Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ “ನ್ಯಾಯ ಕ್ರಾಂತಿ” ಸಂಘವು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಆಗ್ರಹಿಸಿದರು. ಶುಕ್ರವಾರ ಪಟ್ಟಣದ ಉಪ ತಹಸಿಲ್ದಾರರ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಬಂದೇನವಾಜ್. ಕೆ. ನಾಶಿ, ಕೇಂದ್ರ ಬಿಜೆಪಿ ಸರ್ಕಾರವು ವಕ್ಸ್ ತಿದ್ದುಪಡೆ ಕಾಯ್ದೆ ಯನ್ನು ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಪಾಸ್‌ ಮಾಡಿ ಸಂವಿಧಾನಕ್ಕೆ ದ್ರೋಹ ಬಗೆದು ಐತಿಹಾಸಿಕ ಅನ್ಯಾಯವನ್ನು ಮಾಡಿದೆ, ಭಾರತ ದೇಶ ಸ್ವತಂತ್ರ ದಿಂದ ಇಲ್ಲಿಯ ವರೆಗೆ ಇಂತಹ ಕರಾಳ ದಿನವನ್ನು ಕಂಡಿರಲಿಲ್ಲ ಸಂವಿಧಾನದ ಅನುಚ್ಛೇಧ 25 ರಿಂದ 28 ರನ್ವಯ ಧಾರ್ಮಿಕ ಸ್ವಾತಂತ್ರವನ್ನು ಕೊಟ್ಟಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಸ್ಪಷ್ಟವಾಗಿರುವ ಸಂವಿಧಾನವನ್ನು ಉಲ್ಲಂಘಿಸಿ ಮುಸಲ್ಮಾನರನ್ನು ಹತ್ತಿಕ್ಕುವ ಏಕೈಕ ದುರುದ್ದೇಶದಿಂದ ಈ ಕಾನೂನನ್ನು ಪಾಸು ಮಾಡುವ ಮೂಲಕ ಮುಸಲ್ಮಾನರ ಧಾರ್ಮಿಕ ಆಸ್ತಿಗಳನ್ನು ಕೊಳ್ಳೆ ಹೊಡೆಯುವ ದುಷ್ಟ ಸಂಚು ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು. ಇದು ಸಂಪೂರ್ಣ ಸಂವಿಧಾನ ವಿರೋಧಿ ಯಾಗಿದ್ದು ಇದನ್ನು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿರುವ ನಾಗಾವಿ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಶುಕ್ರವಾರ ಸಂಭ್ರಮ, ಸಡಗರದಿಂದ ಜರುಗಿತು. ಜಾತ್ರೆಯಂಗವಾಗಿ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ತಾಯಿಜೋಗಮ್ಮರ ಕುಣಿತ, ವಿವಿಧ ವಾದ್ಯ ಮೇಳದೊಂದಿಗೆ ಸಂಭ್ರಮದಿಂದ ಜರುಗಿತು.ನಾಗಾವಿ ಯಲ್ಲಮ್ಮ ದೇವಸ್ಥಾನದಿಂದ ಐದು ಕಳಸ ಹಾಗೂ ಪಲ್ಲಕ್ಕಿ ಉತ್ಸವವು ಪಟ್ಟಣದ ಬಸವೇಶ್ವರ ವೃತ್ತ, ಅಗಸಿ, ಮಹಾರಾಜರ ಮಠದ ಮಾರ್ಗ, ಬಸವಜನ್ಮ ಸ್ಮಾರಕ ಮಾರ್ಗ, ವಿಜಯಪುರ ಮಾರ್ಗವಾಗಿ ಪುನಃ ಬಸವೇಶ್ವರ ವೃತ್ತಕ್ಕೆ ಬಂದು ಬಸವೇಶ್ವರ ದೇವಸ್ಥಾನದ ಬಸವತೀರ್ಥ ಭಾವಿಗೆ ಆಗಮಿಸಿದ ನಂತರ ಗಂಗಾಸ್ಥಳ ಮಾಡಿಕೊಂಡ ನಂತರ ಡೊಳ್ಳು, ಚೌಡಕಿ ಸೇರಿದಂತೆ ಸುಮಂಗಲೆಯರ ಆರತಿಯೊಂದಿಗೆ ಬಸವೇಶ್ವರ ವೃತ್ತದ ಮಾರ್ಗವಾಗಿ ಇಂಗಳೇಶ್ವರ ರಸ್ತೆಯಲ್ಲಿರುವ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಕಳಸಗಳು, ನಾಗಾವಿ ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವ ತಲುಪಿತು. ಕಳಸಗಳಿಗೆ ಪೂಜೆ ನೆರವೇರಿಸಿದ ನಂತರ ದೇವಸ್ಥಾನಕ್ಕೆ ಕಳಸಗಳನ್ನು ಏರಿಸಲಾಯಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ,…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯ ಕಾರ್ಯಕರ್ತರ ಸಭೆ ಶುಕ್ರವಾರ ಜರುಗಿತು. ಸಭೆಯಲ್ಲಿ ತಾಲೂಕು ಸಂಚಾಲಕರನ್ನಾಗಿ ಬಸಲಿಂಗಪ್ಪ ಸಂಗಪ್ಪ ನಂದಿ ಅವರನ್ನು ಆಯ್ಕೆ ಮಾಡುವ ಮೂಲಕ ಅವರಿಗೆ ಡಿಎಸ್ಎಸ್ ಜಿಲ್ಲಾ ಸಂಚಾಲಕ ಅರವಿಂದ ಸಾಲವಾಡಗಿ ಆದೇಶ ಪತ್ರ ನೀಡಿದರು.ಈ ಸಂದರ್ಭದಲ್ಲಿ ಅರವಿಂದ ಸಾಲವಾಡಗಿ ಮಾತನಾಡಿ, ರಾಜ್ಯದಲ್ಲಿ ೧೯೭೨ ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದರು. ಈ ಸಂಘಟನೆಯ ಮೂಲಕ ರಾಜ್ಯದಲ್ಲಿ ಶೋಷಣೆಗೊಳಗಾದ ಎಲ್ಲ ಸಮುದಾಯದ ಅಭಿವೃದ್ಧಿ ಶ್ರಮಿಸುವ ಮೂಲಕ ಈ ಸಮುದಾಯದ ಏಳ್ಗೆಗೆಗೆ ತೊಡಗಿಸಿಕೊಂಡು ಬರುತ್ತಿದೆ. ಡಾ.ಅಂಬೇಡ್ಕರ ಅವರು ಎಲ್ಲ ಸಮುದಾಯದ ಅನುಕೂಲಕ್ಕಾಗಿ ದೇಶದ ಸಂವಿಧಾನ ರಚಿಸಿದ್ದಾರೆ. ಇವರ ಆಶಯದಂತೆ ನಾವೆಲ್ಲರೂ ದೇಶದಲ್ಲಿ ಜೀವನ ಮಾಡಬೇಕೆಂದರು.ನಮ್ಮ ಸಂಘಟನೆಯ ತಾಲೂಕು ಸಂಚಾಲಕರಾಗಿ ಆಯ್ಕೆಯಾದ ಬಸಲಿಂಗಪ್ಪ ನಂದಿ ಅವರು ನಮ್ಮ ಸಂಘಟನೆಯ ತತ್ವ-ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ಸಮಿತಿಯ ನಿಯಮಾವಳಿಗೆ ಬದ್ಧವಾಗಿ ಶೋಷಿತ ಸಮುದಾಯಗಳ ಏಳ್ಗೆಗಾಗಿ,…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಅಧ್ಯಕ್ಷ ಹಾಗೂ ಸಮಾಜ ಸೇವಕ ಶ್ರೀಶೈಲಪ್ಪ ಆಯ್. ಜೋಗೂರ ರವರಿಗೆ ಮೈಸೂರಿನ ಕನ್ನಡ ಸಾಹಿತ್ಯ ಭವನದ ನಾಲ್ವಡಿ ಕೃಷ್ಣರಾಜ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಸಾಂಸ್ಕೃತಿಕ ವೈಭವ ಸಮ್ಮೇಳನದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಶಸ್ತಿಯನ್ನು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್(ರಿ.) ಕರ್ನಾಟಕನ ಸಂಸ್ಥಾಪಕ ಅಧ್ಯಕ್ಷರು ಡಾ.ಜಿ.ಶಿವಣ್ಣ , ಚಲನಚಿತ್ರ ನಟರು, ನಾಡು ನುಡಿ ಚಿಂತಕರು ಡಾ.ಚಿಕ್ಕಹೆಜ್ಜಾಜಿ ಮಹದೇವ, ಡಾ.ಆರೂಢ ಭಾರತೀ ಸ್ವಾಮಿಗಳು, ಸಮ್ಮೇಳನದ ಸರ್ವಾಧ್ಯಕ್ಷರು ಪಂಡಿತ ಅವಜಿ , ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷರು ಮಡ್ಡಿಕೇರೆ ಗೋಪಾಲ ,ಚೇತನ ಫೌಂಡೇಶನ್ ನ ಅಧ್ಯಕ್ಷರು ಡಾ.ಚಂದ್ರಶೇಖರ ಮಾಡಲಗೇರಿ, ದತ್ತಿ ದಾನಿಗಳು ಲೂಸಿ ಸಾಲ್ಡಾನ ವಿತರಿಸಿದರು.ಪ್ರಶಸ್ತಿ ಸ್ವೀಕರಿಸಿದಕ್ಕಾಗಿ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಬಡದಾಳ, ಕೋಶಾಧ್ಯಕ್ಷ ಅರವಿಂದ ಕುಲಕರ್ಣಿ, ಸದಸ್ಯರಾದ ಅಲೋಕ ಬಡದಾಳ, ಅಶೋಕ ವಾರದ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ , ಶಿಕ್ಷಕರಾದ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಭೈರವಾಡಗಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪಿ.ಯು ದ್ವಿತೀಯ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಹೊಕ್ಕುಂಡಿ ಶಿಕ್ಷಣಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕ ಗಳಿಸಿ ಶೇ. ೯೫ ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಚೈತ್ರಾ ಮಡ್ಡೆಪ್ಪಗೋಳ (ಶೇ ೯೦) ದ್ವಿತೀಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿನೀಯರ ಸಾಧನೆಗೆ ಪ್ರಾಚಾರ್ಯ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.

Read More

ಪಡಗಾನೂರ ಗ್ರಾಮದ ಸೋಮೇಶ್ವರ ಜಾತ್ರಾ ಮಹೋತ್ಸವ | ಧರ್ಮಸಭೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ನಿಸ್ವಾರ್ಥ ಕಾಯಕ ನಮ್ಮನ್ನು ನಾಯಕರನ್ನಾಗಿಸುತ್ತದೆ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.ತಾಲ್ಲೂಕಿನ ಪಡಗಾನೂರ ಗ್ರಾಮದ ಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಜರುಗಿದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ನಿಸ್ವಾರ್ಥವೆಂಬುದು ಧರ್ಮವಾಗಿದ್ದು, ಸ್ವಾರ್ಥವೆಂಬುದು ಅಧರ್ಮವಾಗಿದೆ. ಸ್ವಾರ್ಥವನ್ನು ತೆಗೆದುಹಾಕಿ ಎಲ್ಲರೂ ಸಾರ್ಥಕವಾದ ಜೀವನವನ್ನು ನಡೆಸಬೇಕು ಎಂದರು.ಕಡಗಂಚಿಯ ಸಾವಿರದೇವರ ಸಂಸ್ಥಾನ ಮಠದ ವೀರಭದ್ರ ಸ್ವಾಮೀಜಿ ನೇತೃತ್ವದಲ್ಲಿ ಹಾಗೂ ಸೋಮೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷ ಅಯ್ಯಪ್ಪಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಸುಮಂಗಲೆಯರಿಂದ ಕುಂಭ ಕಳಶ,ಪಲ್ಲಕ್ಕಿಗಳ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರುಗಳ ಭವ್ಯವಾದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ನಡೆಯಿತು.ಸಿಂದಗಿ ಡಾ.ಪ್ರಭುಸಾರಂಗದೇವಶ್ರೀ, ಆಲಮೇಲ ಚಂದ್ರಶೇಖರಶ್ರೀ , ಬಸವನಬಾಗೇವಾಡಿ ಶಿವಪ್ರಕಾಶಶ್ರೀ, ಯಂಕಂಚಿ ಅಭಿನವ ರುದ್ರಮುನಿಶ್ರೀ, ದೇವರಹಿಪ್ಪರಗಿಯ ವೀರಗಂಗಾಧರಶ್ರೀ , ಸಿಂದಗಿಯ ವಿಶ್ವಪ್ರಭುಶ್ರೀ, ಕನ್ನೊಳ್ಳಿಯ ಸಿದ್ದಲಿಂಗಶ್ರೀ, ಮುಳಸಾವಳಗಿಯ ದಯಾನಂದ ಸ್ವಾಮೀಜಿ, ಕರಭಂಟನಾಳದ ಶಿವಕುಮಾರ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿಪೂರ್ವ ಮಹಾವಿದ್ಯಾಲಯದ ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಶೇ ೭೭.೯೯ ಸಾಧನೆ ಮಾಡಿದ್ದಾರೆ.ಕಲಾ ವಿಭಾಗದಲ್ಲಿ ಅಕ್ಷತಾ ರಡ್ಡಿ( ಶೇ ೯೫.೧೬), ಅಕ್ಷತಾ ಕುಂಬಾರ(ಶೇ ೯೫), ಸೌಮ್ಯಾ ಗೌಂಡಿ(ಶೇ ೯೪.೮೩), ವಾಣಿಜ್ಯ ವಿಭಾಗದಲ್ಲಿ ರೋಹಿಣಿ ಪೂಜಾರಿ(ಶೇ ೯೬.೧೬), ಸುಪ್ರೀಯಾ ಜನಗೊಂಡ (ಶೇ ೯೫), ಲಕ್ಷ್ಮಿ ಹೊಕ್ಕೊಂಡಿ (ಶೇ ೯೪.೫) ಉತ್ತಮ ಫಲಿತಾಂಶದೊಂದಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನೀಯರ ಸಾಧನೆಗೆ ಪ್ರಾಚಾರ್ಯ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೌಶಲ್ಯಾಭಿವೃದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಸಹಯೋಗದಲ್ಲಿ ಕಲಬುರಗಿಯ ಖಮರುಲ್ ಇಸಾಂ ಕಾಲೋನಿ, ರಿಂಗ್ ರಸ್ತೆಯ ಕೆ.ಸಿ.ಟಿ.ಕಾಲೇಜ್ ಕ್ಯಾಂಪಸ್‌ನಲ್ಲಿ ಏ.೧೬ರಂದು ಜರುಗುವ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ ಹಾಗೂ ಏ.೧೬ರೀದಮ ೧೮ರವರೆಗೆ ಕೂಡಲಸಂಗದಲ್ಲಿ ಜರುಗು ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಹೆಚ್ಚುವರಿ ಸಾರಿಗೆಗಳ ವ್ಯವಸ್ಥೆ ಮಾಡಲಾಗಿದೆ.ಏ.೧೫ರಂದು ನಡೆಯುವ ಉದ್ಯೋಗ ಮೇಳಕ್ಕೆ ವಿಜಯಪುರ ವಿಭಾಗದ ತಾಲೂಕಾ ಮುಖ್ಯ ಬಸ್ ನಿಲ್ದಾಣಗಳಿಂದ ಕಲಬುರಗಿಗೆ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆ ಹಾಗೂ ಕೂಡಲ ಸಂಗಮದಲ್ಲಿ ಏ.೧೬ರಿಂದ ೧೮ರವರೆಗೆ ಜರುಗುವ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರು ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ವಿಜಯಪುರ, ಮುದ್ದೇಬಿಹಾಳ ತಾಳಿಕೋಟೆ ಹಾಗೂ ಬ.ಬಾಗೇವಾಡಿಯಿಂದ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆ ಕೈಗೊಂಡಿದ್ದು, ಪ್ರಯಾಣಿಕರು ಸಾರಿಗೆ ಸೌಲಭ್ಯಕ್ಕಾಗಿ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ವಿಜಯಪುರ ಘಟಕ-೧ ಮೊ: ೭೭೬೦೯೯೨೨೬೩, ಘಟಕ-೨…

Read More

ಏ.೧೫ ರಂದು ಕನ್ನಡ ಭಾಷಾ ಪರೀಕ್ಷೆ- ಏ.೧೬ ಹಾಗೂ ೧೭ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹೊರನಾಡು ಮತ್ತು ಗಡಿನಾಡು ವಿದ್ಯಾರ್ಥಿಗಳಿಗೆ ಏ.೧೫ ರಂದು ಕನ್ನಡ ಭಾಷಾ ಪರೀಕ್ಷೆ ಹಾಗೂ ವಿವಿಧ ವೃತ್ತಿಪರ ಕೋರ್ಸಗಳ ಪ್ರವೇಶಾತಿಗೆ ಇದೇ ಏಪ್ರಿಲ್ ೧೬ ರಿಂದ ೧೭ ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು (ಸಿಇಟಿ) ಜಿಲ್ಲೆಯ ೩೩ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಅಚ್ಚುಕಟ್ಟು ಹಾಗೂ ವ್ಯವಸ್ಥಿತವಾಗಿ ನಡೆಸುವಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚಿಸಿದರು.ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಿ ಇ ಟಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಒಟ್ಟು ೩೩ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಒಟ್ಟು ೧೩,೬೨೯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.ಏ.೧೫ರ ಮಂಗಳವಾರ ಬೆಳಿಗ್ಗೆ ೧೦:೩೦ ರಿಂದ ೧೧:೩೦ರವರೆಗೆ ಹೊರನಾಡ ಮತ್ತು ಗಡಿನಾಡ ಕನ್ನಡಿಗ ವಿದ್ಯಾರ್ಥಿಗಳಿಗಾಗಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ವೃತ್ತಿಪರ ಕೋರ್ಸ್ಗಳ…

Read More

ಸರ್ಕಾರದ ಮಹತ್ವಾಕಾಂಕ್ಷಿ ಭೂ ಸುರಕ್ಷಾ ಯೋಜನೆ | ಕಂದಾಯ ಇಲಾಖೆಯ ಆಯುಕ್ತ ಪಿ.ಸುನೀಲ ಕುಮಾರ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭೂ ಸುರಕ್ಷತೆ ದೃಷ್ಟಿಕೋನದಿಂದ ಜಮೀನು ದಾಖಲೀಕರಣ ಪ್ರಕ್ರಿಯನ್ನು ತ್ವರಿತಗೊಳಿಸಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಆಯುಕ್ತರಾದ ಪಿ.ಸುನೀಲ ಕುಮಾರ ಅವರು ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಕಂದಾಯ ಇಲಾಖೆ ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪ್ರತಿದಿನ ಒಬ್ಬ ಆಪರೇಟರ್ ಒಂದು ಸಾವಿರದಿಂದ ೨ ಸಾವಿರದಷ್ಟು ದಾಖಲಿಕರಣ ಕಾರ್ಯ ತ್ವರಿತಗೊಳಿಸುವ ಮೂಲಕ ದಾಖಲೀಕರಣ ಕಾರ್ಯಕ್ಕೆ ವೇಗ ನೀಡಿ, ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ರೈತರು ತಮ್ಮ ಜಮೀನಿನ ಮಾಹಿತಿಗಾಗಿ ಪದೇ ಪದೇ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದಾಖಲೀಕರಣ ಅಗತ್ಯವಾಗಿದೆ. ಹಾಗೂ ಜಮೀನುಗಳ ಮೇಲೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾಲೀಕರಿಗೆ ಈ ದಾಖಲಿಕರಣ ನೆರವಾಗುತ್ತದೆ ಎಂದು ಅವರು ಹೇಳಿದರು.ಜಮೀನಿನ ಕುರಿತು ತಿದ್ದುಪಡಿಗೆ ಜಿಲ್ಲಾಧಿಕಾರಿಗಳಿಗೆ ಅವಕಾಶವಿದ್ದು, ಅಧಿಕಾರಿಗಳು ಜಮೀನಿನ ಕುರಿತು ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ…

Read More