ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಇಂದು ಶ್ರೀಮಂತಿಕೆ, ಅಧಿಕಾರಕ್ಕಿಂತ ಹೆಚ್ಚಿನ ಶಕ್ತಿ ಜ್ಞಾನಕ್ಕೆ ಇದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ರೋಟರಿ ಭವನದಲ್ಲಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದಿಂದ ಇಂದು ನಡೆದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಸ್ಲಿಂ ಸಮಾಜದಲ್ಲಿ ಅತ್ಯಂತ ಹಿಂದುಳಿದ ನದಾಫ ಪಿಂಜಾರ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ ಪಾಲಕರು ತಮಗೆ ಎಷ್ಟೆ ಕಷ್ಟ ಬಂದರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೋಡಿಸುವದರ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆಯಬೇಕು ಇದರಿಂದ ಆರ್ಥಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತದೆ ಎಂದರು.
ಕೃಷ್ಣ ಪಾರಿಜಾತ ಹೆಸರಾಂತ ಕಲಾವಿಧ ದಿ.ಅಪ್ಪಾಲಾಲ ನದಾಫ್ ಅವರ ಹೆಸರಿನಲ್ಲಿ ರಂಗ ಮಂದಿರ ನಿರ್ಮಾಣ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚಿಸುತ್ತೆನೆ ಎಂದರು.
ಡಿವೈಎಸ್‌ಪಿ ಎಸ್. ರೋಷನ್ ಜಮೀರ್ ಮಾತನಾಡಿ, ಕನ್ನಡ ಮಾತೃಭಾಷೆಯಲ್ಲಿ ಕಲಿತವರು ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ, ಆ ನಿಟ್ಟಿನಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದುಕೊಳ್ಳುವ ಮನೊಭಾವ ಬೆಳೆಸಿಕೊಳ್ಳಬೇಕು, ಆಧುನಿಕ ಭಾರತದಲ್ಲಿ ಶಿಕ್ಷಣ ಬಹಳ ಅವಶ್ಯವಾಗಿದೆ, ಸಮಾಜದ ಸಂಘಟಕರು ಸಮಾಜದ ಮಕ್ಕಳಿಗಾಗಿ ಸ್ಪರ್ಧಾತ್ಮಕ ವಿಷಯಗಳ ಮೇಲೆ ತರಬೇತಿ ಶಿಬಿರಗಳನ್ನು ಏರ್ಪಡಿಸಬೇಕು ಎಂದರು.
ಬಾಗಲಕೋಟೆ ಸಮಾಜಕ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಾಯಿರಾಬಾನು ನದಾಫ್ ಮಾತನಾಡಿ, ಇವತ್ತು ಶಿಕ್ಷಣ ಪಡೆಯಲು ಯಾವ ತೊಂದರೆಗಳು ಇಲ್ಲ, ಉಚಿತ ಶಿಕ್ಷಣ, ಉಚಿತ ವಸತಿ ನಿಲಯಗಳು, ವಿದ್ಯರ್ಥಿವೇತನ ನಂತಹ ಹಲವಾರು ಯೋಜನೆಗಳು ಇವೆ, ಬಡತನ ಶಿಕ್ಷಣಕ್ಕೆ ಅಡ್ಡಿ ಅಲ್ಲವೇ ಅಲ್ಲ, ಜೀವನದಲ್ಲಿ ಕಷ್ಟಗಳು ಬಂದೆ ಬರುತ್ತವೆ ಅವುಗಳನ್ನು ಎದುರಿಸಬೇಕು, ಮಕ್ಕಳಿಗೆ ಓದುವಂತ ವಾತಾವರಣ ಅವಶ್ಯಕವಾಗಿದೆ ಎಂದರು.
ಗದಗ ವಿಭಾಗೀಯ ಉಪಾಧ್ಯಕ್ಷ ಪಿ. ಇಮಾಮಸಾಬ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಮುಂದಿನ ದಿನಮಾನಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು, ಆ ನಿಟ್ಟಿನಲ್ಲಿ ಸಂಘಟನೆಯಿಂದ ಸಹಾಯ ಸಹಕಾರ ನೀಡಲಾಗುತ್ತಿದೆ ಎಂದರು.
ಜಾಮೀಯಾ ಮಸ್ಕಿದ್ ಪೇಶಇಮಾಮ ಮೊಹಮ್ಮದ ಯೂನುಸ್ ಚಿಂಚಲಿ ಸಾನ್ನಧ್ಯವಹಿಸಿದ್ದರು. ತಾಲೂಕಾಧ್ಯಕ್ಷ ಚಾಂದಸಾಬ ನದಾಫ್ ಅಧ್ಯಕ್ಷತೆವಹಿಸಿ. ಜಿಲ್ಲಾ ಮಹಿಳಾ ಅಧ್ಯಕ್ಷೆ ರಿಯಾನಾಬಾನು ನದಾಫ್ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಮುದ್ದೇಬಿಹಾಳದ ಅಖಿಲ ನಾಸೀರಲಿ ನದಾಫ್ ಸೇರಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ ಜಾಕೀರಹುಸೇನ್ ನದಾಫ್, ಎಸ್.ಎಚ್.ಮುದಕವಿ, ಎಲ್.ಎನ್.ನದಾಫ್. ಯಾಕುಬ ನದಾಫ್, ಡಾ.ಎಂ.ಎಲ್.ನದಾಫ್, ಎಸ್.ಎಸ್.ನದಾಫ್, ಬುಡ್ಡೆಸಾಬ ನದಾಫ್ ಇತರರು ಇದ್ದರು.
ಮಸ್ತಾನಸಾಬ ನದಾಫ್ ಕುರಾಣ ಪಠಣ ಮಾಡಿದರು. ಮೌಲಸಾಬ ನದಾಫ್ ಪ್ರಾಸ್ತವಿಕವಾಗಿ ಮಾತನಾಡಿದರು.
ಅಲ್ಲಿಸಾಬ ನದಾಫ್ ಸ್ವಾಗತಿಸಿದರು. ಬಾಷಾಸಾಬ ನದಾಫ್ ನಿರೂಪಿಸಿದರು.

