Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರಕಾರ ಸಾರ್ವಜನಿಕರಿಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು ಸಹ ಈ ಲಾಯಿನ್ ಸಂಸ್ಥೆಯು ಆರೋಗ್ಯ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಜಾಗತಿಕ ಶಾಂತಿಗಾಗಿ ಪ್ರಯತ್ನಿಸುವ ಕಾರ್ಯ ಶ್ಲಾಘನೀಯ ಎಂದು ಲಾಯಿನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ೩೧೭ಬಿಯ ಜಿಲ್ಲಾ ಗವರ್ನರ್ ಲಾಯಿನ್ ಮನೋಜ ಮಾಣಿಕ ಹೇಳಿದರು.ಸಿಂದಗಿ ಪಟ್ಟಣದ ಆಲಮೇಲ ರಸ್ತೆಯಲ್ಲಿರುವ ಪಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಸಿಂದಗಿ ಲಾಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಪದಗ್ರಹಣ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ನೂತನ ಸದಸ್ಯರಿಗೆ ಲಾಯನ್ಸ್ ಕ್ಲಬ್‌ನ ಕಿಟ ವಿತರಿಸಿ ಮಾತನಾಡಿದ ಅವರು, ಲಾಯಿನ್ಸ್ ಸದಸ್ಯರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಭೂಕಂಪ, ನೆರೆಹಾವಳಿ ಮತ್ತು ಜನಸಾಮಾನ್ಯರ ಆರೋಗ್ಯ ಕಾಪಾಡುವಲ್ಲಿ ಅಂತರಾಷ್ಟ್ರೀಯ ಲಾಯಿನ್ಸ್ ಕ್ಲಬ್ ಕಳೆದ ೧೦೭ ವರ್ಷಗಳಿಂದ ನಿರಂತರವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ ಎಂದರು.ಈ ವೇಳೆ ಸಮಾರಂಭದ ಅಧ್ಯಕ್ಷತೆಯನ್ನು ಸಿಂದಗಿ ಲಾಯಿನ್ಸ್ ಸಂಸ್ಥೆಯ ಅಧ್ಯಕ್ಷ ಮಹಾದೇವ ಲೋಣಿ ವಹಿಸಿದ್ದರು.ಲಾಯನ್ ಕೆ.ಎಚ್.ಸೋಮಾಪೂರ ಖಜಾಂಚಿ ಬಿ.ಪಿ.ಕರ್ಜಗಿ, ಲಾಯಿನ್ ಸದಸ್ಯರಾದ ಎಸ್.ಬಿ.ಚಾಗಶೆಟ್ಟಿ ಆಯ್.ಬಿ.ಬಿರಾದಾರ, ಪಿ.ಎಂ.…

Read More

ತಂದೆಯ ಸ್ಮರಣಾರ್ಥವಾಗಿ ಶಾಲೆಗೆ ಭೂದಾನ ನೀಡಲು ಮುಂದಾದ ಮಗ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ತೋಟದ (ಹೆಬ್ಬಾಳ) ವಸ್ತಿಯ ಸುಮಾರು ೧೨೦ ಮಕ್ಕಳು ಸಮೀಪದಲ್ಲಿ ಶಾಲೆ ಇಲ್ಲದೇ ಪ್ರತಿನಿತ್ಯ ೬-೮ ಕಿ.ಮೀ ನಡೆದುಕೊಂಡು ಹೋಗಿ ಶಾಲೆ ಕಲಿಯಬೇಕಾದ ಅನಿವಾರ್ಯತೆ ಇದೆ, ಅನೇಕ ಮಕ್ಕಳು ಸೌಕರ್ಯಗಳಿಲ್ಲದೇ ಶಾಲೆಯಿಂದ ಹೋರಗುಳಿಯುವಂತಾಗಿದೆ ಕೂಡಲೇ ಇಲ್ಲಿಗೊಂದು ಸರ್ಕಾರಿ ಪ್ರಾಥಮಿಕ ಶಾಲೆ ತೆರೆಯುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರುಗ್ರಾಮಸ್ಥರಾದ ಗೇನೆಪ್ಪ ಬಿರಾದಾರ ಅವರು ಅವರ ತಂದೆಯ ಸ್ಮರಣಾರ್ಥವಾಗಿ ಅರ್ಧ ಎಕರೆ ಜಾಗೆಯನ್ನು ಕೊಡುವುದಾಗಿ ಕಳೆದ ೩-೪ ವರ್ಷಗಳಿಂದ ಸಂಭಂಧಿಸಿದ ಶಿಕ್ಷಣ ಇಲಾಖೆಗೆ ಹಲವಾರು ಭಾರಿ ಮನವಿ ಸಲ್ಲಿಸಿದ್ದಾಗ್ಯೂ ಕೂಡಾ ಇಲ್ಲಿಯವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ಇದರಿಂದ ದಯಾಳುಗಳಾದ ತಾವೂಗಳು ಕೂಡಲೇ ಈ ಊರಿನ ೧೨೦ ಮಕ್ಕಳ ಭವಿಷ್ಯ ನಿರ್ಮಿಸಲು ಅಲ್ಲಿಗೊಂದು ಶಾಲೆ ತೆರೆಯಲು ಹಾಗೂ ಮೂಲಭೂತ ಸೌಕರ್ಯ ವದಗಿಸಿ ಶಿಕ್ಷಕರನ್ನು ನೇಮಿಸಬೇಕೆಂಧು ಈ ಮೂಲಕ ತಮ್ಮಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಠ್ಯದ ಜೊತೆಗೆ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ವ್ಯಕ್ತಿಯ ಸಮಗ್ರ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ವತಿಯಿಂದ ಸೋಮವಾರ ಆಯೋಜಿಸಿದ್ದ ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರುವ ‘ಪುತ್ರಿಯರ ದಿನ-ಸ್ಪಂದನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ವಿಶ್ವವಿದ್ಯಾಲಯವು ಪಠ್ಯ ಚಟುವಟಿಕೆಗಳ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ವ್ಯಕ್ತಿತ್ವದ ಅಭಿವೃದ್ಧಿಗೆ ಸಹಾಯ ಮಾಡುತ್ತದೆೆ. ಮಹಿಳೆ ಮಾತ್ರ ಒಂದು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಆಕೆಯ ಶಕ್ತಿಯು ದೇಶದ ಪ್ರಗತಿಗೆ ದೊಡ್ಡ ಕೊಡುಗೆಯನ್ನು ನೀಡುತ್ತದೆ. ಜೀವನದಲ್ಲಿ ಸರ್ವಧರ್ಮ ಸಮನ್ವಯವನ್ನು ಅಳವಡಿಸಿಕೊಳ್ಳುವುದರಿಂದ ಸಮಾನತೆ ಮತ್ತು ಶಾಂತಿಯ ದಾರಿಯನ್ನು ಅನುಸರಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಎರಡು ವರ್ಷಗಳ ಕಾಲ ಕೇವಲ ತರಗತಿಯಲ್ಲಿ ಕಲಿಯುವುದಷ್ಟೇ ಸಾಕಾಗುವುದಿಲ್ಲ, ಈ ಅವಧಿಯಲ್ಲಿ ನೀವು ಕೆಲವು ಕೌಶಲ್ಯಗಳು ಮತ್ತು…

Read More

ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ “ವುಮೆನ್ ಮೀಡಿಯಾ ಕ್ಲಬ್” ಉದ್ಘಾಟಿಸಿದ ಸಂವಹನ ತಜ್ಞೆ ಗೀತಾ ನಾಗರಾಜು ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವುಮನ್ ಮೀಡಿಯಾ ಕ್ಲಬ್ ಕೇವಲ ವಿಭಾಗ ಮತ್ತು ವಿಶ್ವವಿದ್ಯಾನಿಲಯಕ್ಕೆ ಸೀಮಿತವಾಗಿರದೇ ಇದು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಕೆನಡಾದ ಟೊರೊಂಟೊನ ಸಂವಹನ ತಜ್ಞೆ ಗೀತಾ ನಾಗರಾಜು ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ “ವುಮೆನ್ ಮೀಡಿಯಾ ಕ್ಲಬ್” ಉದ್ಘಾಟಿಸಿ ಅವರು ಮಾತನಾಡಿದರು.ವುಮನ್ ಮೀಡಿಯಾ ಕ್ಲಬ್ ಮಹಿಳೆಯರಿಗೆ ತಮ್ಮ ಸಾಮರ್ಥ್ಯವನ್ನು ಅರಿತು, ಸಮಾಜದಲ್ಲಿ ಸ್ವತಂತ್ರವಾಗಿ ಮತ್ತು ಯಶಸ್ವಿಯಾಗಿ ಬದುಕಲು ಸಹಾಯ ಮಾಡಬೇಕು. ತರಬೇತಿಗಳು, ಕಾರ್ಯಾಗಾರಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಅವರು ಸ್ವಚ್ಛತೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ತಮ್ಮ ಕುಟುಂಬ ಹಾಗೂ ಸಮುದಾಯದಲ್ಲಿ ದಾರಿದೀಪವಾಗಿ ಕೆಲಸ ಮಾಡಲು ಪ್ರೇರಣೆ ನೀಡಬೇಕು ಎಂದರು.ಇದೇ ಸಂದರ್ಭದಲ್ಲಿ ಕೆನಡಾದ ಟೊರೊಂಟೊನ ಬಿ.ವಿ ನಾಗ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿ ಫೆಬ್ರುವರಿ ೨ನೇ ತಾರೀಖದಂದು ನಗರದ ಚೇತನಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುವ ಕಪ್ಪತ್ತಗಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯ ವಿಜಯಪುರ ಜಿಲ್ಲಾ ಘಟಕದ ೨ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಪ್ಪ ಸಾಹಿತ್ಯ ವೇದಿಕೆ ಉದ್ಘಾಟನೆಯಾಗುತ್ತಿದೆ.ಅಪ್ಪ ಕಾವ್ಯೋತ್ಸವ ಕರುನಾಡು ಕಿರೀಟ ಪ್ರಶಸ್ತಿ ಪ್ರದಾನ ಹಾಗೂ ಎದ್ಯಾಗಿನ ಬ್ಯಾನಿ ಕೃತಿ ಲೋಕಾರ್ಪಣೆ ಸಮಾರಂಭದ ಅಮಂತ್ರಣ ಪತ್ರಿಕೆಯನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಬಿಡುಗಡೆಗೊಳಿಸಿದರು.ಜಿಲ್ಲಾಧಿಕಾರಿಯ ಕಾರ್ಯಾಲಯದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಅವರು ವಿಜಯಪುರ ಜಿಲ್ಲೆ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ತವರೂರು ಮೇಲಿಂದ ಮೇಲೆ ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮಗಳು ನಡೆಯಬೇಕೆಂದು ಹೇಳಿದರು.ಸಾಹಿತಿ ಪ್ರೊ. ಎ.ಎಚ್. ಕೊಳಮಲಿ, ಅಪ್ಪ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀಮತಿ ಸುಜ್ಞಾನಿ ಪಾಟೀಲ, ಕಾರ್ಯದರ್ಶಿ ನಿಂಗನಗೌಡ ಪಾಟೀಲ, ಹೇಮಾ ಪಾಟೀಲ, ಈರಮ್ಮ ಬೋನೂರಮಠ ಹಾಗೂ ಕಪ್ಪತ್ತಗಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವಾದಿ ಶರಣರು ತಮ್ಮ ಆಧ್ಯಾತ್ಮಿಕ ಲೋಕದಿಂದ ಹುಡುಕಿ ತೆಗೆದ ತತ್ವಗಳೇ ವಚನಗಳು. ಸತ್ಯ, ಶುದ್ಧ, ಕಾಯಕದಿಂದ ನೆಮ್ಮದಿ, ಸಂತೃಪ್ತಿ ನೀಡುವುದು ದಾಸೋಹ, ಸಮಾನತೆ, ಪರಿಶುದ್ಧತೆ ಎಲ್ಲವೂ ಇದೆ. ಅದರಲ್ಲಿ ಕಾಯಕ, ದಾಸೋಹ ಮಾದರಿಯಾಗಬೇಕೆಂದು ಸಾಹಿತಿ ಡಾ. ರೇಖಾ ಬ. ಪಾಟೀಲ ಹೇಳಿದರು.ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದವರು ಏರ್ಪಡಿಸಿದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶ್ರೀ ಸಿದ್ಧರಾಮೇಶ್ವರರ ಅನುಭಾವ ಕುರಿತು ಮಾತನಾಡುತ್ತ ಅನುಭಾವಿಗಳೆಂದರೆ ಕನಸು ಕಾಣುವ ಶಿಶುವಿನಂತೆ ಸತ್ಯ, ನೀತಿ, ಯೋಗವನ್ನು ಸಾಧಿಸುವುದು. ಅನುಭಾವ ಸಮುದ್ರದಂತೆ ಜನಹಿತಕ್ಕಾಗಿ ಸುಗ್ಗವ್ಯಯ ೫ ತಿಂಗಳ ಮಡಿಲಲ್ಲಿ ಜನಿಸಿದ ಸಿದ್ಧರಾಮೇಶ್ವರರು ಬಾಲ್ಯದಿಂದಲೂ ಶಿವಭಕ್ತನಾಗಿ ಪರಿಶುದ್ಧ ಮನಸ್ಸಿನಿಂದ ಶಿವನ ಆರಾಧನೆ ಮಾಡುತ್ತ ಧ್ಯಾನದಲ್ಲಿ ಲೀನನಾಗಿ ಶಿವನನ್ನು ಒಲಿಸಿಕೊಂಡವರು. ಜನಹಿತಕ್ಕಾಗಿ ಆತ್ಮಕಲ್ಯಾಣ, ಲೋಕಕಲ್ಯಾಣ ಮಾಡುತ್ತ ತಮ್ಮ ಪವಾಡಗಳಿಂದ ಜಗತ್ತನ್ನೇ ಗೆದ್ದವರು. ಸಮತಾವಾದ, ಹೃದಯವಂತಿಕೆ ಅವರಲ್ಲಿ ಇತ್ತು. ಶಿವನಸಂಕಲ್ಪವಿತ್ತು ಜನಕಲ್ಯಾಣಕ್ಕಾಗಿ ಶಿವಯೋಗಿ ಸಿದ್ಧರಾಮೇಶ್ವರರಾಗಿ ನಿಸ್ವಾರ್ಥ ಬದುಕನ್ನು ಬಾಳಿ ತತ್ವ ಆದರ್ಶಗಳಿಂದ ನುಡಿದಂತೆ ನಡೆದವರು.…

Read More

ಜಯ್ ನುಡಿ(ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ) ಲೇಖನ-ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮನಸ್ಸಿನಷ್ಟು ಕುತೂಹಲ ಹುಟ್ಟಿಸುವ ಅತ್ಯದ್ಭುತ ವಸ್ತು ಮತ್ತೊಂದಿಲ್ಲ ಅನಿಸುತ್ತದೆ. ಅದರ ತಾಕತ್ತು ಅಗಾಧ. ಅದನ್ನು ಒಂದೆಡೆ ಕಟ್ಟಿಹಾಕಿದರೆ ಅಸಾಧ್ಯವೆನಿಸುವ ಕೆಲಸಗಳನ್ನು ಸಹ ಲೀಲಾಜಾಲವಾಗಿ ಮಾಡಿ ಮುಗಿಸುತ್ತದೆ. ಹಾಗೇ ಬಿಟ್ಟು ಬಿಟ್ಟರೆ ಸಣ್ಣವೆನಿಸುವ ಕಾರ್ಯಗಳು ಸಹ ಗುಡ್ಡದಂತೆ ಗೋಚರಿಸುತ್ತವೆ. ಮನಸ್ಸು ಇರುವುದೇ ಚಂಚಲ ಅಷ್ಟೇ ಅಲ್ಲ ಮಂಗನಂತೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಾರುತ್ತಲೇ ಇರುತ್ತದೆ. ಅದು ಒಂದು ಕಡೆ ಜಾಸ್ತಿ ಹೊತ್ತು ನಿಲ್ಲುವುದೇ ಇಲ್ಲ. ಚಂಚಲತೆ ಎಲ್ಲರಲ್ಲೂ ಸಹಜವಾಗಿ ಇರುವ ಸ್ಥಿತಿ. ಅದು ಒಂದು ತರಹ ಪುಟ್ಟ ಮಗುವಿನಂತೆ ಒಂದಾದ ಮೇಲೆ ಒಂದು ವಿಷಯದ ಬಗ್ಗೆ ಹಟ ಹಿಡಿಯುತ್ತದೆ. ಅದನ್ನು ಹಿಡಿದು ಒಂದೇ ವಿಷಯದ ಮೇಲೆ ನಿಲ್ಲಿಸುವುದು ಸಾಹಸದ ಕೆಲಸವೇ ಸರಿ. ಸಾಹಸದ ಕಾರ್ಯ ಅಂತ ಬಿಟ್ಟರೆ ಯಾವುದನ್ನೂ ಮಾಡಲು ಆಗುವುದಿಲ್ಲ. ಮನಸ್ಸನ್ನು ಹೇಗೆ ಕಟ್ಟಿ ಹಾಕುವುದು ಅಂತ ಒಂದು ಸಲ ತಿಳಿದರೆ ಸಾಕು ಅಂದುಕೊಂಡ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಿಜಯಪುರದ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥ ಸ್ಥಾನದಲ್ಲಿರುವ ಖೇಮು ರಾಠೋಡ ಹಾಗೂ ಸಹಚರರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು, ನೊಂದ ಕುಟುಂಬಕ್ಕೆ ಸರ್ಕಾರದಿಂದ ೨೦ ಲಕ್ಷ ರೂ ಪರಿಹಾರ ಧನ ನೀಡಬೇಕು, ನೊಂದ ಕುಟುಂಬದವರನ್ನು ಸರ್ಕಾರಿ ಸೇವೆಗೆ ತೆಗೆದುಕೊಳ್ಳಬೇಕು, ಇಟ್ಟಂಗಿ ಭಟ್ಟಿಯ ಮಾಲೀಕನ ಪರವಾನಗಿಯನ್ನು ರದ್ದು ಪಡಿಸಬೇಕು ಮತ್ತು ನೊಂದ ಕುಟುಂಸ್ಥರ ಮನೆಗೆ ಪೊಲೀಸ್ ಇಲಾಖೆ ಪ್ರತಿ ತಿಂಗಳು ಭೇಟಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಮಾದಿಗ ಜನ ಸಂಘ ಹೋರಾಟ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ವತಿಯಿಂದ ಮುಖ್ಯ ಮಂತ್ರಿಗೆ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದರು.ಈ ವೇಳೆ ಮುಖಂಡ ಬಸವರಾಜ ಸಿದ್ದಾಪೂರ ಮಾತನಾಡಿ, ಕಾರ್ಮಿಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಇಡೀ ದೇಶವೇ ತಲೆ ತಗ್ಗಿಸುವಂಥದ್ದು. ಬಂಧಿತ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಲ್ಲಿ ಕಾರ್ಮಿಕರ ಮೇಲೆ ಮತ್ತೆ ಹಲ್ಲೆ ಮಾಡುವ ಸಂಭವಗಳು ಇವೆ. ಹಾಗಾಗಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾತಿಹಾಳ ಗ್ರಾಮದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಾಹೇಬಗೌಡ ಮದ್ದರಕಿ ಉಪಾಧ್ಯಕ್ಷರಾಗಿ ಈರಪ್ಪ ಪಡಗಾನೂರ ಅವಿರೋಧವಾಗಿ ಆಯ್ಕೆಯಾದರು.ತಾಲ್ಲೂಕಿನ ಸಾತಿಹಾಳ ವಿ.ಪ್ರಾ.ಗ್ರಾ.ಕೃ.ಸ.ಸಂಘದ ಆವರಣದಲ್ಲಿ ಸೋಮವಾರ ಜರುಗಿದ ಸಾತಿಹಾಳ, ಮಾರ್ಕಬ್ಬಿನಳ್ಳಿ ಹಾಗೂ ಬೊಮ್ಮನಳ್ಳಿ ಗ್ರಾಮಗಳ ವ್ಯಾಪ್ತಿಯ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ನಿರ್ದೇಶಕರಾದ ಅಶ್ವಿನಿ ವಾಲೀಕಾರ, ರೇಖಾ ಬಾವೂರ, ಶಿವಪ್ಪ ಮದಭಾವಿ, ಮಕ್ತುಮಸಾಬ ಕೂಡಗಿ, ಗುರುಪಾದ ಗಣಿಯಾರ, ವಿರುಪಾಕ್ಷಿ ವಾಲಿ, ಸದಾಶಿವ ಸಜ್ಜನ, ಸೋಮಶೇಖರ ಬಡಿಗೇರ, ದೇವೆಂದ್ರ ಹಾದಿಮನಿ, ರಾಮು ಪವಾರ ಅವರನ್ನು ಸನ್ಮಾನಿಸಲಾಯಿತು.ಚುನಾವಣಾಧಿಕಾರಿ ಎಸ್.ಎಸ್. ಇನಾಮದಾರ, ಕಾರ್ಯನಿರ್ವಹಣಾಧಿಕಾರಿ ಎನ್.ಬಿ.ಬಜಂತ್ರಿ, ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಕೋನಪ್ಪಗೌಡ ಪಾಟೀಲ, ಎಂ.ಆರ್.ಪಾಟೀಲ, ರಾಮಚಂದ್ರ ವಾಲೀಕಾರ ಮಹಿಬೂಬಸಾಬ್ ಬೀಳಗಿ, ಚಿದಾನಂದ ಡೋಣೂರ, ಸಂತೋಷ ಪಾಟೀಲ, ನಜೀರಸಾಬ್ ನಾಯ್ಕೋಡಿ, ಬಾಲಪ್ಪ ಹಾದಿಮನಿ ಸುನೀಲ ಮಾಗಿ, ಈರಣ್ಣ ಅವಟಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಿಜಯಪುರ ವತಿಯಿಂದ ಜನೆವರಿ ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ರಸ್ತೆ ಸುರಕ್ಷತಾ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .ಅಟೋಚಲಕರ ಸಂಘ, ಮ್ಯಾಕ್ಷಿಕ್ಯಾಬ, ಟ್ಯಾಕ್ಸಿ, ಲಾರಿ ಮಾಲಿಕರ ಸಂಘಗಳ ಪದಾಧಿಕಾರಿಗಳು ಇನ್ನೀತರ ಎಲ್ಲಾ ವಾಹನಗಳ ಸವಾರರು ಮತ್ತು ರೋಟರಿ ಕ್ಲಬ್‌, ರೆಡ್ ಕ್ರಾಸ ಸಂಸ್ಥೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರಿಗಾಗಿ ಭಾಗವಹಸಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More