ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ನೀರು ಜೀವಜಲ, ಇದು ಅತ್ಯಮೂಲ್ಯ. ನೀರನ್ನು ಮಿತವ್ಯಯವಾಗಿ ಬಳಸುವ ಮೂಲಕ ಜಲ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ ಎಂದು ಶ್ರೀಧರ್ಮಸ್ಥಳ ಮಂಜುನಾಥ ಸಂಸ್ಥೆಯ ಸಿಂದಗಿ ತಾಲ್ಲೂಕು ಯೋಜನಾಧಿಕಾರಿ ಕೃಷ್ಣಮೂರ್ತಿ ಹೇಳಿದರು.
ತಾಲ್ಲೂಕಿನ ಜಾಲವಾದ ಗ್ರಾಮದ ಹೊಸನಗರದಲ್ಲಿ ಬುಧವಾರ ಮಹಿಳಾ ಸಂಘದ ಸದಸ್ಯರಿಗೆ ನೀರು ಉಳಿಸಿ ಕಾರ್ಯಕ್ರಮದ ಮೂಲಕ ನೀರಿನ ಮಹತ್ವ, ನೀರಿನ ಮಿತವ್ಯಯ ಬಳಕೆ, ಅನಗತ್ಯ ನೀರು ಪೋಲಾಗದಂತೆ ತಡೆಯುವ ಕ್ರಮಗಳು, ಮಕ್ಕಳಲ್ಲಿ ನೀರಿನ ಕುರಿತು ಅರಿವು, ಜಾಗೃತಿ ಮೂಡಿಸುವ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಾಲವಾದ ವಲಯದ ಹೊಸನಗರ(ಬಮ್ಮನಜೋಗಿ) ಕಾರ್ಯಕ್ಷೇತ್ರದಲ್ಲಿ ಯುಗಾದಿ ಹಾಗೂ ಈದ್-ಉಲ್-ಫಿತ್ರ ಹಬ್ಬಗಳ ನಿಮಿತ್ತ ಹೊಸದಾಗಿ ರಚನೆಯಾದ ವಿಜಯಲಕ್ಷ್ಮಿ ಸ್ವಸಹಾಯ ಸಂಘವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ, ನಂತರ ಸಂಘದ ಸದಸ್ಯರಿಗೆ ಯೋಜನೆಯ ಕಾರ್ಯಕ್ರಮಗಳ ಮಾಹಿತಿ, ನಿರ್ಣಯ ಪಟ್ಟಿಯನ್ನು ವಿತರಿಸಲಾಯಿತು.
ವಲಯ ಮೇಲ್ವಿಚಾರಕ ಬಾಬುರಾವ್ ಗೋಣಿ, ಸೇವಾಪ್ರತಿನಿಧಿಗಳಾದ ಶ್ರೀಗೌರಿ, ಗುರುಬಾಯಿ, ಸಂಘದ ಸದಸ್ಯರು ಹಾಗೂ ಮಕ್ಕಳು ಇದ್ದರು.

