ಉದಯರಶ್ಮಿ ದಿನಪತ್ರಿಕೆ
ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಇಂಡಿ ತಾಲೂಕು ಅವರು ಚಡಚಣ ವಲಯದ ಆಶ್ರಯ ಕಾಲೋನಿ ಕಾರ್ಯಕ್ಷೇತ್ರದ ಶ್ರೀ ಕಲ್ಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಸಂಸ್ಥಾಪಕಿ ಕಾಶಿಬಾಯಿ ವಾಲಿಕಾರ ಮತ್ತು ಮುಖ್ಯ ಗುರುಗಳಾದ ಡಿ ಎಸ್ ಅಜಮಾನಿ ಜಂಟಿಯಾಗಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜೆ ಸಿ ಬಿರಾದಾರ ಸರ್, ಎಸ್ ಪಿ ಕೊಪ್ಪದ ಮೇಡಂ ಅವರು ಪರಿಸರದ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮಾಹಿತಿ ನೀಡಿ ಜನರಿಗೆ ಉಪಕಾರಿಯಾದಂಥ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಚಡಚಣ ವಲಯದ ಮೇಲ್ವಿಚಾರಕರು ಶಿವಯ್ಯ ಹಿರೇಮಠ ಅವರು ಯೋಜನೆಯ ಕಾರ್ಯಕ್ರಮ ಗಳ ಬಗ್ಗೆ ಮತ್ತು ಪರಿಸರ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಕೃಷಿ ಮೇಲ್ವಿಚಾರಕರಾದ ಸುದೀಪ್ ಮತ್ತು ಸೇವಾ ಪ್ರತಿನಿಧಿ ಇಂತಾಜಬಿ ನದಾಫ್, ಒಕ್ಕೂಟ ಅಧ್ಯಕ್ಷರಾದ ಎಂ ಪಿ ಮುಲ್ಲಾ ಮೇಡಂ ಮತ್ತು ಡಾ ಆನಂದ ನಿವರಗಿ ಸುಖದೇವ ಪಡುವಳೆ ಆಡಳಿತ ಅಧಿಕಾರಿ ಅವರು ಮತ್ತು ಶಾಲೆಯ ಗುರುಗಳು ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು.

