗೂ ಹೈಬ್ರಿಡ್ ಬಿಳಿಜೋಳ ಪ್ರತಿ ಕ್ವಿಂಟಲ್‌ಗೆ ರೂ.೩,೩೭೧ ಗಳಂತೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದ್ದು, ಜಿಲ್ಲೆಯ ರೈತರಿಂದ ಖರೀದಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ವಿನಯಕುಮಾರ ಪಾಟೀಲ ಅವರು ತಿಳಿಸಿದ್ದಾರೆ.ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿದ್ದು, ಜಿಲ್ಲೆಯಲ್ಲಿ ರೈತರ ನೋಂದಣಿ ಕಾರ್ಯವನ್ನು ಕೈಗೊಳ್ಳಲಿದ್ದು, ಮಾರ್ಚ್ ೩೧ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಏಳು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವಿಜಯಪುರದ ಎಪಿಎಂಸಿ ಆವರಣ, ಬಸವನ ಬಾಗೇವಾಡಿಯ ಎಪಿಎಂಸಿ ಆವರಣ, ತೆಲಗಿ ರೇಲ್ವೆ ನಿಲ್ದಾಣ ಹತ್ತಿರ, ಮುದ್ದೇಬಿಹಾಳದ ಎಸ್‌ಡಬ್ಲ್ಯುಸಿ ಬಿದರಕುಂದಿ, ತಾಳಿಕೋಟಿಯ ಸರ್ಕಾರಿ ಆಸ್ಪತ್ರೆ ಹಿಂದುಗಡೆ, ಇಂಡಿಯ ಕೆಇಬಿ ಹತ್ತಿರ ಹಾಗೂ ಗೋಲಗೇರಿ ರೋಡ ಸಿಂದಗಿಯಲ್ಲಿ ಸ್ಥಾಪಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರಗಳನ್ನು ಹಾಗೂ ವಿಜಯಪುರದ ಕೆಎಫ್‌ಸಿಎಸ್ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ದೇವೇಂದ್ರ ನಾಯ್ಕೋಡಿ (ಮೊ.ಸಂ:೯೪೪೮೪೯೬೦೧೬)ಗೆ…

Read More

ಜಿಲ್ಲಾಧಿಕಾರಿ ಟಿ.ಭೂಬಾಲನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಅಧಿಕಾರಿ-ಸಿಬ್ಬಂದಿಗಳ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು, ಸರ್ಕಾರಿ ಅಧಿಕಾರಿ-ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ಮೇಲೆ ಕಾನೂನಿನ ರಿತ್ಯ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಎಚ್ಚರಿಕೆ ನೀಡಿದ್ದಾರೆ.ಇತ್ತೀಚೆಗೆ ಚಡಚಣ ತಾಲೂಕಿನ ಸರಕಾರಿ ಭೂಮಾಪಕರಾದ ಮಹಾಂತಪ್ಪ ಶ್ರೀಶೈಲ ಸಜ್ಜನ ಅವರು ಲೋಣಿ ಬಿ.ಕೆ. ಗ್ರಾಮದಲ್ಲಿ ಸರಕಾರಿ ರಸ್ತೆ ಅಳತೆ ಕಾರ್ಯಕ್ಕೆ ಹೋದಾಗ ವಿಕಾಸ ತಂ.ಕಲ್ಲನಗೌಡ ಪಾಟೀಲ, ರವೀಂದ್ರ ಗುರಪ್ಪ ಕಾಂಬಳೆ, ಸಿದ್ರಾಮ ಗಿರಿಮಲ್ಲ ಉಟಗಿ, ವಿಕಾಸ ಜೀವಪ್ಪ ಕಾಂಬಳೆ ಹಾಗೂ ಸಿದ್ದಲಿಂಗಪ್ಪ ಕಲ್ಲನಗೌಡ ಪಾಟೀಲ ಎಂಬುವರು ಸರ್ವೇಯರ್ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆ ನಡೆಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದರು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈ ಐದು ಜನ…

Read More