ರಚನೆ
– ಮಾಲತಿ ಹಿರೇಮಠ
“ನಮ್ಮ ಕಥಾ ಅರಮನೆ*
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಮುಂಜಾನೆಯ ನಸುಕಿನಲಿ
ಬೆಳಕಂತೆ ನೀ ಬಂದೆ ನನ್ನೆದುರಲ್ಲಿ
ನನ್ನ ಬರಡು ಹೃದಯಕೆ ತಂಪೆರೆದೆ
ಒಲವೆಂಬ ಪನ್ನೀರ ಸಿಂಚನದಲಿ
ತಂಗಾಳಿಯಲಿ ತೇಲಿ ಬಂದಿದೆ
ನಿನ್ನ ಮೈಗೆ ಲೇಪಿಸಿದ ಪರಿಮಳ
ನನ್ನ ಒಣ ಅಧರಕ್ಕೆ ಮುತ್ತನಿಕ್ಕಿದೆ
ಬಾಡಿದ ತನುವನ್ನು ಉತ್ತೇಜಿಸಿದೆ
ಪ್ರೀತಿಯಲಿ ತನ್ಮಯತೆ ತುಂಬಿದೆ
ಮನದಲ್ಲಿ ಅನುರಾಗ ಚಿಮ್ಮಿದೆ
ನಮ್ಮ ಪ್ರಣಯದ ಅಂಕುರವಾಗಿದೆ
ನಿನ್ನಲ್ಲಿ ಒಂದಾಗುವ ಬಯಕೆಯಾಗಿದೆ
