Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಕೊಂಡಗೂಳಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಶ್ರೀಗುರು ವೀರಘಂಟಿ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.ದಿ:೩೦ ರಂದು ಬುಧವಾರ ಬೆಳಿಗ್ಗೆ ಬಸವ ಜಯಂತಿ ಅಂಗವಾಗಿ ವೀರಘಂಟಿ ಮಡಿವಾಳೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ೧೦ ಗಂಟೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಹಾಗೂ ಬಸವೇಶ್ವರ ವೃತ್ತದ ಪ್ರತಿಮೆಗೆ ಪೂಜೆ, ರಾತ್ರಿ ೭ ಗಂಟೆಗೆ ಬಸವೇಶ್ವರರ ತೊಟ್ಟಿಲು ಕಾರ್ಯಕ್ರಮ ಹಾಗೂ ‘ಶರಣಚರಿತಾಮೃತ’ ಧಾರ್ಮಿಕ ಪ್ರವಚನ ಮುಕ್ತಾಯ ಸಮಾರಂಭ ಜರುಗಲಿದೆ.ದಿ:೦೧ ಮೇ ಗುರುವಾರರಂದು ಬೆಳಿಗ್ಗೆ ವೀರಘಂಟಿ ಮಡಿವಾಳೇಶ್ವರರ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿ ಉತ್ಸವ, ನಂದಿಕೋಲ ಮೆರವಣಿಗೆ, ಸುಮಂಗಲೆಯರ ಕುಂಭ, ಕಳಸಕನ್ನಡಿಯೊಂದಿಗೆ ಯಾಳವಾರ ಗ್ರಾಮದ ಶ್ರೀಭೀರಲಿಂಗೇಶ್ವರ ಡೊಳ್ಳಿನ ಸಂಘ ಮತ್ತು ಸಮಸ್ತ ಗ್ರಾಮಸ್ಥರೊಡನೆ ಸಕಲ ವಾಧ್ಯವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಮಹಾಪ್ರಸಾದ ವಿತರಣೆಯಾಗಲಿದೆ. ಸಾಯಂಕಾಲ ೫ ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳು ಹಾಗೂ ರಾತ್ರಿ ೧೦.೩೦ ಗಂಟೆಗೆ ಸಿದ್ದು ಮೇಲಿನಮನಿ ಅವರ ದೀಪಕ ಮೆಲೋಡಿಸ್ ದೇವರಹಿಪ್ಪರಗಿ ಇವರಿಂದ ಸಂಗೀತ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಕಾಯಕವೇ ನಾಯಕ ಎಂಬ ಸಂದೇಶ ಕೊಟ್ಟಿರುವ ಬಸವಣ್ಣನವರು ಇಂದಿನ ಯುವಕರಿಗೆ ನಾಯಕನಾಗಬೇಕು. ಆದ್ದರಿಂದ ಸಂಪತ್ತಿನ ಬೆನ್ನು ಹತ್ತಿ ಸಂತಸ ಕಳೆದುಕೊಳ್ಳಬಾರದು. ಜೀವನದ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು ಎಂದು ಓಲೇಮಠದ ಆನಂದ ದೇವರು ಶ್ರೀಗಳು ಹೇಳಿದರು.ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.15 ರಿಂದ ಏ.29 ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ ಹತ್ತನೆ ದಿನವಾದ ಗುರುವಾರ ಸಂಜೆ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನುಡಿ ಹಂಚಿಕೊಳ್ಳುತ್ತ ಮಾತನಾಡಿ, ಭಗವಂತನ ಮೇಲಿನ ನಂಬಿಕೆಯ ಕೊರತೆಯಿಂದ ನರಕ ಸೃಷ್ಟಿ ಮಾಡಿಕೊಳ್ಳಬಾರದು. ಪವಿತ್ರವಾದ ನಂಬಿಕೆ ಅಂತಃಕರಣದಲ್ಲಿದ್ದರೆ ದುಃಖವಿಲ್ಲ, ನೋವಿಲ್ಲ. ಬದಲಾಗಿ ಏನೆಲ್ಲ ಸಾಧಿಸಬಹುದು ಎಂದರು.ತೇರದಾಳ ಶಾಸಕ ಸಿದ್ದು ಸವದಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬಸವಾದಿ ಶಿವಶರಣರ ಪ್ರತಿಯೊಂದು ವಚನವೂ ಬದುಕಿನ ದಾರಿಯನ್ನು ತೋರಿಸುತ್ತವೆ. ಬದುಕನ್ನು ಕಟ್ಟಿಕೊಳ್ಳಲು ಒಂದೇ ಒಂದು ವಚನ ಸಾಕು. ಸಮಾಜದಲ್ಲಿ ತಾಂಡವವಾಡುತ್ತಿರುವ…

Read More

ರೂ.15 ಲಕ್ಷ ಆದಾಯ ಪಡೆವ ಕುಳಲಿ ಗ್ರಾಮದ ರೈತನ ಸಾಧನೆಗೆ ಪ್ರದಾನಿ ಮೋದಿ ಮೆಚ್ಚುಗೆ ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ ಎಮ್ ಇಟ್ಟಿಜಮಖಂಡಿ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ ಬಿಸಿಲಿನ ಬಯಲು ಪ್ರದೇಶದಲ್ಲಿ ಸೇಬು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿದ್ದಾರೆ. ಈ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ರೀಶೈಲರನ್ನು ಶ್ಲಾಘಿಸಿದ್ದಾರೆ.ರೈತನ ಸಾಧನೆ ವಿವರ ನೋಡಿ..ಸಾಮಾನ್ಯವಾಗಿ ಸೇಬು ಹಣ್ಣಿನ ಬೆಳೆಯನ್ನ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಂತಹ ಶೀತ ಪ್ರದೇಶದಲ್ಲಿ ಬೆಳೆಯೋದು ಕಾಮನ್. ಆದರೆ, ಕನ್ನಡದ ರೈತನೊಬ್ಬ ಬಿರುಬಿಸಿಲಿನ ಬಯಲು ಪ್ರದೇಶದಲ್ಲಿಯೇ ಸೇಬು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿದ್ದಾನೆ. ಸಾಲದ್ದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರೈತನ ಗುಣಗಾನ ಮಾಡಿದ್ದಾರೆ. ಹಾಗಾದರೆ ಆ ರೈತ ಯಾರು? ಆತನ ಸಾಧನೆ ಹೇಗಿತ್ತು ಅಂತೀರಾ. ಈ ಕುರಿತು ವರದಿ ಇಲ್ಲಿದೆ.ಹೌದು, ನೀವು ಆ ಜಮೀನಿಗೆ…

Read More

ಕುವೆಂಪು ಓದು’ ಕಮ್ಮಟವನ್ನು ಉದ್ಘಾಟಿಸಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜದಲ್ಲಿ ಅಂಚಿಗೆ ತಳ್ಳಲಾಗಿದ್ದ ಮಹಿಳೆಯರು ಮತ್ತು ರೈತರನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಷ್ಟ್ರಕವಿ ಕುವೆಂಪು ರಚಿಸಿದ ಸಾಹಿತ್ಯ ಸರ್ವಶ್ರೇಷ್ಠವಾಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು.ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ‘ಕುವೆಂಪು ಓದು’ ಕಮ್ಮಟವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಅವರು ಕನ್ನಡ ಕವಿಗಳಲ್ಲಿಯೇ ಅಗ್ರಗಣ್ಯರು. ಅವರ ಸುದೀರ್ಘವಾದ ಸಾಹಿತ್ಯ ಮಾನವೀಯ ಮೌಲ್ಯವನ್ನು ಸಾರುತ್ತದೆ. ಮನುಷ್ಯ ಮನುಷತ್ವವನ್ನು ಹೊಂದಲು ಕುವೆಂಪುರವರ ಸಾಹಿತ್ಯ ಓದಲೇಬೇಕು ಎಂದು ಅವರು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿದ್ದ ಸಿಂಡಿಕೇಟ್ ಸದಸ್ಯ ಡಾ.ನಟರಾಜ ಬೂದಾಳು ಅವರು ಮಾತನಾಡಿ, ಕುವೆಂಪು ಅವರ ಸಾಹಿತ್ಯ ಮಾನವೀಯ ಒಲುಮೆಯ ಆಗರ. ಈ ನಿಟ್ಟಿನಲ್ಲಿ ಮಹಿಳೆಯರನ್ನು ಕುವೆಂಪುರವರ ಓದಿಗೆ ಸ್ಪಂದಿಸುವುದು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾಮಾನವತಾವಾದಿ ಬಸವೇಶ್ವರ ಜಯಂತಿ ಅಂಗವಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಸವ ಅಧ್ಯಯನ ಪೀಠದ ವತಿಯಿಂದ ಸೋಮವಾರ ಬಸವಣ್ಣನವರ ವಚನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ೨೫ ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.ಈ ಸ್ಫರ್ಧೆಯಲ್ಲಿ ವಿಜೇತರ ವಿವರ: ಪ್ರಥಮ ಬಹುಮಾನ ಸವಿತಾ ಚಿಗುರಿ ಶಿಕ್ಷಣ ಅಧ್ಯಯನ ವಿಭಾಗ, ದ್ವಿತೀಯ ಬಹುಮಾನ ಲಕ್ಷ್ಮಿ ಕಾತ್ರಾಳ ಇಂಗ್ಲಿಷ್ ಅಧ್ಯಯನ ವಿಭಾಗ, ತೃತೀಯ ಬಹುಮಾನ ಭವಾನಿ ಅಂಗಡಿ ಸ್ನಾತಕ ವಿಭಾಗ, ಚತುರ್ಥಿ ಬಹುಮಾನ ಐಶ್ವರ್ಯ ಬಿರಾದಾರ ಸ್ನಾತಕ ವಿಭಾಗ ಇವರು ಪಡೆದುಕೊಂಡರು.ಸ್ಪರ್ಧೆಯ ತೀರ್ಪುಗಾರರಾಗಿ ಡಾ.ಮಲ್ಲಿಕಾರ್ಜುನ ಮೇತ್ರಿ, ಡಾ. ರಾಜಶೇಖರ ಬೆನಕಹಳ್ಳಿ ಹಾಗೂ ಡಾ.ವಿಷ್ಣು ಎಂ ಶಿಂದೆ ಅವರು ಕಾರ್ಯನಿರ್ವಹಿಸಿದರು.ಬಸವ ಪೀಠದ ಸಂಯೋಜಕ ಡಾ.ರಾಜಕುಮಾರ ಮಾಲಿಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Read More

ಶ್ರೀ ಶರಣಬಸವೇಶ್ವರ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡ ಜ್ಞಾನೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶೈಕ್ಷಣಿಕ ಹಂತದಲ್ಲಿ ವಿದ್ಯಾರ್ಥಿಗಳು ಬದ್ಧತೆ, ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ಭವಿಷ್ಯದಲ್ಲಿ ನಿಶ್ಚಿತ ಗುರಿ ಈಡೇರಿಸಿಕೊಳ್ಳಲು, ನಿರೀಕ್ಷಿತ ಸಾಧನೆ ಮಾಡಲು ಸಾಧ್ಯ ಎಂದು ನಗರದ ಎಸ್.ಎಸ್.ಬಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಮಹೇಂದ್ರ ಕಾಪಸೆ ಅಭಿಪ್ರಾಯಪಟ್ಟರು.ನಗರದ ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಯಾದ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜ್ಞಾನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ 24 ವಿದ್ಯಾರ್ಥಿಗಳು ಮತ್ತು ಎಇಇ ಪರೀಕ್ಷೆಯಲ್ಲಿ ನಾಲ್ವರು ಸಾಧಕ ವಿದ್ಯಾರ್ಥಿಗಳು, ಸಾಧಕ ಮಕ್ಕಳ ಪೋಷಕರು, ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಗುರಿ ಸಾಧಿಸುವ ಛಲ ಇದ್ದವರಿಗೆ ಅಂದುಕೊಂಡುದನ್ನು ಪಡೆಯುವುದು ಅಸಾಧ್ಯವೇನಲ್ಲ. ಆದರೆ ಇದಕ್ಕಾಗಿ ಸತತ ಪರಿಶ್ರಮ, ಬದ್ಧತೆ, ಶ್ರದ್ಧೆ ಬೇಕು ಎಂದು ಕಿವಿಮಾತು ಹೇಳಿದರು.ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸಂಪ್ರದಾ ಪಾಟೀಲ ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣ ಮಾಡುವುದು ಪ್ರಸಕ್ತ…

Read More

ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ದತ್ತಾಂಶ ಶೇಖರಣೆಗೆ ಸಮೀಕ್ಷೆ ಕಾರ್ಯ | ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ದತ್ತಾಂಶಗಳನ್ನು ಶೇಖರಿಸಲು ಜಿಲ್ಲೆಯಾದ್ಯಂತ ಮೇ.೫ರಿಂದ ೧೭ರವರೆಗೆ ೧೨ ದಿನಗಳ ಕಾಲ ಕೈಗೊಂಡಿರುವ ಸಮೀಕ್ಷಾ ಕಾರ್ಯವನ್ನು ಅತ್ಯಂತ ಪಾರದರ್ಶಕ ಹಾಗೂ ನಿಯಮಗಳನ್ವಯ ನಡೆಸುವಂತೆ ನಿಯೋಜಿತ ಮಾಸ್ಟರ್ ಟ್ರೇನರ್‌ಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸೋಮವಾರ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್‌ರವರ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ಕಾರ್ಯಕ್ಕೆ ನಿಯೋಜಿತಗೊಂಡ ತಾಲೂಕಿನ ಮಾಸ್ಟರ್ ಟ್ರೇನ್‌ರ್‌ಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪರಿಶಿಷ್ಟ ಜಾತಿಯ ಜನರ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸುವ ಕಾರ್ಯ ಸಮಾಜ ಕಲ್ಯಾಣ ಇಲಾಖೆಯಡಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ವಿಧಾನಸಭಾ ಮತಕ್ಷೇತ್ರಗಳ ಮತಗಟ್ಟೆಗಳಲ್ಲಿ ದಿನಾಂಕ : ೦೫-೦೫-೨೦೨೫ರಿಂದ ೧೭-೫-೨೦೨೫ರವರೆಗೆ ಗಣತಿದಾರರು ಪರಿಶಿಷ್ಟ ಜಾತಿಯ ಪ್ರತಿ ಮನೆ-ಮನೆಗೆ ಭೇಟಿ ನೀಡಿ ನಿಖರ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಾಗರ ಜೀ ಬಣ ( ರಿ.) ಗ್ರಾಮ ಶಾಖೆ ಕೋರವಾರ. ತಾ- ದೇವರ ಹಿಪ್ಪರಗಿ ವತಿಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 134 ನೇ ಜಯಂತ್ಯೋತ್ಸವ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಲಮೇಲ ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಲಮೇಲ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ರವರಿಗೆ ಅವರ ಸುಧೀರ್ಘ ಶೈಕ್ಷಣಿಕ, ಸಂಘಟನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಸಮಾರಂಭದಲ್ಲಿ ಶಾಸಕ ರಾಜುಗೌಡ ಪಾಟೀಲ ಸೇರಿದಂತೆ ಗಣ್ಯಮಾನ್ಯರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಬಸವೇಶ್ವರ ಜಯಂತಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏ.28 ರಿಂದ 30 ರ ವರಗೆ ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದೆ.ಏ.28 ರಂದು ಬೆಳಗ್ಗೆ 7 ಗಂಟೆಗೆ ಬಸವೇಶ್ವರ ದೇವಸ್ಥಾನದಲ್ಲಿ ಶಿವಭಜನೆ ಆರಂಭವಾಗುವುದು. ಏ.29 ರಂದು ರಾತ್ರಿ 9-30 ಗಂಟೆಗೆ ಸಾಲೋಟಗಿಯ ಶಿವಯೋಗೇಶ್ವರ ಭಜನಾ ಸಂಘ ಹಾಗೂ ಹತ್ತಳ್ಳಿಯ ಗುರುಪಾದೇಶ್ವರ ಭಜನಾ ಸಂಘದವರಿಂದ ಭಜನಾ ಪದಗಳ ಕಾರ್ಯಕ್ರಮ ನಡೆಯುವುದು.ಏ.30 ರಂದು ಬೆಳಗ್ಗೆ 7 ಗಂಟೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ವಿರಕ್ತಮಠದಿಂದ ಬಸವೇಶ್ವರ ದೇವಸ್ಥಾನದ ವರೆಗೆ ನಡೆಯಲಿದೆ. ಮೆರವಣಿಗೆ ದೇವಸ್ಥಾನಕ್ಕೆ ಆಗಮಿಸಿದ ನಂತರ ಬೆಳಗ್ಗೆ 7-30ಕ್ಕೆ ಶ್ರೀಗಳಿಂದ ಷಟಸ್ಥಲ ಧ್ವಜಾರೋಹಣ ನೆರವೇರುವುದು. ಬೆಳಗ್ಗೆ 10-30 ಗಂಟೆಗೆ ಬಸವಜನ್ಮ ಸ್ಮಾರಕದಲ್ಲಿ ಬಾಲಬಸವೇಶ್ವರ ತೊಟ್ಟಿಲು ಕಾರ್ಯಕ್ರಮ ಹಾಗೂ ನಾಮಕರಣ ನಡೆಯಲಿದೆ. ಸಂಜೆ 5 ಗಂಟೆಗೆ ದೇವಸ್ಥಾನದ ಆವರಣದಲ್ಲಿ ವಚನ ಚಿಂತನ ಕಾರ್ಯಕ್ರಮ ನಡೆಯಲಿದೆ. ಸಿದ್ಧಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಕಬ್ಬು ಅಭಿವೃದ್ಧಿ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಬಸವ ಜಯಂತಿಯಂದು ರೇಣುಕ ಜಯಂತಿಯನ್ನು ಆಚರಿಸಲು ಹೊರಟಿರುವ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರ ನಿಲುವು ಸರಿಯಾದ ಕ್ರಮವಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಕಾರ್ಯಾಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಸವಣ್ಣನವರು ಲಿಂಗಾಯಿತ ಧರ್ಮ ಸಂಸ್ಥಾಪಕರಾಗಿದ್ದು, ಬಸವಣ್ಣನ ವಿಚಾರಗಳೇ ಬೇರೆ ರೇಣುಕರ ವಿಚಾರಗಳೇ ಬೇರೆಯಾಗಿವೆ. ಬಸವ ಜಯಂತಿಯಂದು ಬಸವಣ್ಣನ ವಿಚಾರಗಳು ಜನಮನಕ್ಕೆ ಮುಟ್ಟಬೇಕು. ಸಾಂಸ್ಕೃತಿಕ ನಾಯಕ ಬಸವಣ್ಣನ ವಿಚಾರಗಳಿಗೆ ಮೆರಗು ಬರಬೇಕಾದರೆ ಬಸವ ಜಯಂತಿಯ ಬಸವಣ್ಣನವರ ವಿಚಾರಗಳಿಗೆ ಹೆಚ್ಚು ಹೊತ್ತು ಕೊಡಬೇಕಾಗುತ್ತದೆ. ಅನಾವಶ್ಯಕವಾಗಿ ವೀರಶೈವ ಲಿಂಗಾಯತ ಮಹಾಸಭೆ ಸಮಾಜದಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಮಾಡಬಾರದು. ಈ ನಿಟ್ಟಿನಲ್ಲಿ ನಾಡಿನ ಮಠಾಧೀಶರು ವೀರಶೈವ ಲಿಂಗಾಯತ ಮಹಾಸಭೆಯವರಿಗೆ ಬುದ್ಧಿ ಹೇಳಬೇಕಾಗಿದ್ದು ಇಂದಿನ ಅನಿವಾರ್ಯತೆಯಾಗಿದೆ. ರೇಣುಕ ಜಯಂತಿಯನ್ನು ಬೇರೆ ದಿನ ಆಚರಿಸಲು ನಮ್ಮದೇನು ತಕರಾರು ಇಲ್ಲ . ವೀರಶೈವ ಲಿಂಗಾಯತ ಸಭೆಯ ಅಧ್ಯಕ್ಷ ಶಂಕರ ಬಿದರಿ ಅವರು ತಮ್ಮ ನಿಲುವಿನಿಂದ ಹಿಂದೆ…

Read More