Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಾಹೀರಾತು ನೀತಿ ಸ್ಥಗಿತಕ್ಕೆ ಸಚಿವದ್ವಯರಲ್ಲಿ ಸಂಪಾದಕರ ಮನವಿ

ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿರುವುದೇ ರಂಜಾನ್ ಸಂದೇಶ

ಶಾಸಕ ನಾಡಗೌಡ ಅವರ ಧಮಕಿಗೆ ಹೆದರೋ ಮಗ ನಾನಲ್ಲ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮನುಷ್ಯ ಮನುಷತ್ವ ಹೊಂದಲು ಕುವೆಂಪು ಸಾಹಿತ್ಯ ಓದಲೇಬೇಕು
(ರಾಜ್ಯ ) ಜಿಲ್ಲೆ

ಮನುಷ್ಯ ಮನುಷತ್ವ ಹೊಂದಲು ಕುವೆಂಪು ಸಾಹಿತ್ಯ ಓದಲೇಬೇಕು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕುವೆಂಪು ಓದು’ ಕಮ್ಮಟವನ್ನು ಉದ್ಘಾಟಿಸಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಸಮಾಜದಲ್ಲಿ ಅಂಚಿಗೆ ತಳ್ಳಲಾಗಿದ್ದ ಮಹಿಳೆಯರು ಮತ್ತು ರೈತರನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಷ್ಟ್ರಕವಿ ಕುವೆಂಪು ರಚಿಸಿದ ಸಾಹಿತ್ಯ ಸರ್ವಶ್ರೇಷ್ಠವಾಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ‘ಕುವೆಂಪು ಓದು’ ಕಮ್ಮಟವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಅವರು ಕನ್ನಡ ಕವಿಗಳಲ್ಲಿಯೇ ಅಗ್ರಗಣ್ಯರು. ಅವರ ಸುದೀರ್ಘವಾದ ಸಾಹಿತ್ಯ ಮಾನವೀಯ ಮೌಲ್ಯವನ್ನು ಸಾರುತ್ತದೆ. ಮನುಷ್ಯ ಮನುಷತ್ವವನ್ನು ಹೊಂದಲು ಕುವೆಂಪುರವರ ಸಾಹಿತ್ಯ ಓದಲೇಬೇಕು ಎಂದು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಸಿಂಡಿಕೇಟ್ ಸದಸ್ಯ ಡಾ.ನಟರಾಜ ಬೂದಾಳು ಅವರು ಮಾತನಾಡಿ, ಕುವೆಂಪು ಅವರ ಸಾಹಿತ್ಯ ಮಾನವೀಯ ಒಲುಮೆಯ ಆಗರ. ಈ ನಿಟ್ಟಿನಲ್ಲಿ ಮಹಿಳೆಯರನ್ನು ಕುವೆಂಪುರವರ ಓದಿಗೆ ಸ್ಪಂದಿಸುವುದು ಅತ್ಯಂತ ಅವಶ್ಯಕವಾಗಿದೆ. ಓದು ಸಹಜವಾದ ಓದಾಗಿರದೇ ವ್ಯಕ್ತಿತ್ವ ವಿಕಸನವನ್ನು ಮಾಡುವ ಓದಾಗಬೇಕು. ಅಂತಹ ಓದನ್ನು ಕುವೆಂಪುರವರ ಸಾಹಿತ್ಯದಿಂದ ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ. ಅವರು, ಕುವೆಂಪುರವರು ಆತ್ಮವಿಶ್ವಾಸ ತುಂಬುವ ಕವಿಗಳು. ಯಾವ ವ್ಯಕ್ತಿಯ ಆತ್ಮವಿಕಾಸ ಬೆಳೆಸುತ್ತದೆಯೋ ಮೌಲ್ಯವನ್ನು ಪ್ರತಿಪಾದಿಸುತ್ತಿದೆಯೋ, ನಂಬಿಕೆಯನ್ನು ದೃಡಗೊಳಿಸುತ್ತದೆಯೋ, ಸಾಮಾಜಿಕ ಪ್ರಸ್ತುತತೆಯನ್ನು ಬಿಂಬಿಸುತ್ತದೆಯೋ ಅದು ನಿಜವಾದ ಸಾಹಿತ್ಯ. ಅಂತಹ ಸಾಹಿತ್ಯವನ್ನು ನೀಡಿದವರು ಕುವೆಂಪುರವರು. ಮಾನವನ ವೈಜ್ಞಾನಿಕ ಜ್ಞಾನ ಸಾರ್ವತ್ರಿಕ ಸತ್ಯವನ್ನು ಪ್ರತಿಪಾದಿಸುವ ಸಾಹಿತ್ಯವೇ ಜಗತ್ತಿನ ಶ್ರೇಷ್ಠ ಸಾಹಿತ್ಯ. ಇಂತಹ ಸಾಹಿತ್ಯವನ್ನು ನೀಡಿದ ಕುವೆಂಪು ಅವರು ಕನ್ನಡದ ಜ್ಞಾನ ಬೆಳವಣಿಗೆಯ ಬೆಳಕಾಗಿ ನಿಂತವರು ಎಂದು ತಿಳಿಸಿದರು.
ನಾಡಗೀತೆಯನ್ನು ನೀಡಿದ ವಿಶ್ವಕವಿಗಳಲ್ಲೇ ಶ್ರೇಷ್ಠವಾದ ಕುವೆಂಪುರವರ ಸಾಹಿತ್ಯ ‘ಮನುಜ ಮತ ವಿಶ್ವಪಥ’ ಎಂಬ ಸಂದೇಶವನ್ನು ಸಾರುತ್ತದೆ. ವೈಜ್ಞಾನಿಕತೆ ಮತ್ತು ವೈಚಾರಿಕತೆ ಕುವೆಂಪುರವರ ಮಹತ್ವದ ಸಂದೇಶಗಳು. ಮೊಬೈಲ್ ಸಂದೇಶಗಳನ್ನು ಬಿಟ್ಟು ಪುಸ್ತಕ ಓದುವ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳು ಜ್ಞಾನದ ಬೆಳಕನ್ನು ಹೊಂದಬೇಕೆಂದು ಕುಲಸಚಿವ ಶಂಕರಗೌಡ ಸೋಮನಾಳ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಧಿಕಾರದ ಸದಸ್ಯ ಸಂಚಾಲಕ ಎಸ್.ಗಂಗಾಧರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಡಾ.ರಾಮಲಿಂಗಪ್ಪ ಟಿ.ಬೇಗೂರು ಕಮ್ಮಟದ ರೂಪರೇಷಗಳನ್ನು ವಿವರಿಸಿದರು.
ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಂ.ನಾಗರಾಜ ಸ್ವಾಗತಿಸಿದರು. ಕುಮಾರಿ. ನಂದಿನಿ ಕಾರ್ಯಕ್ರಮ ನಿರೂಪಿಸಿದರು. ವೆಂಕಟ ಲಕ್ಷ್ಮಿ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಾಹೀರಾತು ನೀತಿ ಸ್ಥಗಿತಕ್ಕೆ ಸಚಿವದ್ವಯರಲ್ಲಿ ಸಂಪಾದಕರ ಮನವಿ

ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿರುವುದೇ ರಂಜಾನ್ ಸಂದೇಶ

ಶಾಸಕ ನಾಡಗೌಡ ಅವರ ಧಮಕಿಗೆ ಹೆದರೋ ಮಗ ನಾನಲ್ಲ

ಬಸವನಬಾಗೇವಾಡಿಯಲ್ಲಿ ಸಡಗರದಿಂದ ರಂಜಾನ್ ಆಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಾಹೀರಾತು ನೀತಿ ಸ್ಥಗಿತಕ್ಕೆ ಸಚಿವದ್ವಯರಲ್ಲಿ ಸಂಪಾದಕರ ಮನವಿ
    In (ರಾಜ್ಯ ) ಜಿಲ್ಲೆ
  • ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿರುವುದೇ ರಂಜಾನ್ ಸಂದೇಶ
    In (ರಾಜ್ಯ ) ಜಿಲ್ಲೆ
  • ಶಾಸಕ ನಾಡಗೌಡ ಅವರ ಧಮಕಿಗೆ ಹೆದರೋ ಮಗ ನಾನಲ್ಲ
    In (ರಾಜ್ಯ ) ಜಿಲ್ಲೆ
  • ಬಸವನಬಾಗೇವಾಡಿಯಲ್ಲಿ ಸಡಗರದಿಂದ ರಂಜಾನ್ ಆಚರಣೆ
    In (ರಾಜ್ಯ ) ಜಿಲ್ಲೆ
  • ಜನರ ಆರ್ಥಿಕ ಸಬಲೀಕರಣದಲ್ಲಿ ಸಹಕಾರ ರಂಗದ ಪಾತ್ರ ಅನನ್ಯ
    In (ರಾಜ್ಯ ) ಜಿಲ್ಲೆ
  • ಜಾಯವಾಡಗಿ ಜಾತ್ರೆಯಲ್ಲಿ ಗಮನ ಸೆಳೆದ ಜಾನುವಾರುಗಳ ಜಾತ್ರೆ
    In (ರಾಜ್ಯ ) ಜಿಲ್ಲೆ
  • ರಂಜಾನ್: ಇಂಡಿಯಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ಪ್ರಾರ್ಥನೆ
    In (ರಾಜ್ಯ ) ಜಿಲ್ಲೆ
  • ಜಾನಪದ ಸಾಹಿತ್ಯ ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ಶ್ರೀಮಂತ ಸಾಹಿತ್ಯ
    In (ರಾಜ್ಯ ) ಜಿಲ್ಲೆ
  • ‘ಹುಲಿಮಿತ್ರ’ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ಅನಿಲ್ ಚಿಕ್ಕಮಾದು
    In (ರಾಜ್ಯ ) ಜಿಲ್ಲೆ
  • ವಾಣಿಜ್ಯ ಬಳಕೆ ಎಲ್ಪಿಜಿ ಹಂಚಿಕೆ ಶೇ.50ಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.