Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 06, 2026

ಕೊಪ್ಪಳ ಹನುಮಂತ ಹಳ್ಳಿಕೇರಿಗೆ ರೂ.4ಲಕ್ಷ ಪರಿಹಾರ ಮಂಜೂರು

2028ಕ್ಕೆ ರಾಜ್ಯದಲ್ಲಿ ಎನ್.ಡಿ.ಎ ಕೈಗೆ ಅಧಿಕಾರದ ಚುಕ್ಕಾಣಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಸವ ಜನ್ಮಭೂಮಿಯಲ್ಲಿ ಜಯಂತಿ ಉತ್ಸವಕ್ಕೆ ಕ್ಷಣಗಣನೆ
(ರಾಜ್ಯ ) ಜಿಲ್ಲೆ

ಬಸವ ಜನ್ಮಭೂಮಿಯಲ್ಲಿ ಜಯಂತಿ ಉತ್ಸವಕ್ಕೆ ಕ್ಷಣಗಣನೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಸಮಾಜ ಸುಧಾರಕ, ದಾರ್ಶನಿಕ, ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಏ.30 ರಂದು ಇರುವದರಿಂದ ಬಸವ ಜನಿಸಿದ ಬಸವನಬಾಗೇವಾಡಿಯ ಪಟ್ಟಣದಲ್ಲಿ ಬಸವ ಜಯಂತಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.
ಕಳೆದ ಕೆಲ ದಿನಗಳಿಂದ ಬಸವ ಜನ್ಮಸ್ಮಾರಕ, ಬಸವೇಶ್ವರ ದೇವಸ್ಥಾನದಲ್ಲಿ ಮಂಡಳಿಯ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿರುವದು ಕಂಡುಬಂದಿತ್ತು. ಬಸವೇಶ್ವರ ದೇವಸ್ಥಾನ, ಬಸವಜನ್ಮ ಸ್ಮಾರಕ ಸೇರಿದಂತೆ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಯ ಸುತ್ತ ವಿದ್ಯುದೀಪದ ಅಲಂಕಾರ ಮಾಡಲಾಗಿದೆ.
ಬಸವ ಜನಿಸಿದ ಬಸವನಬಾಗೇವಾಡಿ ಅಭಿವೃದ್ದಿಗೆ ಪ್ರತ್ಯೇಕ ಅಭಿವೃದ್ದಿ ಪ್ರಾಧಿಕಾರ ರಚಿಸಬೇಕೆಂದು ಬಹು ವರ್ಷಗಳಿಂದ ಬಸವ ಭಕ್ತರ ಬೇಡಿಕೆಗೆ ಸ್ಪಂದಿಸಿ ಹಾಗೂ ಸಚಿವ ಶಿವಾನಂದ ಪಾಟೀಲ ಅವರ ಇಚ್ಛಾಶಕ್ತಿ ಮೇರೆಗೆ ಈಚೆಗೆ ಸರ್ಕಾರ ಬಸವ ಜನಿಸಿದ ಬಸವನಬಾಗೇವಾಡಿ ಸೇರಿದಂತೆ ವಿವಿಧ ಶರಣರ ಕ್ಷೇತ್ರಗಳ ಅಬಿವೃದ್ದಿಗೆ ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರ ಘೋಷಣೆ ಮಾಡಿ ಅಸ್ತಿತ್ವಕ್ಕೆ ತಂದಿದೆ. ಪ್ರತ್ಯೇಕ ಪ್ರಾಧಿಕಾರ ರಚನೆಯಾಗಿರುವದರಿಂದ ಈ ಸಲದ ಬಸವ ಜಯಂತಿ ವೈಶಿಷ್ಟ್ಯಪೂರ್ಣವಾಗಿ ಆಚರಣೆ ಆಗುತ್ತದೆ ಎಂದು ಬಸವ ಭಕ್ತರು ಅಂದುಕೊಂಡಿದ್ದರು. ಆದರೆ ಬಸವ ಭಕ್ತರ ನಿರೀಕ್ಷೆಯಂತೆ ಬಸವ ಜಯಂತಿ ಆಚರಣೆಯಾಗದೇ ಪ್ರತಿ ವರ್ಷದಂತೆ ಬಸವ ಜಯಂತಿ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ.
ಬಸವ ಜಯಂತಿಯಂಗವಾಗಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರು ಹನ್ನೊಂದು ದಿನಗಳ ಕಾಲ ಬಳೂಟಗಿಯ ಶಿವಕುಮಾರ ಸ್ವಾಮೀಜಿಗಳಿಂದ ನಿತ್ಯ ಸಂಜೆ 6 ಗಂಟೆಗೆ ವಿರಕ್ತಮಠದಲ್ಲಿ ವಚನ ದರ್ಶನ ಪ್ರವಚನ ಆಯೋಜನೆ ಮಾಡುವ ಮೂಲಕ ಜನರಿಗೆ ಬಸವಾದಿ ಶರಣರ ವಚನಗಳ ಸಂದೇಶ ಮುಟ್ಟಿಸುತ್ತಿದ್ದಾರೆ. ಇದರ ಜೊತೆಗೆ ಬೆಳಗ್ಗೆ 6 ಗಂಟೆಯಿಂದ ವಿದ್ಯಾರ್ಥಿಗಳಿಗೆ ಇದೇ ಪ್ರಥಮ ಬಾರಿಗೆ ಸಂಸ್ಕಾರ ಶಿಬಿರವನ್ನು ಎರಡು ಗಂಟೆ ಕಾಲ ನಡೆಸುತ್ತಿದ್ದಾರೆ. ಈ ಶಿಬಿರದಲ್ಲಿ ಪ್ರತಿದಿನ ಅನೇಕ ಅನುಭಾವಿಗಳಿಂದ ವಿದ್ಯಾರ್ಥಿಗಳಿಗೆ ಉಪನ್ಯಾಸ, ಮಾರ್ಗದರ್ಶನ, ಲಿಂಗಪೂಜೆ ಮಾಡಿಕೊಳ್ಳುವ ವಿಧಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದಾರೆ. ಸಂಸ್ಕಾರ ಶಿಬಿರದಲ್ಲಿ 100 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಕಾರದ ಪ್ರಯೋಜನ ಪಡೆಯುತ್ತಿರುವದು ವಿಶೇಷ. ರಕ್ತದಾನ ಶಿಬಿರ, ನೇತ್ರ ತಪಾಸಣೆ ಶಿಬಿರ ಸಹ ಆಯೋಜನೆ ಮಾಡಿದ್ದು ಗಮನಾರ್ಹ.
ನಾಡಿನಲ್ಲಿ ಅಕ್ಷಯ ತೃತೀಯ ಬಸವ ಜಯಂತಿಯಂದು ಶುಭ ಕಾರ್ಯ ಸೇರಿದಂತೆ ಚಿನ್ನದ ಖರೀದಿಯಲ್ಲಿ ಜನರು ತೊಡಗುತ್ತಾರೆ. ಬಸವ ಜಯಂತಿ ಬರುವದೇ ನಾಡಿಗೆ ದೊಡ್ಡ ಸಡಗರ, ಸಂಭ್ರಮ. ಬಸವ ಜಯಂತಿಯನ್ನು ಜನರು ಶ್ರದ್ದಾ ಭಕ್ತಿಯಿಂದ ಆಚರಿಸುವದು ವಿಶೇಷ. ಬಸವೇಶ್ವರರ ತತ್ವಗಳನ್ನು ಜಗತ್ತಿನಲ್ಲಿ ಅಳವಡಿಸಿಕೊಳ್ಳುವದು ತುಂಬಾ ಮುಖ್ಯವಾಗಿದೆ. ಇಂದು ಜಗತ್ತಿನ ಅನೇಕ ಜ್ವಲಂತ ಸಮಸ್ಯೆಗಳಿಗೆ ಬಸವೇಶ್ವರರ ಸಂದೇಶಗಳು ಪರಿಹಾರ ನೀಡುತ್ತವೆ. ಇವು ಜಗತ್ತಿನಲ್ಲಿ ಪ್ರಸಾರವಾಗಿ ಅವು ಜಾರಿಗೆ ಬರಬೇಕಿದೆ. ಇಂದು ಕೇವಲ ಬಸವೇಶ್ವರರ ಹೆಸರನ್ನು ಹೇಳಿಕೊಂಡು ಬೆಳೆಯುತ್ತಿದ್ದಾರೆ ವಿನಃ ಅವರ ತತ್ವಗಳು ತತ್ವಗಳಾಗಿಯೇ ಉಳಿಯುತ್ತಿರುವದು ವಿಪರ್ಯಾಸ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 06, 2026

ಕೊಪ್ಪಳ ಹನುಮಂತ ಹಳ್ಳಿಕೇರಿಗೆ ರೂ.4ಲಕ್ಷ ಪರಿಹಾರ ಮಂಜೂರು

2028ಕ್ಕೆ ರಾಜ್ಯದಲ್ಲಿ ಎನ್.ಡಿ.ಎ ಕೈಗೆ ಅಧಿಕಾರದ ಚುಕ್ಕಾಣಿ

ಕೆಬಿಜೆಎನ್‌ಎಲ್ ಅಧಿಕಾರಿ ಹಾದಿಮನಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 06, 2026
    In ದಿನಪತ್ರಿಕೆ
  • ಕೊಪ್ಪಳ ಹನುಮಂತ ಹಳ್ಳಿಕೇರಿಗೆ ರೂ.4ಲಕ್ಷ ಪರಿಹಾರ ಮಂಜೂರು
    In (ರಾಜ್ಯ ) ಜಿಲ್ಲೆ
  • 2028ಕ್ಕೆ ರಾಜ್ಯದಲ್ಲಿ ಎನ್.ಡಿ.ಎ ಕೈಗೆ ಅಧಿಕಾರದ ಚುಕ್ಕಾಣಿ
    In (ರಾಜ್ಯ ) ಜಿಲ್ಲೆ
  • ಕೆಬಿಜೆಎನ್‌ಎಲ್ ಅಧಿಕಾರಿ ಹಾದಿಮನಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ: ಸಂಕನಾಳ ರೈತರಿಂದ ಎಸ್‌ಎಲ್‌ಒ ಕಚೇರಿಗೆ ಮುತ್ತಿಗೆ
    In (ರಾಜ್ಯ ) ಜಿಲ್ಲೆ
  • ಕನ್ನಡದ ಉಳಿವಿಗಾಗಿ ಹೋರಾಟ ಅಗತ್ಯ :ಸಂಗೀತಾ ರಾಠೋಡ
    In (ರಾಜ್ಯ ) ಜಿಲ್ಲೆ
  • ಕನ್ನಡವೆಂದರೆ ನಮ್ಮ ಸಂಸ್ಕೃತಿಯ ಹಿರಿಮೆ :ಹೈಯ್ಯಾಳಕರ
    In (ರಾಜ್ಯ ) ಜಿಲ್ಲೆ
  • ಮುಂಬಯಿ ರೈಲ್ವೆಯನ್ನು ಇಂಡಿ ನಿಲ್ದಾಣದಲ್ಲಿ ನಿಲ್ಲಿಸಲು ಒತ್ತಾಯ
    In (ರಾಜ್ಯ ) ಜಿಲ್ಲೆ
  • ಗರ್ಭಿಣಿಯರ ಆರೈಕೆ, ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡಿ
    In (ರಾಜ್ಯ ) ಜಿಲ್ಲೆ
  • ಮಹಾತ್ಮ ಗಾಂಧಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ತನ್ನಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.