ಮಾರ್ಚ್ ೩೧ರವರೆಗೆ ನೋಂದಣಿಗೆ ಅವಕಾಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಮಾಲ್ದಂಡಿ ಬಿಳಿಜೋಳ ಪ್ರತಿ ಕ್ವಿಂಟಲ್‌ಗೆ ರೂ.೩,೪೨೧ ಹಾಗೂ ಹೈಬ್ರಿಡ್ ಬಿಳಿಜೋಳ ಪ್ರತಿ ಕ್ವಿಂಟಲ್‌ಗೆ ರೂ.೩,೩೭೧ ಗಳಂತೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದ್ದು, ಜಿಲ್ಲೆಯ ರೈತರಿಂದ ಖರೀದಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ವಿನಯಕುಮಾರ ಪಾಟೀಲ ಅವರು ತಿಳಿಸಿದ್ದಾರೆ.
ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿದ್ದು, ಜಿಲ್ಲೆಯಲ್ಲಿ ರೈತರ ನೋಂದಣಿ ಕಾರ್ಯವನ್ನು ಕೈಗೊಳ್ಳಲಿದ್ದು, ಮಾರ್ಚ್ ೩೧ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಏಳು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವಿಜಯಪುರದ ಎಪಿಎಂಸಿ ಆವರಣ, ಬಸವನ ಬಾಗೇವಾಡಿಯ ಎಪಿಎಂಸಿ ಆವರಣ, ತೆಲಗಿ ರೇಲ್ವೆ ನಿಲ್ದಾಣ ಹತ್ತಿರ, ಮುದ್ದೇಬಿಹಾಳದ ಎಸ್‌ಡಬ್ಲ್ಯುಸಿ ಬಿದರಕುಂದಿ, ತಾಳಿಕೋಟಿಯ ಸರ್ಕಾರಿ ಆಸ್ಪತ್ರೆ ಹಿಂದುಗಡೆ, ಇಂಡಿಯ ಕೆಇಬಿ ಹತ್ತಿರ ಹಾಗೂ ಗೋಲಗೇರಿ ರೋಡ ಸಿಂದಗಿಯಲ್ಲಿ ಸ್ಥಾಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರಗಳನ್ನು ಹಾಗೂ ವಿಜಯಪುರದ ಕೆಎಫ್‌ಸಿಎಸ್ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ದೇವೇಂದ್ರ ನಾಯ್ಕೋಡಿ (ಮೊ.ಸಂ:೯೪೪೮೪೯೬೦೧೬)ಗೆ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
