Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸರಕಾರದ ಜಾತಿ ಪಟ್ಟಿಯಲ್ಲಿ ಆದಿಬಣಜಿಗ ಸಮಾಜವನ್ನು ಪರಿಗಣಿಸಿರುವದನ್ನು ಅಖಿಲ ಕರ್ನಾಟಕ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ರಾಜ್ಯ ಘಟಕದ ಆಡಳಿತ ಮಂಡಳಿ ಸ್ವಾಗತಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನಿಡಿರುವ ಸಮಿತಿಯ ಸಂಘಟನಾ ಕಾರ್ಯದರ್ಶಿ ಶರಣಬಸವ ಕಿವಡನ್ನವರ ಸರಕಾರ ಆದಿಬಣಜಿಗ ಸಮಾಜ ಜಾತಿಯನ್ನು ೨ಎ ಅಡಿಯಲ್ಲಿ ಸೇರಿಸಿ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.೧೮೯೩ ಬ್ರಿಟಿಷರ ಆಡಳಿತ ಕಾಲದಲ್ಲಿ ಆದಿಬಣಜಿಗ ಎಂದು ಜಾತಿ ಗೆಜೆಟ್ ನಲ್ಲಿ ನಮೂದಾಗಿತ್ತು ಆದಾದ ಮೇಲೂ ನಂತರ ರಾಜ್ಯ ಸರಕಾರ ಜಾತಿ ಪಟ್ಟಿಯಲ್ಲಿ ಸೇರಿಸಿದ್ದರೂ ಅದು ಬಹಳ ದಿನ ಉಳಿಯಲಿಲ್ಲ ಆದರೂ ಸಂಘಟನೆಯವರೂ ಸುಮ್ಮನೆ ಕೂಡದೆ ಹಲವಾರೂ ಬಾರಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ೨೦೨೨ ರಲ್ಲಿ ಸಮಾಜದ ಬಹಿರಂಗ ವಿಚಾರಣೆ ನಡೆಸಿ ಎಲ್ಲ ರೀತಿಯ ಮಾಹಿತಿ ಸಂಗ್ರಹಿಸಿದ ಹೊತ್ತಿಗೆಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಭೂಮ್ಮಾಯಿ ಅವರಿಗೆ ಸಲ್ಲಿಸಿದ ಪ್ರಯುಕ್ತ ಜಾತಿ ಪಟ್ಟಿಯಲ್ಲಿ ಹೆಸರು ಸೆರ್ಪಡೆಯಾಗಿದೆ ಎಂದರು.ಈಗಿನ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಬಸವಾದಿ ಶರಣರ ವಚನಗಳಲ್ಲಿ ಜೀವನಕ್ಕೆ ಬೇಕಾದ ಜೀವನ ಮೌಲ್ಯಗಳಿವೆ. ಶರಣರ ವಚನಗಳನ್ನು ಓದುವುದರ ಮೂಲಕ ಅದರಲ್ಲಿನ ತತ್ವಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.ಪಟ್ಟಣದ ಬಸವೇಶ್ವರ ದೇವಾಲಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೋಣೆಯಲ್ಲಿ ಬಸವಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರ ಬಸವಜಯಂತಿಯಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ವಚನ ಕಂಠಪಾಠ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತಿಕ ಸಮಸ್ಯೆಗೆ ಪರಿಹಾರ ಮತ್ತು ಆದರ್ಶ ಬದುಕಿನ ಮೌಲ್ಯ ವಚನ ಸಾಹಿತ್ಯದಲ್ಲಿದೆ. ಶರಣರ ವಚನ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಯತ್ನಿಸಿದಾಗ ಜೀವನದಲ್ಲಿ ಶಾಂತಿ-ನೆಮ್ಮದಿ, ಸಾರ್ಥಕತೆ ಕಾಣಲು ಸಾಧ್ಯ. ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಲು ವಚನ ಕಂಠಪಾಠ ಸೇರಿದಂತೆ ಬಸವಾದಿ ಶರಣರ ವಚನಗಳ ಕುರಿತ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡುವದು ಅಗತ್ಯವಿದೆ. ಹಿಂದೆ ನಾವು ಈ ನೆಲದಲ್ಲಿ ವಚನ ಕಂಠಪಾಠ ಸ್ಪರ್ಧೆಗಳನ್ನು ಮಾಡುತ್ತಿದ್ದವು. ಈಚೆಗೆ ಇದು ಕೆಲ ಕಾರಣಗಳಿಂದ…
ಉದಯರಶ್ಮಿ ದಿನಾಚರಣೆ ಸಿಂದಗಿ: ಮತಕ್ಷೇತ್ರದ ಮಲಘಾಣ ಗ್ರಾಮದಲ್ಲಿ ಇತ್ತೀಚೆಗೆ ಅಕಾಲಿಕ ಮಳೆಯಿಂದ ಸಿಡಿಲು ಬಡಿದು ಮೃತಪಟ್ಟ ಬಿಸ್ಮಿಲ್ಲಾ ದಸ್ತಗೀರಸಾಬ್ ಅವಟಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸರಕಾರ ನೀಡಿದ ೫ಲಕ್ಷ ರೂ. ಪರಿಹಾರ ಮೊತ್ತದ ಚೆಕ್ಕನ್ನು ನೀಡಿ ಶಾಸಕ ಅಶೋಕ ಮನಗೂಳಿ ಸಾಂತ್ವಾನ ಹೇಳಿದರು.ಇದೇ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಮಾಂತಗೌಡ ಬಿರಾದಾರ ದಸಂಸ ಸಮಿತಿ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ, ರಾವುತಗೌಡ ಬಿರಾದಾರ,. ವಿಠ್ಠಲ ಖೇಡಗಿ, ಶ್ಯಾಮ ಚವ್ಹಾಣ, ಶೇಕಪ್ಪ ಮನ್ನಾಪುರ, ಬಾಪೂಗೌಡ ರೂಗಿ ಸೇರಿದಂತೆ ತಾಲೂಕು ಆಡಳಿತಾಧಿಕಾರಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ನಿವಾಸಿ, ಕರ್ನಾಟಕ ರಣಧೀರ ಪಡೆಯ ಉತ್ತರ ಕರ್ನಾಟಕ ಅಧ್ಯಕ್ಷರಾದ ಸಂತೋಷ ಮಣಿಗೀರಿ ಅವರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಇತ್ತೀಚೆಗೆ ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ಆಯೋಜಿಸಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೩೪ನೇ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸ್ಪೂರ್ತಿದಾಯಕ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆಡಿರುವ ಮಾತು ಆಘಾತ ತಂದಿದೆ. ಮತ ಸಿಕ್ಕಿದರೆ ಸಾಕು ಎಂಬ ಮನಸ್ಥಿತಿ ಅವರಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಹಾಗೂ ಖಂಡನೀಯ. ಈ ಕುರಿತು ಸಿಎಂ ಸಿದ್ದರಾಮಯ್ಯ ಜನರ ಬಳಿ ಕ್ಷಮೆಯಾಚಿಸಬೇಕು. ಅಲ್ಪಸಂಖ್ಯಾತರ ವಿಚಾರ ಬಂದಾಗ ಯಾವ ಮಟ್ಟಕ್ಕಿಳಿಯುತ್ತಾರೆ ಎಂಬ ಸತ್ಯ ಜನರಿಗೆ ಗೊತ್ತಿದೆ. ಆದರೆ, ದೇಶದ ವಿಚಾರ ಬಂದಾಗ, ಕಾಶ್ಮೀರದ ಭಯೋತ್ಪಾದಕರ ದಾಳಿ, ಹತ್ಯೆಗಳ ಘಟನೆಯನ್ನು ಪ್ರತಿಯೊಬ್ಬ ಸ್ವಾಭಿಮಾನಿ ಕೂಡ ಖಂಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಾಕಿಸ್ತಾನದ ಜೊತೆ ಯುದ್ಧ ಸಾರುವ ಅಗತ್ಯ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡನೀಯ. ಪಹಲ್ಗಾಮ್ ನಲ್ಲಿ ನಡೆದ ಘಟನೆ ನಮ್ಮ ರಾಷ್ಟ್ರದ ಮೇಲೆ ನಡೆದ ಹೇಡಿತನ ದಾಳಿ. ಜವಾಬ್ದಾರಿಯುತ ಸ್ಥಾನದಲ್ಲಿ ಅದರಲ್ಲೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವವರನ್ನು ಶಿಕ್ಷಿಸುವುದು ಬೇಡ ನಮ್ಮ ಭದ್ರತೆಯನ್ನು ಬಲಪಡಿಸಿ ಎಂಬ…
ಬಿಜೆಪಿ ನಿಯೋಗದಿಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರ ಭೇಟಿ | ಸ್ಪೀಕರ್ ಯು ಟಿ ಖಾದರ್ ಗೆ ನಿರ್ದೇಶನ ನೀಡಲು ಮನವಿ ಬೆಂಗಳೂರು: ವಿರೋಧ ಪಕ್ಷ ಬಿಜೆಪಿ ಸೋಮವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದು, ವಿಧಾನಸಭೆಯಿಂದ ತನ್ನ 18 ಶಾಸಕರ ಅಮಾನತು ರದ್ದುಗೊಳಿಸುವಂತೆ ಕೋರಿ ಮನವಿ ಸಲ್ಲಿಸಿದೆ.ಪ್ರತಿಪಕ್ಷ ನಾಯಕ ಆರ್ ಅಶೋಕ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಇಂದು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.ಶಾಸಕರ ಅಮಾನತು ಮರುಪರಿಶೀಲಿಸುವಂತೆ ಮತ್ತು ಅವರು ಜನಪ್ರತಿನಿಧಿಗಳಾಗಿ ತಮ್ಮ ಜವಾಬ್ದಾರಿಗಳನ್ನು ಮತ್ತೆ ವಹಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಸ್ಪೀಕರ್ ಯು ಟಿ ಖಾದರ್ ಅವರಿಗೆ ನಿರ್ದೇಶನ ನೀಡಬೇಕೆಂದು ಬಿಜೆಪಿ ನಾಯಕರು ರಾಜ್ಯಪಾಲರಿಗೆ ಮನವಿ ಮಾಡಿದರು.ರಾಜ್ಯದ ಪ್ರಮುಖ ವಿರೋಧ ಪಕ್ಷಕ್ಕೆ ಸೇರಿದ 18 ಶಾಸಕರ ಅಮಾನತು ಆದೇಶವನ್ನು ಮರುಪರಿಶೀಲಿಸುವಂತೆ ವಿಧಾನಸಭೆಯ ಸ್ಪೀಕರ್ ಗೆ ನಿರ್ದೇಶಿಸುವಂತೆ ನಾವು ಅತ್ಯಂತ ಗೌರವದಿಂದ ಬೇಡಿಕೊಳ್ಳುತ್ತೇವೆ” ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.ಅಮಾನತು…
ಬಿಜೆಪಿ ನಿಯೋಗದಿಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರ ಭೇಟಿ | ಸ್ಪೀಕರ್ ಯು ಟಿ ಖಾದರ್ ಗೆ ನಿರ್ದೇಶನ ನೀಡಲು ಮನವಿ ಬೆಂಗಳೂರು: ವಿರೋಧ ಪಕ್ಷ ಬಿಜೆಪಿ ಸೋಮವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದು, ವಿಧಾನಸಭೆಯಿಂದ ತನ್ನ 18 ಶಾಸಕರ ಅಮಾನತು ರದ್ದುಗೊಳಿಸುವಂತೆ ಕೋರಿ ಮನವಿ ಸಲ್ಲಿಸಿದೆ.ಪ್ರತಿಪಕ್ಷ ನಾಯಕ ಆರ್ ಅಶೋಕ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಇಂದು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.ಶಾಸಕರ ಅಮಾನತು ಮರುಪರಿಶೀಲಿಸುವಂತೆ ಮತ್ತು ಅವರು ಜನಪ್ರತಿನಿಧಿಗಳಾಗಿ ತಮ್ಮ ಜವಾಬ್ದಾರಿಗಳನ್ನು ಮತ್ತೆ ವಹಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಸ್ಪೀಕರ್ ಯು ಟಿ ಖಾದರ್ ಅವರಿಗೆ ನಿರ್ದೇಶನ ನೀಡಬೇಕೆಂದು ಬಿಜೆಪಿ ನಾಯಕರು ರಾಜ್ಯಪಾಲರಿಗೆ ಮನವಿ ಮಾಡಿದರು.ರಾಜ್ಯದ ಪ್ರಮುಖ ವಿರೋಧ ಪಕ್ಷಕ್ಕೆ ಸೇರಿದ 18 ಶಾಸಕರ ಅಮಾನತು ಆದೇಶವನ್ನು ಮರುಪರಿಶೀಲಿಸುವಂತೆ ವಿಧಾನಸಭೆಯ ಸ್ಪೀಕರ್ ಗೆ ನಿರ್ದೇಶಿಸುವಂತೆ ನಾವು ಅತ್ಯಂತ ಗೌರವದಿಂದ ಬೇಡಿಕೊಳ್ಳುತ್ತೇವೆ” ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.ಅಮಾನತು…
ಉದಯರಶ್ಮಿ ದಿನಪತ್ರಿಕೆ ವರದಿ: ಬಸವರಾಜ ನಂದಿಹಾಳಬಸವನಬಾಗೇವಾಡಿ: ಸಮಾಜ ಸುಧಾರಕ, ದಾರ್ಶನಿಕ, ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಏ.30 ರಂದು ಇರುವದರಿಂದ ಬಸವ ಜನಿಸಿದ ಬಸವನಬಾಗೇವಾಡಿಯ ಪಟ್ಟಣದಲ್ಲಿ ಬಸವ ಜಯಂತಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.ಕಳೆದ ಕೆಲ ದಿನಗಳಿಂದ ಬಸವ ಜನ್ಮಸ್ಮಾರಕ, ಬಸವೇಶ್ವರ ದೇವಸ್ಥಾನದಲ್ಲಿ ಮಂಡಳಿಯ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿರುವದು ಕಂಡುಬಂದಿತ್ತು. ಬಸವೇಶ್ವರ ದೇವಸ್ಥಾನ, ಬಸವಜನ್ಮ ಸ್ಮಾರಕ ಸೇರಿದಂತೆ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಯ ಸುತ್ತ ವಿದ್ಯುದೀಪದ ಅಲಂಕಾರ ಮಾಡಲಾಗಿದೆ.ಬಸವ ಜನಿಸಿದ ಬಸವನಬಾಗೇವಾಡಿ ಅಭಿವೃದ್ದಿಗೆ ಪ್ರತ್ಯೇಕ ಅಭಿವೃದ್ದಿ ಪ್ರಾಧಿಕಾರ ರಚಿಸಬೇಕೆಂದು ಬಹು ವರ್ಷಗಳಿಂದ ಬಸವ ಭಕ್ತರ ಬೇಡಿಕೆಗೆ ಸ್ಪಂದಿಸಿ ಹಾಗೂ ಸಚಿವ ಶಿವಾನಂದ ಪಾಟೀಲ ಅವರ ಇಚ್ಛಾಶಕ್ತಿ ಮೇರೆಗೆ ಈಚೆಗೆ ಸರ್ಕಾರ ಬಸವ ಜನಿಸಿದ ಬಸವನಬಾಗೇವಾಡಿ ಸೇರಿದಂತೆ ವಿವಿಧ ಶರಣರ ಕ್ಷೇತ್ರಗಳ ಅಬಿವೃದ್ದಿಗೆ ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರ ಘೋಷಣೆ ಮಾಡಿ ಅಸ್ತಿತ್ವಕ್ಕೆ ತಂದಿದೆ. ಪ್ರತ್ಯೇಕ ಪ್ರಾಧಿಕಾರ ರಚನೆಯಾಗಿರುವದರಿಂದ ಈ ಸಲದ ಬಸವ ಜಯಂತಿ ವೈಶಿಷ್ಟ್ಯಪೂರ್ಣವಾಗಿ ಆಚರಣೆ ಆಗುತ್ತದೆ ಎಂದು ಬಸವ ಭಕ್ತರು…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕು ಕೊಣ್ಣೂರ ಗ್ರಾಮದ ಸಂದೀಪ ಹೊಸಮನಿ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎ೨೫ ರಂದು ನಾಲತವಾಡದ ಕಾಲೇಜಿನಿಂದ ವಿಜಯಪುರಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ ಎಂದು ಸಂದೀಪನ ಸಹೋದರಿ ಸೌಮ್ಯ ಪೂಜಾರಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಕೆರೆಗಳಾದ ಸಂಗೋಗಿ, ತಡವಲಗಾ, ನಿಂಬಾಳ ಕೆಡಿ, ಹಂಜಗಿ ಕೆರೆಗಳಿಗೆ ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಇವರ ನೇತೃತ್ವದಲ್ಲಿ ಆಕಸ್ಮಿಕ ಭೇಟಿ ನೀಡಿದರು.ಸಂಗೋಗಿ ಕೆರೆಯ ಮೇಲೆ ೨೫ ಪಂಪಶೆಟ್ಟುಗಳನ್ನು ಜಪ್ತಿ ಮಾಡಿ ರೈತರಿಗೆ ಕೆರೆಯ ನೀರು ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಸಲಾಗುತ್ತಿದ್ದು ರೈತರು ಕೃಷಿಗೆ ಬಳಸಿದರೆ ಎಫ್.ಐ.ಆರ್ ದಾಖಲಿಸಲಾಗುವದೆಂದು ತಾಕೀತು ಮಾಡಿದರು.ಬೇಸಿಗೆ ಬೇಗೆಯ ಕಾವು ತಾಲೂಕಿನಾದಂತ ಏರುತ್ತಿರುವಂತೆಯೇ ತಾಲೂಕಿನಲ್ಲಿ ಜಲ ಸಂಕಟದ ಭೀತಿ ಎದುರಾಗಿದೆ. ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು ಸಧ್ಯ ಕೆರೆಯಲ್ಲಿರುವ ನೀರು ಕೇವಲ ಗ್ರಾಮದ ಜನರಿಗೆ ಉಪಯೋಗಕ್ಕೆ ಮಾತ್ರ ಬಳಸಲು ಆದೇಶವಿದ್ದು ರೈತರು ಕೃಷಿಗೆ ಬಳಸಬಾರದೆಂದು ಎಸಿ ಅನುರಾಧಾ ಹೇಳಿದರು.ಮೇ ತಿಂಗಳಲ್ಲಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಲುವಾಗಿ ಕೆರೆಗಳಲ್ಲಿ ನೀರು ಸಂಗ್ರಹಿಸಲಾಗುತ್ತಿದೆ. ಅದನ್ನು ಕೃಷಿಗೆ ಬಳಸಿದರೆ ಮುಂದೆ ಕೆರೆ ತುಂಬಲು ಕಷ್ಟ. ಹೀಗಾಗಿ ಕೆರೆಯ ನೀರು ಬಳಸದಿರಲು ವಿನಂತಿಸಿದರು.ಇಓ ನಂದೀಪ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಕಂದಾಯ ನಿರೀಕ್ಷಕ ಎಚ್.ಎಚ್.ಗುನ್ನಾಪುರ,…
