ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ-೩ರ ಪರೀಕ್ಷೆಯ ಮೌಲ್ಯಮಾಪನವು ನಗರದ ಫಿನಿಕ್ಸ ಪ್ರೌಢ ಶಾಲೆ, ಸ್ನೇಹ ಸಂಗಮ ಪ್ರೌಢ ಶಾಲೆ ಹಾಗೂ ಮರಾಠಿ ವಿದ್ಯಾಲಯದಲ್ಲಿ ದಿನಾಂಕ:೧೭-೦೭-೨೦೨೫ ರಿಂದ ೨೧-೦೭-೨೦೨೫ರವರೆಗೆ ನಡೆಯಲಿದೆ. ಸದರಿ ಮೌಲ್ಯಮಾಪನ ಕೇಂದ್ರಗಳ ೨೦೦ ಮೀಟರ ಸುತ್ತಮುತ್ತಲಿನ ಪ್ರದೇಶದಲ್ಲಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ೨೦೨೩ರ ಕಲಂ ೧೬೩ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.

