Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಶಮ್ಸ್ ಪ್ರೀ ಪ್ರೈಮರಿ ಹಾಗೂ ಮನಗೂಳಿ ರಸ್ತೆಯ ಕೀರ್ತಿ ನಗರದಲ್ಲಿನ ಪ್ರೈಮರಿ ಶಾಲೆಯಲ್ಲಿ ಜ. ೨೦ ರಿಂದ ಜ.೨೭ ರ ವರೆಗೆ ವಾಣಿಜ್ಯ ಪರೀಕ್ಷೆಗಳು ಜರುಗಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷಾ ದಿನದಂದು ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ, ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ಮೊಬೈಲ್ ಫೋನ್, ಸ್ಮಾರ್ಟವಾಚ್, ಬ್ಲೂಟೂತ್ ಡಿವೈಸ್, ಪೇಜರ್, ವೈರ್ಲೆಸ್, ಕ್ಯಾಲ್ಕುಲೇಟರ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದು ಹಾಗೂ ಬಳಸುವುದನ್ನು ನಿಷೇಧಿಸಿದೆ.ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ಬೆಳಿಗ್ಗೆ ೯ ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್ ಗಳು, ಇಂಟರನೆಟ್, ಸೈಬರ್ ಕೆಫೆಗಳು ಹಾಗೂ ಕೋಚಿಂಗ್ ಕೇಂದ್ರಗಳು ತೆರೆಯದಂತೆ ಆದೇಶಿಸಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ತುರ್ತುಚಿಕಿತ್ಸೆ ವಿಭಾಗಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಜ.೧೫ರಂದು ಅನೀರಿಕ್ಷಿತವಾಗಿ ಭೇಟಿ ನೀಡಿದರು.ಭೇಟಿ ನೀಡಿ ಅಲ್ಲಿರುವ ರೋಗಿಗಳ ಆರೈಕೆಯ ಕುರಿತು ವೈದ್ಯರು ಮತ್ತು ಸಿಬ್ಬಂದಿಯವರಿಂದ ಮಾಹಿತಿಯನ್ನು ಪಡೆದರು. ರೋಗಿಗಳಿಗೆ ಮತ್ತು ರೋಗಿಯ ಸಂಬಂದಿಕರಿಗೆ ನೀಡುತ್ತಿರುವ ಸೌಲಭ್ಯದ ಬಗ್ಗೆ ವಿಚಾರಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಚತೆ, ವಿದ್ಯುತ್ತ ವ್ಯವಸ್ಥೆ, ನೀರು ಮತ್ತು ಇನ್ನಿತರ ಸೌಲಭ್ಯವನ್ನು ಸಮರ್ಪಕಾಗಿ ನೀಡಲು ವೈದ್ಯರಿಗೆ ಸೂಚಿಸಿದರು.ಜೊತೆಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲು ತಿಳಿಸಿದರು. ಈ ಸಮಯದಲ್ಲಿ ಕಾರ್ಯನಿರತ ವೈದ್ಯಾಧಿಕಾರಿಯಾದ ಡಾ|| ತಿಮ್ಮಾಪುರ ಗಲಗಲಿ, ರಾತ್ರಿ ಪಾಳೆಯ ಸೂಪರ್ ವೈಸರಾದ ಶ್ರೀಮತಿ ರೇಖಾ ಇಂಗಳೇಶ್ವರ ಹಾಗೂ ಇತರರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ವಾಯುಪಡೆಯಲ್ಲಿ ಗ್ರೂಪ್- ಙ ಹಾಗೂ ಅಗ್ನಿಪಥ್ ಯೋಜನೆ ಅಡಿಯಲ್ಲಿ ಅಗ್ನಿವೀರ್ ವಾಯು ಸೇನೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.ಗ್ರೂಪ್- ಙ ವೈದ್ಯಕೀಯ ಸಹಾಯಕ ಹುದ್ದೆಗೆ ೨೦೦೪ ರ ಜುಲೈ ೩ ರಿಂದ ೨೦೦೮ ಜುಲೈ ೩ ರ ಅವಧಿಯಲ್ಲಿ ಜನಿಸಿದ ಪಿಯುಸಿ, ೨೦೦೧ರ ಜುಲೈ ೩ ರಿಂದ ೨೦೦೬ ಜುಲೈ ೩ ರ ಅವಧಿಯಲ್ಲಿ ಜನಿಸಿದ ಬಿಎಸ್ಸಿ/ಡಿಪ್ಲೋಮಾ ಫಾರ್ಮಾಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕೇರಳದ ಯರ್ನಾಕುಲಂ ಕೊಚ್ಚಿ ಪಿ.ಟಿ.ಉಷಾ ರಸ್ತೆಯಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜ.೨೯ ರಿಂದ ಫೆ.೦೬ ವರೆಗೆ ನಡೆಯುವ ರ‍್ಯಾಲಿಯಲ್ಲಿ ಭಾಗವಹಿಸಬಹುದು.ಪಿಯುಸಿ ಅಥವಾ ಡಿಪ್ಲೋಮಾ ದಲ್ಲಿ ಶೇ.೫೦ರಷ್ಟು ಅಂಕಗಳಿಸಿದ ಹಾಗೂ ಜನವರಿ ೧.೨೦೦೫ ರಿಂದ ಜುಲೈ ೧ ೨೦೦೮ರವರೆಗೆ ಜನಿಸಿದ ಅಭ್ಯರ್ಥಿಗಳು ಅಗ್ನಿವೀರ್ ವಾಯು ಸೇನೆಯ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತರು ಇದೆ ಜ. ೨೭ ರ ಒಳಗಾಗಿ ವೆಬ್‌ಸೈಟ್ https://agnipathvayu.cdac.inನಲ್ಲಿ ನೋಂದಾಯಿಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ https://agnipathvayu.cdac.in ºÁUÀÆ www.airmenselection.cdac.inಗೆ ಸಂಪರ್ಕಿಸಬಹುದು ಎಂದು ಜಿಲ್ಲಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವಿಜಯಪುರ ತಾಲೂಕಿನ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗಕ್ಕೆ ಸಂಬಂಧಿಸಿದ್ದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರೈತರು ಹಾಗೂ ಗ್ರಾಹಕರರೊಂದಿಗೆ ಜ.೧೮ರ ಬೆಳಿಗ್ಗೆ ೧೧ಗಂಟೆಗೆ ಸಂವಾದ ಸಭೆಯನ್ನು ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗ ಕಛೇರಿಯಲ್ಲಿ ನಡೆಸಲಾಗುವುದು.ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಂವಾದ ಸಭೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೆಸ್ಕಾಂ ಗ್ರಾಮೀನ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿರುವ ವಿವಿಧ ಇಲಾಖೆಗಳ ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಜ.೧೯ರಂದು ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತ ಪೂರ್ವಭಾವಿ ಸಭೆಯನ್ನು ಜ.೧೭ರ (ಇಂದು) ಬೆಳಿಗ್ಗೆ ೧೦.೩೦ಕ್ಕೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ, ಜಿಲ್ಲಾ ಖಜಾನೆಯ ಉಪ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಆಡಳಿತ), ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ, ತಹಶೀಲ್ದಾರ, ವಿಜಯಪುರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ, ವೀಕ್ಷಕರು, ಪ್ರಶ್ನೇ ಪತ್ರಿಕೆ ವಿತರಣಾ ತಂಡ, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕ, ಮಾರ್ಗಾಧಿಕಾರಿ, ಸ್ಥಾನಿಕ ಜಾಗೃತ ದಳದವರು ಹಾಗೂ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೋಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಧಾರವಾಡ: ಮಕ್ಕಳು ಶಿಕ್ಷಕರ ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ಸದಾ ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ನಿರಂತರ ಶ್ರಮವಹಿಸಬೇಕು. ಪ್ರತಿಭೆ ಪ್ರಯತ್ನಶೀಲರ ಸ್ವತ್ತು. ಇಂದಿನ ಮಕ್ಕಳೇ ಈ ದೇಶದ ಭರವಸೆಯ ಬೆಳಕುಗಳು. ಹಾಗಾಗಿ ಈ ನಾಡಿನ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಗುರುತರ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಅವರು ಮಕ್ಕಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಬಾಲವಿಕಾಸ ಅಕಾಡೆಮಿಯು ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಗಾಗಿ ದೇಶದ ಮೊದಲ ಪ್ರಧಾನಿ ಶ್ರೀ ಜವಾಹರಲಾಲ ನೆಹರುರವರ ಜೀವನ ಸಾಧನೆ ಕುರಿತಾದ ರಾಜ್ಯಮಟ್ಟದ ಪ್ರಬಂಧ/ಭಾಷಣ ಸ್ಪರ್ಧೆಯನ್ನು ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಏರ್ಪಡಿಸಿ, ಪ್ರತಿ ಜಿಲ್ಲೆಯಿಂದ ವಿಜೇತರಾಗಿದ್ದ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅಂತಿಮ ಸುತ್ತಿನ ರಾಜ್ಯಮಟ್ಟದ ಸ್ಪರ್ಧೆಯನ್ನು ಅಕಾಡೆಮಿಯ ಸಭಾವನದಲ್ಲಿ ಆಯೋಜಿಸಿ ಆಯ್ಕೆಗೊಂಡ ಮಕ್ಕಳಿಗೆ ನೀಡಲಾದ ಪ್ರಶಸ್ತಿಗಳನ್ನು ವಿತರಿಸಿ, ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸಮಾರಂಭದಲ್ಲಿ ಭಾಗವಹಿಸಿದ ಅಕಾಡೆಮಿ ಯೋಜನಾಧಿಕಾರಿಗಳಾದ ಭಾರತಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಜನೇವರಿ 20 ರಿಂದ ಜನೇವರಿ 25ರ ವರೆಗೆ ಆರು ದಿನಗಳ ಕಾಲ ಉಚಿತ ಅಪೌಷ್ಠಿಕತೆ / ಕಾರ್ಶ್ಯ (Underweight) ತಪಾಸಣೆ ಹಾಗೂ ಉಚಿತ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ.ಸಾಮಾನ್ಯ ಲಕ್ಷಣಗಳಾದ ಕಡಿಮೆ ದೇಹದ ತೂಕ, ತೆಳುವಾದ ತೋಳುಗಳು ಮತ್ತು ಕಾಲುಗಳು, ಆಯಾಸ, ಬೌಧಿಕ ಬೆಳವಣಿಗೆಯಲ್ಲಿ ಕುಂಠಿತ ಮುಂತಾದ ಅಪೌಷ್ಠಿಕತೆಯ ತೊಂದರೆಗಳಿಂದ ಬಳಲುವ ಮಕ್ಕಳಿಗೆ ಈ ಶಿಬಿರದಲ್ಲಿ ಉಚಿತ ಅರೋಗ್ಯ ತಪಾಸಣೆ, ಮಾಪನ (ತೂಕ.ಎತ್ತರ,BMI, SKIN, THICKNESS) ಮುಂತಾದ ತಪಾಸಣೆ ಮತ್ತು ಉಚಿತ ಔಷಧ ನೀಡಲಾಗುವುದು.ಈ ಶಿಬಿರ ನಿಗದಿತ ದಿನಗಳಂದು ಬೆಳಿಕ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಸಾರ್ವಜನಿಕರು ಈ ಉಚಿತ ತಪಾಸಣೆ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಎಂದು ಕಾಲೇಜಿನ ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮತ್ತು ಪೂರ್ವ ನೋಂದಣಿಗಾಗಿ ಡಾ. ದೌಲಬಿ ಎಂ. ಚೌಧರಿ, ಮೊಬೈಲ್ ಸಂಖ್ಯೆ- 8197378138 ಸಂಪರ್ಕಿಸಬಹುದು ಎಂದು…

Read More

23 ಮಹಿಳಾ ಸ್ವಸಹಾಯ ಸಂಘಗಳಿಗೆ ನೋಂದಣಿ ಪ್ರಮಾಣ ಪತ್ರ ವಿತರಿಸಿದ ಎಂಎಲ್ಸಿ ಸುನೀಲಗೌಡ ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳಾ ಸ್ವಸಹಾಯ ಸಂಘಗಳಿಗೆ ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಗುರುವಾರ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ 23 ನಾನಾ ಮಹಿಳಾ ಸ್ವಸಹಾಯ ಸಂಘಗಳಿಗೆ ನೋಂದಣಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.ಸಚಿವ ಎಂ. ಬಿ. ಪಾಟೀಲ ಅವರು ಮಹಿಳಾ ಕಲ್ಯಾಣ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳ ಉಚಿತ ನೋಂದಣಿಗೆ ನೆರವು ನೀಡಲಾಗಿದೆ. ಅಲ್ಲದೇ, ಬಬಲೇಶ್ವರ ಮತಕ್ಷೇತ್ರದ 210 ಮಹಿಳಾ ಸ್ವಸಹಾಯ ಸಂಘಗಗಳಿಗೆ ಹೈನುಗಾರಿಕೆ, ಕುರಿಸಾಕಣೆ ಸೇರಿದಂತೆ ಮಹಿಳೆಯರು ಗೃಹ ಉದ್ಯೋಗ ಕೈಗೊಳ್ಳಲು ಸರಕಾರದ ಯೋಜನೆಗಳನ್ನು ಒದಗಿಸಲು ಈಗಗಾಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ಸೂಚನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮಹಿಳೆಯ ಸಬಲೀಕರಣ ಮತ್ತು ಸ್ವಾವಂಲಬನೆಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಿಕೋಟಾ, ಬರಟಗಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶಿಲ್ಪಾ ಸವದತ್ತಿ ಅವರು ಸಲ್ಲಿಸಿದ್ದ “ಎ ಸೋಷಿಯಲ್ ವರ್ಕ್ ಸ್ಟಡಿ ಆನ್ ಅಡೋಲಸೆಟ್ ಗರ್ಲ್ಸ್ ಇನ್ ವಿಜಯಪುರ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಶಿಲ್ಪಾ ಸವದತ್ತಿ ಅವರು ಸಮಾಜಕಾರ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎ.ಖಾಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಶಿಲ್ಪಾ ಸವದತ್ತಿ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಅವರು ಅಭಿನಂದಿಸಿದ್ದಾರೆ.

Read More

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ನಡಹಳ್ಳಿ ವಿರುದ್ಧ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ವಾಗ್ದಾಳಿ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸೆಗಣಿ ತುಂಬಾ ಪವಿತ್ರ, ಅಮೃತ ಅಂತಾ ಹೇಳಿರುವ ಮಾಜಿ ಶಾಸಕ ನಡಹಳ್ಳಿ ಅವರು ಅದೇ ಅಮೃತವನ್ನು ಪ್ರತಿದಿನ ತಮ್ಮ ಮುಖಕ್ಕೆ ಬಳೆದುಕೊಂಡು ತಿರುಗಾಡಲಿ ಎಂದು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಮತ್ತು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹರಿಹಾಯ್ದರು.ಚಾಮರಾಜ ಪೇಟೆಯಲ್ಲಿ ನಡೆದ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣದಲ್ಲಿ ಯಾವುದೇ ಧ್ವನಿ ಎತ್ತಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಮಂಗಳವಾರ ತಮ್ಮ ನಿವಾಸದ ಕಂಪೌಂಡ್ ಗೆ ಸೆಗಣಿ ಬಳೆದ ಹಿನ್ನೆಲೆ ಅಂದೇ ಸಂಜೆ ಅದೇ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.ಯಾವುದನ್ನು ಹೇಗೆ ಬಳಕೆ ಮಾಡಿದರೆ ಅಮೃತವಾಗುತ್ತದೆ ಎಂದು ನನಗೂ ಗೊತ್ತಿದೆ. ನಾನೂ ಬೆಳಿಗ್ಗ ಎದ್ದು ಸ್ನಾನ ಮಾಡಿ, ವಿಭೂತಿ ಕುಂಕುಮ ಕಚ್ಚಿಕೊಂಡು ಎಲ್ಲ ಶರಣರನ್ನು, ಗೋ ಮಾತೆಯನ್ನು ನೆನೆದೇ ಹೊರಗಡೆ ಬರೋದು. ಎಲ್ಲೋ ನಡೆದ ಪ್ರಕರಣಕ್ಕೆ ಶಾಸಕರ ನಿವಾಸದ ಎದುರು ಗಲಾಟೆ ಮಾಡುವದೆಂದರೆ ಇದು…

Read More