Author: editor.udayarashmi@gmail.com

ಟೀಕಿಸುವ ಮುನ್ನ ಓದಿಕೊಳ್ಳಲು ಹಿಂದುಳಿದ ವರ್ಗಗಳ ಶಾಸಕರ ವೇದಿಕೆಯ ಸಂಚಾಲಕ ಎಚ್ ಎಂ ರೇವಣ್ಣ ಸಲಹೆ ಬೆಂಗಳೂರು: ಒಂದೊಮ್ಮೆ ಜಾತಿ ಗಣತಿ ವರದಿ ಜಾರಿಯಾದರೆ ಕರ್ನಾಟಕದಲ್ಲಿ ಐತಿಹಾಸಿಕ ಘಟ್ಟವಾಗಲಿದೆ, ರಾಜ್ಯ ರಾಜಕೀಯದಲ್ಲಿ ಬಹು ದೊಡ್ಡ ಗೇಮ್ ಚೇಂಜರ್ ಆಗಲಿದೆ ಎಂದು ರಾಜ್ಯ ಖಾತರಿ ಸಮಿತಿಯ ಅಧ್ಯಕ್ಷ ಮತ್ತು ಹಿಂದುಳಿದ ವರ್ಗಗಳ ಶಾಸಕರ ವೇದಿಕೆಯ ಸಂಚಾಲಕ ಎಚ್.ಎಂ. ರೇವಣ್ಣ ಹೇಳಿದ್ದಾರೆ.ರಾಜಕೀಯ ಪ್ರಾತಿನಿಧ್ಯದ ಕೊರತೆಯಿಂದ ದೀರ್ಘಕಾಲದಿಂದ ಅಸಮಾಧಾನಗೊಂಡಿದ್ದ ಹಿಂದುಳಿದ ವರ್ಗಗಳು ಅಂತಿಮವಾಗಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಹೆಚ್ಚಿನ ಸ್ಥಾನಗಳು, ಮತ್ತು ಹೆಚ್ಚಿನ ಬಲವನ್ನು ಪಡೆಯುತ್ತಾರೆ, ಇದರಿಂದ ನೈಜ, ಸ್ಪಷ್ಟ ಬದಲಾವಣೆಗೆ ಎದುರು ನೋಡಬಹುದು, ತಮಿಳುನಾಡು ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ಶೇಕಡಾ 50 ಕ್ಕಿಂತ ಹೆಚ್ಚು ಮೀಸಲಾತಿಯನ್ನು ಅನುಭವಿಸುತ್ತಿವೆ, ಹೀಗಿರುವಾಗ ಕರ್ನಾಟಕದಲ್ಲಿ ಏಕೆ ಮಾಡಬಾರದು ಎಂದು ರೇವಣ್ಣ ಪ್ರಶ್ನಿಸಿದ್ದಾರೆ. ಹಿಂದುಳಿದ ವರ್ಗಗಳ ಸದಸ್ಯರು ಶೇಕಡಾ 52 ರಷ್ಟಿದ್ದಾರೆ, ಆದರೆ ಸಂದ್ಯ ಕೇವಲ ಶೇ. 32 ರಷ್ಚು ಮೀಸಲಾತಿಯನ್ನು ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.ಹಿಂದುಳಿದ ಸಮುದಾಯಗಳಲ್ಲಿ ಅತಿ ದೊಡ್ಡದಾದ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ನ್ಯಾಯವಾದಿಗಳ ಸಂಘದ ಅಽಕೃತ ಅಧ್ಯಕ್ಷರ, ಉಪಾಧ್ಯಕ್ಷರ,ಪ್ರಧಾನ ಕಾರ್ಯದರ್ಶಿಗಳ, ಪದಾಽಕಾರಿಗಳ ಆಯ್ಕೆ ಪ್ರಕ್ರಿಯೆ ಸಂಘದ ನಿಯಮಾವಳಿಯಂತೆ ಚುನಾವಣಾಧಿಕಾರಿ, ವಕೀಲ ಜಿ.ಆರ್.ಬೀಳಗಿ ಅವರು ಜರುಗಿಸಿ ಎಲ್ಲ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎಲ್ಲ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ೨೦೧೩-೧೪, ೨೦೨೩-೨೫ ರ ಅವಽಯಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಕಳೆದ -.೨೧ ರಂದು ನನ್ನ ಅಧ್ಯಕ್ಷ ಅವಽ ಮುಕ್ತಾಯವಾಗಿದೆ. ಮುಂದೆ -.೧೦ ರಂದು ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಕೆಲ ಸದಸ್ಯರು ಸಹಕಾರ ಕೊಡಲಿಲ್ಲ. ಮುಂದೆ ಮಾ.೧೨ರಂದು ಮತ್ತೊಂದು ಸಭೆ ಕರೆದಾಗ ೧೫೧ ಸದಸ್ಯರ ಪೈಕಿ ೭೧ ಸದಸ್ಯರು ಹಾಜರಿದ್ದರು. ಆಗ ಚುನಾವಣಾಧಿಕಾರಿಯಾಗಿ ಜಿ.ಆರ್.ಬೀಳಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಚುನಾವಣಾಽಕಾರಿಗಳು ಸಂಘದ ೨೦೨೫-೨೭ ನೇ ಸಾಲಿನ ಅವಽಯ ಚುನಾವಣೆಯ ಪ್ರಕ್ರಿಯೆ ಆರಂಭಿಸಿ ಏ.೪…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಗುತ್ತಿಗೆದಾರರು ಪೂರ್ಣಗೊಳಿಸುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಯಲ್ಲಿ ಸದಸ್ಯರು ಅಭಿಪ್ರಾಯ ಮಂಡಿಸಿದ ಮೇರೆಗೆ ಈಗಾಗಲೇ ಕರೆದ ಟೆಂಡರ್ಗಳಿಗೆ ಅನುಮೋದನೆ ನೀಡದೇ ಮುಂದಿನ ವಾರ ಗುತ್ತಿಗೆದಾರರ ಸಭೆ ಕರೆದು ಹಿಂದಿನ ಕಾಮಗಾರಿಗಳ ಬಗ್ಗೆ ಚರ್ಚಿಸಿ ಹೊಸ ಟೆಂಡರ್ಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದು. ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾರ್ಡ್ಗಳಲ್ಲಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದರು.ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಸನ್ ೨೦೨೫-೨೬ ನೇ ಸಾಲಿನ ೧೫ನೇ ಹಣಕಾಸು ರೂ.೨೦೮.೦೦ ಲಕ್ಷಕ್ಕೆ ತಯಾರಿಸಿದ ಕ್ರಿಯಾಯೋಜನೆಯ ವಿವರ ತಿಳಿಸಿದ ಅವರು ಕುಡಿಯುವ ನೀರು, ಮಳೆ ನೀರು ಕೊಯ್ಲು,ಜಲಮೂಲಗಳ ಪುನಶ್ಚೇತನ ಮತ್ತು ನೀರಿನ ಮರು ಬಳಕೆ ಒಳಗೊಂಡಂತೆ ಶೇ.೩೦ ರಷ್ಟು ರೂ.೬೨.೪ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪುರಸಭೆಯ 7 ಮತ್ತು 23 ನೇ ವಾರ್ಡ್ ನಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ಶನಿವಾರ ಕ್ರಾಂತಿವೀರ ಬ್ರಿಗೇಡ ಜಿಲ್ಲಾ ಘಟಕದ ವತಿಯಿಂದ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರಿಗೆ ಮನವಿ ಸಲ್ಲಿಸಲಾಯಿತು.ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ಪುರಸಭೆಗೆ ರಾಜ್ಯ ಸರ್ಕಾರದಿಂದ 2021-22 ರ ಸಾಲಿನಲ್ಲಿ ನಗರೋತ್ಥಾನ ಯೋಜನೆ ಅಡಿ ಕಾಮಗಾರಿ ಟೆಂಡರ ಕರೆಯಲಾಗಿದ್ದು. ನಗರೋತ್ಥಾನ ಯೋಜನೆ-4 ಕಾಮಗಾರಿಯನ್ನು ವಾರ್ಡ್ ಸಂಖ್ಯೆ 7 ಮತ್ತು 23 ರಲ್ಲಿ ಗುತ್ತಿಗೆದಾರರು ಪ್ರಾರಂಭಿಸಿರುವುದಿಲ್ಲ. ಆ ವಾರ್ಡಿನ ಸದಸ್ಯರು ನಮ್ಮ ಕ್ರಾಂತಿವೀರ ಬ್ರಿಗೆಡ್ ಸಂಘಟನೆಯ ಗಮನಕ್ಕೆ ತಂದಿದ್ದು. ಶೀಘ್ರದಲ್ಲೇ ಕಾಮಗಾರಿ ಆರಂಭಿಸಬೇಕು. ವಿಳಂಬ ಮಾಡಿದರೆ ಏ.29 ರಂದು ನಮ್ಮ ಸಂಘಟನೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಕ್ರಾಂತಿವೀರ ಬ್ರಿಗೇಡ ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ಮುದಕಣ್ಣ ಹೊರ್ತಿ, ತಾಲೂಕು ಘಟಕದ ಅಧ್ಯಕ್ಷ ಅಮರಯ್ಯ ಹಿರೇಮಠ, ಎಸ್.ಎಚ್.ಜೋತೆಪ್ಪಗೋಳ, ಮುತ್ತು ಹಾಲಿಹಾಳ,…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ವಿಪ್ರ ಸಮಾಜ ಬಾಂಧವರು ಈಚೆಗೆ ಜರುಗಿದ ಸಿಇಟಿ ಪರೀಕ್ಷೆಯಲ್ಲಿ ಬೀದರ ಜಿಲ್ಲೆಯ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಯ ಜನಿವಾರ ತೆಗೆಯಲು ಒತ್ತಾಯಿಸಿದ್ದನ್ನು ಖಂಡಿಸಿ ತಪ್ಪಿಸ್ಥತರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಶನಿವಾರ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ಸಿಇಟಿ ಗಣಿತ ಪರೀಕ್ಷೆಯ ವೇಳೆಯಲ್ಲಿ ಅನಾವಶ್ಯಕವಾಗಿ ಜನಿವಾರ ತೆಗೆಯಲು ಒತ್ತಾಯ ಮಾಡಿದ್ದು ಖಂಡನೀಯ. ಅಲ್ಲದೇ ಜನಿವಾರ ಧರಿಸಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ. ಪರೀಕ್ಷಾ ಪ್ರಾಧಿಕಾರ ಮಾರ್ಗಸೂಚಿಯಲ್ಲಿ ಲೋಹದ ಸರ ಧರಿಸಬಾರದು ಎಂಬ ಉಲ್ಲೇಖವಿದೆ. ಜನೀವಾರ ಧರಿಸಬಾರದು ಎಂಬ ಯಾವುದೇ ಉಲ್ಲೇಖವು ಇಲ್ಲ. ಆದರೆ ಪರೀಕ್ಷಾ ಮೇಲ್ವಿಚಾರಕರು ಸುಚಿವೃತ ಕುಲಕರ್ಣಿ ವಿದ್ಯಾರ್ಥಿ ಜನಿವಾರ ಧರಿಸಿ ಕಾರಣಕ್ಕೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಿಲ್ಲ. ಇದರಿಂದಾಗಿ ವಿದ್ಯಾರ್ಥಿಯ ಭವಿಷ್ಯಕ್ಕೆ ಅಡ್ಡಿ ಪಡಿಸಿದ್ದನ್ನು ಸಮಾಜ ಖಂಡಿಸುತ್ತದೆ. ಸರ್ಕಾರ ಕೂಡಲೇ ಪರೀಕ್ಷೆಗೆ ಅನುಮತಿ ನಿರಾಕರಿಸಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ವಿದ್ಯಾರ್ಥಿಗೆ ರ್ಯಾಂಕ್ ಕೊಡಬೇಕೆಂದು ಆಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿಶ್ವಗುರು, ಸಾಂಸ್ಕ್ರತಿಕ ನಾಯಕ ಬಸವೇಶ್ವರ ಜಯಂತಿಯಂಗವಾಗಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ವಚನ ಕಂಠಪಾಠ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಕೊಡಲಾಗುವುದು, ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಬಸವೇಶ್ವರ ದೇವಾಲಯದ ಆವರಣದಲ್ಲಿರುವ ಕಚೇರಿಯಲ್ಲಿ ಏ. 26 ನೇ ತಾರೀಖಿನ ಒಳಗಾಗಿ ತಮ್ಮ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬಸವರಾಜ ನಂದಿಹಾಳ ಮೊ- 9916402368 ಅಥವಾ ವೈ. ಎನ್. ಮಿಣಜಗಿ ಮೊ-9900762146 ಸಂಪರ್ಕಿಸಬೇಕೆಂದು ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ಗುರುವೀರಸಿದ್ದ ಶಿವಯೋಗಿಗಳ ೭೫ ನೇ ಜಾತ್ರಾಮಹೋತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯವರ ತೃತೀಯ ಪುಣ್ಯಾರಾಧನೆಯಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ದ್ವಾದಶ ಲಿಂತೋಭದ್ರ ದೇವತಾ ಮಂಡಲ ಹೋಮದ ಪೂರ್ಣಾಹುತಿ ವಿದ್ಯಾಸಾಗರ ಹಿರೇಮಠ, ಆನಂದಯ್ಯ ಸ್ಥಾವರಮಠ ವೈದಿಕತ್ವದಲ್ಲಿ ಜರುಗಿತು.ಈ ಸಂದರ್ಭದಲ್ಲಿ ವೈ.ಎಸ್.ಗಂಗಶೆಟ್ಟಿ ಇತರರು ಇದ್ದರು.ಏ.೨೦ ರಂದು ಬೆಳಗ್ಗೆ ೬ ಗಂಟೆಗೆ ಕರ್ತೃ ಗದ್ದುಗೆಗೆ ಪೂಜೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಜಂಗಮ ವಟುಗಳಿಗೆ ಅಯ್ಯಾಚಾರ ಸಂಸ್ಕಾರ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಆನಂದಯ್ಯ ಸ್ಥಾವರಮಠ ವೈದಿಕತ್ವದಲ್ಲಿ ನೆರವೇರುವದು. ನಂತರ ೯ ಗಂಟೆಗೆ ವೀರಸಿದ್ದ ಶಿವಯೋಗಿಗಳವರ ಪಲ್ಲಕ್ಕಿ ಉತ್ಸವ ವಿವಿಧ ಕಲಾತಂಡ, ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮಧ್ಯಾನ್ಹ ೧ ಗಂಟೆಗ ಹೆಬ್ಬಾಳ ಗ್ರಾಮದ ಸದ್ಭಕ್ತರಿಂದ ಸಿದ್ದಪಡಿಸಿದ ಅಗ್ನಿಕುಂಡದ ಅಗ್ನಿಶಮನ ಮಠದ ಪೂಜ್ಯರಿಂದ, ಪುರವಂತರಿಂದ ನೆರವೇರುವದು. ನಂತರ ಭಕ್ತರಿಗೆ ಮಹಾಪ್ರಸಾದ ವಿತರಣೆಯಾಗುವದು. ಸಂಜೆ ೪ ಗಂಟೆಗೆ ಉತ್ಸವ ಮೂರ್ತಿ ಕೊಡೆ ಕಳಸ ಬರಮಾಡಿಕೊಂಡ ನಂತರ ೫ ಗಂಟೆಗೆ ರಥೋತ್ಸವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳಲ್ಲಿ ಕಂಡು ಬರುವ ಚಂಚಲತೆ ಮತ್ತು ಅತಿ ಚಟುಚಟಿಕೆಯ(ADHD) ಕಾಯಿಲೆಗೆ ಉಚಿತ ತಪಾಸಣೆ ಮತ್ತು ಉಚಿತ ಪಂಚಕರ್ಮ ಚಿಕಿತ್ಸೆ ಶಿಬಿರ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಏ. 21 ರಿಂದ 26ರ ವರೆಗೆ ನಡೆಯಲಿದೆ.ಆಸ್ಪತ್ರೆಯ ಕೌಮಾರ ಭೃತ್ಯ ವಿಭಾಗದಿಂದ ಆರು ದಿನಗಳ ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಮಕ್ಕಳು ಒಂದೇ ಜಾಗದಲ್ಲಿ ಕುಳಿತು ಕೊಳ್ಳದಿರುವುದು, ಹೋಂ ವರ್ಕ್ ಅಥವಾ ಶಾಲೆಯ ಚಟುವಟಿಕೆಗಳು ಸೇರಿದಂತೆ ಕೆಲಸಗಳನ್ನು ಮಾಡಲು ಹಿಂಜರಿಯುವುದು, ದೈನಂದಿನ ಚಟುವಟಿಕೆಗಳಲ್ಲಿ ಬಲು ಬೇಗನೆ ಬೇಸರಗೊಳ್ಳುವುದು, ಅಭ್ಯಾಸದಲ್ಲಿ ಏಕಾಗ್ರತೆ ಕೊರತೆ ಮುಂತಾದ ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಈ ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಉಚಿತ ಪಂಚಕರ್ಮ ಚಿಕಿತ್ಸೆ ನಡೆಯಲಿದೆ.ಪಾಲಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳು ನೈತಿಕತೆ, ಬದ್ಧತೆ ಮತ್ತು ಉತ್ಸಾಹದಿಂದ ಶ್ರಮ ವಹಿಸಿದರೆ ಜೀವನದ ಗುರಿಯನ್ನು ಸಾಧಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಹೇಳಿದ್ದಾರೆ.ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಕೆ.ಬಿ.ಜೆ.ಎನ್.ಎಲ್ ಕಾನೂನು ಸಲಹೆಗಾರ್ತಿ ಡಾ. ರಂಜಿತಾ ಕೆ. ಆರ್. ಮಾತನಾಡಿ, ನರ್ಸಿಂಗ್ ಸೇವೆಯ ಮಾನವೀಯತೆಯನ್ನು ಜೀವಂತವಾಗಿಡುವ ಶ್ರೇಷ್ಟ ವೃತ್ತಿಯಾಗಿದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ, ಬೆಂಗಳೂರಿನ ಎಂ. ಎಸ್. ರಾಮಯ್ಯ ನರ್ಸಿಂಗ್ ಕಾಲೇಜು ಮತ್ತು ಸಂಶೋಧನೆ ಕೇಂದ್ರದ ಡೀನ್ ಮತ್ತು ಪ್ರಾಚಾರ್ಯೆ ಡಾ. ಜಾದವ ಸೋನಾಲಿ ತಾರಾಚಂದ, ಬಾಪು ಖೋದ್ನಾಪುರ, ಡಾ. ಸುಚಿತ್ರಾ ರಾಟಿ, ಡಾ. ಕವಿತಾ ಕೆ. ಡಾ. ಬಸೀರ್ ಅಹ್ಮದ್, ಡಾ. ಶ್ವೇತಾ, ಡಾ. ಸಂಕಪ್ಪ,…

Read More