ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಪ್ತಗ್ರಾಮಗಳಿಗೆ ಅಧಿಪತಿಯಾಗಿರುವ ಸಮೀಪದ ಯಲಗೂರ ಕ್ಷೇತ್ರದ ಶ್ರೀ ಯಲಗೂರೇಶನ ಕಾರ್ತಿಕೋತ್ಸವವು ಫೆ.೧೫ ರಿಂದ ಮೂರು ದಿನಗಳ ಕಾಲ ಜರುಗಲಿದೆ.
ಫೆ.೧೫ ಬೆಳಿಗ್ಗೆ ಪಂಚಾಮೃತ ಅಭಿಷೇಕ ಪವಮಾನ ಹೊಮ, ಮಹಾಪೂಜೆ, ಬೆಳಿಗ್ಗೆ ೧೦ ಕ್ಕೆ ದಿಂಡಿನ ಸ್ಪರ್ಧೆ, ತೀರ್ಥ ಪರಿದಾಸರ ಕೀರ್ತನೆ ಹಾಗ್ಗೆ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ ೯ ಕ್ಕೆ ಅವಳಿ ಜಿಲ್ಲೆಯ ನಾನಾ ಭಜನಾ ಮಂಡಳಿಗಳ ನೇತೃತ್ವದಲ್ಲಿ ಭಜನೆಯೊಂದಿಗೆ ಭವ್ಯ ಶೋಭಾಯಾತ್ರೆ ಜರುಗಲಿದೆ.
ಶನಿವಾರ ಬೆಳಿಗ್ಗೆ ೧೧ ಗಂಟೆಯಿಂದ ಭಾನುವಾರ ಸಂಜೆಯವರೆಗೂ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ಶನಿವಾರ, ಗಾಯಕರಾದ ಸಂಗೀತಾ ಕಾಖಂಡಕಿ, ವಸುದೇಂದ್ರ ವೈದ್ಯ, ಪುಟ್ಟರಾಜು ಭಜಂತ್ರಿ, ಶುಭದಾ ದೇಶಪಾಡೆ, ವಿಭಾ ಹೆಗಡೆ, ರವೀಂದ್ರ ಸೈದ್ಯ, ಬಾಲಚಂದ್ರ ನಾಕೋಡ, ರಾಧಾ ದೇಸಾಯಿ, ರಜತ ಕುಲಕರ್ಣಿ, ಬಿ.ಬಿ.ಕುಲಕರ್ಣಿ, ವೀಣಾ ಸವದತ್ತಿ, ನಾರಾಯಣ ತಾಸಗಾಂವ, ಕುಮಾರ ಬಡಿಗೇರ, ವಿನಾಯಕ ಮುತಾಲಿಕದೇಸಾಯಿ, ಪ್ರವೀಣ ಕಾರಡಗಿ ಸೇರಿದಂತೆ ೫೦ ಕ್ಕೂ ಅಧಿಕ ಗಾಯಕರು ಸಂಗೀತ ರಸದೌತಣ ಉಣಬಡಿಸಲಿದ್ದಾರೆ.
ಅಭಿನವ ಹೊಸೂರ ಅವರು ಯೋಗ ಪ್ರದರ್ಶನ, ಶ್ರೀನಿಧಿ ಹರಿಮಂದಿರ ಕೊಳಲು ವಾದನ, ಪ್ರಶಾಂತ ಇಬ್ರಾಹಿಂಪೂರ ಹಾಗೂ ಶಿಷ್ಯ ವೃಂದದವರ ತಬಲಾ ಸೋಲೋ ಕಾರ್ಯಕ್ರಮವೂ ಜರುಗಲಿದೆ.
ಸಂಗೀತಾ ಕಟ್ಟಿ ಸಂಗೀತ ಕಾರ್ಯಕ್ರಮ:
ಫೆ.೧೬ ರಂದು ಯಲಗೂರು ತೆಂಗಿನ ತೋಟದಲ್ಲಿ ಬೆಳಿಗ್ಗೆ ೧೧ ಕ್ಕೆ ನಾರಾಯಣ ಹಿರೇಕೊಳಚಿ ಅವರ ವಾಯಲಿನ್ ಪ್ರದರ್ಶನ, ಚಿದಾನಂದ ಕುಲಕರ್ಣಿ ಅವರ ನೃತ್ಯರೂಪಕ ನಡೆಯಲಿದೆ. ಖ್ಯಾತ ಗಾಯಕರಾದ ಕುಮಾರ ಮರಡೂರ, ಜಯತೀರ್ಥ ಮೆವುಂಡಿ, ರಾಜೇಂದ್ರ ನಾಕೋಡ ಅವರ ಗಾಯನ ನಡೆಯಲಿದೆ. ಮಧ್ಯಾಹ್ನ ೨ ಕ್ಕೆ ವಿದೂಷಿ ಡಾ ಸಂಗೀತಾ ಕಟ್ಟಿ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.
ರಥೋತ್ಸವ:
ಫೆ.೧೬ ರಂದು ಹರಶಾವಿಗೆ, ಅನ್ನಸಂತರ್ಪಣೆ, ಬೀರಲಿಂಗೇಶ್ವರ ಗೊಂಬೆ ಕುಣಿತ, ಸಂಜೆ ೬ ಕ್ಕೆ ರಥೋತ್ಸವ, ರಾತ್ರಿ ೮ ಕ್ಕೆ ಹೊಂಡ ಪೂಜೆ ಜರುಗಲಿದೆ. ರಾತ್ರಿ ಅಕ್ಕ ಅಪರಂಜಿ, ತಂಗಿ ಗುಲಗಂಜಿ ನಾಟಕ ಪ್ರದರ್ಶನ ಜರುಗಲಿದೆ.
ಫೆ ೧೭ ರಂದು ಜಂಗಿ ಕುಸ್ತಿಗಳು, ರಾತ್ರಿ ತವರಿಗೆ ಬಂದ ತಂಗಿ ನಾಟಕ ಪ್ರದರ್ಶನ ನಡೆಯಲಿದೆ.
ಉಚಿತ ಆರೋಗ್ಯ ತಪಾಸಣಾ ಶಿಬಿರ:
ಫೆ.೧೫ ರಂದು ಡಾ ಆನಂದ ಕಣಬೂರ ನೇತ್ರ ತಜ್ಞರು, ಡಾ ವಿಜಯೇಂದ್ರ ಕಣಬೂರ ಮಧುಮೇಹ ತಜ್ಞರು ಹಾಗೂ ಬಾಗಲಕೋಟೆಯ ಕುಮಾರೆಶ್ವರ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಜರುಗಲಿದೆ. ಬಾಗಲಕೋಟೆಯ ಪಿಎಂಎನ್ ಎಂ ದಂತ ವೈದ್ಯಕೀಯ ವಿದ್ಯಾಲಯದಿಂದ ದಂತ ತಪಾಸಣೆ, ಚಿಕಿತ್ಸೆ ನಡೆಯಲಿದೆ.
ನೇತ್ರ ತಜ್ಞರಾದ ಡಾ ಗುರುರಾಜ ಕುಲಕರ್ಣಿ, ಡಾ ಹರಿಕೃಷ್ಣ ಕುಲಕರ್ಣಿ, ಹೃದಯ ರೋಗ ತಜ್ಞರಾದ ಡಾ ಪ್ರಸನ್ನ ಕಟ್ಟಿ, ಎಲುಬು ಕೀಲು ತಜ್ಞ ಡಾ ಸಂದೀಪ ನಾಯಕ ಅವರು ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ಯಲಗೂರೇಶ್ವರ ದೆವಸ್ಥಾನ ಕಮಿಟಿಯ ಅಧ್ಯಕ್ಷರಾದ ಅನಂತ ಓಂಕಾರ ಹಾಗೂ ಯಲಗೂರೇಶ್ವರ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ ತಿಳಿಸಿದ್ದಾರೆ.

