Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಮಹಾರಾಷ್ಟ್ರದ ನಾಶಿಕ್‌ನ ಡೋಲು ವಾದ್ಯಗಳು, ಗೊಂಬೆಗಳು, ಕಲಾ ತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿತು. ನೀಲಿ ಧ್ವಜ, ಜಯಘೋಷ ಎಲ್ಲೆಡೆ ಮೊಳಗಿದ್ದು ವಿಶೇಷವಾಗಿದ್ದವು.ಜನಾಕರ್ಷಿಸಿತ ಸ್ತಭ್ದ ಚಿತ್ರ: ಮೆರವಣಿಗೆಯಲ್ಲಿ ಸಂಸತ್ತ ರೂಪಕ ವಾಹನದಲ್ಲಿ ಡಾ.ಅಂಬೇಡ್ಕರ್ ಅವರ ಕುಳಿತ ಭಂಗಿಯ ಭಾವಚಿತ್ರವನ್ನು ಇಟ್ಟು ಅಲಂಕರಿಸಲಾಗಿತ್ತು. ನಾನಾ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಂಬೇಡ್ಕರ್ ಜಯಂತಿ ಅಂಗವಾಗಿ ಸಿಂದಗಿಯಲ್ಲಿ ನಡೆದ ಮೆರವಣಿಗೆಯಲ್ಲಿ ಮಹಿಳೆಯರು, ಯುವಕರು ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ದಲಿತ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ಸಿಂಗೆ, ಶ್ರೀಕಾಂತ ಸೋಮಜಾಳ, ಪರುಶರಾಮ ಕಾಂಬಳೆ, ರವಿ ಹೋಳಿ, ಮಲ್ಲು ಕೂಚಬಾಳ, ದತ್ತು ನಾಲ್ಕಮಾನ, ರಮೇಶ ನಡುವಿನಕೇರಿ, ಶ್ರೀನಿವಾಸ ಓಲೇಕಾರ, ರಾವುತ ತಳಕೇರಿ, ಶ್ರೀಶೈಲ ಜಾಲವಾದಿ, ರಾಕೇಶ ಕಾಂಬಳೆ, ಶಿವಾನಂದ ಆಲಮೇಲ, ನಿಂಗರಾಜ, ಹರ್ಷವರ್ಧನ ಪೂಜಾರಿ ಸೇರಿದಂತೆ ಅಭಿಮಾನಿಗಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸಾರ್ವಜನಿಕರ ಗಮನ ಬೇರೆ ಕಡೆಗೆ ಸೆಳೆದು ಬೆಲೆ ಬಾಳುವ ವಸ್ತುಗಳನ್ನು, ಬಂಗಾರದ ಒಡವೆಗಳನ್ನು ಮತ್ತು ಹಣವನ್ನು ಕಳ್ಳತನ ಮಾಡುವಂತಹ ಗ್ಯಾಂಗ್ ಬಂದಿದೆ. ಇತ್ತೀಚಿಗೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು ಕಳ್ಳರು ತಾವು ಸಿಬಿಐ ಪೊಲೀಸರ್ ಅಂತ ಸುಳ್ಳು ಹೇಳಿಕೊಂಡು ಮೈಮೇಲೆ ಬಂಗಾರ ಹಾಕಿಕೊಂಡು ಓಡಾಡುವರಲ್ಲಿ ಕಳ್ಳರು ಬಂದಿದ್ದಾರೆ ಈ ರೀತಿ ಬಂಗಾರವನ್ನು ಹಾಕಿಕೊಂಡು ತಿರುಗಾಡಬಾರದು ಎಂದು ಬಂಗಾರವನ್ನು ತೆಗೆಸಿ ತಮ್ಮ ಬ್ಯಾಗಿನಲ್ಲಿ ಇರಿಸುವಂತೆ ಮಾಡಿ ಬ್ಯಾಗ್ ನಿಂದ ಕಳ್ಳತನ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಈ ತರದ ವ್ಯಕ್ತಿಗಳಿಂದ ಎಚ್ಚರಿಕೆಯಿಂದ ಇರಬೇಕು ಮತ್ತು ಅನುಮಾಸ್ಪದ ವ್ಯಕ್ತಿಗಳು ಕಂಡಲ್ಲಿ ಕೂಡಲೇ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪಿಎಸ್‌ಐ ಸಂಜಯ ತಿಪರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವದರ್ಜೆಯ ವಕೀಲರು, ಸಮಾಜ ಸುಧಾರಕರೂ ಆಗಿದ್ದ ಅಂಬೇಡ್ಕರ್ ಅವರು ಭಾರತದ ದಲಿತ ಚಳುವಳಿಗಳ ಹಿಂದಿನ ಮಹಾನ್ ಶಕ್ತಿ ಎಂದರೂ ತಪ್ಪಾಗಲಿಕ್ಕಿಲ್ಲ. ಶಿಕ್ಷಣ, ಸಮಾನತೆ, ಅರ್ಥಶಾಸ್ತçಕ್ಕೆ ಇವರು ನೀಡಿದ ಕೊಡುಗೆಗಳು ಅಪಾರ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಇ.ಡಿ.ಲಮಾಣಿ ಹೇಳಿದರು.ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸೋಮವಾರದಂದು ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಎಂಬ ಮಹಾನ್ ಚೇತನ ಸಂಘರ್ಷದ ಅನುಭವದಿಂದ ಹುಟ್ಟಿಕೊಂಡ ವ್ಯಕ್ತಿತ್ವ. ಅವರ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ, ಭವ್ಯ ಭಾರತದಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು.ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಎಲ್.ಚವ್ಹಾಣ್‌ರವರು ಮಾತನಾಡುತ್ತ, ಅಂಬೇಡ್ಕರ್ ಭಾರತದ ಸಾಮಾಜಿಕ ಸಮಾನತೆಯ ಹರಿಕಾರ. ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಗಾದ ದೀನ ದಲಿತರ ಏಳಿಗೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಅವರ ಆದರ್ಶಗಳು ಎಲ್ಲ ವರ್ಗದ ಜನರಿಗೂ ಮಾದರಿಯಾಗಿವೆ ಎಂದರು.ಈ ವೇಳೆಯಲ್ಲಿ ಎ.ಎಂ.ನಾಗೊಂಡ, ಎಂ.ಬಿ.ಪೂಜಾರಿ, ಆರ್.ಎನ್.ಬಕಾಟೆ, ಆರ್.ವಿ.ಭುಜಂಗನವರ,…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಚಿಕ್ಕಲಕಿ ಕ್ರಾಸ್ ಆರೋಗ್ಯ ಕೇಂದ್ರದಲ್ಲಿ 134 ನೇ ಜನ್ಮದಿನಾಚರಣೆ ಸಂವಿಧಾನ ಶಿಲ್ಪಿ ಮಹಾ ಮಾನವತಾವಾದಿ ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆಯನ್ನು ನೆರವೇರಿಸಲಾಯಿತು.ಇದೆ ಸಂದರ್ಭದಲ್ಲಿ ಮುಖ್ಯಆರೋಗ್ಯ ಅಧಿಕಾರಿ ಡಾ.ಮುಕುಂದ ಕಾಂಬಳೆˌ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಎಸ್ ಎಸ್ ಸಬಕಾಳೆˌ ಗೋವಿಂದ ದಾಸರˌ ಆಶಾ ಕಾರ್ಯಕರ್ತೆ ಸಾವಿತ್ರಿ ನ್ಯಾಮಗೌಡ ಸೇರಿದಂತೆ ಅನೇಕರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ, ಉಪ್ರಾಚಾರ್ಯ ಡಾ.ಅನೀಲ ಬಿ ನಾಯಕ ಪಿಯುಸಿ ಪ್ರಾಚಾರ್ಯ ಪ್ರೊ.ಸಿ.ಬಿ .ಪಾಟೀಲ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್ ಪಾಟೀಲ ಸೇರಿದಂತೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಎಕ್ಸಲಂಟ್ ಪಿಯು ಕಾಲೇಜಿನಲ್ಲಿ ನಡೆದ ಅಂಬೇಡ್ಕರ ಹಬ್ಬದಲ್ಲಿ ಶ್ರೀಕಾಂತ ಕೆ.ಎಸ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿ ಜೀವನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡರೆ ಸ್ವಾಭಿಮಾನದ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳುವುದರೊಂದಿಗೆ ಬದುಕಿಗೆ ಹೊಸ ಅರ್ಥ ಬರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಅವರ ಬದುಕಿನ ಹೋರಾಟವನ್ನು ಅರಿತುಕೊಂಡಲ್ಲಿ ಬದಲವಾಣೆಯ ಪರ್ವಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ ಎಂದು ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಹೇಳಿದರು.ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ೧೪೩ ನೇ ಜನ್ಮ ದಿನದ ಅಂಗವಾಗಿ ನಗರದ ಎಕ್ಸಲಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು; ಯಾವ ವ್ಯಕ್ತಿಯಲ್ಲಿ ಜ್ಞಾನ ತುಂಬಿರುತ್ತದೆ ಅಂಥ ವ್ಯಕ್ತಿಯನ್ನು ಇಡೀ ಜಗತ್ತೇ ಗೌರವಿಸುತ್ತದೆ ಎನ್ನುವುದಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಾಕ್ಷ್ಯವಾಗಿ ನಿಲ್ಲುತ್ತಾರೆ. ಒಂದು ಕಾಲದಲ್ಲಿ ಕಡು ಕಷ್ಟವನ್ನು ಅನುಭವಿಸಿ, ಶೋಷಣೆಯ ಕೂಪದಲ್ಲಿ ನರಳಿದ ಅವರು ತಮ್ಮ ಜ್ಞಾನದ ಬಲದಿಂದ ಇಡೀ ಜಗತ್ತೇ ತಮ್ಮ ಕಡೆಗೆ ತಿರುಗಿ ನೋಡುವಂತೆ…
ಇಂಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಕಾಂಗ್ರೆಸ್ ಪಕ್ಷದ ದುರಾಡಳಿತ ಖಂಡಿಸಿ ವಿಜಯಪುರದಲ್ಲಿ ಏ.೧೭ ರಂದು ಜನಾಕ್ರೋಶ ಸಭೆಯನ್ನು ಹಮ್ಮಿಕೊಂಡಿದ್ದು ಇಂಡಿ ತಾಲೂಕಿನ ಪ್ರತಿ ಬೂತ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕ ಡಬ್ಬಿ ಹೇಳಿದರು.ಪಟ್ಟಣಧ ಶ್ರೀ ಸತ್ಯ ನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆದ ಜನಾಕ್ರೋಶ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕಾಂಗ್ರಸ್ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಮಹಿಳೆಯರಿಗೆ ಉಚಿತ ಬಸ್ಸ ಪ್ರವಾಸದಿಂದ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದೆ. ಸಾಮಾಜಿಕ ಇಲಾಖೆಯ ೨೮ ಸಾವಿರ ಕೋಟಿ ಅನುದಾನದಲ್ಲಿ ೧೮ ಸಾವಿರ ಕೋಟಿ ರೂ ಗ್ಯಾರಂಟಿಗೆ ನೀಡಿದ್ದಾರೆ. ಇವೆಲ್ಲವನ್ನು ಪರಿಗಣಿಸಿ ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಸಭೆ ವಿಜಯಪುರದಲ್ಲಿ ನಡೆಯುತ್ತಿದೆ ಎಂದರು.ಇಂಡಿ ಮಂಡಲ ಅದ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತನಾಡಿ ಇಂಡಿಯಿಂದ ಹೆಚ್ಚು ಕಾರ್ಯಕರ್ತರು ಜನಾಕ್ರೋಶ ಸಭೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಬೂತ ಮಟ್ಟದಲ್ಲಿ ಕಾರ್ಯಕರ್ತರನ್ನು ತರಬೇಕು ಎಂದರು.ಈಗಾಗಲೇ ಮೈಸೂರು, ಶಿವಮೊಗಾ ದಲ್ಲಿ ಯಶಸ್ವಿಯಾಗಿದ್ದು ವಿಜಯಪುರ ಕಾರ್ಯಕ್ರಮ ಯಶಸ್ವಿಗೊಳಿಸಲು…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಂಚಮಸಾಲಿ ಸಮಾಜಕ್ಕೆ ಅದರದೇ ಆದ ಟ್ರಸ್ಟ ಮಾಡಲಾಗಿದೆ. ಅದಕ್ಕೆ ಶಿಷ್ಟಾಚಾರ ಇದೆ. ಅದನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಕೊಳ್ಳಲಾಗುವದು ಎಂದು ಹೇಳಿರುವ ಕಾಸಪ್ಪನವರ ಹೇಳಿಕೆಯನ್ನು ಇಂಡಿ ತಾಲೂಕಾ ಪಂಚಮಸಾಲಿ ಸಂಘದ ತಾಲೂಕಾ ಅಧ್ಯಕ್ಷ ವಿ.ಎಚ್.ಬಿರಾದಾರ ಖಂಡಿಸಿದ್ದಾರೆ.ಇಂಡಿಯ ಅಮರ ಇಂಟರ್ ನ್ಯಾಶನಲ್ ಹೋಟೆಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೂಡಲ ಸಂಗಮದಲ್ಲಿ ಟ್ರಸ್ಟ ಎಂಬುದು ಇದೆ. ಆದರೆ ಮಂಡಳಿಯ ಸದಸ್ಯರು ಬರುವದೇ ಇಲ್ಲ. ಮತ್ತು ಟ್ರಸ್ಟಕ್ಕೆ ಸೇರಬೇಕಾದ ಆಸ್ತಿ ಲೂಟಿಸಿದ್ದಾರೆ. ಕಾಶಪ್ಪನವರ ಹೇಳಿಕೆ ಸಮಾಜಕ್ಕೆ ನೋವುಂಟೆ ಮಾಡಿದೆ. ಜಯ ಮೃತ್ಯುಂಜಯ ಶ್ರೀಗಳು ಕಣ್ಣಿರು ಹಾಕಿರುವದು ಎಲ್ಲರಿಗೂ ನೋವು ತಂದಿದ್ದು ಪ್ರತಿ ಹನಿಯ ಬೆಲೆ ತೆತ್ತಬೇಕಾಗುತ್ತದೆ. ಈ ದಿಶೆಯಲ್ಲಿ ಏ. ೨೦ ರಂದು ೩ ಗಂಟೆಗೆ ಕೂಡಲ ಸಂಗಮದಲ್ಲಿ ಸಭೆಯನ್ನು ಕರೆದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಂಚಮಸಾಲಿ ಜನಾಂಗ ಸಮಾಜ ಬಾಂಧವರು ಸೇರಿ ತಕ್ಕ ಉತ್ತರ ಕೊಡಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಬಾಳು ಮುಳಜಿ, ಶರಣು ಬಂಡಿ, ಚಿದುಗೌಡ ಬಿರಾದಾರಸೋಮು ದೇವರ, ರಮೇಶ ಬಿರಾದಾರ, ವಿಜುಗೌಡ…
ಸರ್ಕಾರದ ಕಾನೂನು ಇಲಾಖೆ ಅಭಿಮತ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ೨೦೧೬ ಕ್ಕೂ ಪೂರ್ವದಲ್ಲಿ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರನ್ನು ೨೦೧೭ ರ ವೃಂದ ಮತ್ತು ನೇಮಕಾತಿ ನಿಯಮಗಳಂತೆ ೧ ರಿಂದ ೫ ನೇ ವರ್ಗಕ್ಕೆ ಸೀಮಿತಗೊಳಿಸಿ ಪೂರ್ವಾನ್ವಯಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಸರ್ಕಾರದ ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ.ಕಾನೂನು ಇಲಾಖೆಯ ಈ ಅಭಿಪ್ರಾಯ ಕಳೆದ ಏಳು ವರ್ಷಗಳಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಡೆಸುತಿದ್ದ ಹೋರಾಟಕ್ಕೆ ಶಕ್ತಿ ನೀಡಿದೆ ಎಂದು ಸಂಘದ ಅಧ್ಯಕ್ಷ ಕೆ.ನಾಗೇಶ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.ಯಾವುದೇ ನಿಯಮಗಳು ಜಾರಿಗೆ ಬಂದ ದಿನಾಂಕದಿAದ ಅನ್ವಯವಾಗಲಿದ್ದು, ಅದರನ್ವಯ ಪ್ರಸ್ತುತ ಪ್ರಕರಣದಲ್ಲಿ ೨೦೧೭ ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ೨೦೧೬ ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರುಗಳಿಗೆ ಪೂರ್ವಾನ್ವಯಗೊಳಿಸುವುದು ಸರಿಯಾದ ಕ್ರಮವಲ್ಲ, ಪ್ರತಿಯೊಬ್ಬ ನೌಕರನಿಗೂ ಸದರಿ ನೌಕರನು ನೇಮಕಗೊಂಡ ಸಮಯದಲ್ಲಿ ಜಾರಿಯಲ್ಲಿದ್ದ ನಿಯಮಗಳನ್ನು ಅನ್ವಯಿಸಬೇಕಾಗಿರುತ್ತದೆ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ ಎಂದರು.೨೦೧೭ ರ ನೇಮಕಾತಿ ನಿಯಮಾವಳಿಯಂತೆ ಎಲ್ಲಾ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ. ಅವರ ಕೊಡುಗೆ ಭಾರತ ಜನತೆಯ ಒಂದು ರೀತಿ ಜೀವನಾಡಿ ಇದ್ದಂತೆ. ಅವರ ಬೃಹತ್ ಮತ್ತು ಸೂಕ್ಷ್ಮ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ಸುಲಭ ಹಾಗೂ ಸುಗಮವಾಗಿದೆ ಎಂದು ಅಧ್ಯಕ್ಷತೆ ವಹಿಸಿದ ಕಂದಾಯ ಉಪವಿಭಾಗ ಅಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.ಪಟ್ಟಣದ ಶಿಕ್ಷಣ ಇಲಾಖೆಯ ಗುರುಭವನದಲ್ಲಿ ತಾಲ್ಲೂಕು ಆಡಳಿತವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ 134 ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪರ್ಚಾಣೆ ನೆರಿವೆರಿಸಿ ತದನಂತರ ಜ್ಯೋತಿ ಬೆಳೆಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಜನ್ಮದಿನ. ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವ ದಿನ. ಅವರನ್ನು ಗೌರವಿಸುವ ಸುದಿನ. ಇಂದಿನ ಪ್ರಜೆಗಳು ಅವರ ಸಂದೇಶಗಳನ್ನು ತಿಳಿದು, ಸದಾ ಅನುಸರಿಸಬೇಕಾಗಿದೆ ಎಂದು ಹೇಳಿದರು.ಪ್ರೌಢಶಾಲೆಯ…
