ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಶ್ವದರ್ಜೆಯ ವಕೀಲರು, ಸಮಾಜ ಸುಧಾರಕರೂ ಆಗಿದ್ದ ಅಂಬೇಡ್ಕರ್ ಅವರು ಭಾರತದ ದಲಿತ ಚಳುವಳಿಗಳ ಹಿಂದಿನ ಮಹಾನ್ ಶಕ್ತಿ ಎಂದರೂ ತಪ್ಪಾಗಲಿಕ್ಕಿಲ್ಲ. ಶಿಕ್ಷಣ, ಸಮಾನತೆ, ಅರ್ಥಶಾಸ್ತçಕ್ಕೆ ಇವರು ನೀಡಿದ ಕೊಡುಗೆಗಳು ಅಪಾರ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಇ.ಡಿ.ಲಮಾಣಿ ಹೇಳಿದರು.
ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸೋಮವಾರದಂದು ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಎಂಬ ಮಹಾನ್ ಚೇತನ ಸಂಘರ್ಷದ ಅನುಭವದಿಂದ ಹುಟ್ಟಿಕೊಂಡ ವ್ಯಕ್ತಿತ್ವ. ಅವರ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ, ಭವ್ಯ ಭಾರತದಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು.
ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಎಲ್.ಚವ್ಹಾಣ್‌ರವರು ಮಾತನಾಡುತ್ತ, ಅಂಬೇಡ್ಕರ್ ಭಾರತದ ಸಾಮಾಜಿಕ ಸಮಾನತೆಯ ಹರಿಕಾರ. ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಗಾದ ದೀನ ದಲಿತರ ಏಳಿಗೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಅವರ ಆದರ್ಶಗಳು ಎಲ್ಲ ವರ್ಗದ ಜನರಿಗೂ ಮಾದರಿಯಾಗಿವೆ ಎಂದರು.
ಈ ವೇಳೆಯಲ್ಲಿ ಎ.ಎಂ.ನಾಗೊಂಡ, ಎಂ.ಬಿ.ಪೂಜಾರಿ, ಆರ್.ಎನ್.ಬಕಾಟೆ, ಆರ್.ವಿ.ಭುಜಂಗನವರ, ಎಸ್.ಕೆ.ಶಿಂದೆ, ಎಸ್.ಬಿ.ಒಡೆಯರ, ಜೆ.ಕೆ.ರಾಠೋಡ, ಎಸ್.ಡಿ.ಚವ್ಹಾಣ್, ರೇಖಾ ರಜಪೂತ, ಪಿ.ಎಂ.ಕೌಲಗಿ, ಎಸ್.ಎಂ.ಮಾಳಿ, ಎಸ್.ಎಲ್.ದೊಡಮನಿಯವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

