ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ಪ್ರಕ್ರಿಯೆ ಜರುಗಿತು.
ಅಧ್ಯಕ್ಷರಾಗಿ ಹೆಚ್.ಜಿ.ಗುಂಡಳ್ಳಿ, ಉಪಾಧ್ಯಕ್ಷರಾಗಿ ಸಂಗಮೇಶ ಓಲೇಕಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಂಘವು ಒಟ್ಟು ಹತ್ತು ನಿರ್ದೇಶಕ ಮಂಡಳಿ ಹೊಂದಿದೆ. ಇಂದು ಜರುಗಿದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಹತ್ತು ನಿರ್ದೇಶಕರು ಭಾಗವಹಿಸಿದ್ದರು. ಹಿಂದುಳಿದ ಅ ವರ್ಗ,ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ಷೇತ್ರದ ಮೂರು ಸ್ಥಾನಗಳು ಖಾಲಿಯಿವೆ.
ಚುನಾವಣೆಯ ನಂತರ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಅರವಿಂದ ಡೋಣೂರ, ಸಿದ್ದಪ್ಪ ಹೊಕ್ರಾಣಿ,ರಾಯನಗೌಡ ಗೌಡರ, ಸೋಮಣ್ಣ ಹೆಗಡ್ಯಾಳ, ಸಂಗಪ್ಪ ವಾಡೇದ,ಜಗದೇವಿ ಗುಂಡಳ್ಳಿ,ಬೇಬಿರಾಜೇಶ್ವರಿ ಗೌಡರ,ಸಿದ್ರಾಮಪ್ಪ ಹೊರ್ತಿ, ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಶೇಬಗೊಂಡ, ಮುಖಂಡರಾದ ಎಲ್.ಬಿ.ಕಂದಗಲ್ಲ, ಪರಶುರಾಮ ಪೂಜಾರಿ, ಶಂಕ್ರಪ್ಪ ಪೂಜಾರಿ, ಬಾಲಚಂದ್ರ ಮಾಳಗೊಂಡ, ಮುತ್ತು ಗುಂಡಳ್ಳಿ, ಪರಸಪ್ಪ ಕಳ್ಳಿಗುಡ್ಡ ಇತರರು ಇದ್ದರು.

