Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಹವ್ಯಾಸವನ್ನು ರೂಪಿಸಿಕೊಂಡು ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ ಹೇಳಿದರು.ಸಿಂದಗಿ ಪಟ್ಟಣದ ಹೊರವಲಯದಲ್ಲಿರುವ ಶ್ರೀಸಮರ್ಥ ವಿದ್ಯಾವಿಕಾಸ ವಿವಿದೋದ್ದೇಶ ಸಂಸ್ಥೆಯ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭಕೋರುವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಪರೀಕ್ಷೆ ಎಂಬ ಭಯ ಬೇಡ. ಒಳ್ಳೆಯ ರೀತಿಯಿಂದ ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತರುವಂತವರಾಗಿ. ತಂದೆ ತಾಯಿಗಳ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಭ್ಯಾಸ ಮಾಡಬೇಕು. ನಿಮ್ಮ ಬದುಕಿನಲ್ಲಿ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು, ಸಮಯ ಓಡುತ್ತಿರುವ ಕಾಲಘಟ್ಟದಲ್ಲಿ ಸಮಯ ಪ್ರಜ್ಞೆ, ನಿರಂತರ ಕಲಿಕೆ, ಪಠ್ಯಯೋಜನೆ ಹಾಗೂ ಪ್ರಾಮಾಣಿಕತೆ ಅವಶ್ಯಕವಾಗಿದೆ. ನಿಮ್ಮ ಸಣ್ಣಪುಟ್ಟ ತಪ್ಪುಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಸಲಹೆ ನೀಡಿದರು.ಈ ವೇಳೆ ಸಿಂದಗಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಸಿದ್ದಾರಮ ದೇವೇಂದ್ರ ತಳವಾರ ಅವರನ್ನು ಜಿಲ್ಲಾಧ್ಯಕ್ಷ ಎಸ್ ಬಿ ಕೆಂಬೋಗಿ (ಕೊಡಿಹಳ್ಳಿ ಚಂದ್ರಶೇಖರ್ ಬಣ) ಆಯ್ಕೆ ಮಾಡಿ ಆದೇಶ ಪತ್ರ ನೀಡಿದ್ದಾರೆ.ಈ ಹಿಂದೆ ಇಂಡಿ ತಾಲೂಕಿನ ಅಧ್ಯಕ್ಷರಾಗಿರುವ ನ್ಯಾಯವಾದಿ ತಮ್ಮಾರಾಯ ಆಸಂಗಿ ಅವರನ್ನು ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವ ಹಿನ್ನೆಲೆ ತೆರವಾದ ಸ್ಥಾನಕ್ಕೆ ತಾಲೂಕಿನ ನಾದ ಕೆಡಿ ಗ್ರಾಮದಸಿದ್ದರಾಮ ತಳವಾರ ಅವರನ್ನು ತಾಲ್ಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಎಸ್ ಬಿ ಕೆಂಬೋಗಿ ಮಾತನಾಡಿದ ಅವರು, ರೈತರ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಅವರ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲಬೇಕು.ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಸೈದಾಂತಿಕ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಂವಿಧಾನದ ಬದ್ದ ನೀತಿ ನಿಯಮಗಳನ್ನು ತೋರದೆ ಶಿಸ್ತಿನಿಂದ ಮತ್ತು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಹೇಳಿದರು.ಸಭೆಯಲ್ಲಿ ತಮ್ಮಾರಾಯ ರಾ ಆಸಂಗಿ, ಮಳಸಿದ್ದಯ್ಯ ಹಿರೇಮಠ, ರಫಿಕ ಚೌದರಿ,…
ಶ್ರೀ ಜಗದ್ಗುರು ರೇಣುಕಾಚಾರ್ಯರ, ಶ್ರೀ ಯೋಗಿನಾರಾಯಣ ಯತೀಂದ್ರರ ಹಾಗೂ ಶ್ರೀ ಅಗ್ನಿಬನ್ನಿ ರಾಯಸ್ವಾಮಿ ಜಯಂತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾರ್ಚ್ ೧೨ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಅವರ, ಮಾರ್ಚ್೧೪ರಂದು ಶ್ರೀ ಯೋಗಿನಾರಾಯಣ ಯತೀಂದ್ರರ ಹಾಗೂ ಮಾರ್ಚ್ ೨೮ರಂದು ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮಗಳನ್ನು ಅತ್ಯಂತ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ನಿರ್ಧರಿಸಲಾಯಿತು.ಗುರುವಾರ ಅಪರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅವರು, ಶ್ರೀ ಜಗದ್ಗುರು ರೇಣುಕಾಚಾರ್ಯ ಅವರ ಜಯಂತಿ ಅಂಗವಾಗಿ ಮಾ.೧೨ರಂದು ಬೆಳಿಗ್ಗೆ ೯.೩೦ಕ್ಕೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ವಿವಿಧ ಕಲಾ ತಂಡಗಳೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮೆರವಣಿಗೆಯು ಶ್ರೀ ಕಂದಗಲ್ ಹಣುಮಂತರಾಯ ರಂಗಮಂದಿರದವರೆಗೆ ನಡೆಯಲಿದೆ.ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು. ಮಾ.೧೪ರಂದು ಶ್ರೀ ಯೋಗಿನಾರಾಯಣ ಯತೀಂದ್ರರ ಹಾಗೂ ಮಾ.೨೮ರಂದು ಶ್ರೀ ಅಗ್ನಿಬನ್ನಿ ರಾಯಸ್ವಾಮಿ ಜಯಂತಿ ಕಾರ್ಯಕ್ರಮವನ್ನು…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪುರುಷರಷ್ಟೆ ಸಮಾನತೆಯ ಹಕ್ಕು ಮಹಿಳೆಯರಿಗೂ ಸ್ವಾತಂತ್ರ್ಯವಿದೆ ಎಂದು ಮಹಿಳೆಯರು ದುರಪಯೋಗ ಪಡೆಸಿಕೊಳ್ಳಬಾರದು. ಪುರುಷರ ಸಹಕಾರದಿಂದ ಮಾತ್ರ ಮಹಿಳೆಯರ ಅಭಿವೃದ್ದಿ ಸಾದ್ಯ ಎಂದು ಸಿಂದಗಿ ಶಾಸಕರ ಪತ್ನಿ ನಾಗರತ್ನ ಅಶೋಕ ಮನಗೂಳಿ ಹೇಳಿದರು.ಗುರುವಾರ ಪಟ್ಟಣದ ನಿರ್ಮಲಾಲಯ ಸಂಸ್ಥೆ ಹಾಗೂ ಬಾಧವ್ಯ ಮಹಿಳಾ ಸ್ವಸಾಹಯ ಸಂಘಗಳ ಒಕ್ಕೊಟದ ಸಹಯೋದಲ್ಲಿ ಅಂರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯಾವ ಮಹಿಳೆ ಮೊದಲು ತನ್ನ ಕುಟುಂಬವನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುತ್ತಾಳೆ ಅವಳು ಸಮಾಜವನ್ನು ಬದಲಾವಣೆ ಮಾಡಲು ಸಾದ್ಯ. ಸಮಾಜದಲ್ಲಿ ನಡೆಯುತ್ತಿರುವ ತಪ್ಪುಗಳು ತಡೆಗಟ್ಟಲು ಮುಂದಾಗಬೇಕು ಅಂದಾಗ ಮಾತ್ರ ತಪ್ಪುಗಳು ನಡೆಯುವದಿಲ್ಲ. ಮೊದಲು ನಾವು ಬದಲಾದರೆ ಸಮಾಜ ಬದಲಾವಣೆಯಾಗಲು ಸಾದ್ಯ. ನಮ್ಮ ಜೊತೆಯಲ್ಲಿ ಇರುವವರ ಕಷ್ಟಗಳಿಗೆ ಸಹಕಾರ ನೀಡುವ ಮನೋಬಾವ ಬೆಳಿಸಿಕೊಳ್ಳಬೇಕು ಅಂದಾಗ ಎಲ್ಲರು ಸಮಾನರಾಗಿ ಮುಂದೆ ಬರಲು ಸಾದ್ಯವಾಗುತ್ತದೆ ಎಂದು ಹೇಳಿದರು.ಮಂಡ್ಯದ ಮಲ್ಲಿಗೆ ಸಿರಿಮನೆ ಮಾತನಾಡಿ, ಯಾವುದೆ ಪಕ್ಷದ ಸರ್ಕಾರವಿರಲಿ ಮಹಿಳೆಯರಿಗೆ ಸ್ವಾಲಂಬಿಗಳಾಗಲು ಸಾಲದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಸ್ತೆ ದಾಟುವಾಗ ಹಾಗೂ ವಾಹನ ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಅವರು ಹೇಳಿದರು.ಅವರು, ಮಾ.೬ ರಂದು ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಸಡಕ ಸುರಕ್ಷಾ ಜೀವನ ರಕ್ಷಾ ಎಂಬ ಘೋಷ ವಾಕ್ಯದಡಿ ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾಲ್ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಸಾರಿಗೆ ಹಾಗೂ ಪೊಲೀಸ್ ಇಲಾಖೆ ಈಗಾಗಲೇ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಪೋನ್ ಬಳಕೆ ಮಾಡಬಾರದು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ತಿಳಿ ಹೇಳಬೇಕು. ವಾಹನವನ್ನು ನಿಗದಿತ ವೇಗದಲ್ಲಿ ಚಲಾಯಿಸಬೇಕು ಎಂದು ಅವರು ಹೇಳಿದರು.ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾವು…
೩ನೇ ಬೃಹತ್ ರೈತ ಜಾಗೃತಿ ಸಮಾವೇಶದ ಸಿದ್ಧತೆಗೆ ಚಾಲನೆ ನೀಡಿದ ಮುಗಳಖೋಡ/ಜಿಡಗಾ ಮುರುಘರಾಜೇಂದ್ರ ಶ್ರೀ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಪ್ರಿಲ್ ೨೬,೨೭,೨೮ ರಂದು ವಿಜಯಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಯೋಜಿಸಿರುವ ೩ನೇ ಬೃಹತ್ ರೈತ ಜಾಗೃತಿ ಸಮಾವೇಶದ ಲೋಗೊ (ಲಾಂಚನ) ಬಿಡುಗಡೆಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಮುಗಳಖೋಡ/ಜಿಡಗಾದ ಡಾ.ಮುರುಘರಾಜೇಂದ್ರ ಸ್ವಾಮೀಜಿ ಶುಭಹಾರೈಸಿದರು.ಇಡೀ ಜಗತ್ತಿಗೆ ಯಾವುದೇ ಫಲಾಫೇಕ್ಷೇ ಇಲ್ಲದೇ ಅನ್ನ ನೀಡುವ ಏಕೈಕ ಜೀವಿ ನಮ್ಮ ಹೆಮ್ಮೆಯ ರೈತರು, ಅವರೇ ಅನ್ನದಾತರು, ಸಮಸ್ತ ರೈತರು ಒಗ್ಗಟ್ಟಾಗಿ ಕೃಷಿಯಲ್ಲಿ ಆಗುತ್ತಿರುವ ಅನೇಕ ಅವಿಷ್ಕಾರಗಳ ಬಗ್ಗೆ, ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿತು ಕೃಷಿಯ ಜೊತೆಗೆ ಹತ್ತು ಹಲವಾರು ಉಪಕಸುಬುಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ ತಮ್ಮ ಕುಟುಂಬದವರೊಡನೆ ಯಾವುದೇ ಸಾಲವಿಲ್ಲದೇ ಸಂತಸದಿಂದ ಇದ್ದರೆ ಮಾತ್ರ ನಾವೂ ರೈತರಿಗೆ ಕೊಡುವ ಗೌರವ ನಿಜವಾದ ಗೌರವ, ಆವಾಗ ರೈತ ದೇಶದ ಬೆನ್ನೆಲುಬು ಎಂಬುದು ಸರ್ವಶ್ರೇಷ್ಠವಾಗುತ್ತದೆ ಎಂದರು.ಈ ವೇಳೆ ರೈತ ಸಂಘದ ರಾಜ್ಯ…
ತಿಡಗುಂದಿಯ ಫಲವತ್ತಾದ ಭೂಮಿಯಲ್ಲಿ ಕೈಗಾರಿಕಾ ಕಾರ್ಖಾನೆ ಸ್ಥಾಪನೆಗೆ ರೈತರ ವಿರೋಧ | ಸದನದಲ್ಲಿ ರೈತಪರ ಧ್ವನಿ ಎತ್ತಲು ಶಾಸಕರಿಗೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ನಾಗಠಾಣ ಹೊಬಳಿಯ ತಿಡಗುಂದಿ ಸಮೀಪದ ರೈತರ ಕಪ್ಪು ಮಣ್ಣಿನ ಫಲವತ್ತಾದ ೧೨೦೩ ಎಕರೆ ಭೂಮಿಯಲ್ಲಿ ಕೈಗಾರಿಕೆಗಾಗಿ ಬಳಸಿಕೊಳ್ಳಲು ಹೊಂಚು ಹಾಕುತ್ತಿರುವುದನ್ನ ವಿರೋಧಿಸಿ ರೈತರು ರಾಜ್ಯಪಾಲರ ಆಪ್ತ ಕಾರ್ಯದರ್ಶಿಯವರಿಗೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮೂಲ ಸಚೇತಕ ಎನ್. ರವಿಕುಮಾರ, ನಗರ ಶಾಸಕ ಬಸನಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಠಕದೊಂಡ ಅವರಿಗೆ ಮನವಿ ಸಲ್ಲಿಸಿ ಒಟ್ಟಾರೆಯಾಗಿ ರೈತರ ಜೀವ ಹೋದರು ಪರವಾಗಿಲ್ಲ ಕೃಷಿ ಭೂಮಿಯನ್ನು ಕೈಬೀಡುವುದಿಲ್ಲ ಎಂದು ಆಗ್ರಹಿಸಿ ಸದನದಲ್ಲಿ ರೈತಪರ ಧ್ವನಿ ಎತ್ತಿ ಆ ಯೋಜನೆಯನ್ನು ಕೈಬೀಡುವಂತೆ ಅಥವಾ ಬೇರೆಡೆಗೆ ಸ್ಥಳಾಂತರಿಸುವಂತೆ ಸದನದಲ್ಲಿ ಮಾತನಾಡಲು ಮನವಿ ಸಲ್ಲಿಸಲಾಯಿತು.ಈ ವೇಳೆ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಎಕರೆ ಕೃಷಿಗೆ ಯೋಗ್ಯವಲ್ಲದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಕಾಂಗ್ರೇಸ ಸರಕಾರ ನೀಡಿದ್ದ ಗ್ಯಾರಂಟಿ ಯೋಜನೆಗಳ ವಿಳಂಬ ನೀತಿ ಹಾಗೂ ಬಸ್ಸದರ ವಿವಿದ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವಿಜಯಪುರ ಜಿಲ್ಲಾ ಜನತಾದಳ (ಜಾತ್ಯಾತೀತ) ವಿಜಯಪುರ ವತಿಯಿಂದ ರಾಜ್ಯದ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಪ್ರತಿಭಟನೆ ಮಾಡುವುದರ ಮೂಲಕ ಮನವಿ ಸಲ್ಲಿಸಲಾಯಿತು.ರಾಜ್ಯ ಕಾಂಗ್ರೇಸ ಸರಕಾರ ವಿಧಾನ ಸಭೆಯ ಚುನಾವಣೆ ಪೂರ್ವದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳಿಗೆ ನೀಡುತ್ತಿದ್ದ ಗೃಹ ಲಕ್ಷ್ಮಿ ಹಣವಾದ ೨೦೦೦ ಪ್ರತಿ ತಿಂಗಳು ಸರ್ಮಕವಾಗಿ ನೀಡದೆ ಲೋಕಸಭೆ ಹಾಗೂ ಉಪ ಚುನಾವಣೆ ಸಂದರ್ಭದಲ್ಲಿ ಹಣಹಾಕಿ ರಾಜಕೀಯಕ್ಕೆ ಸೀಮಿತ ಮಾಡುತ್ತಿದ್ದು, ಸರಕಾರ ಹೇಳಿದಂತೆ ತಿಂಗಳ ಹಣವನ್ನು ಯಾವ ದಿನಾಂಕದಂದು ನೀಡುತ್ತಾರೆ ಎಂದು ಘೋಷಿಸಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಯುವ ನಿಧಿ ಹಣವನ್ನು ನೀಡುತ್ತಿಲ್ಲ. ಸದ್ಯ ಏಕಾಯಕಿ ಬಸ್ಸುದರ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಸಿ ರಾಜ್ಯದ ಜನತೆ ಹೊರೆ ಹಾಕುವದರ ಮೂಲಕ ದ್ರೋಹ ಮಾಡುತ್ತಿದೆ. ರಾಜ್ಯ ಸರಕಾರದ ಈ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗ್ರಾಮ ಪಂಚಾಯಿತಿ ಅಧಿಕಾರಿ ೧೫ನೇ ಹಣಕಾಸು ಯೋಜನೆಯ ಹಾಗೂ ವರ್ಗ ೧ ರಲ್ಲಿ ವಸೂಲಿ ಮಾಡಲಾದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಆರೋಪಿಸಿದ್ದಾರೆ.ತಾಲ್ಲೂಕಿನ ಹರನಾಳ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸೇರಿ ಅಧ್ಯಕ್ಷ ಶಿವಾನಂದ ಯಾತಗೇರಿ ಈ ಆರೋಪ ಮಾಡಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸಮ್ಮ ದೊಡಮನಿ ಇವರು ಅಧಿಕಾರ ದುರುಪಯೋಗ ಮಾಡಿಕೊಂಡು ಅಂದಾಜು ೧೯ ಲಕ್ಷ ೨೨ ಸಾವಿರ ಎಂಟನೂರ ರೂ.ಗಳನ್ನು ದಿ:೧೮ ಫೆಬ್ರುವರಿ ಹಾಗೂ ದಿ:೧ ಮಾರ್ಚ ಒಳಗಾಗಿ ತೆಗೆದಿರುತ್ತಾರೆ.ಗ್ರಾಮ ಪಂಚಾಯಿತಿಯಲ್ಲಿ ದಿ:೩ ಜನೇವರಿಯಂದು ಅಧ್ಯಕ್ಷರ ಅವಿಶ್ವಾಸ ಗೊತ್ತುವಳಿ ಮಂಡನೆ ಆಗಿರುತ್ತದೆ. ನಂತರ ದಿ: ೨೭ ಫೆಬ್ರುವರಿಯಂದು ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ಈ ಎರಡರ ನಡುವಿನ ಅವಧಿಯಲ್ಲಿ ಈ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣರಾದ ಪಿಡಿಓ ಹಾಗೂ ತಾಲ್ಲೂಕು ಪಂಚಾಯಿತಿ ೧೫ನೇ ಹಣಕಾಸು ಯೋಜನೆಯ ಅಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಇಂಗಳಗಿ ಮತ್ತು ಆಳೂರ ಗ್ರಾಮದ ರೈತರು ಕೃಷಿಗೆ ಬೆಳಗ್ಗೆ ಹಗಲು ಹೊತ್ತಿನಲ್ಲಿ ಏಳು ಗಂಟೆ ಮತ್ತು ರಾತ್ರಿ ವಿಧ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗಲು ಸಿಂಗಲೆ ಫೆಜ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಎ,ಎ.ಪವಾರ, ಎ.ಐ.ಜಾಧವ ಮಾತನಾಡಿ ಹಗಲು ಮತ್ತು ರಾತ್ರಿ ಸೇರಿ ೭ ಗಂಟೆ ವಿದ್ಯುತ್ ಕೊಡುವದರಿಂದ ರೈತರಿಗೆ ತೊಂದರೆ ಯಾಗುತ್ತದೆ. ಅದಲ್ಲದೆ ತಾಲೂಕಿನ ಅನೇಕ ಕಡೆ ಹಗಲು ಏಳು ಗಂಟೆ ವಿದ್ಯುತ್ ನೀಡುತ್ತಾರೆ ಮತ್ತು ಪರೀಕ್ಷೆಗಳು ನಡೆದಿದ್ದು ವಿದ್ಯಾರ್ಥಿಗಳಿಗೆ ಸಿಂಗಲ್ ಫೇಜ್ ವಿದ್ಯುತ ನೀಡಬೇಕೆಂದು ಆಗ್ರಹಿಸಿದರು.ಹೆಸ್ಕಾ ಎಇಇ ಎಸ್.ಆರ್. ಮೆಂಡೆಗಾರ ಮಾತನಾಡಿ ಮುಂದಿನ ದಿನಗಳಲ್ಲಿ ಹಗಲು ಹೊತ್ತು ವಿದ್ಯುತ್ ೭ ಗಂಟೆ ನೀಡಲಾಗುತ್ತಿದೆ. ಅದಲ್ಲದೆ ವಿದ್ಯಾರ್ಥಿಗಳಿಗೆ ಈಗಾಗಲೇ ಟೂ ಫೆಜ್ ವಿದ್ಯುತ್ ನೀಡಲಾಗುತ್ತಿದೆ. ಇದೇ ವೇಳೆ ರೈತರು ಮೋಟಾರು ಚಾಲು ಮಾಡಿದರೆ ವಿದ್ಯುತ್ ಟ್ರೇಸ್ ಆಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ದೃಷ್ಠಿಯಿಂದ ರೈತರು ನೀರಾವರಿ ರಾತ್ರಿ ಬಳಸದಿರಲು ವಿನಂತಿಸಿದರು.ಪ್ರತಿಭಟನೆಯಲ್ಲಿ ಎಸ್.ಟಿ.ಪವಾರ, ಬಿ.ಟಿ.ಪವಾರ, ಎಸ್.ಪಿ.ಕುಂಬಾರ,…
