Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಸದ್ಯ ಬೆಂಗಳೂರಿನ ಆರ್.ವ್ಹಿ. ಪಿ.ಯು.ಕಾಲೇಜಿನ ವಿದ್ಯಾರ್ಥಿಯಾಗಿರುವ ಸ್ವಯಮ್ ಸಂಗಮೇಶ ಗಡೇದ ಇವನು ಜೆಇಇ ಮುಖ್ಯಪರೀಕ್ಷೆಯಲ್ಲಿ ಶೇ ೯೯.೧೮ ಸಾಧನೆ ಮಾಡುವುದರ ಮೂಲಕ ಜೆಇಇ ಅಡ್ವಾನ್ಸ್ಗೆ ಅರ್ಹತೆ ಪಡೆದಿದ್ದಾನೆ.ವಿದ್ಯಾರ್ಥಿಯ ಸಾಧನೆಗೆ ಕುಟುಂಬ ವರ್ಗದವರು, ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆ ಹಿತರಕ್ಷಣೆ ಕುರಿತು ರೈತರೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಈ ಭಾಗದ ಅಸ್ಮಿತೆಯಾಗಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದು, ಒಂದು ವಾರದಲ್ಲಿ ಮುಖ್ಯಮಂತ್ರಿಗಳ ಭೇಟಿಗೆ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಸೋಮವಾರ ನಗರದಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಕಾರ್ಖಾನೆ ಹಿತರಕ್ಷಣೆ ಕುರಿತು ರೈತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಸಕ್ಕರೆ ಕಾರ್ಖಾನೆ ಉಳಿವಿಗೆ ಎನ್.ಸಿ.ಡಿ.ಸಿ ಯೋಜನೆಯಡಿ ಸಾಲ ಒದಗಿಸುವಂತೆ ನಾನು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಆದ್ಯತೆಯ ಆಧಾರದ ಮೇಲೆ ಕಾರ್ಖಾನೆಯ ಮನವಿಯನ್ನು ಪರಿಗಣಿಸಿ ನೆರವು ನೀಡುವಂತೆ ಕೋರಿದ್ದೇನೆ. ಇನ್ನು ಮುಂದೆ ಸಚಿವರಾದ ಎಚ್. ಕೆ. ಪಾಟೀಲ, ಶಿವಾನಂದ ಪಾಟೀಲ, ಶಾಸಕ ಜೆ. ಟಿ. ಪಾಟೀಲ ಮತ್ತು ನಾನಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ (ಅ)ಪರಿಚಿತ ಓದುಗರ ಐದನೆಯ ಭೇಟಿ ಕಾರ್ಯಕ್ರಮ ರವಿವಾರ ಜರುಗಿತು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಬಂದಿದ್ದ ಪ್ರೊ ಸಿದ್ದು ಸಾವಳಸಂಗ ಅವರು ಮಾತನಾಡುತ್ತಾ, ‘ಇಂದಿನ ಯುವಕರು ಬದುಕನ್ನು ಹಾಗೂ ಸಾಹಿತ್ಯವನ್ನು ಕಟ್ಟುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಸಾಹಿತ್ಯ ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನದಲ್ಲಿ ಕನ್ನಡ ಸಾಹಿತ್ಯದ ಗ್ರಂಥಗಳನ್ನು ಓದುವವರ ಸಂಖ್ಯೆಯನ್ನು ವೃದ್ಧಿಸಬೇಕಾಗಿದೆ’ ಎಂದು ಅವರು ಹೇಳಿದರು.ವಿಜಯಪುರದ ಬಾರಾಕಮಾನಿನಲ್ಲಿ ನಡೆದ (ಅ)ಪರಿಚಿತ ಓದುಗರ ಐದನೆಯ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮುಂಜಾನೆ ೧೦.೦೦ ಗಂಟೆಗೆ ಆಗಮಿಸಿದ ಸಾಹಿತ್ಯಸಕ್ತರು ಬಾರಾಕಮಾನ ಉದ್ಯಾನವನದಲ್ಲಿ ಅಲ್ಲಲ್ಲಿ ಕುಳಿತು ತಾವು ತಂದಿರುವ ಪುಸ್ತಕಗಳನ್ನು ಓದಿದರು. ಮಧ್ಯಾಹ್ನ ೧೨ ಗಂಟೆಗೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ಏಪ್ರಿಲ್ ೨೩ ರಂದು ‘ವಿಶ್ವ ಪುಸ್ತಕ ದಿನ’ದ ಪ್ರಯುಕ್ತ ‘ಉತ್ತಮ ಓದುಗ ಸ್ಪರ್ಧೆ’ ಆಯೋಜನೆ ಮಾಡಲಾಗಿತ್ತು. ಬಂದಿರುವಂತ ಸಾಹಿತ್ಯ ಆಸಕ್ತರು ತಾವು ಓದಿದ ಪುಸ್ತಕಗಳ ಕುರಿತು ಪರಿಚಯ ಹಾಗೂ ವಿಮರ್ಶೆ ಮಾಡಿದರು. ಆರು ಜನ ಈ ಚಟುವಟಿಕೆಯಲ್ಲಿ ತುಂಬ ಆಸಕ್ತಿಯಿಂದ ಭಾಗವಹಿಸಿದ್ದರು. ಭಾಗವಹಿಸಿದ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪ್ರತಿಯೊಬ್ಬರೂ ಲಿಂಗಪೂಜೆ, ದಾಸೋಹದ ಮಹತ್ವ ತಿಳಿದುಕೊಳ್ಳಬೇಕು. ಜೀವನದಲ್ಲಿ ಪುರಾಣ ಪ್ರವಚನಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಇಂಗಳೇಶ್ವರ ವಚನ ಶಿಲಾ ಮಂಟಪದ ಚನ್ನಬಸವ ಸ್ವಾಮೀಜಿ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ಬಸವಜಯಂತಿ ಅಂಗವಾಗಿ ಶನಿವಾರ ಸಂಜೆ ಮಠದ ವತಿಯಿಂದ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿರುವ ವಚನ ದರ್ಶನ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಲ್ಲಿನ ಮಠದಲ್ಲಿ ನಿರಂತರವಾಗಿ ದಾಸೋಹ ನಡೆಯುವಂತಾಗಬೇಕು.ಬಸವಣ್ಣನವರ ಜನ್ಮಸ್ಥಳ ಬಸವನವಾಗೇವಾಡಿಯಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಹೇಳಿದರು.ಇಂದು ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಪಾಲಕರು ಮಕ್ಕಳ ಕೈಗೆ ಮೊಬೈಲ್ ಕೊಡದೇ ಉತ್ತಮ ಸಂಸ್ಕಾರ ಕೊಡುವ ಅಗತ್ಯತೆ ಇದೆ ಎಂದು ಹೇಳಿದರು.ಪ್ರವಚನಕಾರ ಬಳೂಟಗಿಯ ಶಿವಕುಮಾರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಮೇಲು ಕೀಳು ಹೋಗಲಾಡಿಸಲು ಶ್ರಮಿಸಿದರು. ಶರಣರು ಸಂಸ್ಕಾರವಂತರಾಗಿ ಅದ್ಬುತವಾದ ಅನುಭವ ಮಂಟಪ ಕಟ್ಟಿದರು. ಇಲ್ಲಿನ ಸಿದ್ಧಲಿಂಗ ಶ್ರೀಗಳು ಮಕ್ಕಳಿಗೆ ಸಂಸ್ಕಾರ ಶಿಬಿರ ಆರಂಭಿಸುವ ಮೂಲಕ ಮಕ್ಕಳಲ್ಲಿ ನೈತಿಕ, ಆಧ್ಯಾತ್ಮಿಕ ಮೌಲ್ಯ ತಿಳಿಸುವ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಗುರು ಮಹಾಂತೇಶ್ವರ ಸ್ವಾಮೀಜಿಯವರ ಪುಣ್ಯಸ್ಮರಣೆಯ ಅಮೃತ ಮಹೋತ್ಸವ , ತಪೋಭೂಷಣ ಶ್ರೀಗುರು ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೨೪ನೇ ಸಂಸ್ಮರಣೋತ್ಸವಯಂಗವಾಗಿ ಗ್ರಂಥ ಬಿಡುಗಡೆ, ಪಂಚಾಕ್ಷರಿಜಪಯಜ್ಞ, ಮೂರ್ತಿ ಪ್ರತಿಷ್ಠಾಪನೆ, ತುಲಾಭಾರ, ಸಿಲಿಕಾನ್ ಮೂರ್ತಿಗಳ ಶುಭಾಗಮನ, ಗುರುಮಹಾಂತೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾ. ೩೦ ರಿಂದ ಏ.೨೭ ರವೆರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮನಗೂಳಿ ಪಟ್ಟೀಕಂಥಿ ಹಿರೇಮಠ, ಬೆಂಗಳೂರಿನ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಮಾ.೩೦ ರಿಂದ ಶ್ರೀಮಠದಲ್ಲಿ ಕಾರ್ಯಕ್ರಮಗಳು ಆರಂಭವಾಗಿವೆ. ಏ.೨೧ ರಂದು ಸಂಜೆ ೭ ಗಂಟೆಗೆ ೭೫ ಜನ ಮನಗೂಳಿ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ ಗುರುರಕ್ಷೆ ಕಾರ್ಯಕ್ರಮ, ಏ.೨೨ ರಂದು ಸಂಜೆ ೭ ಗಂಟೆಗೆ ೭೫ ಜನ ಕಲಾವಿದರಿಗೆ ಗುರುರಕ್ಷೆ ಕಾರ್ಯಕ್ರಮ ಜರುಗಲಿದೆ. ಏ.೨೩ ರಂದು ಬೆಳಗ್ಗೆ ೬ ಗಂಟೆಗೆ ಜಗದ್ಗುರು ರೇಣುಕಾಚಾರ್ಯ ಮೂರ್ತಿ, ಶ್ರೀಗುರು ಸಂಗನಬಸವ…
ಹಿರಿಯ ಪತ್ರಕರ್ತ ಬಸವರಾಜ ನಂದಿಹಾಳ ಸೇರಿದಂತೆ ವಿವಿಧ ಕ್ಷೇತ್ರದ ಮಹನೀಯರಿಗೆ ರಾಜ್ಯಮಟ್ಟದ ನಂದಿಸಿರಿ ಪ್ರಶಸ್ತಿ ಪ್ರದಾನ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಇಂದಿನ ಆಧುನಿಕ ಜಗತ್ತಿನಲ್ಲಿ ಎಲ್ಲ ಸೌಕರ್ಯಗಳಿದ್ದರೂ ಜನರಲ್ಲಿ ನೆಮ್ಮದಿ ಕಾಣುತ್ತಿಲ್ಲ. ಜೀವನದಲ್ಲಿ ಆಧ್ಯಾತ್ಮಿಕತೆಯಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಅಭಿಪ್ರಾಯ ಪಟ್ಟರು.ತಾಲೂಕಿನ ಶರಣಕ್ಷೇತ್ರ ವಡವಡಗಿಯ ನಂದಿಮಠದ ಗುರುವೀರಸಿದ್ಧ ಶಿವಯೋಗಿಗಳ ೭೫ನೇ ಜಾತ್ರಾಮಹೋತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಗಳ ತೃತೀಯ ಪುಣ್ಯಾರಾಧನೆಯಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶಿವಾನುಭವ ಚಿಂತನ ಹಾಗೂ ರಾಜ್ಯಮಟ್ಟದ ನಂದಿಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಾಶ್ಚಾತ್ಯದೇಶಗಳಲ್ಲಿ ಮಠ-ಮಾನ್ಯಗಳನ್ನು ನಾವು ಕಾಣುವುದಿಲ್ಲ. ಭಾರತ ದೇಶದಲ್ಲಿ ಮಾತ್ರ ಮಠ-ಮಾನ್ಯಗಳನ್ನು ಕಾಣುತ್ತೇವೆ. ಮಠ-ಮಾನ್ಯಗಳು ಆಧ್ಯಾತ್ಮ ಶಿಕ್ಷಣ ಜನರಿಗೆ ಮುಟ್ಟಿಸುವ ಕಾರ್ಯ ಮಾಡುವದರಿಂದ ನೆಮ್ಮದಿ ಸಿಗುತ್ತಿದೆ. ಅನೇಕ ಮಠಗಳಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಹ ಸಿಗುವದನ್ನು ಕಾಣುತ್ತೇವೆ. ಇಲ್ಲಿನ ನಂದಿಮಠವು ಭಕ್ತರಿಗೆ ಸಾಕಷ್ಟು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಈ ಭಾಗದಲ್ಲಿ ಶ್ರೀಮಠವು…
ಉದಯರಶ್ಮಿ ದಿನಗಳು ವಿಜಯಪುರ: ಇತ್ತೀಚೆಗೆ ಮಂಗಳೂರು ನಗರದಲ್ಲಿ ಆಯೋಜಿಸಿದ್ದ ಕಥಾ ಬಿಂದು ಸಂಭ್ರಮ ಹಾಗೂ ಕಟಿಲ್ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ ಧಾರ್ಮಿಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ವಿಜಯಪುರದ ನಾಟ್ಯ ಕಲಾ ಅಕಾಡೆಮಿಯ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಅಕಾಡೆಮಿಯ ಗುರುಗಳು ವಿದುಶಿ ಲಕ್ಷ್ಮೀ ತೇರದಾಳಮಠ ಹರ್ಷ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಇಟಿ ಪರೀಕ್ಷೆ ವೇಳೆ ರಾಜ್ಯದ ಶಿವಮೊಗ್ಗ, ಬೀದರ್ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದನ್ನು ನೋಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಕಿಡಿಕಾರಿದ್ದಾರೆ.ಮುಸ್ಲಿಂ ಓಲೈಕೆಗಾಗಿ ಒಂದು ಧರ್ಮದ ತುಷ್ಟಿಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ಆಚರಣೆಗಳು, ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತರುವ ಕೆಲಸದಲ್ಲಿ ತೊಡಗಿದೆ. ಹಿಂದೂ ಸಮುದಾಯವನ್ನು ಒಡೆಯುವ ದೃಷ್ಟಿಯಿಂದ ಜಾತಿ ಗಣತಿ ಮಾಡಿರುವ ಈ ಕಾಂಗ್ರೆಸ್ ಸರ್ಕಾರ, ಇದೀಗ ವಿದ್ಯಾರ್ಥಿಗಳ ಜನಿವಾರ ತೆಗೆಸುವ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ. ಜನಿವಾರ ಧರಿಸುವ ಬ್ರಾಹ್ಮಣ, ಕ್ಷತ್ರೀಯ ಸಮಾಜದ ರಜಪೂತ, ಕಲಾಲ, ಮರಾಠಾ, ವಿಶ್ವಕರ್ಮ ಸೇರಿದಂತೆ ಮತ್ತಿತರೆ ಸಮಾಜಗಳಿಗೆ ಅವಮಾನ ಮಾಡಿರುವದನ್ನು ಉಗ್ರವಾಗಿ ಖಂಡಿಸಿದ್ದಾರೆ.ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಯುವ ಮೂಲಕ ಹಿಂದೂ ಭಾವನೆಗಳಿಗೆ ಘಾಸಿ ಗೊಳಿಸಿದವರ ವಿರುದ್ಧ ಸರ್ಕಾರ ತಕ್ಷಣ ಕಾನೂನು ಕ್ರಮ ಜರುಗಿಸಿ, ಸೇವೆಯಿಂದ ವಜಾ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಹಿಂದೂ ವಿರೋಧಿ ಕೃತ್ಯಗಳು, ಹಿಂದೂ ಧಾರ್ಮಿಕತೆಗೆ ಚ್ಯುತಿ ನಿಂದನೆ ಹಾಗೂ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕಾರ್ಯ ರಾಜ್ಯದಲ್ಲಿ ಮೇಲಿಂದಮೇಲೆ ನಡೆಯುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೆವೆ ಎಂದು ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಸರಕಾರದ ವಿರುದ್ಧ ಕಿಡಿಕಾರಿದರು.ರವಿವಾರ ಪಟ್ಟಣದ ಖಾಸಗಿ ಹೊಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಿವಾರ ಸಂಸ್ಕಾರಕ್ಕೆ ತನ್ನದೆಯಾದ ಗೌರವವಿದೆ. ಅದನ್ನು ಅರಿಯದೆ ಜನಿವಾರ ಕಟ್ ಮಾಡಿ ಕಸದ ಬುಟ್ಟಿಗೆ ಎಸೆದಿರುವುದು ನಮ್ಮ ಹಿಂದೂ ಜನಿವಾರ ಸಮಾಜಗಳ ಹಿಂದೂ ಸಂಸ್ಕೃತಿ ಭಾವನೆಗಳಿಗೆ ಬಹುದೊಡ್ಡ ಧಕ್ಕೆಯಾಗಿದೆ. ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗಳಿಗೆ ಚ್ಯುತಿ ತಂದ ಘಟನೆ ಖಂಡಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇತ್ತಿಚಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರು ಏರ್ಪಡಿಸಿದ ಸಿ.ಇ.ಟಿ ಪರೀಕ್ಷೆಯಲ್ಲಿ ಶಿವಮೊಗ್ಗ ಮತ್ತು ಬೀದರನಲ್ಲಿ ವಿಪ್ರ ಸಮಾಜದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವರು ಧರಿಸಿದ ಜನಿವಾರವನ್ನು ಕತ್ತರಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ ಕೃತ್ಯವನ್ನು…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಸಾವಳಗಿ ಹೋಬಳಿಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಮಲ್ಲಯ್ಯನ ಐದೇಶಿ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.ಐದೇಶಿ ಉತ್ಸವ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಬ್ಯಾಂಜೋ, ಕರಡಿ ಮಜಲು ಸೇರಿದಂತೆ ಹಲವು ವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ಉತ್ಸವ ಸಾಗಿತು.ಕಂಬಿ ಮಲ್ಲಯ್ಯ ದೇವರನ್ನು ಹೆಗಲ ಮೇಲೆ ಹೊತ್ತು ಸಾಗಿದ್ದು ಒಂದೆಡೆಯಾದರೆ ಅದರ ಮುಂಭಾಗದಲ್ಲಿ ಕನ್ನಡಿ, ಬಾಸಿಂಗ , ಮುತ್ತೈದೆಯರು ಆರತಿ, ದಿವಟಗಿ, ವಿವಿಧ ವಾದ್ಯ ಮೇಳದೊಂದಿಗೆ ಪ್ರತೀ ವರ್ಷದ ಪದ್ಧತಿಯಂತೆ ಕಂಬಿ ಮಲ್ಲಯ್ಯನನ್ನು ಕೂಡಿಸಿ ಮಂಗಳಾರತಿ ಮಾಡಿ ಕಂಬಿ ಐದೇಶಿ ಕಾರ್ಯಕ್ರಮ ನಡೆಯಿತು.ಸಾವಿರಾರು ಭಕ್ತರು ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ಭಕ್ತಿಯಿಂದ ನಮಿಸಿದರು. ಶ್ರೀಶೈಲ ಪಾದಯಾತ್ರೆ ಮುಗಿಸಿಕೊಂಡ ಬಂದವರಿಗೆ ಅವರ ಬೀಗರು, ಅಕ್ಕ ತಂಗಿಯರು (ಆಹೇರಿ) ಸಮವಸ್ತ್ರಗಳನ್ನು ನೀಡಿದರು.ಶುಕ್ರವಾರ ಐದೇಶಿ ದಿನವಾಗಿದ್ದರಿಂದ ಇಡೀ ಊರಲ್ಲಿ ಒಂದು ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಭಕ್ತರು ಭಕ್ತಿ ಪರವಶರಾಗಿ ಐದೇಶಿ ಬ್ಯಾಂಜೋ ಮುಂಭಾಗದಲ್ಲಿ ಕುಣಿದು ಕುಪ್ಪಳಿಸಿದರು ಒಟ್ಟಾರೆಯಾಗಿ ಐದೇಶಿ ಉತ್ಸವವನ್ನು ವಿಜೃಂಭಣೆಯಿಂದ…
