Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಪೌರಕಾರ್ಮಿಕರ ದಿನಾಚರಣೆಯಲ್ಲಿ ಪ.ಪಂ. ಮುಖ್ಯಾಧಿಕಾರಿ ಬಿ.ಕೆ.ತಾವಸೆ ಅಭಿಮತ ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಕನ್ನಡ ಶಾಲೆಯಲ್ಲಿ ಪೌರಕಾರ್ಮಿಕರ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಚಡಚಣ ಪ.ಪಂ. ಮುಖ್ಯಾಧಿಕಾರಿ ಬಿ.ಕೆ.ತಾವಸೆ ಅವರು ಗ್ರಾಮ, ಪಟ್ಟಣ ಹಾಗೂ ನಗರವನ್ನು ಸ್ವಚ್ಛವಾಗಿರಿಸಿ ಸುಂದರವಾಗಿರಿಸುವಲ್ಲಿ ಪೌರಕಾರ್ಮಿಕರ ಕಾರ್ಯ ಮಹತ್ವದ್ದಾಗಿದೆ, ಮತ್ತು ಕರೋನಾದಂತಹ ಮಹಾಮಾರಿ ರೋಗಗಳನ್ನು ತಡೆಗಟ್ಟುವಲ್ಲಿ ಪೌರಕಾರ್ಮಿಕರ ಪಾತ್ರ ಹಿರಿದು ಎಂದರು.ಪಟ್ಟಣದ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ. ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪೌರ ಕಾರ್ಮಿಕರು ತಮ್ಮ ದಿನನಿತ್ಯದ ಕಾಯಕದೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಉತ್ತಮ ಶಿಕ್ಷಣ ನೀಡುವಂತೆ ಹೇಳಿದರು.ಸರಕಾರ ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿದೆ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಸುಂದರ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದರು. ಈಗಾಗಲೇ ಪಟ್ಟಣ ಪಂಚಾಯತ ವತಿಯಿಂದ ಖಾಯಂಹೊಂದಿದ ಪೌರ ಕಾರ್ಮಿಕರಿಗೆ…
ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿದ್ದು ರೈತರು ತಮ್ಮ ಮನೆ, ಬೆಳೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ, ಈ ಸಂದರ್ಭದಲ್ಲಿ ತಾವು ರೈತರ ಜೊತೆಗಿದ್ದು, ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.ಬುಧವಾರ ಚಡಚಣ ತಾಲೂಕಿನ ನದಿ ಪಾತ್ರದ ಉಮರಜ, ರೇವತಗಾಂವ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.ಉಪರಜ ಗ್ರಾಮದಲ್ಲಿ ಅನೇಕ ಮನೆಗಳು ಮಳೆಯಿಂದ ನೆಲಸಮಗೊಂಡಿವೆ. ರೈತರ ಮತ್ತು ಬಡ ಕೂಲಿ ಕಾರ್ಮಿಕರ ಕಷ್ಟ ನೋಡಿ ಕಷ್ಟವಾಗುತ್ತಿದೆ. ರೈತರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಒದಗಿಸುವ ದಿಶೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವದಾಗಿ ಅವರು ಹೇಳಿದರು.ಉಮರಜ ಗ್ರಾಮದಲ್ಲಿ ಮಳೆಯಿಂದಾಗಿ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು ತಕ್ಷಣ ನಾಲ್ಕು ಹೊಸ ಕೊಣೆಗಳನ್ನು ನಿರ್ಮಿಸಿಕೊಡುವದಾಗಿ ಅವರು ಹೇಳಿದರು. ರಸ್ತೆಗಳ ಹಾಳಾಗಿರುವ ಕುರಿತು ರೈತರು ಶಾಸಕರಿಗೆ ಮನವಿಯನ್ನು ಮಾಡಿದರು. ಚಡಚಣ ಭಾಗದ ರಸ್ತೆಗಳ ನಿರ್ಮಾಣಕ್ಕಾಗಿ ಸಾಕಷ್ಟು ಅನುದಾನವನ್ನು ವಿನಿಯೋಗಿಸಿದ್ದು ಸ್ವಲ್ಪ ಮಳೆ ಕಡಿಮೆಯಾದ ಮೇಲೆ ಕೆಲವು ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಹೇಳಿದರು.ಚಡಚಣ ತಹಶೀಲದಾರ ಸಂಜಯ ಇಂಗಳೆ…
ಕನಾ೯ಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರೊಂದಿಗೆ ಶಿಕ್ಷಕರ ಸಂಘ ಚಚೆ೯- ಮನವಿ ಸಲ್ಲಿಕೆ ಆಲಮಟ್ಟಿ: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ ೨೨ ರಿಂದ ಪ್ರಾರಂಭಗೊಂಡಿರುವ ಶೈಕ್ಷಣಿಕ ಸಾಮಾಜಿಕ ಗಣತಿ ಕಾರ್ಯದಲ್ಲಿ ಶಿಕ್ಷಕರು ಹಲಬಗೆಯ ತೀವ್ರತರವಾದ ತೊಂದರೆಗಳನ್ನು ಎದುರಿಸುತ್ತಿದ್ದು ಕೂಡಲೇ ಆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ, ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್.ಎಸ್ ಬುಧವಾರ ಕನಾ೯ಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ಆರ್.ನಾಯಕ ಹಾಗೂ ಕಾರ್ಯದರ್ಶಿ ದಯಾನಂದ ಅವರನ್ನು ಭೇಟಿಯಾಗಿ ಗಣತಿ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳ ಕುರಿತು ಮನವರಿಕೆ ಮಾಡಿದರಲ್ಲದೇ ತಕ್ಷಣವೇ ತೊಂದರೆ ನೀಗಿಸಲು ಮನವಿ ಪತ್ರ ಸಲ್ಲಿಸಿದರು.ಈ ಸಮೀಕ್ಷೆಯಲ್ಲಿ ನಿಯೋಜನೆಗೊಂಡಿರುವ ರಾಜ್ಯದ ಗಣತಿದಾರ ಶಿಕ್ಷಕರು ಪಡುತ್ತಿರುವ ಪಟಿಪಾಟಲು ಸಮಗ್ರವಾಗಿ ಆಯೋಗದ ಮುಖ್ಯಸ್ಥರ ಗಮನಕ್ಕೆ ತಂದು ತೊಂದರೆ ಸರಿದೂಗಿಸುವಂತೆ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಮಧುಸೂದನ್ ನಾಯಕ ಹಾಗೂ ದಯಾನಂದ ಅವರಿಂದ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 2024-25 ನೇ ಸಾಲಿನಲ್ಲಿ ರೂ. 26.49 ಲಕ್ಷ ಲಾಭವಾಗಿದೆ. ರೈತರು ಎಫ್.ಡಿ.ಜಾಸ್ತಿ ಆಗಿದ್ದರಿಂದ ಬಡ್ಡಿ ಅನುವು ಮಾಡಿಸಲಾಗಿದೆ. ಇದರಿಂದಾಗಿ ಲಾಭಾಂಶವು ರೂ. 15.49 ಲಕ್ಷ ಲಾಭವಾಗಿದೆ. ಸದಸ್ಯರಿಗೆ ಶೇ.8 ರಷ್ಟು ಲಾಭಾಂಶ ಹಂಚಿಕೆ ಮಾಡಲಾಗಿದೆ ಎಂದು ಹೂವಿನಹಿಪ್ಪರಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಪಿ.ಜಿ.ಗೋಠೆದ ಹೇಳಿದರು.ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ 2024-25 ನೇ ಸಾಲಿನ 78 ನೇ ವರ್ಷದ ವಾರ್ಷಿಕ ವಾರ್ಷಿಕ ವರದಿ, ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸನ್ 2024-25ನೇ ಕಳೆದ ಸಾಲಿನ ಕೊನೆಯಲ್ಲಿ ರೂ.95.59 ಲಕ್ಷ ಇದ್ದು. ವರದಿ ವರ್ಷದಲ್ಲಿ 11.81 ಸಾವಿರ ರೂ.ಶೇರು ಹಣ ಸಂಗ್ರಹಿಸಿದೆ. 2.11 ಸಾವಿರ ರೂ.ಮರಳಿ ಪಡೆದಿರುತ್ತಾರೆ. ಒಟ್ಟು ಪ್ರಸಕ್ತ ಸಾಲಿನ ಶೇರು ಹಣ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಮಂಗಳವಾರ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆದಿಂದ ಪೌರಕಾರ್ಮಿಕರಿಗೆ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ, ರಾಷ್ಟ್ರೀಯ ಬಸವಸೈನ್ಯದ ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ಮನ್ನಾನ ಶಾಬಾದಿ, ತಾಲೂಕಾಧ್ಯಕ್ಷ ಸಂಜು ಬಿರಾದಾರ, ಪ್ರಶಾಂತ ಮುಂಜಾನೆ, ಸಂಗಮೇಶ ಜಾಲಗೇರಿ, ಜಟ್ಟಿಂಗರಾಯ ಮಾಲಗಾರ, ಸಂಗಮೇಶ ಬಿದರಿ ಬಸನಗೌಡ ಪಾಟೀಲ, ಪುರಸಭೆಯ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಹಳೆ ತಾರಾಪುರ ಗ್ರಾಮದಲ್ಲಿ ಭೂಮಿ ಕುಸಿದು ವ್ಯಕ್ತಿ ಅದರಲ್ಲಿ ಬಿದ್ದಿದ್ದಾರೆ ಅವರಿಗೆ ತೀವ್ರ ತರಹದ ಪೆಟ್ಟುಗಳಾಗಿವೆ.ತಾರಾಪುರ ಗ್ರಾಮದ ಆನಂದ ಮಲ್ಲಪ್ಪ ಕಂಟಿಕೋರ ಎಂಬ ವ್ಯಕ್ತಿಯು ಗ್ರಾಮದ ಕಿರಾಣಿ ಅಂಗಡಿಯ ಮುಂದೆ ನಿಂತಿರುವ ಸಂದರ್ಭದಲ್ಲಿ ಭೂಮಿ ಕುಸಿದು ಸುಮಾರು 20 ಆಳವಾದ ಗುಂಡಿ ಬಿದ್ದಿದೆ ತಕ್ಷಣ ಸ್ಥಳದಲ್ಲಿದ್ದ ಗ್ರಾಮಸ್ಥರು ಅವರನ್ನು ಆಗುಂಡಿಯಿಂದ ಮೇಲಕ್ಕೆತ್ತಿದ್ದಾರೆ ವ್ಯಕ್ತಿಗೆ ಬೆನ್ನು ಮುಂಗೈ ಸೊಂಟ ಮುಂತಾದ ಕಡೆಗಳಲ್ಲಿ ತೀವ್ರತೆಗಳಾಗಿವೆ ತಕ್ಷಣ ಅವರನ್ನು ಸಿಂದಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಸ್ಥಳೀಯ ಜನರ ಪ್ರಕಾರ ಇದು ಹಿಂದಿನ ಕಾಲದ ಧಾನ್ಯ ಸಂಗ್ರಹದ ಹಗೆವು( ಭೂಮಿ ಒಳಗೆ ಧಾನ್ಯ ಸಂಗ್ರಹದ ಸ್ಥಳ) ಅದು ಮಳೆಯ ಪ್ರಮಾಣ ಹೆಚ್ಚಾಗಿ ಹಾಗೂ ಭೀಮಾನದಿಯಲ್ಲಿ ನೀರಿನ ಪ್ರಮಾಣವೂ ಕೂಡ ತುಂಬಿರುವುದರಿಂದ ಇದು ತೆರೆದುಕೊಂಡಿದೆ ಎಂದು ಹಿರಿಯರು ವಿವರಿಸಿದ್ದಾರೆ.ನದಿಯ ನೀರು ಗ್ರಾಮವನ್ನು ಸುತ್ತುವರಿದಿದ್ದು, ಸಿಂದಗಿ ಪಟ್ಟಣದಲ್ಲಿ ಪದೇ ಪದೇ ಭೂಮಿ ಒಳಗಿಂದ ಸದ್ದು ಬರುತ್ತಿರುವುದು ಇವುಗಳ ಮಧ್ಯೆ ಗ್ರಾಮದಲ್ಲಿ ಭೂಮಿ ಕುಸಿದಿರುವುದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಅರ್ಹತೆ ಜೊತೆಗೆ ವಿವಿಧ ವೃತ್ತಿ ಕೌಶಲ್ಯ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದು ಧಾರವಾಡ ಕೃಷಿ ವಿವಿ ಸಂಪನ್ಮೂಲ ವ್ಯಕ್ತಿ ಡಾ.ವೀಣಾ ಜಾಧವ್ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪೇಪರ್ ಮರು ಉತ್ಪಾದನಾ ಘಟಕದಿಂದ ಪ್ರಧಾನ ಮಂತ್ರಿ ರಾಷ್ಟ್ರೀಯ ಉಚ್ಚತರ ಅಭಿಯಾನ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಅನುದಾನದಡಿ ಪೇಪರ್ ಪುನರುತ್ಪಾದನಾ ತಂತ್ರಜ್ಞಾನ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.ಕಾಗದ ಮರು ಉತ್ಪಾದನಾ ತಂತ್ರಜ್ಞಾನ ವೃತ್ತಿ ಕೌಶಲ್ಯಗಳಲ್ಲಿ ಒಂದು. ಪರಿಸರಕ್ಕೆ ಪೂರಕವಾಗಿರುವಂಥದ್ದು. ನಿರುಪಯುಕ್ತ ಕಾಗದಗಳನ್ನು ಬಳಸಿ ವಿವಿಧ ಉಪಯುಕ್ತ ವಸ್ತುಗಳನ್ನು ಸಿದ್ಧಪಡಿಸಲು ಸಾಧ್ಯ. ಅವುಗಳಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬಹುದೆಂದು ತಿಳಿಸಿದರು.ಧಾರವಾಡದ ಶ್ರೀ ಸಾಯಿ ಎಂಟರ್ಪ್ರೈಸಸ್ ಜ್ಯೋತಿ ಹಿರೇಮಠ ಮಾತನಾಡಿ, ಇಂದು ಮಹಿಳೆಯರಿಗೆ ಸ್ವಂತ ಉದ್ದಿಮೆಗಳನ್ನು ಆರಂಭಿಸಲು ಹಲವು ಅವಕಾಶಗಳಿವೆ. ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮಲ್ಲಿ ವೃತ್ತಿ ಕೌಶಲ್ಯಗಳಿದ್ದರೆ, ಸ್ವಂತ ಉದ್ದಿಮೆಯನ್ನು ಆರಂಭಿಸಿ…
ಕ್ಲಿನಿಕಲ್ ಸೈಕಾಲಾಜಿಸ್ಟ್ ಮತ್ತು ಮನಃಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಚಂದ್ರಕಾಂತ.ಬಿ. ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಖಿನ್ನತೆ, ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆ, ಜೀವನದಲ್ಲಿ ಹತಾಶೆ, ಅತಿಯಾದ ಚಿಂತೆ, ಭಯ ಮತ್ತು ಭಾವನಾತ್ಮಕ ಅಸ್ಥಿರತೆಗಳಿಂದ ಮಾನಸಿಕ ಆರೋಗ್ಯದಲ್ಲಿ ಬದಲಾವಣೆಗಳಾಗುತ್ತಿವೆ. ಇದರಿಂದ ತೀವ್ರ ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಕ್ಲಿನಿಕಲ್ ಸೈಕಾಲಾಜಿಸ್ಟ್ ಮತ್ತು ಮನಃಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಚಂದ್ರಕಾಂತ.ಬಿ. ಅವರು ಅಭಿಪ್ರಾಯಪಟ್ಟರು.ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲಭಾಷಾ ವಿಭಾಗದಡಿಯಲ್ಲಿ ಆಯೋಜಿಸಿದ “ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಆಪ್ತ ಸಮಾಲೋಚನೆ” ವಿಷಯ ಕುರಿತಾದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.ಪೋಷಕರ ಶೈಕ್ಷಣಿಕ ಸಾಧನೆಗಾಗಿ ಅತಿಯಾದ ನಿರೀಕ್ಷೆಯೇ ಮಕ್ಕಳ ಮೇಲೆ ಅತಿ ಹೆಚ್ಚಿನ ಮಾನಸಿಕ ಒತ್ತಡವೇ ಇದಕ್ಕೆಲ್ಲ ಪ್ರಮುಖ ಕಾರಣವೆಂದು ಹೇಳಬಹುದು. ಮಕ್ಕಳಲ್ಲಿನ ಆತ್ಮಸ್ಥೈರ್ಯದ ಕೊರತೆಯಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆದ್ದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸಿ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಹಲವು ಗೌರವ, ಪುರಸ್ಕಾರಗಳಿಗೆ ಭಾಜನರಾಗಿದ್ದ ಖ್ಯಾತ ಕಾದಂಬರಿಕಾರ, ನಾಡೋಜ ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಕಂಬನಿ ಮಿಡಿದಿದ್ದಾರೆ.ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಮಹನೀಯರಲ್ಲಿ ಒಬ್ಬರಾದ ಎಸ್. ಎಲ್. ಭೈರಪ್ಪ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ಹಾನಿ ಉಂಟಾಗಿದೆ. ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಗೌರವ ತಂದು ಕೊಟ್ಟ ಹೆಗ್ಗಳಿಕೆ ಅವರದ್ದು ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.ಭೈರಪ್ಪನವರ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ. ಭಾರತ ಅಷ್ಟೇ ಅಲ್ಲ, ವಿದೇಶಗಳಲ್ಲೂ ಅವರ ಕಾದಂಬರಿಗಳ ಕುರಿತಾದ ವಿಚಾರಗೋಷ್ಠಿಗಳು ಆಯೋಜಿಸಲ್ಪಟ್ಟಿರುವುದು ಅವರ ಕಾದಂಬರಿಗಳಿಗೆ ಇರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮೀಣ ಭಾಗದ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಸರಳೀಕರಣ ಹಾಗೂ ಅರಿವು ಕುರಿತು ಜನಜಾಗೃತಿ ಮೂಡಿಸಲು ಪ್ಯಾರಾ ಲೀಗಲ್ ವ್ಯಾಲೆಂಟರಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಚ್. ಶಶಿಧರ್ ಶೆಟ್ಟಿ ತಿಳಿಸಿದರು.ಮಂಗಳವಾರ ಜಿಲ್ಲಾ ನ್ಯಾಯಾಲಯದ ಸಂಕೀರಣಗಳ ಸಭಾಂಗಣದಲ್ಲಿ ಅವರು ಪತ್ರಕರ್ತರನ್ನು ಉದ್ದೇಶಿಸಿ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಾರ್ವಜನಿಕರಿಗೆ ಜನನ-ಮರಣ ದಾಖಲಾತಿ ಕುರಿತು ಮಾಹಿತಿ ವಿರಳ. ಮಕ್ಕಳ ಅಪಹರಣ, ಬಾಲ್ಯವಿವಾಹ, ಗಾಂಜಾ ಬೆಳೆಯುವುದು, ವಯೋ ವೃದ್ಧ ಹಾಗೂ ಬುದ್ದಿ ಮಾಂದ್ಯರನ್ನು ಕೂಡಿಹಾಕುವುದು, ಲಿಂಗತ್ವ ಅಲ್ಪ ಸಂಖ್ಯಾತರ, ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ಕಲಹ, ದೌರ್ಜನ್ಯ-ಕಿರುಕುಳ ಬಗ್ಗೆ ಪ್ಯಾರಾ ಲೀಗಲ್ ವ್ಯಾಲೆಂಟರಿಗಳ ಗಮನಕ್ಕೆ ಬಂದಲ್ಲಿ ಸ್ಥಳೀಯವಾಗಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ನೆರೆ-ಹೊರೆಯವರಿಂದ ಮಾಹಿತಿ ಪಡೆದು ತಕ್ಷಣ ಸ್ಪಂದಿಸಿ, ಸಂಬಂಧಿಸಿದ ಕಾನೂನು ಸೇವೆಗಳ ಪ್ರಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಕಾನೂನು ಸಲಹೆ-ಸೂಚನೆಗಳೊಂದಿಗೆ ಇತ್ಯರ್ಥ ಪಡಿಸಲು ಸಹಕಾರಿಯಾಗಲಿದೆ ಎಂದು ಅವರು…
