ಉದಯರಶ್ಮಿ ದಿನಾಚರಣೆ
ಸಿಂದಗಿ: ಮತಕ್ಷೇತ್ರದ ಮಲಘಾಣ ಗ್ರಾಮದಲ್ಲಿ ಇತ್ತೀಚೆಗೆ ಅಕಾಲಿಕ ಮಳೆಯಿಂದ ಸಿಡಿಲು ಬಡಿದು ಮೃತಪಟ್ಟ ಬಿಸ್ಮಿಲ್ಲಾ ದಸ್ತಗೀರಸಾಬ್ ಅವಟಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸರಕಾರ ನೀಡಿದ ೫ಲಕ್ಷ ರೂ. ಪರಿಹಾರ ಮೊತ್ತದ ಚೆಕ್ಕನ್ನು ನೀಡಿ ಶಾಸಕ ಅಶೋಕ ಮನಗೂಳಿ ಸಾಂತ್ವಾನ ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಮಾಂತಗೌಡ ಬಿರಾದಾರ ದಸಂಸ ಸಮಿತಿ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ, ರಾವುತಗೌಡ ಬಿರಾದಾರ,. ವಿಠ್ಠಲ ಖೇಡಗಿ, ಶ್ಯಾಮ ಚವ್ಹಾಣ, ಶೇಕಪ್ಪ ಮನ್ನಾಪುರ, ಬಾಪೂಗೌಡ ರೂಗಿ ಸೇರಿದಂತೆ ತಾಲೂಕು ಆಡಳಿತಾಧಿಕಾರಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

