ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಾರ್ಥಕ ಬದುಕಿಗೆ ದೇವರ ದಾಸಿಮಯ್ಯನಂತಹ ಅಸಂಖ್ಯಾತ ಶರಣರ ವಚನಗಳು ದಾರಿ ದೀಪಗಳಾಗಿವೆ ಎಂದು ಬಸವ ಶರಣ ಸಂಗಮ ಸೇವಾ ಸಮೀತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಾರ್ಥಕ ಹಾಗೂ ಸುಂದರ ಬದುಕು ಕಟ್ಟಿಕೊಳ್ಳಲು ಶರಣರ ವಚನಗಳು, ಸಂತರ ಅಭಂಗಗಳು ಹಾಗೂ ದಾಸರ ಪದಗಳು ನಿದರ್ಶನಗಳಾಗಿವೆ ಎಂದು ಹೇಳುತ್ತಾ, ೧೦ನೇ ಶತಮಾನದ ಆದ್ಯವಚನಕಾರ ದೇವರ ದಾಸಿಮಯ್ಯನ ಜೀವನ, ಸಾಧನೆ, ಅಚಲ ಕಾಯಕ ಹಾಗೂ ವಚನಗಳ ಕುರಿತಾಗಿ ಸುದೀರ್ಘವಾಗಿ ಮಾತನಾಡಿದರು.
ತಹಶೀಲ್ದಾರ ಪ್ರಕಾಶ ಸಿಂದಗಿ, ಗ್ರೇಡ್-೨ ತಹಶೀಲ್ದಾರ ಎಸ್.ಎಚ್.ರಾಠೋಡ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ವೀರಣ್ಣ ಮಣೂರ, ಗುಂಡಪ್ಪ ಹಂದಿಗನೂರ, ಯಲ್ಲಾಲಿಂಗ ವಡ್ಡೋಡಗಿ, ಚಂದ್ರಶೇಖರ ಹೊಸಮನಿ, ಕುಮಾರ ವಡ್ಡೋಡಗಿ, ನೀಲಕಂಠ ಮಶಾನವರ, ರವಿ ವಡ್ಡೋಡಗಿ ಇದ್ದರು.

