Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ ೭,೮ ಹಾಗೂ ೯ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮೂರು ದಿನಗಳವರೆಗೆ ವಿಜಯಪುರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಏಪ್ರಿಲ್ ೭ರ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ (ಯತ್ನಾಳ) ವಹಿಸಲಿದ್ದಾರೆ. ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ನವದೆಹಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-೨ ಹಾಗೂ ಶಾಸಕರಾದ ಪ್ರಕಾಶ ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತದ…
ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿರುವ ನಿಂಬಾಳ್ಕರ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು “ಶೂನ್ಯ”ಗೊಳಿಸಲು ವಿಶೇಷ ಮುತುವರ್ಜಿಯಿಂದ ಪೊಲೀಸ್ ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ, ಮಾರ್ಗದರ್ಶನ ನೀಡುವ ಮೂಲಕ ಎಲ್ಲ ನಕ್ಸಲರನ್ನು ಶರಣಾಗುವಂತೆ ಮಾಡಿದ ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವರ್ಣಪದಕ ಪ್ರದಾನ ಮಾಡಿದರು.ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ಬೆಳಿಗ್ಗೆ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಯಿತು.೧೯೯೮ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಹೇಮಂತ್ ಎಂ.ನಿಂಬಾಳ್ಕರ್ ಅವರು ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ವಿಜಯಪುರದಲ್ಲಿ ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಶಂಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ- ನೆಮ್ಮದಿಯಿಂದ ಬದುಕಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುವ ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಜಿಲ್ಲಾ ಪೊಲಿಸ್ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕಾರ್ಯ ಮಾಡುತ್ತ, ನೊಂದವರಿಗೆ ಭರವಸೆ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬುದು ಪೊಲೀಸ್ ಕಾರ್ಯವೈಖರಿಯಾಗಿದೆ. ಪ್ರತಿಯೊಂದು ಹಂತದಲ್ಲಿ ಪೊಲೀಸರ ಅವಶ್ಯಕತೆ ಇದೆ. ಇದು ಸಮಾಜದ ಭಾಗವಾಗಿದೆ. ನೆಮ್ಮದಿಯ ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪೊಲೀಸರ ಕರ್ತವ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.ಪೊಲೀಸರು ಸಮಾಜದ ಒಳಿತಿಗಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುವುದರಿಂದಲೇ ಸಮಾಜದಲ್ಲಿ ಶಾಂತಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ವಿಪತ್ತು-ಆಪತ್ತು ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಮೂಲಕ…
ಆಲಮೇಲದ ಹೆಮ್ಮೆಯ ಹೈದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಕಮಾಂಡೆಂಟ್ ಆಗಿ ಉತ್ತಮ ಕಾರ್ಯನಿರ್ವಹಣೆಗೆ ಈ ಪುರಸ್ಕಾರ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಪ್ರತಿಭಾವಂತ, ತನ್ನ ವೃತ್ತಿಯ ಮೂಲಕ ಉನ್ನತ ಮಟ್ಟದ ಹೆಸರು ಮಾಡಿರುವ ಶರಣಬಸು ಕೊಳಾರಿ ಅವರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಸಹಾಯಕ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸಿದ್ದಕ್ಕೆ ಮುಖ್ಯಮಂತ್ರಿಗಳಿಂದ ಕೊಡಮಾಡುವ ಉತ್ತಮ ಪೊಲೀಸ್ ಅಧಿಕಾರಿಯ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.ಆಲಮೇಲದ ಪ್ರತಿಷ್ಠಿತ ಕೊಳಾರಿ ಮನೆತನದ ಮಹದೇವಪ್ಪ ಕೊಳಾರಿ ಅವರ ಮಗನಾದ ಶರಣಬಸು ಕೊಳಾರಿ ತಮ್ಮ ಕಷ್ಟದ ಜೀವನದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಇಂದು ರಾಜ್ಯದಲ್ಲಿ ಆಲಮೇಲ ತಾಲೂಕಿನ ಹೆಸರು ಬರುವಂತೆ ಮಾಡಿದ್ದಾರೆ.ಆಲಮೇಲ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ, ದಯಾನಂದ ಕೋಳಾರಿ, ಸ್ನೇಹಿತರಾದ ಆಲಮೇಲ ನಾಗರಿಕ ಸಮೀತಿ ಅಧ್ಯಕ್ಷ ರಮೇಶ ಬಂಟನೂರ್, ಪ್ರಭು ವಾಲಿಕರ, ಸುರೇಶ ಹಳ್ಳೂರ, ರಾಕೇಶ ಬಿರಾದಾರ, ಪಿಎಸ್ಐ, ಸುರೇಂದ್ರಕುಮಾರ ಮದಗುಣಕಿ, ಸಿದ್ರಾಮ ಯಾದವಾಡ, ಕಡಣಿಯ ಸಂತೋಷ ಕತ್ತಿ, ಬಸವರಾಜ ಪಡಶೆಟ್ಟಿ ಅವರು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ನೀರು ಜೀವಜಲ, ಇದು ಅತ್ಯಮೂಲ್ಯ. ನೀರನ್ನು ಮಿತವ್ಯಯವಾಗಿ ಬಳಸುವ ಮೂಲಕ ಜಲ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ ಎಂದು ಶ್ರೀಧರ್ಮಸ್ಥಳ ಮಂಜುನಾಥ ಸಂಸ್ಥೆಯ ಸಿಂದಗಿ ತಾಲ್ಲೂಕು ಯೋಜನಾಧಿಕಾರಿ ಕೃಷ್ಣಮೂರ್ತಿ ಹೇಳಿದರು.ತಾಲ್ಲೂಕಿನ ಜಾಲವಾದ ಗ್ರಾಮದ ಹೊಸನಗರದಲ್ಲಿ ಬುಧವಾರ ಮಹಿಳಾ ಸಂಘದ ಸದಸ್ಯರಿಗೆ ನೀರು ಉಳಿಸಿ ಕಾರ್ಯಕ್ರಮದ ಮೂಲಕ ನೀರಿನ ಮಹತ್ವ, ನೀರಿನ ಮಿತವ್ಯಯ ಬಳಕೆ, ಅನಗತ್ಯ ನೀರು ಪೋಲಾಗದಂತೆ ತಡೆಯುವ ಕ್ರಮಗಳು, ಮಕ್ಕಳಲ್ಲಿ ನೀರಿನ ಕುರಿತು ಅರಿವು, ಜಾಗೃತಿ ಮೂಡಿಸುವ ಬಗ್ಗೆ ಮಾತನಾಡಿದರು.ಇದೇ ಸಂದರ್ಭದಲ್ಲಿ ಜಾಲವಾದ ವಲಯದ ಹೊಸನಗರ(ಬಮ್ಮನಜೋಗಿ) ಕಾರ್ಯಕ್ಷೇತ್ರದಲ್ಲಿ ಯುಗಾದಿ ಹಾಗೂ ಈದ್-ಉಲ್-ಫಿತ್ರ ಹಬ್ಬಗಳ ನಿಮಿತ್ತ ಹೊಸದಾಗಿ ರಚನೆಯಾದ ವಿಜಯಲಕ್ಷ್ಮಿ ಸ್ವಸಹಾಯ ಸಂಘವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ, ನಂತರ ಸಂಘದ ಸದಸ್ಯರಿಗೆ ಯೋಜನೆಯ ಕಾರ್ಯಕ್ರಮಗಳ ಮಾಹಿತಿ, ನಿರ್ಣಯ ಪಟ್ಟಿಯನ್ನು ವಿತರಿಸಲಾಯಿತು.ವಲಯ ಮೇಲ್ವಿಚಾರಕ ಬಾಬುರಾವ್ ಗೋಣಿ, ಸೇವಾಪ್ರತಿನಿಧಿಗಳಾದ ಶ್ರೀಗೌರಿ, ಗುರುಬಾಯಿ, ಸಂಘದ ಸದಸ್ಯರು ಹಾಗೂ ಮಕ್ಕಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾರ್ಥಕ ಬದುಕಿಗೆ ದೇವರ ದಾಸಿಮಯ್ಯನಂತಹ ಅಸಂಖ್ಯಾತ ಶರಣರ ವಚನಗಳು ದಾರಿ ದೀಪಗಳಾಗಿವೆ ಎಂದು ಬಸವ ಶರಣ ಸಂಗಮ ಸೇವಾ ಸಮೀತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಸಾರ್ಥಕ ಹಾಗೂ ಸುಂದರ ಬದುಕು ಕಟ್ಟಿಕೊಳ್ಳಲು ಶರಣರ ವಚನಗಳು, ಸಂತರ ಅಭಂಗಗಳು ಹಾಗೂ ದಾಸರ ಪದಗಳು ನಿದರ್ಶನಗಳಾಗಿವೆ ಎಂದು ಹೇಳುತ್ತಾ, ೧೦ನೇ ಶತಮಾನದ ಆದ್ಯವಚನಕಾರ ದೇವರ ದಾಸಿಮಯ್ಯನ ಜೀವನ, ಸಾಧನೆ, ಅಚಲ ಕಾಯಕ ಹಾಗೂ ವಚನಗಳ ಕುರಿತಾಗಿ ಸುದೀರ್ಘವಾಗಿ ಮಾತನಾಡಿದರು.ತಹಶೀಲ್ದಾರ ಪ್ರಕಾಶ ಸಿಂದಗಿ, ಗ್ರೇಡ್-೨ ತಹಶೀಲ್ದಾರ ಎಸ್.ಎಚ್.ರಾಠೋಡ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ವೀರಣ್ಣ ಮಣೂರ, ಗುಂಡಪ್ಪ ಹಂದಿಗನೂರ, ಯಲ್ಲಾಲಿಂಗ ವಡ್ಡೋಡಗಿ, ಚಂದ್ರಶೇಖರ ಹೊಸಮನಿ, ಕುಮಾರ ವಡ್ಡೋಡಗಿ, ನೀಲಕಂಠ ಮಶಾನವರ, ರವಿ ವಡ್ಡೋಡಗಿ ಇದ್ದರು.
ಹಾವೇರಿ ವಿವಿ ಮೌಲ್ಯಮಾಪನ ಕುಲಸಚಿವೆ ಪ್ರೊ. ರೇಣುಕಾ ಮೇಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂಶೋಧನಾ ಲೇಖನಗಳು ಸಮಾಜದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಬೆಳಕಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಹಾವೇರಿ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ.ರೇಣುಕಾ ಮೇಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಐ.ಸಿ.ಎಸ್.ಎಸ್.ಆರ್ ಪ್ರಾಯೋಜಿಕತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ಹತ್ತು ದಿನಗಳ ಸಮಗ್ರ ಸಾಮಾಜಿಕ ವಿಜ್ಞಾನ ವಿಶ್ಲೇಷಣೆಗಾಗಿ ‘ಸಂಶೋಧನಾ ವಿಧಾನ ತಂತ್ರಗಳು’ ಕುರಿತ ಸಂಶೋಧನಾ ವಿಧಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ಶೈಕ್ಷಣಿಕ ವಾತಾವರಣದಲ್ಲಿ ಸಂಶೋಧನೆ ಅತ್ಯಂತ ಪ್ರಮುಖವಾಗಿದೆ. ಉತ್ತಮ ಗುಣಮಟ್ಟದ ಸಂಶೋಧನಾ ಲೇಖನಗಳು ಹೊಸ ತಿಳುವಳಿಕೆ ನೀಡುವುದರ ಜೊತೆಗೆ ವಿದ್ಯಾರ್ಥಿಗಳು ಮತ್ತು ಅಂತರಾಷ್ಟ್ರೀಯ ಮಟ್ಟದ ತಜ್ಞರಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತವೆ. ನಿರಂತರ ಅಧ್ಯಯನ ಮತ್ತು ವಿಶ್ಲೇಷಣೆಯ ಮೂಲಕ ಸಂಶೋಧಕರು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸಬಹುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ರಿಸ.ನಂ. ೩೭//ರ ಪೈಕಿ, ೩ ಎಕರೆ ಗಾಯರಾಣಾ ಜಮೀನನ್ನು ಮೌಲಾನಾ ಆಜಾದ ಮಾದರಿ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರಿಗೆ ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಈ ಅಧಿಸೂಚನೆ ಹೊರಡಿಸಿದ ಮೂವತ್ತು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.ಬಬಲೇಶ್ವರ ಪಟ್ಟಣದ ಸರ್ಕಾರಿ ರಿಸ.ನಂ. ೪೨೫ ರ೦೧ ಎಕರೆ ಜಮೀನುಬಬಲೇಶ್ವರ ತಾಲೂಕಿನ ಬಬಲೇಶ್ವರ ಪಟ್ಟಣದ ಸರ್ಕಾರಿ ರಿಸ.ನಂ. ೪೨೫// ರ ೦೧ ಎಕರೆ ಜಮೀನನ್ನು ಪರಿಶಿಷ್ಟ ಜಾತಿಯ ಸಮುದಾಯದ ೧೩ ಜನ ಫಲಾನುಭವಿಗಳಿಗೆ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಂಚುವುದಕ್ಕಾಗಿ ಜಮೀನು ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಈ ಅಧಿಸೂಚನೆಯ ಮೂವತ್ತು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.ಕಲಕೇರಿ ಗ್ರಾಮದ ರಿಸ.ನಂ. ೦೧/ರಲ್ಲಿ ೩೮ ಗುಂಟೆ ಗಾಯರಾಣಾ ಜಮೀನು*ತಾಳಿಕೋಟಿ ತಾಲೂಕಿನ ಕಲಕೇರಿ…
ವಿಜಯಪುರ ಜಿಲ್ಲಾಡಳಿತ ವತಿಯಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜನಸಾಮಾನ್ಯರ ಭಾಷೆಯಲ್ಲಿಯೇ ಸರಳವಾಗಿ ಹಾಗೂ ಸುಲಲಿತವಾಗಿ ವಚನಗಳನ್ನು ರಚಿಸಿ, ವಚನ ಸಾಹಿತ್ಯದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕಾಯಕವನ್ನು ಕೈಗೊಂಡವರು ದೇವರ ದಾಸಿಮಯ್ಯ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾದ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಾಯಕ ನಿಷ್ಠೆ, ಲಿಂಗ ಸಮಾನತೆ ಸೇರಿದಂತೆ ಅನೇಕ ವಿಷಯಗಳನ್ನು ತಮ್ಮ ವಚನಗಳ ಮೂಲಕ ನಮಗೆ ಕೊಡುಗೆ ನೀಡಿದ್ದಾರೆ. ಅವರು ತಿಳಿಸಿಕೊಟ್ಟಿರುವ ಕಾಯಕ ತತ್ವ, ನೈತಿಕ ಮೌಲ್ಯಗಳಂತಹ ಆದರ್ಶ ವಿಚಾರಗಳ ಚಿಂತನೆಗಳ ಅಳವಡಿಸಿಕೊಳ್ಳಬೇಕಾಗಿದೆ. ಲಿಂಗ ಸಮಾನತೆಯ ಪರಿಕಲ್ಪನೆಯನ್ನು ಪ್ರತಿಪಾದಿಸಿ, ಸಮಾನತೆಯನ್ನು ಸಾರಿದ ಶರಣ ದೇವರ ದಾಸಿಮಯ್ಯನವರು ಎಂದು ಹೇಳಿದರು.ಡಾ.ಸಂಗಮೇಶ ಮೇತ್ರಿ ಉಪನ್ಯಾಸ ನೀಡಿ, ದಾರ್ಶನಿಕರ ಆದರ್ಶ ವಿಚಾರಗಳಿಗೆ ಪ್ರಾಮುಖ್ಯತೆ ನೀಡಿ ಅವುಗಳನ್ನು ತಮ್ಮ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಶ್ರೀ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಅಧ್ಯಕ್ಷರು ಹಾಗೂ ಸಮಾಜಸೇವಕರು ಶ್ರೀಶೈಲಪ್ಪ ಜೋಗೂರ ರವರಿಗೆ ಅವರ , ಶೈಕ್ಷಣಿಕ ,ಸಾಮಾಜಿಕ ಸೇವೆಯನ್ನು ಪರಿಗಣಿಸಿ ಮೈಸೂರಿನ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ( ರಿ.) ಕರ್ನಾಟಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ರವರ ಸಂಯುಕ್ತ ಆಶ್ರಯದಲ್ಲಿ ಜರುಗುವ ಕರ್ನಾಟಕ ಸಾಂಸ್ಕೃತಿಕ ವೈಭವ ಸಮಾರಂಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಹಾಗೂ ಉತ್ತಮ ಗುಣಮಟ್ಟದ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುತ್ತಿರುವ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ರಾಜ್ಯಮಟ್ಟದ ಅತ್ಯುತ್ತಮ ಶಾಲೆ ಎಂದು ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ಪ್ರದಾನ ಸಮಾರಂಭವು ಎಪ್ರಿಲ್ 10 ರಂದು ಮೈಸೂರಿನಲ್ಲಿ ಜರುಗುವುದು ಎಂದು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಡಾ.ಜಿ.ಶಿವಣ್ಣ ರವರು ತಿಳಿಸಿರುತ್ತಾರೆ.ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಕಾರ್ಯದರ್ಶಿ ಪ್ರಶಾಂತ ಬಡದಾಳ, ಕೋಶಾಧ್ಯಕ್ಷ ಅರವಿಂದ ಕುಲಕರ್ಣಿ, ಸಹ ಕಾರ್ಯದರ್ಶಿ…
