ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ರಿಸ.ನಂ. ೩೭//ರ ಪೈಕಿ, ೩ ಎಕರೆ ಗಾಯರಾಣಾ ಜಮೀನನ್ನು ಮೌಲಾನಾ ಆಜಾದ ಮಾದರಿ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರಿಗೆ ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಈ ಅಧಿಸೂಚನೆ ಹೊರಡಿಸಿದ ಮೂವತ್ತು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಬಬಲೇಶ್ವರ ಪಟ್ಟಣದ ಸರ್ಕಾರಿ ರಿಸ.ನಂ. ೪೨೫ ರ೦೧ ಎಕರೆ ಜಮೀನು
ಬಬಲೇಶ್ವರ ತಾಲೂಕಿನ ಬಬಲೇಶ್ವರ ಪಟ್ಟಣದ ಸರ್ಕಾರಿ ರಿಸ.ನಂ. ೪೨೫// ರ ೦೧ ಎಕರೆ ಜಮೀನನ್ನು ಪರಿಶಿಷ್ಟ ಜಾತಿಯ ಸಮುದಾಯದ ೧೩ ಜನ ಫಲಾನುಭವಿಗಳಿಗೆ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಂಚುವುದಕ್ಕಾಗಿ ಜಮೀನು ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಈ ಅಧಿಸೂಚನೆಯ ಮೂವತ್ತು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕಲಕೇರಿ ಗ್ರಾಮದ ರಿಸ.ನಂ. ೦೧/ರಲ್ಲಿ ೩೮ ಗುಂಟೆ ಗಾಯರಾಣಾ ಜಮೀನು*
ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ರಿಸ.ನಂ. ೦೧// ರಲ್ಲಿ ೩೮ ಗುಂಟೆ ಗಾಯರಾಣಾ ಜಮೀನನ್ನು ಸಾರ್ವಜನಿಕ ಗ್ರಾಮೀಣ ಸಂತೆ ಹಾಗೂ ಮಾರುಕಟ್ಟೆ ಸಲುವಾಗಿ ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಅಧಿಸೂಚನೆ ಹೊರಡಿಸಿದ ಮೂವತ್ತು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
