ರಚನೆ
– ರಾಜು ಗಾರೆಮನೆ
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ದುಂಬಿಯ ಸಮೂಹ ಪದವೇಳಿವೆ ರಾಗಗಳೊಂದಿಗೆ,
ಚಿಗುರೆಲೆ ಮೆದ್ದ ಹಕ್ಕಿ ಉಲಿದಿವೆ ಚಿಲಿ ಪಿಲಿಯೊಟ್ಟಿಗೆ,
ಹಸಿರು ಸೊಕಿ ತಂಪಾದ ತಂಗಾಳಿ ಬೀಸಿದ ಚಾಮರಕೆ,
ಮತ್ತೆ ವಸಂತ ಬಂದನು ಧರಣಿಗೆ ಚೈತ್ರದ ಆಹ್ವಾನಕೆ.
ಪವನ ಪಸರುತಿದೆ ಸುಮ ಸೌರಭದ ಸುಸ್ವರ ರವಳಿ,
ಹಾಸಿ ಹೊದ್ದಿದೆ ನವ ಪ್ರಕೃತಿಯು ಗಿಳಿಹಸಿರ ಕಂಬಳಿ,
ಸುತ್ತ ಮುತ್ತ ಸಸ್ಯ ಶ್ಯಾಮಲೆಯ ಸಹಸ್ರ ನಾಮವಳಿ,
ಕಡು ಶಿಶಿರದ ಶೀತಲಕೆ ಉಗುರು ಬೆಚ್ಚಗಿನ ಬಳುವಳಿ.
ಆಯಾ ಋತು ಧರ್ಮಕೆ ಅದರದ್ದೆ ಆದ ಪರಿಪಾಲನೆ,
ಮಧುವೀರಲು ಪತಂಗಕೆ ಮಾವು ಬೇವಿನ ವಿಜ್ಞಾಪನೆ,
ಕೂಗಳತೆಯ ದೂರದಲ್ಲಿ ಕೋಗಿಲೆಯ ಆಲಾಪನೆ,
ಇಂತ ಚೆಲುವನು ಹೊತ್ತು ತಂದ ವಸಂತನಿಗೆ ವಂದನೆ.
